ತಮಿಳುನಾಡಿನ ಅಮುಖ್ಯಮಂತ್ರಿ ಕ'ರಣ'ನಿಧಿ ಇತ್ತೀಚೆಗೆ ಕರುನಾಡಿನ ವಿಷಯಗಳಲ್ಲಿ ಮೂಗು ತೂರಿಸುವುದು ಹೆಚ್ಚಾಗುತ್ತಿರುವುದರಿಂದಾಗಿ ಅವರನ್ನು ಕರುನಾಡಿಗೆ ಓಡಿಸಲು ಸರ್ವರೂ ಸನ್ನದ್ಧತೆಯಲ್ಲಿದ್ದಾರೆ.
ಆಗ ಕಾವೇರಿ ನಮ್ಮವಳು ಎನ್ನುತ್ತಿದ್ದ ಅವರು, ಈಗ ಹೊಗೇನಕಲ್ಲಿನಲ್ಲಿರೋ ಕಾವೇರಿಯೂ ನಮ್ಮವಳು. ಇತ್ತೀಚೆಗೆ ಬೊಗಳೂರು ಕೂಡ ಐಟಿ ಹಬ್ ಆಗಿ ಜಾಗತಿಕವಾಗಿ ಬೆಳೆಯುತ್ತಿದೆ ಮತ್ತು ಅಲ್ಲಿ ತಮಿಳರೇ ಹೆಚ್ಚಾಗಿರುವುದರಿಂದಾಗಿ ಬೊಗಳೂರು ಕೂಡ ತಮಿಳುನಾಡಿಗೇ ಸೇರಬೇಕು ಎಂದು ಕರುನಾಡನಿಧಿಯವರು ಆಗ್ರಹಿಸುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲು ಸಕಲರೀತಿಯಲ್ಲೂ ಸಿದ್ಧತೆ ನಡೆದಿದೆ.
ಬೊಗಳೂರಿನಲ್ಲಿ ಹೇಗೂ ತಮ್ಮ ಹೆಂಡಂದಿರಲ್ಲೊಬ್ಬರ ಪುತ್ರಿಯ ಮನೆಯೂ ಇದೆ. ಆ ಊರಲ್ಲಿ ತಮಿಳರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಹೊಡೆ-ಬಡಿಯ ಸಂಪ್ರದಾಯಕ್ಕೆ ವಿರುದ್ಧವಾಗಿ ಸುಮ್ಮನೆ ತಮ್ಮ ಪಾಡಿಗೆ ತಮ್ಮ ಕೆಲಸ ಮಾಡಿಕೊಂಡು ಹೋಗುತ್ತಿರುವ ತಮಿಳರನ್ನೆಲ್ಲಾ ಅಲ್ಲಿಂದ ತಮಿಳುನಾಡಿಗೆ ಓಡಿಸಿದಲ್ಲಿ, ತನಗೆ ಅಲ್ಲಿ ತಳವೂರಲು ಸಾಕಷ್ಟು ಸ್ಥಳಾವಕಾಶ ದೊರೆಯುತ್ತದೆ ಎಂದು ಗೂಢಾಲೋಚನೆ ಮಾಡಿರುವ ಕರುನಾಡನಿಧಿ, ತಾನೇ ಬೊಗಳೂರಿಗೆ ಪರಾರಿಯಾಗುವ ಯೋಚನೆಯಲ್ಲಿದ್ದಾರೆ ಎಂಬುದನ್ನೂ ನಮ್ಮ ಮೂಲಗಳು ತಿಳಿಸಿವೆ.
ಅತ್ಯಾಚಾರ, ಅನಾಚಾರ ಎಂಬೆರಡು ಶಬ್ದಗಳಿಗೆ ಅರ್ಥ ಕಲ್ಪಿಸಿಕೊಟ್ಟು ಪ್ರಸಿದ್ಧರಾದ ತಮ್ಮ ಪುತ್ರದ್ವಯರಿಬ್ಬರನ್ನೂ ಕಟ್ಟಿಕೊಂಡು ಬೆಂಗಳೂರಿಗೆ ಧಾವಿಸಿದರೆ, ಅಲ್ಲಿರುವ ಶಾಂತಿಯನ್ನು ಸಂಪೂರ್ಣವಾಗಿ ಕೆಡಿಸಬಹುದು. ಇದರಿಂದ ಅರಾಜಕ ಆಡಳಿತ ನೀಡಲು ಸುಲಭವಾಗಬಹುದು ಎಂಬುದು ಕಪ್ಪುಕನ್ನಡಿಗನ ದುರ್ಆಲೋಚನೆ.
ಈಗಾಗಲೇ ಮುರಿದಿರೋ ಬೆನ್ನುಮೂಳೆಯನ್ನು ಮತ್ತಷ್ಟು ಮುರಿಯಲು ಸಾಧ್ಯವಿಲ್ಲ ಎಂದು ತಿಳಿದೇ, ಬೆನ್ನುಮೂಳೆ ಮುರಿದರೂ ದ್ವೇಷದಹೊಗೆಯ ಕಲ್ಲಿನ ಯೋಜನೆ ಮುಂದುವರಿಸಿಯೇ ಸಿದ್ಧ ಎನ್ನುತ್ತಾ, ತಮ್ಮ ಭಾಷಾಂಧತೆಯನ್ನು ಬಚ್ಚಿಡುವ-ಮುಚ್ಚಿಡುವ ಸಲುವಾಗಿ ಕನ್ನಡಿಗರನ್ನು ಭಾಷಾಂಧರು ಎಂದಿರುವ ಕರುಣಾಜನಕ, ಸದಾ ಕಪ್ಪು ಕನ್ನಡಿ ಧರಿಸುವ ಮೂಲಕ ಭಾಷಾ "ಅಂಧರು" ಯಾರು ಎಂಬುದನ್ನು ತಮಗರಿವಿಲ್ಲದಂತೆಯೇ ಶ್ರುತಪಡಿಸದಿರುವುದು ವಿಚಿತ್ರವಾದರೂ ಸತ್ಯವಾಗಿದೆ.
ತಮ್ಮ ಹೆಸರಲ್ಲೇ ಕರುನಾಡಿನ ಮೊದಲ ಎರಡ್ಮೂರು ಅಕ್ಷರಗಳಿವೆ. ಹಾಗಾಗಿ ಯಾರಿಂದಲೂ ಆಕ್ಷೇಪ ಬರಲಾರದು. ಒಮ್ಮೆ ಬೆಂಗಳೂರನ್ನು ವಶಪಡಿಸಿಕೊಂಡರೆ, ಕೇಂದ್ರದ ಮೇಲೆ ಬೆಂಬಲ ಹಿಂತೆಗೆತದ ಒತ್ತಡ ಹೇರಿ, ನದಿ ತಿರುವು ಯೋಜನೆಯ ಸಹಕಾರದಿಂದ ಕಾವೇರಿಯನ್ನು ಕರ್ನಾಟಕದ ಪಶ್ಚಿಮ ಕರಾವಳಿಗೇ ತಿರುಗಿಸಿದಲ್ಲಿ ಯಾವುದೇ ಜಂಜಡ-ದ್ವೇಷದ ಹೊಗೆ-ಮೆಟ್ಟೂರಿನ ಮೆಟ್ಟಿನೇಟು ಇತ್ಯಾದಿ ಇರಲಾರದು ಎಂಬ ಗೂಢತಂತ್ರವೂ ಇದರಲ್ಲಿ ಸೇರಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.
Anveshi
ಕನ್ನಡವೆಂದರೆ ಪಂಚ ಪ್ರಾಣ. ಈ ಬೊಗಳೆಯಲ್ಲಿರುವುದೆಲ್ಲವೂ ಅಸತ್ಯ ಮತ್ತು ಸತ್ಯಕ್ಕೆ ಹತ್ತಿರವಾದರೆ ಯಾರೂ ಜವಾಬ್ದಾರರಲ್ಲ ಎಂಬುದೇ ಧ್ಯೇಯ ವಾಕ್ಯ.
ಕರುಣಾನಿಧಿಯ ದೇಶದ್ರೋಹ ಶ್ರುತವಾದರೂ ಸಹ ಅವನನ್ನು ಇದೇ ದೇಶದಲ್ಲಿ ಇರಗೊಟ್ಟಿರುವ ನಮ್ಮ ನಾಲಾಯಕ್ ಪ್ರಧಾನಿ, ವೇಸ್ಟ್ ಬಾಡಿ ರಾಷ್ಟ್ರಪತಿಗಳನ್ನು ಮೊದಲು ವಿಚಾರಣೆಗೊಳಪಡಿಸಿ ಅವರ ಮೇಲೆ ಕೂಡಾ ಭಯೋತ್ಪಾದಕ ಕರುಣಾನಿಧಿಗೆ ಆಶ್ರಯ ಕೊಟ್ಟ ಆಪಾದನೆ ಮೇಲೆ ಬಂಧಿಸಿ ಗಲ್ಲಿಗೇರಿಸಬೇಕು.
ReplyDeleteಈ ಕಮೆಂಟ್ರಿ ನಿನ್ನೆ ಬೊಗಳೆಯ ಜನ್ಮಜಾಲಾಡಿದ್ದಕ್ಕೆ. ನಿನ್ನೆ ಬರಲಾಗಿಲ್ಲ ಅಂತ ನೀವೇನು ಸಂತಸ ಪಡುವ ಅಗತ್ಯವಿಲ್ಲ. ಇವತ್ತು ವಕ್ಕರಿ-ಸತ್ತಿರುವೆ. ನಿಮ್ಮ ಅರ್ಧಕಿಲೋಗೆ ಮತ್ತು 4ರ ಯೌವನಕ್ಕೆ ಅಭಿ-ನಿಂದನೆಗಳು!!!!
ReplyDeleteಈ ಕಚಡಾನಿಧಿಗೆ ತನ್ನ ಮೂಳೆ ಮುರಿದೀತೆನ್ನುವ ಭಯವಿಲ್ಲ. ಬೇರೆ ಯಾರದೇ ಮೂಳೆ ಮುರಿದರೂ ಸಹ ತನ್ನ ಹಟವೇ ಗೆಲ್ಲಲಿ
ReplyDeleteಎನ್ನುವ ದುಷ್ಟ ಮನೋಭಾವ ಈತನದು. ಈತನಿಗೆ ಹೆದರಿ ಹಿಕ್ಕೆ ಹಾಕುವ ನಿಧಾನಿ ಇದ್ದಾನಲ್ಲ:ಒಣಮೋರೆ ಸಿಂಗಣ್ಣ.
ಒಗೆಯೋಕಲ್ಲಿನ ಮೇಲೆ ಆತನನ್ನೇ ಈಗ ಕುಕ್ಕುತ್ತಿದ್ದಾನೆ ಈ ಕಚಡಾನಿಧಿ.
ಅನಾನಿಮಸರೆ,
ReplyDeleteಕರುಣಾಕಿಡಿ ಯಾವತ್ತೂ ಕಚಡಾತೊಟ್ಟಿಯಲ್ಲಿ ಕಿಡಿ ಹೊತ್ತಿಸುತ್ತಿದ್ದು, ಇಲ್ಲಿ ಸಾಕಷ್ಟು ಸಂಖ್ಯೆಯ ಕಚಡಾ ತೊಟ್ಟಿಗಳಿಲ್ಲದಿರೋದ್ರಿಂದ, ಪ್ರತಿಕೃತಿ ದಹನಕ್ಕೆ ಕಾಯಲಾಗುತ್ತಿದೆ.
ಶಾನಿಯವರೆ,
ReplyDeleteಹಳೆಯ ರದ್ದಿಗಳನ್ನೆಲ್ಲಾ ಕೆದಕಿ ಕೆದಕಿ ಕಾಮೆಂಟ್ರಿ ಹಾಕೋದ್ರಿಂದ ನೀವು ಯಾವುದಕ್ಕೆ ಕಾಮೆಂಟ್ರಿ ಹಾಕಿದ್ದೀರಿ ಅನ್ನೋದರ ಬಗ್ಗೆ ಸುಳಿವು ಸಿಗದೆ ಗೊಂದಲದಲ್ಲಿ ಪರಿತಪಿಸುತ್ತಿರುತ್ತೇವೆ. ನಮ್ಮನ್ನು ಮುಗಿಸುವ ಪ್ರಯತ್ನವಿದೆಂದು ಶಂಕಿಸುತ್ತಿದ್ದೇವೆ.
ನಮ್ಮ ವಯಸ್ಸನ್ನು 4 ವರ್ಷ ಅಂತ ದುಪ್ಪಟ್ಟು ಮಾಡಿ, ತೂಕವನ್ನು ಮಾತ್ರ ಅರ್ಧ ಕಿಲೋಗೆ ಇಳಿಸಿದ್ದು, ನಿಮ್ಮ ಗಣಿತದ ಮೇಲಿನ ಅಗಣಿತ ಹಿಡಿತದ ಪ್ರತೀಕ. ನಿಮ್ಮ ನಿಂದನೆಗಳಿಗೆ ನಮ್ಮ ಬ್ಯುರೋ ಆಭಾರಿ.
ಸುನಾಥರೆ,
ReplyDeleteಒಣಮೋರೆ ಸಿಂಗ ಪಕ್ಕಾ ಜಾರಕಾರಣಿಯಾಗಿದ್ದು, ಸಂಪುಟಕ್ಕೆ ಹೊಸ ರಕ್ತ ಸೇರಿಸಿಕೊಂಡಿದ್ದಾರೆ, ಆಟ ಆಡೋದು ಮಾತ್ರ ಮುದಿಗೂಬೆಗಳ ಜತೆಗೆ. ಕಚಡಾನಿಧಿಗೆ ಮೂಳೇನಕಲ್ ಎಂಬುದು ಏನೂಂತ ತೋರಿಸಿಕೊಡಬೇಕಾಗಿದೆ.
Post a Comment
ಏನಾದ್ರೂ ಹೇಳ್ರಪಾ :-D