(ಬೊಗಳೂರು ಅ-ವ್ಯವಹಾರ ಬ್ಯುರೋದಿಂದ)
ಬೊಗಳೂರು, ಮಾ.16- ಸಾಫ್ಟ್‌ವೇರ್ ತುಡಿತ ಹೆಚ್ಚಾದಾಗುತ್ತಿರುವಾಗಲೇ ಆರ್ಥಿಕ ಹೊಡೆತ, ಹಣಕಾಸು ಬಡಿತದಿಂದಾಗಿ ಕೆಲಸ ಕಳೆದುಕೊಂಡವರು, ಸಾಲರಿ ಕುಗ್ಗಿಸಿಕೊಂಡು ವರಿ ಮಾಡಿಕೊಂಡವರು ಬೇಸರ ಕಳೆಯಲು ಕುಡಿತವನ್ನೂ ಹೆಚ್ಚಾಗಿಸಿಕೊಂಡ ಪರಿಣಾಮವಿದು. ಅಮೆರಿಕದಲ್ಲಿ ಬೊಗಳೆ ರಗಳೆಗೆ ತೀವ್ರವಾಗಿ ಸ್ಪರ್ಧೆ ಒಡ್ಡುತ್ತಿರುವ ಪತ್ರಿಕೆ ವಾಷಿಂಗ್ಟನ್ ಪೋಸ್ಟ್, ಇವೆಲ್ಲವುಗಳ ವ್ಯವಹಾರವೇ ಬೇಡ ಎಂದು ತನ್ನ ಪತ್ರಿಕೆಯಲ್ಲಿ ವ್ಯವಹಾರಕ್ಕೆ ಸಂಬಂಧಿಸಿದ ಪುಟವನ್ನೇ ಮುಚ್ಚಲು ನಿರ್ಧರಿಸಿದೆ ಎಂದು ಇಲ್ಲಿ ವರದಿಯಾಗಿದೆ.
ಇದನ್ನು ಸ್ವತಃ ಬುಷಿಂಗ್ಟನ್ ಪೋಸ್ಟ್ ಸೊಂಪಾದಕರು ಫೋನ್ ಮಾಡಿ ಬೊ.ರ. ಬ್ಯುರೋಗೆ ಸುದ್ದಿ ತಿಳಿಸಿ, ಹರ್ಷ ಪಡುವಂತೆ ಸೂಚಿಸಿದ್ದಾರೆ.
ಹಾಗಂತ ನಮ್ಮ ಪ್ರತಿಸ್ಪರ್ಧಿ ಅಂತ ನಾವು ಬೆನ್ನುತಟ್ಟಿ ಹೇಳುತ್ತಿರುವ ವಾಷಿಂಗ್ಟನ್ ಪೋಸ್ಟ್ ತನ್ನ ವ್ಯವಹಾರವನ್ನು ಕೊನೆಗೊಳಿಸಿದೆ ಎಂದ ಮಾತ್ರಕ್ಕೆ, ಬೊಗಳೆ ರಗಳೆಯಲ್ಲಿಯೂ ಅ-ವ್ಯವಹಾರ ಮುಚ್ಚಲಾಗುತ್ತದೆ, ಅಥವಾ ಬೊ.ರ.ವನ್ನೇ ಮುಚ್ಚಲಾಗುತ್ತದೆ ಎಂದು ಓದುಗರು ತಿಳಿದುಕೊಳ್ಳಬೇಕಾಗಿಲ್ಲ. ಯಾಕೆಂದರೆ, ಅಂತ ಕೀಳು ಮಟ್ಟಕ್ಕೆ ಇಳಿಯುವಷ್ಟು ದೊಡ್ಡ ಸಂಸ್ಥೆ ನಮ್ಮದಲ್ಲ ಎಂದು ಬೊ.ರ. ಸಂಪಾದಕರು ಸ್ಪಷ್ಟಪಡಿಸಿದ್ದಾರೆ.
ಅನ್ವೇಷಿಯವರೆ,
ReplyDeleteನಿಮ್ಮ ಸ್ಪರ್ಧೆ ಎದುರಿಸಲಾರದೇ, ವಾಶಿಂಗ್ಟನ್ ಪೋಸ್ಟ್ ಪತ್ರಿಕೆಯೇ ಮುಚ್ಚಿಹೋಗಬಹುದು.
ಅದಿರಲಿ, ‘ಬೊಗಳೆ ರಗಳೆ’ ಮುಖಪುಟದಲ್ಲಿ Frieda Pinto ಎನ್ನುವ ಸುಂದರಿಯ ಫೋಟೋ ಯಾಕೆ ಹಾಕಿದ್ದೀರಿ?
ಇವಾಗ್ ತಾನೆ ನೋಡ್ತಿದೀನಿ ಅಷ್ಟರಲ್ಲೇ ಮುಚ್ಚೋ ಮಾತು ಹಿಂತಗೊಂಡ್ರಲ್ಲ, ಒಳ್ಳೇದು
ReplyDeleteಸೂಪರ್ entha bogae!
ReplyDeleteಸುದ್ದಿ ಬೇಡ ಅಂತ ವ್ಯಾಕರಿಸಿಕೊಳ್ಳಲು ತಿಂದು ಹೆಚ್ಚಾಗಿದ್ದೇ ಕಾರಣ ಅಂತ ನಮ್ಮ ಪಕ್ಕದ ಬ್ಯೂರೋ ಆದ ವೈದ್ಯಕೀಯ ಬ್ಯೂರೋ ಜೋರಾಗಿ ಪಿಸುಗುಟ್ಟಿದೆ. ಏನನ್ನ ಎಷ್ಟೆಷ್ಟು ತಿಂದಿದೆ ಅಂತ ನಮ್ಮ ಬ್ಯೂರೋ ಅತಿ ಶೀಘ್ರದಲ್ಲಿ ಪತ್ತೆ ಹಚ್ಚಲಿದೆ.
ReplyDeleteಒಳ್ಳೇದಾಯಿತು ಬಿಡಿ. ಓದಿ ತಲೆ ಕೆಡಿಸಿಕೊಳ್ಳೋದು ತಪ್ಪಿತು .
ReplyDeleteಚಾರ್ಲಿ ಚಾಪ್ಲಿನ್ ಬಗ್ಗೆ ನಿಮ್ಮ ವರದಿಗಾರರಿಗೆ ಇನ್ನೂ ತಿಳಿದಿಲ್ಲ ಅಂತ ಕಾಣತ್ತೆ. :)
ಸುನಾಥರೆ,
ReplyDeleteನಮ್ಮ ಸ್ಪರ್ಧೆ ಎದುರಿಸಲಾರದೆ ವಾಶಿಂಗ್ಟನ್ ಪೋಸ್ಟ್ ಮುಚ್ಚುವುದು ತನ್ನ ಸ್ವಂತ ಬ್ಯುರೋವನ್ನೇ ಅಥವಾ ಬೊಗಳೆ ಬ್ಯುರೋವನ್ನೇ ಎಂಬುದು ಖಚಿತವಾಗಿಲ್ಲ.
ಫ್ರೀಡಾ ಪಿಂಟೋವನ್ನು ಪತ್ತೆ ಹಚ್ಚಿದ್ದಕ್ಕಾಗಿ ಧನ್ಯವಾದ. ಇತ್ತೀಚೆಗೆ ನಾಪತ್ತೆಯಾಗಿದ್ದ ಆಕೆ ಎಲ್ಲಿದ್ದಾಳೆ ಅಂತ ಎಲ್ಲರೂ ಹುಡುಕುತ್ತಿದ್ದರು.
ಪಾಲ ಅವರೆ,
ReplyDeleteಬೊಗಳೂರಿಗೆ ಸ್ವಾಗತ.
ನೀವು ಬರೋದು ದೂರದಲ್ಲೇ ಕಾಣಿಸಿದ್ರಿಂದ, ತಕ್ಷಣವೇ ನಿರ್ಧಾರ ಬದಲಾಯಿಸಿಬಿಟ್ಟೆವು.
ಆಗಾಗ್ಗೆ ಬರ್ತಾ ಇದ್ರೆ, ನಮ್ಮ ನಿರ್ಧಾರಗಳನ್ನು ಆಗಾಗ್ಗೆ ತಿರುಚ್ತಾ ಇರ್ಬಹುದು.
ಮಾಂಬಾಡಿಯವರೆ,
ReplyDeleteಬೊಗಳೆ ಬ್ಯುರೋಗೆ ಸ್ವಾಗತ.
ಆದ್ರೆ ಸೂಪರ್ ಎಂತಾ ಬೊಗಳೆ ಅಂತೆಲ್ಲ ಏನೋ ಕೆಲವು ಅಕ್ಷರಗಳು ಉದುರಿಹೋಗಿವೆ. ನಮಗೆ ಅರ್ಥವಾಗಿಲ್ಲ.
ಬರ್ತಾ ಇರಿ.
ಲಕ್ಷ್ಮಿ ಅವರೆ,
ReplyDeleteನಿಮ್ಮ ಪಕ್ಕದ ಫಿಸಿಶಿಯನ್ ಬ್ಯುರೋ ನಿಮ್ಮ ಫಿಸಿಸಿಸ್ಟ್ ಬ್ಯುರೋದ ಮೂಲಕ ಜೋರಾಗಿ ಪಿಸುಗುಟ್ಟಿದಾಗ ಲ್ಯಾಬೊರೇಟರಿಯಲ್ಲಿದ್ದ ಪ್ರನಾಳಗಳೆಲ್ಲ ಠಳಾರ್ ಫಳಾರ್ ಅಂತ ಒಡೆದುಹೋಗಿವೆಯಂತೆ. ಆದರೆ ತಿಂದದ್ದು ಓಟುಗಳನ್ನಲ್ಲ ಮತ್ತು ಹಣವನ್ನಲ್ಲ ಅಂತ ಸ್ಪಷ್ಟಪಡಿಸಲಾಗುತ್ತಿದೆ.
ಶ್ರೀತ್ರಿ ಅವರೆ
ReplyDeleteತಲೆ ಇದ್ದವರು ಮಾತ್ರ ಕೆಡಿಸಿಕೊಳ್ಳೋದ್ರಿಂದ ನಮಗೆ ಅದು ಅನ್ವಯವಾಗುವುದಿಲ್ಲ.
ಆಮೇಲೆ, ಚಾಪ್ಲಿನ್ ಬಗ್ಗೆ ಮೆತ್ತಗೆ ಮಾತಾಡಿ. ನಿಮ್ಮನ್ನೂ ಸಂಸ್ಕೃತಿಯ ಸಂರಕ್ಷಕರು, ಕೋಮುವಾದಿ ಅಂತೆಲ್ಲಾ ಹಣೆಪಟ್ಟಿ ಕಟ್ಟಿಯಾರು.
Post a Comment
ಏನಾದ್ರೂ ಹೇಳ್ರಪಾ :-D