Subscribe Us

ಜಾಹೀರಾತು
header ads

Election Flash: ಪ್ರಧಾನಿ ಅಭ್ಯರ್ಥಿ ಕ್ವಟ್ರೋಚಿ!

(ಬೊಗಳೂರು ಫ್ಲ್ಯಾಶ್ ಬ್ಯುರೋದಿಂದ)
ಬೊಗಳೂರು, ಏ.30- ಕಳೆದ ಹಲವಾರು ದಿನಗಳಿಂದ ತಲೆಮರೆಸಿಕೊಂಡು ಗಡಿಬಿಡಿಯಲ್ಲಿದ್ದ ಬೊಗಳೂರು ಬ್ಯುರೋ, ದಿಢೀರನೇ ಎಚ್ಚೆತ್ತುಕೊಂಡು ಒಂದು ಸುದ್ದಿಯನ್ನು ಹೆಕ್ಕಿ ತಂದಿದೆ. ಅದರ ಪ್ರಕಾರ, ಬೊಗಳೂರು ದೇಶದ ಪ್ರಧಾನಿ ಪದವಿಗೆ ಅತೀ ಹೆಚ್ಚು ಅಭ್ಯರ್ಥಿಗಳಿರುವುದರಿಂದಾಗಿ, ಕ್ವಟ್ರೋಚಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಾಗುತ್ತಿದೆ.

ಇದರ ಅಂಗವಾಗಿ, ಕ್ವಟ್ರೋಚಿಗೆ ಮೊದಲು ಭಾರತೀಯ ಪೌರತ್ವವನ್ನು ನೀಡಲಾಗುತ್ತದೆ. ಆ ಬಳಿಕ ನಿಧಾನವಾಗಿ ರಾಜ್ಯಸಭೆಯೋ, ಅಥವಾ ನಾಮನಿರ್ದೇಶಿತ ಪ್ರಧಾನಿಯಾಗಿಯೋ ನೇಮಿಸಲು ನಿರ್ಧರಿಸಲಾಗುತ್ತಿದೆ ಎಂದು ಏನೂ ಬಲ್ಲದ ಮೂಲಗಳು ತಿಳಿಸಿವೆ.

ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದಾಗಿ, ಇಟಲಿ ಉದ್ಯಮಿಯು ದೇಶಕ್ಕೆ ಮಹದುಪಕಾರ ಮಾಡಿದ್ದು, ಸಾಕಷ್ಟು ಹಣವನ್ನೂ ಗಳಿಸಿದ್ದಾರೆ. ಹೀಗಾಗಿ ದೇಶದ ಹಣಕಾಸು ಬಿಕ್ಕಟ್ಟು ಕೂಡ ಸುಲಭವಾಗಿ ನಿವಾರಣೆಯಾಗಬಹುದು. ಶತ್ರುಗಳು ಬಂದರೆ ಬೋಫೋರ್ಸ್ ತುಪಾಕಿ ಸಿಡಿಸಲೂ ಅವರಿಗೆ ಗೊತ್ತಿದೆ ಎಂದಿರುವ ಕೇಂದ್ರವು, ಇದೀಗ ಸಾಕಷ್ಟು ಸಂಖ್ಯೆಯಲ್ಲಿ "ನಾನು ಪ್ರಧಾನಿಯಾಗುತ್ತೇನೆ, ನಾನಾಗುತ್ತೇನೆ" ಎನ್ನುತ್ತಿರುವವರ ಬಾಯಿ ಮುಚ್ಚಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಅಮೆರಿಕ, ಬ್ರಿಟನ್ ಮುಂತಾದ ದೇಶಗಳು ಭಾರತಕ್ಕೇ ಔಟ್ ಸೋರ್ಸಿಂಗ್ ಮಾಡುತ್ತಿದ್ದಾವೆ, ಹೀಗಾಗಿ ನಾವು ಕೂಡ ನಮ್ಮ ಪ್ರಧಾನಿ ಪದವಿಯನ್ನು ಔಟ್ ಸೋರ್ಸಿಂಗ್ ಮಾಡಿ ಇನ್ ಸೋರ್ಸಿಂಗ್ ನಿರ್ವಹಿಸಿಕೊಳ್ಳಬಾರದು ಎಂದು ಬೊಗಳೂರು ಪಕ್ಷದ ಮುಖ್ಯಸ್ಥರು ಪ್ರಶ್ನಿಸಿದ್ದಾರೆ.

ಇಂದಿನ ಜಾರಕಾರಣದ ಪರಿಸ್ಥಿತಿಯಿಂದಾಗಿ ಜನತೆ "ಬ್ರಿಟಿಷರೇ ಭಾರತಕ್ಕೆ ಮರಳಿ ಬನ್ನಿ" ಎಂಬಿತ್ಯಾದಿ ಕೂಗೆಬ್ಬಿಸುತ್ತಿದ್ದಾರೆ. ನಮ್ಮನ್ನು, ನಮ್ಮ ಜನರನ್ನು ಶತ್ರುಗಳು, ಭಯೋತ್ಪಾದಕರ ಕೈಯಿಂದ ರಕ್ಷಿಸಿಕೊಳ್ಳಲು, ವಿದೇಶೀಯರ ಕೈಗೆ ಅಧಿಕಾರ ಸೂತ್ರ ಕೊಟ್ಟರೆ ಒಳಿತು ಎಂದು ಬೊಗಳೂರು ಮೈತ್ರಿಕೂಟ ಸರಕಾರಕ್ಕೆ ಮನವರಿಕೆಯಾಗಿರುವುದಾಗಿ ಮೂಲಗಳು ತಿಳಿಸಿವೆ.

Post a Comment

8 Comments

 1. ಇಟಲಿಯ ಹಸ್ತಕ್ಕೆ ಜೈ ಹೊ!

  ReplyDelete
 2. ಕಿಶೋರMay 02, 2009 3:20 PM

  :)
  ಅಂದ ಹಾಗೆ ಬ್ಲಾಗ್ ಸ್ಪಾಟ್ ನಲ್ಲಿ ಇದ್ದ ಹಣೆಚಿತ್ರ ಇಲ್ಲಿಗೂ ಬಂದದ್ದು ಸಂತಸ ತಂದಿತು. ಮಂಗನನ್ನು ಯಾವಾಗ ಕರೆಸುತ್ತೀರಿ? ಅದರ ಅಮಾಯಕ ಮುಖ ಚಂದ ಇತ್ತು ನೋಡ್ಲಿಕ್ಕೆ.

  ReplyDelete
 3. ಸುನಾಥರೆ,
  ಅದು ಸಹಾಯ ಹಸ್ತ ಅಥವಾ ಸಹಾಯಕ್ಕೆ ಪ್ರತಿ-ಸಹಾಯ ಹಸ್ತ.

  ReplyDelete
 4. ಕಿಶೋರರೆ, ಬೊಗಳೂರಿಗೆ ಸ್ವಾಗತ.
  ಈಗಿನ ಮುಖಕ್ಕಿಂತ ಅಮಾಯಕ ಮಂಗನ ಮುಖವೇ ಉತ್ತಮ ಎಂದು ನೆನಪಿಸಿದ್ದೀರಿ. ಪೆಚ್ಚುಮೋರೆ ಹಾಕಿಕೊಳ್ಳಲು ಪ್ರಯತ್ನಿಸ್ತೇವೆ. ನೀವು ಆ ಅಮಾಯಕ ಮಂಗನ ಮುಖ ಚೆನ್ನಾಗಿತ್ತು ಅಂದಿದ್ದೋ ಅಥವಾ ಅದರ ಕೈಯಲ್ಲಿದ್ದ ಗುಲಾಬಿ ಹೂವನ್ನೇ?

  ಬರ್ತಾ ಇರಿ.

  ReplyDelete
 5. Dear Avinash sir
  Nimge deshada pradani bagge swalpanu respect elwa?
  Deshada pardanige respect koddiddavaru yarige respect kodthira...
  Nivu U.P.A govt na low leval antha think madbedi
  Manmohan singh is a first prime minster after Jawarlal Neharu reelcted next term..
  Soniya gandhi name to recommened Nobel prize she is great lady yar..


  I alredy told you think positivly.

  ReplyDelete
 6. ಹಾಯ್ ಅವಿನಾಶ್
  ನಿಮ್ಮ ಬ್ಲಾಗ್ ನೋಡಿದರೆ ತಿಳಿಯುತ್ತೆ ನೀವು ಪಕ್ಕಾ ಬಿ.ಜೆ.ಪಿ
  ಅಂತ.
  ಪ್ರಧಾನಿ ಬಗ್ಗೆ ಈ ರಿತಿ ಬ್ಲಾಗ್ ಗೀಚುವುದು ಮೊದಲು ನಿಲ್ಲಿಸಿ
  ಇದು ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.

  ReplyDelete
 7. ದೀಪಕ್ ಅವರೆ,
  ನಾವು ಯಾರು ಎಂತ ಗೊತ್ತಿಲ್ಲದ ಸಂದರ್ಭದಲ್ಲಿ ಪಕ್ಕಾ ಬಿಜೆಪಿ ಅಂತ ಕರೆದು ಒಳ್ಳೆ ಕೆಲಸ ಮಾಡಿದ್ದೀರಿ. ನಾವೇನೇ ಹೇಳಿದರೂ ಅಸತ್ಯವೇ ಆಗಿರುತ್ತದೆ ಎಂಬುದು ತಿಳಿದಿರಲಿ.

  ಅಪಾತ್ರರಿಗೆ ನಮ್ಮ ಗೌರವ ಇಲ್ಲ ಎಂಬುದಂತೂ ಸತ್ಯ.

  ReplyDelete
 8. ಹಲೋ ಅವಿನಾಶ್

  ನಿಮ್ಮ ಗೌರವ ನಮ್ಮ ಪ್ರಧಾನಿಗೆ ಬೇಕಾಗಿಲ್ಲಾ ದೇಶದ ಜನರಿಗೆ ಅವರ ಬಗ್ಗೆ ಅಪಾರ ಗೌರವವಿದೆ
  358 ಸಂಸದರ ಬೆಂಬಲವಿದೆ ಸಾಕು
  ನೀವು ಹೊಗಳುವ RSS ಅಥವಾ ಬಿ.ಜೆ.ಪಿಗೆ
  ಜನರ ಬೆಂಬಲವು ಇಲ್ಲಾ ಗೌರವವು ಇಲ್ಲಾ

  ನೀವು ತಮಿಳುನಾಡನಲ್ಲಿ ಇದ್ದಾಗ ನಿಮಗೆ ಕನ್ನಡನಾಡಿನ ನಾಡಿನ ಪರಿಸ್ಥತಿ ಹೇಗೆ ತಿಳಿಯುತ್ತೆ?

  ReplyDelete

ಏನಾದ್ರೂ ಹೇಳ್ರಪಾ :-D