(ಬೊಗಳೂರು ಕುಡಿಯೋತ್ತೇಜನ ಬ್ಯುರೋದಿಂದ)
ಬೊಗಳೂರು, ಮೇ 13- ಕುಡಿಯುವ ವಯಸ್ಸನ್ನು 25ರಿಂದ ಕೇವಲ 21ಕ್ಕೆ ಇಳಿಸುವ ಪ್ರಸ್ತಾಪದ ವಿರುದ್ಧ ಸಿಡಿದೆದ್ದಿರುವ ಅಖಿಲ ಭಾರತ ಬಾಲ ಪುಟಾಣಿ ಪರಿಷತ್, ನಮಗೂ ಸಮಾನತೆ ಬೇಕು, ಹುಟ್ಟಿದಾಗಲೇ ಕುಡಿಯುವ ಅರ್ಹತೆ ದೊರಕಿಸಬೇಕು ಎಂದು ಒತ್ತಾಯಿಸಿದೆ.

'ಕುಡಿಯುವುದು ನಮ್ಮ ಆಜನ್ಮ ಸಿದ್ಧ ಹಕ್ಕು' ಎಂಬ ಘೋಷಾ ವಾಕ್ಯದೊಂದಿಗೆ ಹೋರಾಟದ ಕಣಕ್ಕಿಳಿದಿರುವ ಈ ಅಖಿಲ ಭಾರತ ಪುಟಾಣಿ ಪರಿಷತ್ತಿಗೆ, ಅಖಿಲ ಭಾರತ ಅಂಗನವಾಡಿ ಪುಟಾಣಿಗಳ ಸಂಘವೂ ಬೇಷರತ್ ಬೆಂಬಲ ಘೋಷಿಸಿದೆ.

ಕಾಂಗ್ರೆಸ್‌ನೋರು, ಜೆಡಿಎಸ್‌ನೋರು ರಾಜ್ಯದಲ್ಲಂತೂ ಈಗಾಗಲೇ ಎಲ್ಲರನ್ನೂ ಕುಡುಕರಾಗಿಸುತ್ತೇವೆ ಎಂದು ಹೇಳುತ್ತಾ ಭವ್ಯ ಭವಿಷ್ಯಕ್ಕೆ ಅಡಿಪಾಯ ಹಾಕತೊಡಗಿದ್ದಾರೆ. ಈ ಪರಿಸ್ಥಿತಿಯಲ್ಲಿ ನಮ್ಮನ್ನು ಕುಡಿಯುವ 'ಕೆನೆಪದರ'ದಿಂದಲೂ ಕಿತ್ತು ಹಾಕುವುದು ಎಷ್ಟು ಸಮಂಜಸ ಎಂದು ಜಂಟಿ ಮತ್ತು ಒಂಟಿ ಪತ್ರಿಕಾಗೋಷ್ಠಿಗಳಲ್ಲಿ ಎರಡೂ ಸಂಘಗಳ ಪದಧಿಕ್ಕಾರಿಗಳು ಸರಕಾರವನ್ನು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಇತ್ತೀಚೆಗೆ ಪಬ್ ಸಂಸ್ಕೃತಿ ಹೆಚ್ಚಾಗುತ್ತಿದ್ದು, ಬದಲಾಗುತ್ತಿರುವ ಯುಗದೊಂದಿಗೆ ನಾವೂ ಬದಲಾಗಬೇಕಾಗಿದೆ, ಆಧುನಿಕತೆಗೆ ಒಗ್ಗಿಕೊಳ್ಳಬೇಕಾಗಿದೆ. ಹೀಗಿರುವಾಗ ಹುಟ್ಟಿನಿಂದಲೇ ಎಲ್ಲವನ್ನೂ ಕಲಿತುಕೊಂಡು ಬಿಟ್ಟರೆ, ಮುಂದೆ ದೊಡ್ಡವರಾದ ಬಳಿಕ ಸರಕಾರಿ ಕೆಲಸ ಪಡೆಯಲು ಅತ್ಯಂತ ನೆರವಾಗುತ್ತದೆ. ಯಾವುದೇ ಕೆಲಸ ಸಿಗದಿದ್ದರೂ ರಾಜಕಾರಣಿಯಾಗಲು ಸಾಕಷ್ಟು ಕುಡುಕ ಮಿತ್ರರ ಸಹವಾಸ ಇದ್ದರೆ ಅತ್ಯಂತ ಹೆಚ್ಚು ಸುಲಭ. ಮತ್ತು ರಾಜಕಾರಣಿಯಾಗುವ ಮೂಲಕ ದಿಢೀರ್ ಶ್ರೀಮಂತರಾಗಲು ಕೂಡ ಇದು ಭದ್ರ ಬುನಾದಿ ಹಾಕಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.

5 Comments

ಏನಾದ್ರೂ ಹೇಳ್ರಪಾ :-D

 1. Feeding bottleನಲ್ಲಿ ಹಾಲಿನ ಬದಲು ಅಲ್ಕೋಹಾಲು?

  ReplyDelete
 2. ಓಹೋ! ನಮ್ಮೂರಲ್ಲೇ ಪರ್ವಾಗಿಲ್ಲ! ಇಸ್ಕೂಲ್/ಕಾಲೇಜು ಮಕ್ಳೆಲ್ಲಾ ಕುಡೀಬೋದು. 18 ಇದೆ ಅನ್ಸುತ್ತೆ ಈಗ...ಅದ್ನ ಇನ್ನೂ ಇಳ್ಸಿ ಅಂತಾ ಮಕ್ಳ ಗಲಾಟೆ!

  ReplyDelete
 3. ಸುನಾಥರೆ,
  ಹೌದು.. ಹಾಲ್ಕೊಡಿ ಹಾಲ್ಕೊಡಿ ಹಾಲ್ಕೋಡಿ ಅಂತ ಹೇಳುತ್ತಲೇ ಆಲ್ಕೋಹಾಲ್ಕೊಡಿ ಅಂತ ಮಕ್ಕಳ ಬಾಯಲ್ಲಿ ಬಂದಿವೆ. ಇನ್ನೂ ಕಲಿತುಕೊಳ್ತಿದ್ದಾವಷ್ಟೆ. ಸ್ವಲ್ ಕಾದರೆ ನಾಲಿಗೆ ಚೆನ್ನಾಗಿ ಹೊರಳೀತು. ಎಷ್ಟಾದ್ರೂ ಮಕ್ಕಳಲ್ವಾ...

  ReplyDelete
 4. ನೀಲಿ ನೀಲಿಯವರೆ,
  ನಮ್ಮ ವರದಿ ಪರಿಣಾಮವೋ... 18 ಅಂದ್ರೆ 18 ಬಾಟಲಿಗಷ್ಟೇ ಸೀಮಿತ ಅಂತಾನೇ? ಸ್ಪಷ್ಟಪಡಿಸುವಂಥವರಾಗಿ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post