ಬೊಗಳೆ ರಗಳೆ

header ads

ಇಂಗ್ಲೀಸು ಟು ಖನ್ನಡ್ಡ ಭಾಷಾವಾಂತರ!

(ಬೊಗಳೂರು ಭಾಷಾವಾಂತರ ಬ್ಯುರೋದಿಂದ)
ಬೊಗಳೂರು, ಜು.1- ಇದು ನಮ್ಮ ಬೊಗಳೆ ಬ್ಯುರೋದ ಹೊಸ ಯಾರ್ಕ್ ಬ್ಯುರೋ ರದ್ದಿಗಾರರು ಕಳುಹಿಸಿದ ವರದ್ದಿಯಾಗಿದ್ದು, ಅದನ್ನು ಬ್ಯುರೋದಲ್ಲಿರುವ ಭಾಷಾವಾಂತರಕಾರರು ಚೆನ್ನಾಗಿಯೇ ಅಂತರ್‌ಖಂಡೀಯ ಭಾಷಾವಾಂತರ ಮಾಡಿದ್ದಾರೆ. ವರದ್ದಿ ಹೀಗಿದೆ:

New York: An Indian-origin surgeon has been barred from practising for two years in New Jersey and slapped with USD81,000 fine for operating on a wrong lung of a cancer patient eight years ago.
ಹೊಸ ಯಾರ್ಕ್: ಭಾರತೀಯ ಅಸಲಿ ಸರ್ಜನನೊಬ್ಬ ನ್ಯೂಜೆರ್ಸಿಯಲ್ಲಿ ಎರಡು ವರ್ಷ ಬಾರಿನಲ್ಲಿ ಪ್ರಾಕ್ಟೀಸ್ ಮಾಡಬೇಕೆಂದು ಹೇಳಲಾಗಿದೆ ಮತ್ತು ಎಂಟು ವರ್ಷದ ಹಿಂದೆ ಕ್ಯಾನ್ಸರ್ ತಾಳಿಕೊಂಡ ವ್ಯಕ್ತಿಯೊಬ್ಬರ ತಪ್ಪು ಲಂಗದ ಮೇಲೆ ಕಾರ್ಯಾಚರಣೆ ಕೈಗೊಂಡಿದ್ದಕ್ಕೆ 81,000 ಉಸ್ಡ್ ಫೈನನ್ನು ಮುಖಕ್ಕೆ ಹೊಡೆಯಲಾಗಿದೆ.

The State Board of Medical Examiners found that Dr Santusht Perera removed a portion of right lung of 60-year-old Richard Flagg when he should have been operated on a tumour in the left lung, then lied and altered documents in an attempt to cover up the mistake.
ಮೆಡಿಕಲ್ ಪರೀಕ್ಷಾಧಿಕಾರಿಗಳ ರಾಜ್ಯ ಮಂಡಳಿಯು ಪತ್ತೆ ಹಚ್ಚಿದ್ದೇನೆಂದರೆ, 60 ವರ್ಷದ ರಿಚರ್ಡ್ ಫ್ಲಾಗ್‌ನ ಬಲ ಲಂಗದ ಒಂದು ತುಂಡನ್ನು ಡಾ.ಸಂತುಷ್ಟ ಪೆರೆರಾ ಅವರು ತೆಗೆದಿದ್ದರು... ಯಾವಾಗೆಂದರೆ ಎಡ ಲಂಗದಲ್ಲಿ ಆಲೂ ಗಡ್ಡೆಯೊಂದರ ಕಾರ್ಯಾಚರಣೆ ನಿಯಂತ್ರಿಸುತ್ತಿದ್ದಾಗ. ಆ ಬಳಿಕ ಅಲ್ಲೇ ಬಿದ್ದುಕೊಂಡ ಮತ್ತು ಅಲ್ಲಿ ಕಂಡು ಬಂದ ಮಿಸ್ಟೇಕನ್ನು ಕವರ್ ಮಾಡಿಕೊಳ್ಳಲು ಪ್ರಯತ್ನಿಸಿದ.

State documents say Perera removed the lower and middle lobe of the patient's right lung during the September 2000 surgery.
ರಾಜ್ಯದಲ್ಲಿರುವ ಡಾಕ್ಯುಮೆಂಟರಿಗಳು ಹೇಳುವುದೇನೆಂದರೆ, 2000 ಮಂದಿಗೆ ಸೆಪ್ಟೆಂಬರ್ ತಿಂಗಳಲ್ಲಿ ಮಾಡಿದ ಸರ್ಜರಿ ವೇಳೆ ಪೆರೇರಾ ರೋಗಿಯ ಬಲ ಲಂಗದ ಮಧ್ಯ ಮತ್ತು ಕೆಳ ಭಾಗದಲ್ಲಿರುವ ಪಕ್ಕೆಯೊಂದನ್ನು ತೆಗೆಯಲಾಗಿತ್ತು.

When Flagg woke up from surgery eight years ago in Bergen County hospital, he wondered why his right side hurt though he was told that his left lung was affected by tumour.
ಬರ್ಜನ್ ಕೌಂಟ್ ಮಾಡುವ ಆಸ್ಪತ್ರೆಯಲ್ಲಿ ಸರ್ಜರಿ ನಡೆದ ಎಂಟು ವರ್ಷಗಳ ಹಿಂದೆ ಧ್ವಜವು ಮೇಲೆದ್ದಾಗ, ತನ್ನ ಎಡ ಲಂಗದಲ್ಲಿ ಆಲೂಗಡ್ಡೆಯಿಂದ ಪ್ರಭಾವಿತವಾಗಿದೆ ಎಂದು ಹೇಳಿದ್ದರೂ ಬಲ ಭಾಗದಲ್ಲೇಕೆ ಮಾನಸಿಕ ಆಘಾತವಾಗಿದೆ ಎಂದು ಆತನಿಗೆ ಅಚ್ಚರಿಯಾಯಿತು.

Flagg quizzed his surgeon Perera who lied that an even larger tumour had been detected in his right lung, according to state documents.
ಬಲ ಲಂಗದಲ್ಲಿ ಇನ್ನೂ ದೊಡ್ಡ ಆಲೂಗಡ್ಡೆಯಿತ್ತು ಎಂದು ಹೇಳಿ ಮಲಗಿದ್ದ ಸರ್ಜನ್ ಪೆರೇರಾನನ್ನು ಫ್ಲ್ಯಾಗ್ ರಾಜ್ಯ ದಾಖಲೆಗಳ ಅನುಸಾರವಾಗಿ ಕ್ವಿಜ್‌ ಸ್ಪರ್ಧೆ ಮಾಡಿ ನೋಡಿದ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

 1. US president Bush appoints Untruth-Seeker as his translator!
  =ಉಸ್ ಅಧ್ಯಕ್ಷ ಕಾಡು ಮನುಷ್ಯನು ಅಸತ್ಯ ಅನ್ವೇಷಿಯನ್ನು ತನ್ನ
  ಭಾಷಾವಾಂತಿಕಾರಿಯಾಗಿ ನೇಮಿಸಿಕೊಂಡಿದ್ದಾನೆ.

  ಪ್ರತ್ಯುತ್ತರಅಳಿಸಿ
 2. ಅಸತ್ಯ ಅನ್ವೇಷಿಯವರೆ,

  ಒಂದೊಂದು ಭಾಷಾಂತರವೂ ನಗೆ ಬುಗ್ಗೆಗಳನ್ನುಕ್ಕಿಸುವಂತಿದೆ :-). ಇನ್ನು ಇತ್ತೀಚಿಗೆ ಹಲವಾರು ಬ್ಲಾಗ್ ಗಳಿಗೆ ಕೆಲವು Anonymous ಜನರು ಅನವಶ್ಯಕವಾಗಿ ಧಾಳಿ ಮಾಡಿತ್ತಿರುವುದರ ಬಗ್ಗೆ ಬೊಗಳೆ ಬ್ಯೂರೋ ಏನೆನ್ನುತ್ತೇ? ಇವರ ಕುರಿತೂ ರಿಸರ್ಚ್ ಮಾಡಿದರೆ ಒಳಿತೇನೋ ;-)

  ಪ್ರತ್ಯುತ್ತರಅಳಿಸಿ
 3. ಅತ್ಯಂತ ಸಮರ್ಥವಾದ, ಅದ್ಭುತವಾದ, ಅಂತರ್ಖಂಡೀಯ ಖಂಡ ತುಂಡೀಯ "ಎಲ್ಲದಕ್ಕೂ ಅನುವಾದ" ಅನುವಾದ..!

  ಪ್ರತ್ಯುತ್ತರಅಳಿಸಿ
 4. ಹೆಲೊ...ತೇಜಸ್ವಿನಿಯವರೇ....ಅನವಶ್ಯಕವಾಗಿ ಯಾರೂ ದಾಳಿ ಮಾಡುವುದಿಲ್ಲ. ದಾಳಿ ಮಾಡಿದಲ್ಲಿ ನಮಗೇ ಒಳ್ಳೆಯದು..ಒಂದು ಉತ್ತಮ ದಾಳಿಕಾರ ದೊರೆಯುವುದರ ಬಗ್ಗೆ ಹೆಮ್ಮೆ ಪಡಿ. ನೀವು ಸುಳ್ಳು ಬೇರೆ ಹೇಳುತ್ತಿದ್ದೀರಾ...ನನ್ನ ಬ್ಲಾಗ್ ಗೆ ಯಾರೂ ದಾಳಿ ಮಾಡುವುದಿಲ್ಲ. ನನಗೆ ನಾನೇ ದಾಳಿ ಮಾಡಿಕೊಂಡು ನೋವು ಅನುಭವಿಸುತ್ತಿದ್ದೇನೆ ಗೊತ್ತಾ?

  ಪ್ರತ್ಯುತ್ತರಅಳಿಸಿ
 5. ಸುನಾಥರೆ,
  ಕಾಡು ಮನುಷ್ಯನು ಅನ್ವೇಷಿಯನ್ನು ಕಂಡ ಕೂಡಲೇ ಪರಾರಿಯಾಗಿದ್ದನ್ನು ಉಲ್ಲೇಖಿಸಲಿಲ್ಲ ಎಂದರೆ ಅದು ಮತ್ತೊಂದು ಅವಾಂತರವೇ ಆದೀತು.

  ಪ್ರತ್ಯುತ್ತರಅಳಿಸಿ
 6. ತೇಜಸ್ವಿನಿ ಅವರೆ,
  ಬುಗ್ಗೆಗಳನ್ನು ಒಡೆದ ಬಗ್ಗೆ ಪುಟಾಣಿಗಳಿಂದ ತೀವ್ರ ದೂರುಗಳು ಬಂದಿವೆ. ಹೀಗಾಗಿ ಸ್ವಲ್ಪ ದಿನ ತಲೆ ಮರೆಸಿಕೊಂಡಿದ್ದೆವು.

  ಇನ್ನು, ಅನಾನಿಮಸರು ದಾಳಿ ಮಾಡುತ್ತಿರುವ ಬಗ್ಗೆ ಹೇಳೋದಾದ್ರೆ, ಕೊಳಚೆ ಮೇಲೆ ಕಲ್ಲೆಸೆದಂತಾಗಬಹುದು ಅನ್ನೋದು ನಮ್ಮ ಬ್ಯುರೋದ ಸಂ-ಚೋದನೆ.

  ಪ್ರತ್ಯುತ್ತರಅಳಿಸಿ
 7. ಗಣೇಶ್ ಅವರೆ,
  ನೀವು ಇಷ್ಟೊಂದು ಪ್ರಮಾಣದಲ್ಲಿ ದೂಷಿಸುವುದನ್ನು ನೋಡಿ, ನಮ್ಮ ರದ್ದಿಗಾರರು ಪರಾರಿಯಾಗಿದ್ದಾರೆ.

  ಪ್ರತ್ಯುತ್ತರಅಳಿಸಿ
 8. ಗುರು ಅವರೆ,
  ನಾವೂ ಎಮ್ಮೆ ಕಟ್ತೀವಿ... ತೇಜಸ್ವಿನಿಯವರು ಹೇಳಿದ್ದು ಕನ್ನಡವನ್ನು 'ಗನ್ನಟ' ಮಾಡಲು ಹೊರಟವರನ್ನು ಬೆಂಬಲಿಸುತ್ತಿರುವವರ ಬಗ್ಗೆ ಅಂತ ನಾವು ಪತ್ತೆ ಹಚ್ಚಿದ್ದೇವೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D