ಬೊಗಳೆ ರಗಳೆ

header ads

ತರಕಾರಿ ಸೇವಿಸುವವರ ಮೇಲೆ ಇನ್‌ಕಂ ಟ್ಯಾಕ್ಸ್ ದಾಳಿ!

(ಬೊಗಳೂರು ಆದಾಯ ತೆರಿಗೆ ಮೂಲ ಬ್ಯುರೋದಿಂದ)
ಬೊಗಳೂರು, ಮಾ. 12- ಅಮೆರಿಕದ ಆರ್ಥಿಕ ಹಿಂಜರಿತದ ಬಿಸಿ ಭಾರತದ ಬಡ ಬೊ.ರ.ಗೌಡನ ಮನೆಗೂ ತಟ್ಟಿದ್ದು, ಬಡವರೆಲ್ಲವರ ಮನೆಗೆ ಇತ್ತೀಚೆಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಲಾರಂಭಿಸಿದ್ದಾರೆ.

ಬಡ ಬೊ.ರ.ಗೌಡನ ಮನೆಗೇ ಯಾಕೆ ದಾಳಿ ಮಾಡಲಾಗುತ್ತದೆ ಎಂಬ ಬಗ್ಗೆ ಸಂಚೋದನೆಗೆ ಹೊರಟ ಬೊ.ರ.ಬ್ಯುರೋದ ಮಂದಿಗೆ ಈ ದಾಳಿಯ ಹಿಂದಿನ ಗೂಢಾರ್ಥ, ನಿಗೂಢಾರ್ಥ, ಅಪಾರ್ಥಗಳೆಲ್ಲವೂ ಲಭಿಸಿದವು.

ಬೊ.ರ.ಗೌಡರು ಮಣ್ಣಿನ ಮಕ್ಕಳಾಗಿದ್ದು, ತಮ್ಮ ಅಲ್ಪಸ್ವಲ್ಪ ಜಮೀನಿನಲ್ಲಿ ತರಕಾರಿ ಬೆಳೆಯುತ್ತಾರೆ. ಹೀಗಾಗಿ ಬೆಳೆದ ಬೆಳೆಯನ್ನು ತಿಂದುಣ್ಣುತ್ತಾರೆ. ಅಸಲಿಗೆ ಆದಾಯ ತೆರಿಗೆ ಅಧಿಕಾರಿಗಳ ಕೆಂಗಣ್ಣಿಗೆ ಬಿದ್ದದ್ದು ಇದೇ ತರಕಾರಿ!

ಸರಕಾರವು ತರಕಾರಿ ಬೆಲೆಯನ್ನು ಯಾರ ಕೈಗೂ ಎಟುಕದಂತೆ ಮೇಲೇರಿಸಿಬಿಟ್ಟಿದೆ. ಇದು ತರಕಾರಿಗಳನ್ನೆಲ್ಲ ಮುಂದಿನ ಪೀಳಿಗೆಗೂ ಉಳಿಸುವ ಯೋಜನೆ. ನಾವೇ ಎಲ್ಲ ತಿಂದುಂಡು ಖಾಲಿ ಮಾಡಿದರೆ, ಮುಂದೆ ಲೋಕಸಭೆ ಚುನಾವಣೆ ನಡೆದು ಆರಿಸಿಬರುವವರಿಗೆ ತಿಂದುಣ್ಣಲು ಏನು ಉಳಿಯುತ್ತದೆ ಎಂದೆಲ್ಲಾ ಕಾರಣಕ್ಕೆ ಈ ರೀತಿ ಬೆಲೆಗಳನ್ನು ಯಾರ ಕೈಗೂ ಎಟುಕದಷ್ಟು ಎತ್ತರಕ್ಕೇರಿಸಿಬಿಟ್ಟಿತು. ಆದರೂ ಈ ಬಡ ಬೊ.ರ. ಗೌಡರು ಆರಾಮವಾಗಿ ತಿಂದುಣ್ಣುತ್ತಾರಲ್ಲ ಎಂದು ಅವರು ಐಟಿ ಅಧಿಕಾರಿಗಳನ್ನು ಛೂಬಿಟ್ಟಿದ್ದಾರೆ ಎಂದು ಮೂಲಗಳು ವರದ್ದಿ ಮಾಡಿವೆ.

ಇದೀಗ, ಇವರು ತರಕಾರಿ ಸೇವಿಸುತ್ತಿದ್ದರೆ ಖಂಡಿತವಾಗಿಯೂ ಭಾರೀ ಆದಾಯವೇ ಇರಬೇಕು ಎಂದು ಭಾವಿಸಿದ ಇನ್‌ಕಂ ಟ್ಯಾಕ್ಸ್ ಇಲಾಖೆ ಅ-ಧಿಕ್ಕಾರಿಗಳು ಆದಾಯದ ಮೂಲಕ್ಕಿಂತ ಹೆಚ್ಚು ಸಂಪತ್ತು ಹೊಂದಿದ್ದಾರೆ ಎಂದು ಬಡ ಬೊ.ರ.ಗೌಡರುಗಳ ಮೇಲೆಲ್ಲಾ ಕೇಸು ಜಡಿಯಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಸರ್,

    ಚೆನ್ನಾಗಿದೆ....ತರಕಾರಿ ಬೆಳೆದು ತಿಂದವರು ಯಾರೆಂದು ತಿಳಿಯಲಿಲ್ಲ....

    ಪ್ರತ್ಯುತ್ತರಅಳಿಸಿ
  2. ಛೇ! ತರಕಾರಿ ತಿನ್ತಾ ಇದಾರಾ?
    ಅವರ ಮೇಲೆ Conspicuous Consumption ಕೇಸ್
    ಸಹಾ ಹಾಕ್ಬೋದು!

    ಪ್ರತ್ಯುತ್ತರಅಳಿಸಿ
  3. ಶ್ರೀನಿಧಿಯವರೆ,

    ನಮ್ಮಂತವರು ಆರ್.ಕೆ.ಲಕ್ಷ್ಮಣ್ ಅವರಿಂದ ಐಡಿಯಾ ಎಗರಿಸಿದ್ರೆ ಒಪ್ಪಿಕೊಳ್ಳಬಹುದು, ಆದರೆ ಅವರೇ ಬೊಗಳೆ ಐಡಿಯಾ ತೆಗೆದ್ರು ಎಂಬುದು ಒಪ್ಪತಕ್ಕ ಸಂಗತಿಯಲ್ಲ!!! ;)

    ಪ್ರತ್ಯುತ್ತರಅಳಿಸಿ
  4. ಶಿವು ಅವರೆ,
    ತರಕಾರಿ ಬೆಳೆದ್ರೆ ತಿನ್ನೋರು ಯಾರೂಂತ ತಿಳ್ಕೊಳ್ಳೋಕೆ ಒಮ್ಮೆ ನಿಮ್ಮೂರಲ್ಲಿರೋ ವಿಧಾನಸೌಧಕ್ಕೆ ಒಂದು ಸುತ್ತು ಹಾಕಿ ಬನ್ನಿ... ಆಗ್ಲೇ ದೊಡ್ಡ ಹೊಟ್ಟೆಯ ಬಿಳಿ ಬಟ್ಟೆಯವರು ಕಾಣಸಿಗುತ್ತಾರೆ. ನಿಮಗೆ ಅರ್ಥವಾಗುತ್ತದೆ.!!!

    ಪ್ರತ್ಯುತ್ತರಅಳಿಸಿ
  5. ಸುನಾಥರೆ,
    ತರಕಾರಿ ತಿಂದ್ರೆ ಖಂಡಿತಾ ಶ್ರೀಮಂತರು. ಅವರಲ್ಲಿ ಕೇಸನ್ನು ಕೋರ್ಟಲ್ಲಿ ಎದುರಿಸುವ ಶಕ್ತಿಯೂ ಇರುತ್ತದೆ. ಹೀಗಾಗಿ ನಿಮ್ಮ ಸಲಹೆಗೆ ರಜಾಕಾರಣಿಗಳು, ಮಜಾಕಾರಣಿಗಳು ಸೊಪ್ಪು ಹಾಕುವುದಿಲ್ಲವಂತೆ.

    ಪ್ರತ್ಯುತ್ತರಅಳಿಸಿ
  6. ಹ್ಮ್ಮ್...ಹೀಗಾ ವಿಷಯ ?ಇನ್ ಕಮ್ ಟ್ಯಾಕ್ಸ್ ನವರು ಅವರು ಬಂದಾಗ ಅವರ ಮುಂದೆ ದುಡ್ಡನ್ನು ತಿಂದು ನಾವು ಬಡವರು ಅಂತ ತೋರಿಸಿ ಅವರು ಹೋದ ಮೇಲೆ ಶ್ರೀಮಂತರ ಥರ ತರಕಾರಿ ತಿಂದ್ರೆ ಆಯ್ತಪ್ಪ...

    ಪ್ರತ್ಯುತ್ತರಅಳಿಸಿ
  7. ಲಕ್ಷ್ಮಿ ಅವರೆ,
    ನೀವು ಈ ರೀತಿಯೆಲ್ಲಾ ಮಾಡಿದ್ರೆ ಕಮ್ ಕಮ್ ಟ್ಯಾಕ್ಸ್‌ನವರು ಖಂಡಿತವಾಗಿ ಬೆಚ್ಚಿ ಬಿದ್ದು ಎಲ್ಲಾ ಕಡೆ ಹಣ ಎಲ್ಲಿದೆ ಅಂತ ಹುಡು-ಕಾಟ ಶುರು ಮಾಡ್ತಾರೆ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D