(ಬೊಗಳೂರು ಸರಕಾರ ರಚನಾ ಬ್ಯುರೋದಿಂದ)
ಬೊಗಳೂರು, ಮೇ 23- ಕಳೆದ ಬಾರಿಗಿಂತ ಈ ಬಾರಿ ಎರಡು ಸಂಸದರ ಬಲವು ಹೆಚ್ಚು ಸಿಕ್ಕಿದ್ದರಿಂದಾಗಿ ತಾವು ಪ್ರಧಾನಿ ಹುದ್ದೆ ಡಿಎಂಕೆಗೆ ನೀಡಬೇಕೆಂದು ಒತ್ತಾಯಿಸಿದ್ದಲ್ಲ ಎಂದು ಕರುಣಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದರೆ, ಎಡವನ್ನು ಬುಡ ಸಮೇತ ಕೀಳುವುದಕ್ಕಾಗಿ ನಾನು ಅತ್ಯಧಿಕ ಹೋರಾಟ ಮಾಡಿರುವುದರಿಂದ ಬಂಗಾಳ ಸರಕಾರವನ್ನು ತಡ ಮಾಡದೆ ಎಸೆಯಬೇಕು ಎಂದು ನಾನು ಕೂಡ ಗಟ್ಟಿಯಾಗಿ ಒತ್ತಾಯಿಸುವುದಿಲ್ಲ ಎಂದು ಮಮತಾನಿಧಿ ಘೋಷಿಸಿದ್ದಾರೆ.ಎಲ್ಟಿಟಿಇ ನಾಯಕ ಪಿರಹಾಗರನ್ (ತಮಿಳಿನಲ್ಲಿ ಉಚ್ಚರಿಸುವುದು ಹೀಗೆ) ಹತ್ಯೆಯಾದ ನಿಗೂಢತೆಯಿಂದಾಗಿ ಡಿಎಂಕೆ ಅದನ್ನೆಲ್ಲಾ ಮರೆತು ಡೆಲ್ಲಿಯಲ್ಲಿ ವೀಲ್‌ಚೇರ್ ರಾಜಕೀಯದಲ್ಲಿ ನಿರತವಾಗಿತ್ತು. ಹೀಗಾಗಿ ಪ್ರಧಾನ ಮಂತ್ರಿ ಪದವಿಗೆ ಚೌಕಾಶಿ ಮಾಡಲು ಪುರುಸೊತ್ತು ಸಿಗಲಿಲ್ಲ ಎಂದೂ ಪತ್ತೆ ಹಚ್ಚಲಾಗಿದೆ.
(ಸೂಚನೆ: ತಮಿಳುಕಾಡಿನ ಪಕ್ಷವು ಡೆಲ್ಲಿಯಲ್ಲಿ ದರ್ಬಾರು ನಡೆಸಲು ಹೋದ ಕುರಿತಾದ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಂದಷ್ಟು ವಿವರಗಳು ಸೋಮವಾರ ಪ್ರಕಟವಾಗಲಿದೆ. ನಿರೀಕ್ಷಿಸಬೇಡಿ, ನಿರೀಕ್ಷಿಸಿ ನಿರಾಶರಾಗಬೇಡಿ!!!)
4 ಕಾಮೆಂಟ್‌ಗಳು
ಆ ಇಬ್ಬರೂ, ಪಿಎಂ ಹುದ್ದೆ ಕೇಳೋದಿಲ್ಲ ಅಂತ ಗೊತ್ತಿತ್ತು ಬಿಡಿ (ಪಿಎಂ ಅಂದ್ರೆ ಪೆದ್ದು ಮುಂಡೇದು) - ಕರುಣಾ, ಇಷ್ಟು ವರ್ಷ ಉಂಡಾಡಿತನ ಮಾಡಿದ್ದಕ್ಕೆ ಈಗಿರೋ ಸಿಎಂ (ಛತ್ರಿ ಮುಂಡೇದು) ಖುರ್ಚಿ ಸಾಕಲ್ಲ
ಪ್ರತ್ಯುತ್ತರಅಳಿಸಿಅಖಿಲ ಭಾರತೀಯ ಹುಲ್ಲು ಹೊರುವ ಪಕ್ಷವೊಂದರ ಮೂರೇ ಸದಸ್ಯರನ್ನು ಜನತೆ ಪರಲೋಕಸಭೆಗೆ ಮೂರು ನಾಮ ಹಾಕಿ(= ಆಶೀರ್ವಾದ ಮಾಡಿ)ಕಳಿಸಿಕೊಟ್ಟಿದೆ. ತಾವು ಈಗ ಅತ್ಯಲ್ಪಸಂಖ್ಯಾತರಾದದ್ದರಿಂದ ಸಾನಿಯಾಳ ಜುಟ್ಟನ್ನು ಹಿಡಿಯಲು
ಪ್ರತ್ಯುತ್ತರಅಳಿಸಿಈ ಪಕ್ಷದ ಸದಸ್ಯರೊಬ್ಬರು ಮುಖ ಮುಚ್ಚಿಕೊಂಡು ಹೋಗಿದ್ದರು. ಅವಳು ಇವನ ಜುಟ್ಟನ್ನೇ ಕತ್ತರಿಸಿ ಕಳಿಸಿದ್ದಾಳೆ.
ಇದೀಗ ಖೋಡೀ ಮಠದ ಭವಿಷ್ಯದ ಪ್ರಕಾರ ಇವರೇ ನಮ್ಮ ಪೆದ್ದು ಮುಂಡೆ(ಶ್ರೀನಿವಾಸರ definition ಮೇರೆಗೆ).
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿನಿಮ್ಮ ಪಿಎಂ ವ್ಯಾಖ್ಯಾನ ಕರೆಕ್ಟು ಇಂತ ನನಗೆ ಈಗ ಹೊಳೆದಿದೆ. ಹೀಗಾಗಿ ತಲೆ ಬರಹವನ್ನು "ಪಿಎಂ ಹುದ್ದೆ ಕೊಡದಿದ್ರೂ ತೆಗೆದುಕೊಳ್ತೀವಿ" ಅಂತ ಬದಲಾಯಿಸೋಕೆ ಪ್ರಯತ್ನಿಸ್ತಿದ್ದೀವಿ.
ಸುನಾಥರೆ,
ಪ್ರತ್ಯುತ್ತರಅಳಿಸಿಕತ್ತರಿಸಿ ಕಳಿಸಿದ್ದು ಜುಟ್ಟನ್ನೆಯೇ ಎಂಬ ಬಗ್ಗೆ ತನಿಖೆ ನಡೆಯತ್ತಿದೆ. ತಪ್ಪು ತಿಳಿದುಕೊಳ್ಳಬೇಡಿ. ಆ ಮಹಿಳೆ ಹೊತ್ತದ್ದು ಹುಲ್ಲನ್ನು ಆಗಿರುವುದರಿಂದ ಹುಲ್ಲು ಕತ್ತರಿಸಿ ಉದುರಿಸಿದರೋ ಅಥವಾ ಹಲ್ಲು ಉದುರಿತೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಏನಾದ್ರೂ ಹೇಳ್ರಪಾ :-D