Subscribe Us

ಜಾಹೀರಾತು
header ads

ಬೊಗಳೆ ಬ್ರೇಕ್: 'ಆಮ್' ಆದ್ಮೀಯಾದ ಮನಮೋಹಕ ಸಿಂಗ್

(ಬೊಗಳೂರು ಪ್ರತಿ-ಭಟನಾ ಬ್ಯುರೋದಿಂದ)
ಬೊಗಳೂರು, ಮೇ 27- ಮನಮೋಹಕ ಸಿಂಗ್ ಅವರು ಯುಪಿಎ ಎರಡನೇ ಅವಧಿಯಲ್ಲಿ ಪ್ರಧಾನಿಯಾಗಿ ಒಂದು ವರ್ಷ ಕಳೆದಿದ್ದರೂ, ಚುನಾವಣಾ ಪ್ರಣಾಳಶಿಶುವಿನ ಬಿಡುಗಡೆ ವೇಳೆ ಮಾಡಿದ ವಾಗ್ದಾನದಲ್ಲಿ ಈಡೇರಿದ್ದೇನೂ ಕೇಳಿಬರುತ್ತಿಲ್ಲವಲ್ಲ ಎಂದು ಬೊಗಳೂರು ಮುಂದೆ ಪ್ರತಿಭಟನಾಕಾರರು ಜಮಾಯಿಸಿದಾಗ ಎಚ್ಚೆತ್ತ ಬೊಗಳೂರು ಸಿಬ್ಬಂದಿ, ಇದೀಗ ಈ ಪ್ರತಿಭಟನಾಕಾರರ ಬಾಯಿ ಮುಚ್ಚಿಸಲು ಅಸ್ತ್ರವೊಂದನ್ನು ಪತ್ತೆ ಹಚ್ಚಿದೆ.

ಬೆಲೆ ಏರಿಕೆ, ಎಷ್ಟೇ ಏರಿದರೂ ಬೆಲೆ ಇಳಿಯದ ಆಹಾರ ಪದಾರ್ಥಗಳು, ತರಕಾರಿಗಳು ಜನಸಾಮಾನ್ಯನಿಗೆ ತ್ರಾಸ ಕೊಡುತ್ತಿರುವ ಕುರಿತು ಇದ್ದೂ ಇಲ್ಲದಂತಿರುವ ವಿರೋಧ ಪಕ್ಷಗಳು ತಗಾದೆ ತೆಗೆದ ತಕ್ಷಣ, ಅವುಗಳ ಬಾಯಿ ಮುಚ್ಚಿಸಲಿಕ್ಕಾಗಿ ಒಂದಲ್ಲ ಒಂದು ಹೊಸ ಇಶ್ಯೂಗಳನ್ನು ಎಳೆದುಹಾಕಿಕೊಳ್ಳುತ್ತಾ, ರಕ್ಷಣಾ ಕವಚ ಸೃಷ್ಟಿಸಿಕೊಳ್ಳುತ್ತಾ, ಪ್ರತಿಪಕ್ಷಗಳ ಅಸ್ತಿತ್ವದ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಹಾಕಿರುವ ಮನಮೋಹಕ ಸಿಂಗ ಸರಕಾರದ ನೀತಿಯನ್ನೇ ಬೊಗಳೂರು ಬ್ಯುರೋ ಕೂಡ ಅನುಸರಿಸಿತು ಎಂದು ಹೇಳಲು ಯಾವುದೇ ದಾಕ್ಷಿಣ್ಯ ಇಲ್ಲವೆಂದೂ ಸ್ಪಷ್ಟಪಡಿಸಲಾಗುತ್ತಿದೆ.

ಕಾರಣವೆಂದರೆ, ಬೆಲೆ ಏರಿಕೆ ಬಗ್ಗೆ ಪ್ರತಿಪಕ್ಷಗಳು ಕೂಗಾಡತೊಡಗಿದಾಗ, ದಿಢೀರನೇ ಟೆಲಿಫೋನ್ ಕದ್ದಾಲಿಕೆ ವಿಷಯ ಹೊರ ಹಾಕಿ, ಅದರ ಬಗ್ಗೆ ಕೂಗಾಡುವಂತೆ ಮಾಡಲಾಗಿತ್ತು. ನಂತರ ದಿಢೀರನೇ ಅಣ್ವಸ್ತ್ರ ಮಸೂದೆಯ ಬತ್ತಳಿಕೆಯನ್ನು ಹೊರಗೆಳೆಯಲಾಯಿತು. ನಡುವೆಯೇ ಪುಣೆ ಸ್ಫೋಟ, ದಾಂತೇವಾಡ ನಕ್ಸಲರ ಅಟ್ಟಹಾಸ, ನಂತರ ಪಾಕಿಸ್ತಾನದ ತಗಾದೆ, ಹಫೀಜ್ ಸಯೀದ್ ಖುಲಾಸೆಯಿಂದಾಗಿ ನಮಗೆ ನಿರಾಶೆ ಮಾತ್ರ ಆಗಿದೆ ಎಂಬ ಹೇಳಿಕೆ, 2G ಸ್ಪೆಕ್ಟ್ರಮ್ ಹಗರಣ, ಫೋನ್ ಟ್ಯಾಪಿಂಗ್, ಶಶಿ ತರೂರ್ ರಾದ್ಧಾಂತ, ಐಪಿಎಲ್ ಮೋದಿ ವಿವಾದ, ಖಂಡನಾ ನಿರ್ಣಯದಿಂದ ಪಾರಾಗಲು ಮಾಯಾವತಿಯ ಖರೀದಿ, ಕಸಬ್ ಮರಣದಂಡನೆ ವಿವಾದ, ಎಲ್ಲವನ್ನೂ ಹೊರಗೆಳೆದುಕೊಂಡು, ಯಾವುದರ ಬಗ್ಗೆ ಪ್ರತಿಭಟನೆ ಮಾಡುವುದು, ಕೂಗಾಡುವುದು ಎಂದು ಪ್ರತಿಪಕ್ಷಗಳಿಗೇ ಗೊಂದಲ ಮೂಡಿಸುವಲ್ಲಿ ಯಶಸ್ವಿಯಾಗಿ ಪಾರಾಗಿರುವ ಯುಪಿಎ ತಂತ್ರವು ಬೊಗಳೂರಿಗೆ ಕೂಡ ಇಲ್ಲಿ ವರದಾನವಾಗಿ ಪರಿಣಮಿಸಿದೆ.

ಅದೇನೆಂದರೆ, ಮನಮೋಹಕ ಸಿಂಗರ ಪಕ್ಷವು ಪ್ರಣಾಳಿಕೆಯಲ್ಲಿದ್ದ ಒಂದೇ ಒಂದೇ ಭರವಸೆಯನ್ನೂ ಈಡೇರಿಸಿಲ್ಲ ಎಂದು ಒಣಮೋರೆ ಹೊತ್ತು ಹೇಳಿದಾಗ, ಈಗಾಗಲೇ Unprecedented Price-Rise Agenda ಸರಕಾರದಿಂದ ಈಗಾಗಲೇ ಸಾಕಷ್ಟು ನಿಧಿ ಪಡೆದುಕೊಂಡಿರುವ ಬೊಗಳೂರು ಬ್ಯುರೋ, ಯುಪಿಎ ರಕ್ಷಣೆಗೆ ಗುರಾಣಿ ಹಿಡಿದು ಹೊರಟಿತು.

ಏನ್ರೀ, ನೀವೇನೇನೆಲ್ಲಾ ಬಾಯಿಗೆ ಬಂದಾಗೆ ಹೇಳ್ತೀರಲ್ಲಾ.... Con-guess ಸರಕಾರವು ಆಮ್ ಆದ್ಮೀ ಆಮ್ ಆದ್ಮೀ ಅಂತೆಲ್ಲಾ ಪ್ರಣಾಳಿಕೆಯಲ್ಲಿ ಹೇಳ್ತಾ ಇರಲಿಲ್ವಾ... ಅದನ್ನು ಈಡೇರಿಸಿದ್ದಾರೆ ನೋಡಿ.... ಈಗಾಗ್ಲೇ ತಮ್ಮ ಆತ್ಮೀಯ ಮಿತ್ರರಾಷ್ಟ್ರವಾಗಿರುವ ಪಾತಕಿಸ್ತಾನದ ಪ್ರಧಾನ ಮಂತ್ರಿಗೆ ಅವರು ಆಮ್ ಕಳುಹಿಸಿಕೊಟ್ಟಿದ್ದಾರೆ. ಅವರನ್ನೂ ಜೊತೆಗೆ ತಮ್ಮನ್ನೂ ಕೂಡ ಆಮ್ ಆದ್ಮೀ ಎಂದು ಪರಿಗಣಿಸಿಕೊಂಡು ಈ ಕೃತ್ಯ ಎಸಗಿದ್ದಾರೆ. ಹೀಗಾಗಿ ಅದೇನೋ ಆಮ್ ಆದ್ಮೀ ಎಂದು ಉಲ್ಲೇಖಿಸಿದ್ದಾರಲ್ಲಾ... ಅದನ್ನು ಈಡೇರಿಸಿದ್ದಾರೆ ಕಣ್ರೀ... ನೋಡಿ ಇಲ್ಲಿ ಎಂದು ಕಿರುಚಾಡಿದ ತಕ್ಷಣ, ನಮ್ಮ ಪ್ರತಿಪಕ್ಷಗಳಂತೆಯೇ ಗೊಂದಲದಲ್ಲಿ ಬಿದ್ದ ಪ್ರತಿಭಟನಾಕಾರರು, ಸದ್ದಿಲ್ಲದೆ ಅಲ್ಲಿಂದ ಕಾಲ್ಕಿತ್ತರು. ಇನ್ನು ನಾಲ್ಕು ದಿನ ಸುಮ್ಮನಿದ್ದು, ಪ್ರತಿಭಟನೆಗೆ ಬೇರೇನಾದರೂ ವಿಷಯ ಹುಡುಕೋಣ, ಅದುವರೆಗೆ ಪ್ರತಿಭಟನೆ ರದ್ದು ಎಂದು ಘೋಷಿಸುತ್ತಿರುವುದು ಕೇಳುತ್ತಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

 1. ಅನ್ವೇಷಿ ಎಲ್ಲಿ ಹೋದರೋ ಅಂತ ಅನ್ವೇಷಣೆ ಮಾಡ್ತಾ ಇದ್ದೆ. ಮಳ್ಳಮೋರೆ ಸಿಂಗಣ್ಣನ ಭಾಷಣ ಕೇಳ್ತಾ ಇದ್ದಿರಿ ಅಂತ ಗೊತ್ತಾಯ್ತು. ಪಾತಕಿಸ್ತಾನದ ಪ್ರಧಾನಿಗೆ ಇವರು ಮಾವಿನ ಹಣ್ಣು ಕಳಿಸಿದ್ದಕ್ಕೆ ಪ್ರತಿಯಾಗಿ, ಅವರು ತಿಂದು ಚೀಪಿದ ಗೊರಟವನ್ನ
  ಕಳಿಸಿದ್ದಾರಂತಲ್ಲ?

  ಪ್ರತ್ಯುತ್ತರಅಳಿಸಿ
 2. ಪ್ರತಿಭಟನೆಗೆ ಬೇರೇನಾದರೂ ವಿಷಯ ಹುಡುಕುವಷ್ಟರಲ್ಲಿ ಮತ್ತೊಮ್ಮೆ ವಿಷಯಾಂತರವಾಗಿ ಹೊಸ ಇಷ್ಯೂ ಹುಟ್ಟಿಕೊಳ್ಳಬಹುದು ಅನ್ವೇಶಿಗಳೆ. ಯಾವುದಕ್ಕೂ ನೀವು ನಿಂಬೆಹಣ್ಣು ಮಂತ್ರಿಸಿಟ್ಟುಕೊಂಡಿರುವುದು ಒಳ್ಳೆಯದು....ಆಮಫಲ costy ಆಗಿ ಸಿಗದಂತಾಗಲಿದೆ !.

  ಪ್ರತ್ಯುತ್ತರಅಳಿಸಿ
 3. ಬಳ್ಳಾರಿಯ ಮಂಕಿ ಬ್ರದರ್ಸ್ ಹೇಗಿದ್ದಾರೆ?. ಅವರ ಬಗ್ಗೆ ಒಂದು ಪುಟ ಬರೆಯಿರಿ. ಈ ಯೆಡಿಯೂರಪ್ಪ ಎಂಬ ಕನ್ನಡ ವಿರೋಧಿ, ಕರ್ನಾಟಕ ವಿರೋಧಿ ಮಂಗಳಮುಖಿ ಮುಖ್ಯಮಂತ್ರಿಗೆ ಯಾವುದರಲ್ಲಿ ಹೊಡೆದರೆ ಬುದ್ದಿ ನೆಟ್ಟಗಾಗುತ್ತೆ?. ಬರೀ ಕರುಣಾನಿಧಿಯ ಕಾಲು ನೆಕ್ಕುವುದರಲ್ಲೇ ತನ್ನ ಕಾಲ ಕಳೆಯುತ್ತಿದ್ದಾನಲ್ಲ?. ಹೊಗೇನಕಲ್ ವಿಷಯದಲ್ಲಿ ಒಂದು ತಮಿಳುನಾಡಿಗೆ ಎಚ್ಚರಿಕೆ ಕೊಡಲಾರದಷ್ಟು ಹೇಡಿಯೇ ಇವ?. ಪುಟಗೋಸಿ ತಮಿಳರ ಓಟಿಗೆ ಕರುಣಾನಿಧಿಯ ಕಾಲು ನೆಕ್ಕಲೂ ಹೇಸದ ಈ ಮುಖ್ಯಮಂತ್ರಿ, ನಮ್ಮ ರಾಜ್ಯ ಕಂಡ ಅತ್ಯಂತ ಹೀನ ಮುಖ್ಯಮಂತ್ರಿ.

  ಪ್ರತ್ಯುತ್ತರಅಳಿಸಿ
 4. ಸುನಾಥರೇ,
  ಹೌದು ಹೌದು, ನಾವು ಮಾವು ಕಳಿಸಿದರೂ, ನಮ್ಮೂರಿಗೆ ಅವರು ಚಿಪ್ಪು ಕಳಿಸಿ, ನಮ್ಮ ಸರಕಾರದ ಕೈಗೈ ಚಿಪ್ಪು ಕೊಡ್ತಾ ಇದ್ದಾರೆ...

  ಪ್ರತ್ಯುತ್ತರಅಳಿಸಿ
 5. ಸುಬ್ರಹ್ಮಣ್ಯರೇ, ಈ ನಿಂಬೆ ಹಣ್ಣುಗಳು ಕೂಡ ನಮ್ ಕೈಗೆ ಸಿಕ್ತಾ ಇಲ್ಲ... ಏನಿದ್ರೂ ಆಮಶಂಕೆ ಫಲವೇ ಬೆಟರ್ರು... ಅಂತ ಕೇಂದ್ರದಿಂದ ಶಿಫಾರಸು ಬಂದಿದೆ... ಪರಿಶೀಲಿಸಲಾಗುತ್ತಿದೆ.

  ಪ್ರತ್ಯುತ್ತರಅಳಿಸಿ
 6. ಗುರುಗಳೇ, ಮಂಗಗಳ ಕೈಗೆ ಮಾಣಿಕ್ಯ ಕೊಟ್ಟಾಗಿದೆ. ಮತ್ತು ಅವುಗಳನ್ನು ಮಂಗಗಳ ಅಂಗಳಕ್ಕೆ ಕಳುಹಿಸುವ ಸಿದ್ಧತೆಯೂ ನಡೆಯುತ್ತಿದೆ ಎಂದು ತಿಳಿದುಬಂದಿದೆ.

  ಪ್ರತ್ಯುತ್ತರಅಳಿಸಿ
 7. https://www.facebook.com/kannadasampada, https://www.facebook.com/TrollHaiklu, https://www.facebook.com/chitraroopaka,

  ಈ ಫೇಸ್‌ಬುಕ್ ಪುಟದ ಅಡ್ಮಿನ್ಗಳೆಲ್ಲಾ ಮೊದ್ಲೀಂದ್ಲು ಫೋನ್ ಕದ್ದಾಲಿಕೆಯಲ್ಲಿ ಪ್ರವೀಣ್ರು, ಈಗ್ಲೂ ಆ ಹುಚ್ಚು ಅವರನ್ನು ಬಿಟ್ಟಿಲ್ಲಾ, ಕನ್ನಡ ಸಂಪದ ಆಡ್‌ಮಿನ್ ಅಂತೂ ಫೋನ್ ಕದ್ದಾಲಿಸಿದ ಮೇಲೇನೆ ತಮ್ಮ ಪುಟವನ್ನು ತುಂಬೋದು

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D