(ಬೊಗಳೂರು ಸುದ್ದಿ ಸ್ಫೋಟ ಬ್ಯುರೋದಿಂದ)
ಬೊಗಳೂರು, ಡಿ.11- ಬೀಜೇಪೀಪೀ ನಾಯಕ ಆಡ್ವಾಣಿ ವಿರುದ್ಧ ವಿರುದ್ಧ ಕ್ರಮ ತೆಗೆದುಕೊಳ್ಳಲು ಬಿಜೆಪಿ ಚಿಂತಿಸುತ್ತಿದೆ. ಇದಕ್ಕೆ ಕಾರಣವೆಂದರೆ ಅವರು ನೀಡಿರುವ ಈ ಹೇಳಿಕೆ.ಬೆಲೆ ಏರಿಕೆಯಲ್ಲಿಯೇ ಮುಳುಗಿ ಹೋಗಿರುವ ಕೇಂದ್ರದ ಯೂಪೀಪೀಏಯ್ ಸರಕಾರವು ದಾಖಲೆಗಳನ್ನು ಮಾಡಿ, ತಮ್ಮ ಪಕ್ಷದ ಸಾಧನೆಯನ್ನು ನಗಣ್ಯವಾಗಿಸಿದ್ದಾರೆ ಎಂಬುದಾಗಿ ಆಡ್ವಾಣಿ ಅವರು ಈ ರೀತಿ ಹೇಳಿಕೆ ನೀಡಬಾರದಾಗಿತ್ತು ಎಂದು ಪಕ್ಷದ ವರಿಷ್ಠ ಮಂಡಳಿಯು ಶೂಸಾಕ್ಸ್ ನೋಟೀಸ್ ಜಾರಿ ಮಾಡಿದೆ.
ಹಿಂದೂಸ್ತಾನವನ್ನೇ ತಮ್ಮ ತಾಯ್ನಾಡು ಎಂದು ತಿಳಿದುಕೊಂಡ ಹಿಂದೂಗಳನ್ನೇ ಭಯೋತ್ಪಾದಕರು ಎಂದು ಸಾಬೀತು ಮಾಡಲು ಪ್ರಯತ್ನಿಸುತ್ತಿರುವ ಮೂಲಕ ಭಯೋತ್ಪಾದನೆ ನಿಯಂತ್ರಣದಲ್ಲಿ ಯೂಪೀಪೀಏಯ್ ವಿಶಿಷ್ಟ ದಾಖಲೆಗಳನ್ನು ಮಾಡುತ್ತಿದೆ. ಆದರೆ ತಮ್ಮ ಎದುರಾಳಿ ಪಕ್ಷವನ್ನು ವೈಭವೀಕರಿಸುವುದೇಕೆ ಎಂಬುದು ತಮಗೆ ತಿಳಿಯದ ಸಂಗತಿ ಎಂಬುದಾಗಿ ಬೀಜಪೀಪೀ ವರಿಷ್ಠ ಮಂಡಳಿ ವ್ಯಾಖ್...ಯಾನಿಸಿದೆ.
ವಾಜಪೇಯಿಯವರಿಗೆ ಮಾಡಲಾಗದ್ದನ್ನೆಲ್ಲಾ ಯೂಪೀಪೀಏಯ್ ಸರಕಾರ ಮಾಡುತ್ತಿದೆ ಎಂದು ಹೇಳಿದ್ದ ಅಡ್ಡವಾಣಿಯಂತೆ ಹೇಳಿದ ಆಡ್ವಾಣಿ, ಹಿಂದೂ ಭಯೋತ್ಪಾದನೆ ಎಂಬ ಹೊಸದೊಂದು ಶಬ್ದವನ್ನು ಹುಟ್ಟುಹಾಕಿ, ಡಿಕ್ಷನರಿಗಳನ್ನು ಸಮೃದ್ಧವಾಗಿಸುತ್ತಿದ್ದಾರೆ ಎಂದು ಕೂಡ ಶಹಬ್ಬಾಸ್‌ಗಿರಿ ನೀಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳದಿರಬಹುದು.
0 ಕಾಮೆಂಟ್‌ಗಳು
ಏನಾದ್ರೂ ಹೇಳ್ರಪಾ :-D