(ಬೊಗಳೂರು ಸುಡೋ ಬ್ಯುರೋದಿಂದ)
ಬೊಗಳೂರು, ಏ.8- ಎತ್ತಿ ಎತ್ತಿ ಒಗೇನಕಲ್‌ನಲ್ಲಿ ಸಿಕ್ಕಸಿಕ್ಕವರಿಗೆಲ್ಲಾ ನೀರು ಕುಡಿಸುವ ಪ್ರಯತ್ನದಲ್ಲಿರುವ, ಮತ್ತು ಈಗಾಗಲೇ ಒದರಬಾರದೂಂತ ಭಾರತೀಯ ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ ಎನ್ನುತ್ತಾ ಎಲ್ಲರ ಪ್ರೀತಿಗೆ ಪಾತ್ರವಾಗಿರುವ ಕಚಡಾನಿಧಿಯ ಪ್ರತಿಕೃತಿಯ ಬದಲು ನಿಜವಾದ ನಿಧಿಯನ್ನೇ ಸುಟ್ಟು ಹಾಕಿದ ಘಟನೆಯೊಂದು ಯಾರಿಗೂ ತಿಳಿಯದಂತೆ ಘಟಿಸಿಹೋಗಿದ್ದು, ದೇಶಾದ್ಯಂತ ಹಾಹಾಕಾರವೆದ್ದಿದೆ.

ಇದಕ್ಕೆ ಕಾರಣವನ್ನೂ ಪತ್ತೆ ಹಚ್ಚಲಾಗಿದ್ದು, ಮಾಮೂಲಿಯಾಗಿ ಕಾರ್ಟೂನ್ ಚಿತ್ರಗಳನ್ನು, ವಕ್ರವಕ್ರವಾಗಿ ಬರೆದ ಗೆರೆಗಳ ರೂಪದಲ್ಲಿರುವ ಚಿತ್ರಗಳನ್ನು, ನಿರ್ಭಾವ ಚಿತ್ರಗಳನ್ನು, ಒಂದು ಕೋಲಿಗೆ ಕಟ್ಟಿ, ಬೆದರು ಬೊಂಬೆಯಂತಹ ಪ್ರತಿಕೃತಿ ಮಾಡಿ ಸುಟ್ಟುಬಿಡುವುದು ವಾಡಿಕೆ. ಆದರೆ ಪ್ರತಿಭಟನಾಕಾರರಿಗೆ ಪ್ರತಿಕೃತಿ ಯಾವುದು, ನಿಜವಾದ ಕೃತಿ ಯಾವುದು ಎಂಬುದು ತಿಳಿಯದೆಯೇ ಇಂತಹ ಚಾತುರ್ಯ ನಡೆದಿದೆ ಎಂದು ಕಳ್ಳ ಮೂಲಗಳು ತಿಳಿಸಿವೆ.

ಅಸತ್ಯ ಹೇಳುವುದರಲ್ಲಿ ಅಸತ್ಯಾನ್ವೇಷಿಗೇ ಸವಾಲೊಡ್ಡುತ್ತಿರುವ ತಮಿಳುಕಾಡಿನ ಮುಖ್ಯಕಂತ್ರಿಯು ಕೋಲಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಯುಪಿಎ ಸರಕಾರದ ಪ್ರಧಾನ ಪಕ್ಷವಾದ ಕಾಂಗ್ರೆಸ್ಸನ್ನು ಒಲಿಸಿಕೊಳ್ಳಲು, ಆ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳುವ ಸಂಚಿನೊಂದಿಗೆ ಹೊಗೆ ಹಾಕುವ ಪ್ರಯತ್ನ ನಿಲ್ಲಿಸಿದ್ದರೂ, ಆತನ ಬಂಟರು ಅಲ್ಲಲ್ಲಿ ಬಸ್ಸು ಸುಟ್ಟು ಹೊಗೆ ಹಾಕುತ್ತಿರುವುದು ಈ ದೇಶದ ಒಂದು ಅಮೂಲ್ಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

8 Comments

ಏನಾದ್ರೂ ಹೇಳ್ರಪಾ :-D

 1. ಕಳೆದ ಕೆಲವು ದಿನಗಳಿಂದ ಕಳ್ಳನಂತೆ ಕುಳಿತು ನಾನೂ ನಿಮ್ಮ ಕಳ್ಳಾಟವನ್ನು ನೋಡ್ತಿದ್ದೀನಿ :D
  ಕಳ್ಳ ನಿಧಿಯ ಕಳ್ಳಾಟವನ್ನು ಕಳ್ಳ ಮೂಲದ ಮೂಲಕ ಬಹಳ ಚೆನ್ನಾಗಿ ಎತ್ತೀ ಎತ್ತೀ ಒದರಿದ್ದೀರಿ. ಅದಿರ್ಲಿ, ನಿಮ್ಮ ವದರಿಗಾರರೇನಾ ಒಗೇನಕಲ್ಲಿನ ಮೇಲೆ ಕುಳಿತು ಹೊಗೆ ಬಿಡ್ತಿದ್ದವರು :P

  ReplyDelete
 2. hey nice blog really intresting i liked it a lot enjoyed goin through it really good post
  with regards
  edgar dantas
  www.gadgetworld.co.in

  ReplyDelete
 3. ತಮಿಳು ಸಿನಿಮಾಗಳ ಪ್ರಭಾವವೇ ಕಳ್ಳ ಕೃತಿ ಯಾವುದು, ನೈಜ ಕೃತಿ ಯಾವುದು ಗೊತ್ತಾಗದಿರುವದಕ್ಕೆ ಕಾರಣ. ಅಲ್ಲಿ ಎಲ್ಲಾ ಡುಪ್ಲಿಕೇಟು. ಕಚಡಾನಿಧಿಯೇ ಆಗಲೀ, ಮಜನೀಕಾಂತನೇ ಆಗಲಿ, ಬೀರಪ್ಪನ್‌ನೇ ಆಗಲಿ, ಅವರಿಗೆ ಚೆನ್ನೈದಲ್ಲಿ ಒಂದು ರೋಲು, ತಂಗಳೂರಿನಲ್ಲಿ ಮತ್ತೊಂದು ರೋಲು!

  ReplyDelete
 4. These ba*d tamilians should be kicked out of this country....Wherever they go there will be terrorism( Example: LTTE in Srilanka, in Malasia, in karnataka Tamil Sangham, etc.....keep on going). Hello Indians...wake up...give justice to all.

  ReplyDelete
 5. ಶ್ರೀನಿವಾಸರೆ,
  ನೀವು ಕಳ್ಳ"ನಂತೆ" ಅಂತ ಸುಳ್ಳು ಹೇಳುವುದೇತಕೆ? ಕಾಳ ಸಂತೆಯಲ್ಲಿರುವವರೆಲ್ಲರೂ ಕಳ್ಳನಂತೆ ಇರಬೇಕೆಂಬ ನಿಯಮವಿದೆಯಾ?

  ನಮ್ಮ ರದ್ದಿಗಾರರೇ ಹೊಗೇನಕಲ್ಲಿನ ಮೇಲೆ ಎತ್ತಿ ಎತ್ತಿ ಒಗೆಯಲ್ಪಡುತ್ತಿದ್ದವರು ಅಂತ ನಿಮಗೆ ಹೇಗೆ ಗೊತ್ತು?

  ReplyDelete
 6. ಎಡಗರ ಡಾಂಟಿಸ್???
  ನೈಸಾದ ಬ್ಲಾಗು ಅಂತ ಕನ್ನಡದಲ್ಲಿ ಬರೆಯುವುದು ಕೂಡ ಸುಲಭ. ಕನ್ನಡ ಬಾರದಿದ್ದರೂ ಅದು ಹೇಗೆ ಎಂಜಾಯ್ ಮಾಡಿದ್ರೋ.... ಇವನ್ನೆಲ್ಲಾ ಇಂಟರೆಸ್ಟಿಂಗ್, ಗುಡ್ ಪೋಸ್ಟುಗಳು ಅಂತ ಅದು ಹೇಗೆ ಹೇಳಿದ್ರೋ... ದೇವರೇ ಬಲ್ಲ...

  ReplyDelete
 7. ಸುನಾಥರೆ,

  ಎರಡೂ ರೋಲುಗಳನ್ನು ಮಡಚಿಯೇ ಕೃತಿ ದಹನ ಮಾಡಿದ್ದೂಂತ ಕೇಳಿದ್ದೇವೆ.

  ReplyDelete
 8. @ ಗುರು,

  ಬೆಂಗಳೂರನ್ನೇ ತಮಿಳು ರಾಜಧಾನಿ ಮಾಡುವ ಹುನ್ನಾರ ನಡೀತಾ ಇರೋದರ ಬಗೆಗೂ ಎಚ್ಚರವಹಿಸಬೇಕಾಗಿದೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post