ಬೊಗಳೆ ರಗಳೆ

header ads

Blame-Game: ನಿಮಗೆ ಬ್ಲೇಮ್, ನಮಗೆ ಗೇಮ್ ಎಂದ ಪಾಕ್!

(ಬೊಗಳೂರು Blame ಕ್ರೀಡಾ ಬ್ಯುರೋದಿಂದ)
ಬೊಗಳೂರು, ಸೆ.14- ಮುಂಬೈ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತವು blame ಮಾತ್ರ ಮಾಡಬೇಕು, game ನಮಗೆ ಇರಲಿ ಎಂದು ಪಾತಕಿ ಸ್ತಾನವು ಸ್ಪಷ್ಟಪಡಿಸಿದೆ.

ಮುಂಬೈ ಮೇಲೆ ನಡೆದ ದಾಳಿಯ ವರ್ಷಾಚರಣೆ ಸಮೀಪಿಸುತ್ತಿರುವಂತೆಯೇ ಉಭಯ ರಾಷ್ಟ್ರಗಳ ನಡುವೆ ಸೌಹಾರ್ದತೆ ಏರ್ಪಡಲು ಹೊಸ ಹೊಸ ಸಾಧ್ಯತೆಗಳನ್ನು ಪರದಾಡಿ ಪರದಾಡಿ ಹುಡುಕಲಾಗುತ್ತಿದ್ದು, ಕಳೆದ ಒಂದು ವರ್ಷದಿಂದ "ಉಗ್ರರ ವಿರುದ್ಧ ಕ್ರಮ ಕೈಗೊಳ್ಳೀssssssssssss, ಇಲ್ಲವಾದರೆ ನಾವೇ ಕ್ರಮ ಕೈಗೊಳ್ಳುತ್ತೇವೆ" ಎಂದು ಪದೇ ಪದೇ ಹೇಳುತ್ತಿದ್ದ ಭಾರತ ಸರಕಾರವು ಪಾತಕಿಸ್ತಾನದ ಮೇಲೆ Blame ಮಾತ್ರ ಮಾಡಿ, Game ಆಡಲು ಅದಕ್ಕೆ ಬಿಟ್ಟಿರುವುದಾಗಿ ಮೂಲಗಳು ವರದ್ದಿ ಮಾಡಿವೆ.

"ನೀವು ಬ್ಲೇಮ್ ಮಾಡಿ, ನಾವು ಗೇಮ್ ಆಡುತ್ತೇವೆ" ಎಂದು ಇತ್ತೀಚೆಗೆ ಪಾತಕಿಸ್ತಾನದಿಂದ ಭಾರತದ ನಿಧಾನಮಂತ್ರಿ ಸೋನಿಯಾ ಸಿಂಗ್.... ಅಲ್ಲಲ್ಲ ಮನಮೋಹಕ ಸಿಂಗ್ ಅವರಿಗೆ ಪಾಕಿಸ್ತಾನದ ಸರಕಾರದ ಮುಖ್ಯಸ್ಥರೂ ಆಗಿರುವ ಐಎಸ್ಐ ಮುಖ್ಯಸ್ಥರು ಪತ್ರ ಬರೆದಿರುವುದಾಗಿ ಮೂಲಗಳು ಬೊಗಳೆ-ರಗಳೆಗೆ ತಿಳಿಸಿಲ್ಲ.

ಮುಂಬೈ ಮೇಲೆ ನಮ್ಮವರು ದಾಳಿ ಮಾಡಿ ಒಂದು ವರ್ಷವಾಗ್ತಾ ಬಂದ್ರೂ ನಿಮ್ ಕೈಯಲ್ಲಿ ಏನೂ ಮಾಡಲಾಗಿಲ್ಲ ಎಂಬ ಕುಹಕ ನಗೆಯೊಂದು, ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಮೂಲಿ ಪ್ರಕ್ರಿಯೆಯಾಗಿಬಿಟ್ಟಿರುವ, ಗಡಿ ನಿಯಂತ್ರಣ ರೇಖೆ ದಾಟಿ ನುಸುಳುವ ಪ್ರಕ್ರಿಯೆಯ ಮೂಲಕ ಭಾರತ ಪ್ರವೇಶಿಸಿರುವುದಾಗಿ ಬೊ.ರ. ಬ್ಯುರೋದ ಮಂದಿ ಕದ್ದು ಮುಚ್ಚಿ ವರದ್ದಿ ತಂದು ಹಾಕಿದ್ದಾರೆ.

(ಕೆಲವಾರು ದಿನಗಳಿಂದ ಬೊಗಳೂರು ಬ್ಯುರೋ ಸಿಕ್ಕಾಪಟ್ಟೆ ಧೂಳು ತಿನ್ನುತ್ತಿದ್ದ ಕಾರಣ ಚಾ-ತರಿಸಿಕೊಂಡು ಬಳಿಕ ಧೂಳೊರೆಸಿ ವಾಪಸ್ ಮರಳಲಾಗಿದೆ. ಆದರೆ, ಈ ಸಮಯದಲ್ಲಿ ನಮ್ಮ ಬೊಗಳೆ-ರಗಳೆ ಪತ್ರಿಕೆ ಲಭಿಸದ ದಾರವಿಲ್ಲದ ಚಂದಾರಹಿತರು, ಅಡ್ಜಸ್ಟ್ ಮಾಡಿಕೊಂಡು, ಮುಂದಿನ ತಿಂಗಳ ಬಿಲ್‌ನಲ್ಲಿ ಸೇರಿಸಿ ನಮಗೆ ಪಾವತಿಸಲು ಕೋರಲಾಗಿದೆ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ವಾಸ್ತವತೆಯನ್ನು ವ್ಯಂಗ್ಯವಾಗಿ ಪ್ರೆಸೆಂಟ್ ಮಾಡುವುದು ಒಂದು ಕಲೆ....ಅದನ್ನು ಚೆನ್ನಾಗಿ ಮಾಡುತ್ತೀರಿ...

  ಪ್ರತ್ಯುತ್ತರಅಳಿಸಿ
 2. ಅನ್ವೇಷಿಗಳೆ,
  ಪಾತಕಿಸ್ತಾನ,ಹಿಂದಿರೊಸ್ತಾನ ಹಾಗೂ ಅರೆಮಿಕ ಇವರೆಲ್ಲರೂ ಜೊತೆಯಾಗಿ ಸೇರಿಕೊಂಡು ಕಣ್ಣುಮುಚ್ಚಾಲೆಯಾಟ ಆಡ್ತಾ ಇದ್ದಾರೆ.

  ಪ್ರತ್ಯುತ್ತರಅಳಿಸಿ
 3. ಬೊಗಳೆ ರಗಳೆಯವರೇ,

  ನೀವು ಬ್ಲೇಮ್ ಮಾಡ್ತಾ ಮಾಡ್ತಾ ಆ ಕಡನೇ ಹೋಗಿಬಿಡೋದಾ..

  ಯಾವ ಗೇಮ್ ಆಡಬೇಕು ಅನ್ನುವುದು ನಿರ್ಧಾರವಾಗಿದೆಯಾ ?

  ಪ್ರತ್ಯುತ್ತರಅಳಿಸಿ
 4. ಶಿವು ಅವರೆ,
  ನಾವು ಇದನ್ನೇ ನಮ್ಮ ಅಮೋಘ ಜಾರಕಾರಣಿಗಳಿಗೆ ಪ್ರೆಸೆಂಟ್ ಮಾಡಬೇಕೆಂದು ಬಯಸಿದ್ದೆವು. ಅವರು ಅದನ್ನು re-present ಮಾಡೋದೇ ಇಲ್ಲವಲ್ಲ...

  ಪ್ರತ್ಯುತ್ತರಅಳಿಸಿ
 5. ಸುನಾಥರೆ,
  ನಾವು ಕೂಡ ಆಟ ಆಡ್ಬೇಕೂಂತ ಇದ್ದೇವೆ. ಚಿಕ್ಕೋರಿದ್ದಾಗ ಕಣ್ಣಾಮುಚ್ಚಾಲೆ ಆಡ್ತಾ ಇದ್ದೆವು. ಆಮೇಲೆ ಮನೆಗೆ ಬಂದಾಗ ಎಲ್ಲರೂ ಒಂದೇ ಆಗ್ತಿದ್ದೆವು... ಈಗಿನ ರಾಜಕೀಯ ಮುಖಂಡರು ಮಾಡ್ದಂಗೆ.

  ಪ್ರತ್ಯುತ್ತರಅಳಿಸಿ
 6. ಶಿವ್ ಶಂಕರರೇ,
  ಸದ್ಯಕ್ಕೆ ಕಣ್ಣಾಮುಚ್ಚಾಲೆಯಾಟದಲ್ಲಿ ಮುದ್ದಿನ ಊಟೆಯನ್ನು ಪಾಕಿಸ್ತಾನದತ್ತ ಉರುಳಿಸಿದ್ದೇವೆ. ಇನ್ನು ನೋಡಬೇಕು ಇದನ್ನು ಈ ಕಣ್ಣಾಮುಚ್ಚಾಲೆಯಾಟವನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸ್ಬೇಕೂಂತ ಇದ್ದೀವಿ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D