(ಬೊಗಳೂರು ಭಾಷಾವಾಂತರ ಬ್ಯುರೋದಿಂದ)
ಬೊಗಳೂರು, ಜ.19- ವಿದೇಶೀ ಸಚಿವ ಪ್ರಣಬ್ ಮುಖರ್ಜಿ ಅವರು ಗುರುವಾರ ಹೇಳಿದ್ದೇನೆಂದರೆ, ಮುಂಬಯಿ ದಾಳಿಗಳಿಗೆ ಕಾರಣರಾದವರ ಬಗ್ಗೆ ನಟನೆಯನ್ನು ಮಾಡದ ಹೊರತು, ಪಾಕಿಸ್ತಾನ ದೇಶವು ಓಡಿ ಹೋಗಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ಓಡಿ ಓಡಿ ಎಲ್ಲಾದರೂ ದೂರ ಹೋಗಿ ಅಮೆರಿಕವನ್ನು ತಲುಪಿದರೆ ಎಂಬ ಆತಂಕ ಇದಕ್ಕೆ ಕಾರಣವೆಂದು ಶಂಕಿಸಲಾಗಿದೆ.ನಮ್ಮ ಬ್ಯುರೋದ ಅತ್ಯಂತ ಹಿರಿಯರೂ, ಅತ್ಯಂತ ಕಿರಿಯರೂ ಆಗಿರುವ ಪ್ರಧಾನ ಮುಖ್ಯ ಟ್ರೈನೀ ಉಪ ಸಂಪಾದಕರು ಈ ಕುರಿತು ಮಾಡಿರುವ ಭಾಷಾವಾಂತರದ ಪೂರ್ಣಪಾಠವನ್ನು ಈ ಕೆಳಗೆ ನೀಡಲಾಗಿದೆ:
This time India will not let Pak get away: Pranab
ನಮ್ಮಿಂದ ತೆಗೆದುಕೊಂಡು ಓಡಿಹೋಗಲು ಪಾಕನ್ನು ಬಿಡೆವು: ಪ್ರಮಾದ್!
NEW DELHI: Foreign minister Pranab Mukherjee on Thursday made it plain that India would not let Pakistan get away without acting against those responsible for the Mumbai attacks, and dismissed as unconvincing and unacceptable Islamabad's response so far.
ನ್ಯೂಡೆಲ್ಲಿ: ವಿದೇಶೀ ಸಚಿವ ಪ್ರಮಾದ್ ಮುಖರ್ಜಿ ಅವರು ಗುರುವಾರ ಪ್ಲೈನ್ ದೋಸೆ ಮಾಡಿ ಹೇಳಿದ್ದೇನೆಂದರೆ, ಮುಂಬಯಿ ದಾಳಿಗಳಿಗೆ ಕಾರಣರಾದವರ ಬಗ್ಗೆ ನಟನೆಯನ್ನು ಮಾಡದ ಹೊರತು, ಪಾಕಿಸ್ತಾನ ದೇಶವು ಓಡಿ ಹೋಗಲು ಬಿಡುವುದಿಲ್ಲ, ಮತ್ತು ಇಸ್ಲಾಮಾಬಾದ್ ಇದುವರೆಗೆ ನೀಡಿರುವ ನಿರಾಕರಣೆ ಹೇಳಿಕೆಗಳ ಪ್ರತಿಕ್ರಿಯೆಯನ್ನು ಡಿಸ್‌ಮಿಸ್ ಮಾಡಿದ್ದಾರಲ್ಲದೆ, ಇದು ಸಾಕಾಗುವುದಿಲ್ಲ, ಇದು ಸ್ವೀಕಾರಯೋಗ್ಯವಲ್ಲ ಎಂದು ಹೇಳಿದ್ದಾರೆ.
In an exclusive interview to TOI, he said that India needs to see concrete action and that a mere window dressing would just not do. ಟಾಯ್‌ಗೆ ನೀಡಿರುವ ವಿಚಿತ್ರ ಸಂದರ್ಶನದಲ್ಲಿ ಅವರು, ಭಾರತಕ್ಕೆ ಕಾಂಕ್ರೀಟ್‌ನಲ್ಲಿರುವ ನಟನೆ ಬೇಕಾಗಿದೆ. ಕೇವಲ ಕಿಟಕಿಯಲ್ಲಿ ಡ್ರೆಸ್ಸಿಂಗ್ ಮಾಡುವುದನ್ನು ಇಣುಕಿ ನೋಡಿದರೆ ಸಾಕಾಗುವುದಿಲ್ಲ ಎಂದರು.
"Pakistan's response has to be one which can convince us that Pakistan is ready to tackle this (terrorism) seriously. We don't want a repetition of what happened after the Parliament attack (when Pakistan gave commitments which it did not fulfil)," said the minister who is seen as leading the country's response to the Mumbai attacks.
"ಪಾಕಿಸ್ತಾನವು ಇದನ್ನು (ಇದು ಎಂದರೆ ಭಯೋತ್ಪಾದನೆಯನ್ನು) ಮತ್ತಷ್ಟು ಸರಿಪಡಿಸಲು ಸಿದ್ಧವಿದೆ ಎಂಬಂತಹ ಪ್ರತಿಕ್ರಿಯೆ ನೀಡಿದರೆ ನಾವು ಸುಮ್ಮನಿರುತ್ತೇವೆ. ಸಂಸತ್ತಿನೊಳಗೆ ಆಗಾಗ್ಗೆ (ಪ್ರತಿಪಕ್ಷಗಳಿಂದ) ನಡೆಯುತ್ತಿರುವ ದಾಳಿಗಳಂಥದ್ದೇ ದಾಳಿಗಳು ಪುನರಾವರ್ತನೆಯಾಗುವುದು ನಮಗೆ ಬೇಡ (ಪಾಕಿಸ್ತಾನವು ಸಾಕಷ್ಟು ಕಮಿಟೆಡ್ ದಾಳಿಗಳನ್ನು ನೀಡಿತ್ತು, ಆದರೆ ಅದು ಭರ್ತಿಯಾಗಿಲ್ಲ ಅಂದರೆ ಸಾಕಾಗಿಲ್ಲ)" ಎಂದು ವಿದೇಶದ ಸಚಿವರು - ಯಾರನ್ನು ಮುಂಬಯಿ ದಾಳಿಗೆ ಕಾರಣರಾದವರಿಗಾಗಿ ಸ್ಪಂದಿಸುತ್ತಿರುವ ದೇಶದ ಪ್ರಮುಖ ನಾಯಕ ಎಂದು ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗುತ್ತಿದೆ- ಹೇಳಿದರು.
The Congress stalwart dismissed as unconvincing Pakistan's reported action of shutting down five Jamaat-ud-Dawa camps and detaining 120-odd terrorists belonging to Lashkar-e-Taiba and other groups, and insisted that India needs proof.
ಐದು ಜಮಾತ್ ಉದ್ ದಾವಾ ಶಿಬಿರಗಳನ್ನು ಕಂಟ್ರೋಲ್ ಆಲ್ಟ್ ಡಿಲೀಟ್ ಮಾಡಿದೆ, 120ಕ್ಕೂ ವಿಷಮವಾದ ಲಷ್ಕರ್ ಇ ತೋಯ್ಬಾ ಮತ್ತಿತರ ಸಮೂಹದ ಉಗ್ರರನ್ನು ಬಂಧನ ಮಾಡಿದೆ ಎಂದು ವರದಿಯಾದ ಪಾಕಿಸ್ತಾನದ ನಟನೆಯನ್ನು ಸಾಕಾಗುವುದಿಲ್ಲ ಎಂದು ಡಿಸ್‌ಮಿಸ್ ಮಾಡಿರುವ ಕಾಂಗ್ರೆಸ್ ಬೆದರುಬೊಂಬೆ, ಇನ್ನಷ್ಟು ನಟನೆ ಮಾಡಬೇಕು, ಅದಕ್ಕೆ ಪ್ರೂಫ್ ಬೇಕು ಎಂದು ಒತ್ತಿ ಒತ್ತಿ ಹೇಳಿದರು.
He made no bones of his scepticism of the latest claims from Pakistan, pointing out that such "bans" tended to be half-baked. "If an organisation is banned, all practices must be banned," said the veteran minister.
ಪಾಕಿಸ್ತಾನ ಇತ್ತೀಚೆಗಷ್ಟೇ ಹೇಳಿಕೊಳ್ಳುತ್ತಿರುವ ಈ ಅರೆಬೆಂದ "ನಿಷೇಧ"ದ ಬೋನ್‌ಗಳು ತಿನ್ನಲು ರುಚಿಯಾಗಿರುವುದಿಲ್ಲ. ಒಂದು ಆರ್ಗನೈಸರನ್ನು ನಿಷೇಧಿಸಿದರೆ, ಅದರ ಎಲ್ಲಾ ಅಭ್ಯಾಸಪಂದ್ಯಗಳನ್ನು ನಿಷೇಧಿಸಬೇಕು ಎಂದು ಅಜ್ಜ ಸಚಿವರು ಹೇಳಿದರು.
He also brushed aside the alibi given by many quarters that Islamabad was unable to act against terrorist groups because of multiple power centres.
ಇಸ್ಲಾಮಾಬಾದಿನಲ್ಲಿ ನೂರಾರು ವಿದ್ಯುತ್ ಕೇಂದ್ರಗಳಿರುವುದರಿಂದ ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಟನೆ ಮಾಡಲು ಕಷ್ಟ ಎಂದು ಯಾರೋ ನೀಡಿದ ಕ್ವಾರ್ಟರ್ ಬಾಟಲನ್ನು ಹಲ್ಲು ಬ್ರಷ್ ಮಾಡಲು ಅವರು ಬದಿಗಿಟ್ಟರು.
Asking for verifiable action against the 26/11 terrorists, he said India would not accept mock trials by Pakistan.
26/11 ಸಂಚುಕೋರರನ್ನು ಗುರುತಿಸಿ ಪತ್ತೆ ಹಚ್ಚುವ ನಟನೆ ಬೇಕು ಎಂದ ಅವರು, ಪಾಕಿಸ್ತಾನದ ಅಣಕ ಅಭ್ಯಾಸಗಳನ್ನು ಸ್ವೀಕರಿಸುವುದಿಲ್ಲ ಎಂದು ನುಡಿದರು.
Mukherjee said that he had been amazed by the manner in which even foolproof evidence presented to Pakistan was dismissed in no time at all.
ನಾವು ಮೂರ್ಖರಂತೆ ಪಾಕಿಸ್ತಾನಕ್ಕೆ ನೀಡಿದ ಸಾಕ್ಷಿಯನ್ನು ಯಾವುದೇ ಸಮಯದಲ್ಲಿಯೂ ಡಿಸ್ಮಿಸ್ ಮಾಡದ ಪಾಕಿಸ್ತಾನದ ರೀತಿಯಿಂದ ತನಗೆ ತೀವ್ರ ಅಚ್ಚರಿಯಾಗಿದೆ ಎಂದು ಮುಖರ್ಜಿ ಹೇಳಿದರು.
4 ಕಾಮೆಂಟ್‌ಗಳು
ರೀ....ನಿಮ್ಮ ಈ ವಾದಾನುವಾದವನ್ನು ನಾವು ಒಪ್ಪಲು ಸಿದ್ದರಿಲ್ಲ. ನಿಮ್ಮ ಮೇಲೆ ನಾಮಕಷ್ಟ ಮೊಕದ್ದಮೆ ಹಾಕುವ ಯೋಚನೆಯನ್ನು ಈ ಪ್ರಣಬ್ ಇಗರ್ಜಿಯವರು ಮಾಡಿದ್ದಾರೆ. ಅದಕ್ಕೆ ಮಾಫಿಯಾ ರಾಣಿ "ಡಾನಿಯಾ ಬೂಂದಿ" ಅಂಕಿತ ಹಾಕಲಿದ್ದಾಳೆ. ಭಾರತದಲ್ಲಿರುವ ಎಲ್ಲಾ ದೇಶಭಕ್ತರನ್ನು (ಹಿಂದೂಗಳನ್ನು) ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಭಯೋತ್ಪಾದಕರಿಂದ ಮಟ್ಟ ಹಾಕಿಸಲು ಪ್ರಾಮಾಣಿಕ ಕೆಲಸ ದುರ್ಜನ ಸಿಂಗ್, ಮಣಕೋಮಣ ಸಿಂಗ್, ಅಮರಣ ಸಿಂಗ್ ಮೊದಲಾದ ಅಪ್ರತಿಮ ದೇಶ ವಿಭಜಕರು ತಯಾರಿಯಲ್ಲಿ ತೊಡಗಿದ್ದಾರೆ ಎಂದು ಬೊಗಳೂರು ಬ್ಯೂರೋದಿಂದ ತಪ್ಪಿಸಿಕೊಂಡು ಬಂದ ಒಬ್ಬ ನಾಪತ್ತೆ ಪ್ರತಿನಿಧಿ ತಿಳಿಸಿದ್ದಾನೆ.
ಪ್ರತ್ಯುತ್ತರಅಳಿಸಿಪ್ರಣಬ ಮೂಗರ್ಜಿಯವರು ತಮ್ಮ ಅಸ್ಖಲಿತ ಬಂಗಾಲಿ ಇಂಗ್ಲಿಶನಲ್ಲಿ ಪಾಕಿಸ್ತಾನಕ್ಕೆ ಹೇಳಿದ್ದೇನೆಂದರೆ,
ಪ್ರತ್ಯುತ್ತರಅಳಿಸಿ"ನಿಮ್ಮೆಲ್ಲ ಭಯೋತ್ಪಾದಕರನ್ನು ನಮಗೆ ಒಪ್ಪಿಸಿದರೆ, ಅಫಜಲ್ ಗುರುವಿನ ಜೊತೆಗೆ ಸಕಲ ಸೌಕರ್ಯಗಳನ್ನು ನೀಡಿ ಅವರನ್ನು ರಾಜಮರ್ಯಾದೆಯಿಂದ ಇಲ್ಲಿ ಪೋಷಿಸಲಾಗುವದು. ಅವರೇನಾದರೂ ಕೈಪಾರ್ಟಿಯನ್ನು ಸೇರಲು ಇಷ್ಟಪಟ್ಟರೆ, ಅವರಿಗೆ
M.P. ಟಿಕೆಟ್ ಕೊಡಲಾಗುವದು. ಇತ್ಯಾದಿ.".
ಆದರೆ, ಪಾಕಿಸ್ತಾನದ ಆ ಪಂಜಾಬಿ ಜನರಿಗೆ ಬಂಗಾಲಿ ಇಂಗ್ಲಿಶ್ ತಿಳಿಯೂದಿಲ್ಲ, ನೋಡಿರಿ. ಅದಕ್ಕೇ ಅವರು ನಮ್ಮಲ್ಲಿಯೇ trial ಆಗಲಿ ಅಂತ ಹೇಳ್ತಿದ್ದಾರೆ.
ಗುರುಗಳೆ,
ಪ್ರತ್ಯುತ್ತರಅಳಿಸಿನೀವು ಒಪ್ಪಲು ಸಿದ್ಧವಿಲ್ಲದ್ದನ್ನು ನಾವೂ ಒಪ್ಪುವುದಿಲ್ಲ. ನಮ್ಮ ಮಾನಕಷ್ಟವಾದರೂ ಸರಿ, ಆದರೆ ಇಗರ್ಜಿ, ಬೂಂದಿ, ಅದೇನೋ--- ಸಿಂಗಣ್ಣ ಮುಂತಾದವರಿಗೆ ಈ ದೇಶದ ಪ್ರಜೆಗಳು ನೀಡುತ್ತಿರುವ ಅವಮಾನ ನಷ್ಟವಾಗದಿದ್ದರೆ ಸಾಕು.
ಈಗ ಬ್ರೇಕಿಂಗ್ ನ್ಯೂಸ್: ನಾಪತ್ತೆ ಪ್ರತಿನಿಧಿಗಾಗಿ ತೀವ್ರ ಶೋಧ.
ಸುನಾಥರೆ,
ಪ್ರತ್ಯುತ್ತರಅಳಿಸಿಮೂಗರ್ಜಿಯವರು ಓಟು ಬ್ಯಾಂಕುಗಳಿಗಾಗಿ ಟ್ರಯಲ್ ಮಾಡ್ತಾನೇ ಇರ್ತಾರೆ. ಅಲ್ಪಸಂಖ್ಯಾತ ಓಟುಗಳಿಗೆ ಅವರು ಎಷ್ಟು ಕಷ್ಟ ಪಡ್ತಾರೇಂತ ಇನ್ನೂ ಶೋಧನೆ ನಡೀತಾನೇ ಇದೆ. ಒಟ್ನಲ್ಲಿ ನಮ್ಮ ಭಾಷಾವಾಂತರ ಬ್ಯುರೋವೇ ಸೂಕ್ತ ಉಭಯ ದೇಶಗಳ ನಡುವಣ ಸಂಬಂಧ ಸುಧಾರಣೆಗೆ...!
ಏನಾದ್ರೂ ಹೇಳ್ರಪಾ :-D