(ಬೊಗಳೂರು ಅಜ್ಞಾನಿಗಳ ಬ್ಯುರೋದಿಂದ)
ಬೊಗಳೂರು, ಆ.4- "ನೀವು ಕಾನೂನಿಗಿಂತ ಮಿಗಿಲೇ?" ಅಂತ ನ್ಯಾಯಾಲಯವು ಕೇಳಿರುವುದಕ್ಕೆ ಹ್ಹ ಹ್ಹ ಹ್ಹ ಎಂದು ಪ್ರತಿಕ್ರಿಯಿಸಿರುವ ತಮಿಳುಕಾಡು ಅಮುಖ್ಯಮಂತ್ರಿ ಕರುಣಾಕಿಡಿ, ನ್ಯಾಯಾಲಯಕ್ಕೆ ಇಷ್ಟೂ ಗೊತ್ತಿಲ್ಲದಿದ್ದರೆ ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತಮ್ಮ ಸರಕಾರವು ಇಷ್ಟೊಂದು ಅಕ್ರಮ, ಅನ್ಯಾಯಗಳನ್ನು ಮಾಡುತ್ತಿದ್ದರೂ, ಯಾssssರಿಗೂ ಏssssನೂ ಮಾಡಲಾಗಿಲ್ಲ. ಹೀಗಿರುವಾಗ ನಾವು ಮಿಗಿಲೋ ಕಾನೂನು ಮಿಗಿಲೋ ಎಂಬುದು ಗೊತ್ತಾಗುವುದಿಲ್ಲವೇ ಎಂದು ಪ್ರಶ್ನೆ ಹಾಕಿರುವ ಆಗಾಗ್ಗೇ ಸೇತು ಸಮುದ್ರಕ್ಕೆ ಬೆಂಕಿಯ ಕಿಡಿ ಹಚ್ಚುತ್ತಿರುವ ಕರುಣಾಕಿಡಿ, ತಮಗೆ ಧರ್ಮ, ದೇವರು-ದಿಂಡರಲ್ಲಿ ನಂಬಿಕೆ ಬಲವಾಗಿಯೇ ಇದೆ ಎಂದು ತಮ್ಮ ದ್ರಾವಿಡ ಸಿದ್ಧಾಂತವನ್ನು ಮೆಟ್ಟಿ ಮಾತನಾಡಿದ್ದಾರೆ.

ಅದು ಹೇಗೆ ಎಂದು ಅಚ್ಚರಿಯಿಂದ ಕೇಳಿದಾಗ, 'ಗಣಪತಿಯ ಮದುವೆ ಯಾವಾಗ ಎಂಬ ಪ್ರಶ್ನೆಗೆ 'ನಾಳೆ' ಎಂಬ ಸಿದ್ಧ ಉತ್ತರವಿಲ್ಲವೇ? ಇದು ಪುರಾಣದ ಕಥನವೇ ಅಲ್ಲವೇ? ನಾನಿದನ್ನು ಬಲವಾಗಿಯೇ ನಂಬುತ್ತಿದ್ದೇನೆ. ಹೀಗಾಗಿ, ಶೋಕಾಸ್ ನೋಟೀಸಿಗೆ ಶೋಕಭರಿತ ಉತ್ತರ ಯಾವಾಗ ನೀಡುತ್ತೀರಿ ಎಂದು ನ್ಯಾಯಾಲಯವು ಆಗಾಗ್ಗೆ ಕೇಳುತ್ತಿದೆ. ನಾವು ಕೂಡ ನಾಳೆ ನಾಳೆ ಅಂತಲೇ ಹೇಳುತ್ತಿದ್ದೇವೆ' ಎಂದು ಸಮರ್ಥಿಸಿಕೊಂಡರು.

ಮಾತ್ರವಲ್ಲ, ನಮಗೂ ಈಗ ರಾಮನ ಮೇಲೆ ನಂಬಿಕೆ ಬಂದಿದೆ. ಹೀಗಾಗಿ, ರಾಮಸೇತುವನ್ನು ಶ್ರೀರಾಮನೇ ಧ್ವಂಸ ಮಾಡಿದೆ ಅಂತ ನಾವು ಕೇಂದ್ರ ಸರಕಾರದ ಕೈಯಲ್ಲೇ ನ್ಯಾಯಾಲಯಕ್ಕೆ ಹೇಳಿಸಲಿಲ್ಲವೇ ಎಂದು ಪ್ರಶ್ನೆ ಹಾಕಿರುವ ಕರುಣಾಕಿಡಿ, ಈ ಕಾಲದಲ್ಲಿ ದೇವರಲ್ಲಿ ನಂಬಿಕೆ ಇಡದಿದ್ದರೆ ಉಳಿಗಾಲವಿಲ್ಲ. ಕನಿಷ್ಠ ಪಕ್ಷ ದೇವರ ಹೆಸರಿನಲ್ಲಿ ಬಾಂಬು ಸಿಡಿಸಿ ರಕ್ತಪಾತ ಮಾಡುತ್ತಿರುತ್ತಾರಲ್ಲ, ಅವರ ಮೇಲಾದರೂ ನಂಬಿಕೆ ಇಡಬೇಕಾಗುತ್ತದೆ. ಯಾಕೆಂದರೆ ಚುನಾವಣೆಗಳು ಸಮೀಪಿಸುತ್ತಲೇ ಇರುತ್ತವಲ್ಲ ಎಂದು ಕೊಂಕು ನುಡಿದಿದ್ದಾರೆ.

ಈಗೀಗಲಂತೂ ನಾವು ದೇವರ ಮೇಲೆ ಹೆಚ್ಚು ಹೆಚ್ಚು ಭಾರ ಹಾಕಲಾರಂಭಿಸಿದ್ದೇವೆ. ಯಾಕೆಂದರೆ ಏರುತ್ತಿರುವ ಬೆಲೆಗಳನ್ನು ಇಳಿಸುವುದು ನಮ್ಮ ಕೈಯಲ್ಲಿಲ್ಲ. 'ರಾಜ್ಯದ ಜನರನ್ನು ಆ ದೇವರೇ ಕಾಪಾಡಬೇಕು' ಎನ್ನುತ್ತಾ ಅವರು ಇಂಟರ್‌ವಲ್ ಅಲ್ಲಲ್ಲ... ಇಂಟರ್‌ವ್ಯೂ ಮುಗಿಸಿ ಎದ್ದುಹೋದರು. ಸ್ಥಂಭೀ'ಭೂತ'ವಾಗಿಬಿಟ್ಟ ಬೊಗಳೆ ರಗಳೆ ಬ್ಯುರೋ ಸದಸ್ಯರು, ಅಲ್ಲೇ ಇದ್ದ ಬೆಕ್ಕು ನಾಯಿಗಳನ್ನು ಹಿಡಿದು ಇಂಟರ್ವ್ಯೂ ಮಾಡಲಾರಂಭಿಸಿದರು.

8 Comments

ಏನಾದ್ರೂ ಹೇಳ್ರಪಾ :-D

 1. ಸುಪ್ರೀಮ್ ಕೋರ್ಟ? ಭಾರತದ ಸಂವಿಧಾನ? What nonsense!

  ಲಂಕೆಗೆ ಸೇತುವೆಯನ್ನು ಕಟ್ಟಿದವನು ರಾವಣ. ಅದನ್ನು ಧ್ವಂಸ ಮಾಡಿದವನು ರಾಮ.(ಖಂಬ ರಾವಣಾಯಣ ನೋಡಿರಿ.)
  ತಮಿಳುಕಾಡಿನ ಅಸಂವಿಧಾನದ ಪ್ರಕಾರ ಗಾವೇರಿ, ಹೊಕೇನಗಲ್ ಎಲ್ಲಾ ತಮಿಳುಕಾಡಿನವು. ಭಾರತದ ಸರ್ವ-ಹುಚ್ಚ ನ್ಯಾಯಾಲಯಕ್ಕೆ ಕರುಣಾಕಿಡಿ ಮನ್ನಣೆ ನೀಡಿಲ್ಲ.

  ReplyDelete
 2. ೆಎಲ್ಲೆ ಸಪ್ರೀಮು? ಸಮ್ಮೀದಾನ? ಎಲ್ಲಾ ಕರುಣಾ ನಿಧಿ ಕಾಣಾ ರಾಮಾನಾಥಾ..!!!

  ReplyDelete
 3. ಈ ಕರುಣಾವಧೆಗೆ ಕಾಲ ಕೂಡಿ ಬಂದಿಲ್ಲವೆಂದು ಕಾಣುತ್ತೆ. ಬಹಿರಂಗವಾಗಿ ಈ ಥರಾ ಹೇಳಿಕೆ ಕೊಡುತ್ತಿದ್ದರೂ ತಮಿಳುಕಾಡಿನ ಜನ ಯಾಕೆ ಇನ್ನೂ ಶಿಖಂಡಿಗಳ ತರಹ ಸುಮ್ಮನಿದ್ದಾರೆ?. ಇಂತಹ ದೇಶದ್ರೋಹಿ, ಹಿಂದೂ ವಿರೋಧಿಗಳನ್ನು ಚಪ್ಪಲಿಯಲ್ಲಿ ಹೊಡೆದು, ಬಹಿರಂಗವಾಗಿ ನೇಣಿಗೆ ಹಾಕಬೇಕು. ನಮ್ಮ ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ಇರುವ ಮನ್ನಣೆಯಿಂದಾಗಿ ಈ ಶ್ವಾನಪುತ್ರ ಅದನ್ನು ದಾಳವನ್ನಾಗಿ ಮಾಡಿಕೊಂಡು, ಹಿಂದೂಗಳನ್ನು, ಕನ್ನಡಿಗರನ್ನು ಕೆಣಕುತ್ತಿದ್ದಾನೆ. ಇವನ(ರಕ್ಕಸನ) ವಧೆಗೆ ಕಾಲ ಕೂಡಿ ಬಂದಿಲ್ಲ ಎನಿಸುತ್ತದೆ. ಮೆಟ್ಟಲ್ಲಿ ಹೊಡೆಯಿರಿ ಅವನಿಗೆ.....ಈ ಸಂವಿಧಾನ ವಿರೋಧಿ, ದೇಶದ್ರೋಹಿ ನಾಯಿಯನ್ನು ಕತ್ತು ಹಿಡಿದು ಬಂಗಾಳಕೊಲ್ಲಿಗೆ ಎಸೆಯಬೇಕು.

  ReplyDelete
 4. ಸುನಾಥರೆ,
  ತಮಿಳುಕಾಟಿನ ಪ್ರಕಾರ, 'ಕರುಣಾ'ಡಗವೂ ಅವರದೇ. ರಾವಣಾಯಣ ಬರೆದವರೇ 'ಕರುಣಾ'ನಿತಿ. ಈ ಹೆಸರಿನ ಸಾಮ್ಯತೆಯೇ ಅತ್ಯಂತ ಪ್ರಾಚೀನವಾದುದಾಗಿದ್ದು, ಶಾಸ್ತ್ರೀಯವಾಗಿಯೇ ಅದು ನಮ್ಮದು ಎನ್ನುತ್ತಿದ್ದಾರವರು.

  ReplyDelete
 5. ಅರೆ... ನಮ್ ಸಿಮ್ಮ... ಬನ್ನಿ ಬನ್ನಿ... ಸ್ವಾಗತಲ ನಿಮಗೆ.

  ನೀವು ರಾವಣನಾಥಾ ಅಂತ ಮೊರೆಯಿಡಬೇಕಿತ್ತು....

  ReplyDelete
 6. ಗುರುಗಳೆ,
  ನಾವೂ ತಮಿಳುಕಾಡಿನಲ್ಲಿರುವುದರಿಂದ ನಮಗೇ ನೀವು ಬತ್ತಿ ಇಟ್ಟಿದ್ದೀರಿ.

  ಆದರೆ ಇಲ್ಲಿ ಚಪ್ಪಲಿಗಳೆಲ್ಲವೂ ನಾಪತ್ತೆಯಾಗಿವೆ, ಹಾಕಿಕೊಳ್ಳಲು ನೇಣೂ ಸಿಗುತ್ತಿಲ್ಲ... ಅಷ್ಟು ತುಟ್ಟಿಯಾಗಿಬಿಟ್ಟಿದೆ ಜೀವನ. ಶ್ವಾನಪುತ್ರರ ದಳಕ್ಕೆ ಸುಮ್ಮನಿರುವುದಕ್ಕೊಂದು ಈ ನೆಪವನೇ ಪ್ರಧಾನ ಅಸ್ತ್ರವಾಗಿ ಸಿಕ್ಕಿಬಿಟ್ಟಿದೆ.

  ReplyDelete
 7. ಈ ಸಂವಿಧಾನ ವಿರೋಧಿ, ಒಕ್ಕೂಟ ವ್ಯವಸ್ಥೆಗೇ ಧಕ್ಕೆ ತರುತ್ತಿರುವ ತಮಿಳರಿಗೆ ಯಾವ ಶಿಕ್ಷೆ ನೀಡುತ್ತೀರಾ?. ಈ ದೇಶದ್ರೋಹಿ ಕರುಣಾನಿಧಿ ಯಾಕೆ ಸಾಯುತ್ತಿಲ್ಲ?. ಅವನ ಸಾವನ್ನು ಎದುರು ನೋಡುತ್ತಿರುವ.....ಒಬ್ಬ ದೇಶ ಭಕ್ತ.

  ReplyDelete
 8. ಅನಿಮೋಸರೆ,
  ನಮಗೂ ಒಂದು ಕಾನೂನು ಇದ್ದಂತೆ, ಅವರಿಗೆ ಅವರದೇ ಆದ ಅರಾಜಕ ಕಾನೂನಿದೆ. ಅದನ್ನವರು ಪಾಲಿಸಿ ಪಾಲಿಸಿ, ಅವರದೇ ವಂಶದ ತಮಿಳು ಉಗ್ರರ ಕೈಯಲ್ಲೇ ಹತರಾಗುವರು ಎಂಬ ಪೌರಾಣಿಕ ಶಾಪವೂ ಇದೆ. ಕಾದು ನೋಡಿ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post