ಬೊಗಳೆ ರಗಳೆ

header ads

ಬೊಗಳೂರಿನಲ್ಲಿ ಹರ್ಷದ ಮೌನ

ಅರ್ಜೆಂಟಾಗಿ ಬೊಗಳೂರು ಬಿಟ್ಟು ಪರಾರಿಯಾಗಬೇಕಾದ ಪ್ರಸಂಗ ಬಂದಿರೋದ್ರಿಂದ ಬೊಗಳೂರಿಗೆ ಎರಡು ದಿನ ರಜೆ ಸಾರಲಾಗಿದೆ.

ಎಲ್ಲರೂ ನಿರಾಳವಾಗಿ ಉಸಿರಾಡುವಂತೆ ಕೋರಲಾಗಿದೆ.

ಆದರೆ ಬೊಗಳಿಗರ ಸಮಾವೇಶದಲ್ಲಿ ಭಾಗವಹಿಸಿ, ಅಲ್ಲಿಂದ ಯಾರೋ ಅಟ್ಟಿಸಿಕೊಂಡು ಹೋಗಿದ್ದಾರೆ ಎಂಬ ವರದಿಗಳನ್ನು ಮಾತ್ರ ನಮ್ಮ ಬ್ಯುರೋದ ಸೊಂಪಾದ-ಕರುಗಳು ನೀರ್ ನೀರ್-ವಾಕರಿಸಿದ್ದಾರೆ. ಎಲ್ಲರೂ ಎರಡು ದಿನ ಹರ್ಷಚಿತ್ತರಾಗಿ ರಜೆ ಸೆಲೆಬ್ರೇಟ್ ಮಾಡುವಂತೆ ಸಂದೇಶವನ್ನೂ ರವಾನಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

 1. ನಿಮ್ಮನ್ನು ಯಾರೋ ಓಡ್ಸಿದ್ರೂ ಅಂತ ನಿಮ್ಮ ಏಕ ಸದಸ್ಯ ಬ್ಯೂರೋದ ಸರ್ವ ಸದಸ್ಯರೂ ಬಣ್ಣಹಚ್ಚಿಕೊಂಡು ಕುಣಿಕುಣಿದು ನಲಿನಲಿದು ಹೋಲಿ ಆಚರ್ಸ್‌ತ್ತಿದ್ರಪ್ಪ!

  ಪ್ರತ್ಯುತ್ತರಅಳಿಸಿ
 2. ಎಲ್ಲರಿಗೂ ನಮಸ್ಕಾರಗಳು
  ಅನ್ವೇಷಿಗಳು ತಲೆಮರೆಸಿಕೊಂಡು ಓಡಿ ಹೋಗಿದ್ದಾರೆ ಎಂದು ತಿಳಿಸಲು ಬಹಳ ಹರ್ಷವಾಗುತ್ತಿದೆ
  ಇನ್ಮೇಲೆ ನಾನೇ ಇಲ್ಲಿಯ ವದರಿಗಾರ. ನಿಮಗೆ ಎಂತಹ ಸುದ್ದಿ ಬೇಕು ಎಂದು ನನಗೆ ಪಂಚೆಯ ಮೂಲಕ, ಕ್ಷಮಿಸಿ ಅಂಚೆಯ ಮೂಲಕ
  ತಿಳಿಸಿದರೆ ಅಂತಹದ್ದೇ ಸುದ್ದಿಗಳನ್ನು ನಿಮಗೆ ರುಚಿಸುವಂತೆ ಶುಚಿಯಾಗಿ ರಚಿಸಿ, ಇಲ್ಲಿ ಏರಿಸುವೆ

  ನೀವೇನೂ ಹೆದರಬೇಡಿ, ಇನ್ಮೇಲೆ ಅನ್ವೇಷಿಗಳು ಈ ಕಡೆಗೆ ಬರದಂತೆ ಮುಂಬಾಗಿಲು, ಹಿಂಬಾಗಿಲು ಭದ್ರಮಾಡಿರುವೆ :)

  ಪ್ರತ್ಯುತ್ತರಅಳಿಸಿ
 3. ಅಸತ್ಯ ಅನ್ವೇಷಿಯವರನ್ನು ಬೊಗಳೂರಿನಿಂದಲೇ ಓಡಿಸಿರುವುದರ ಹಿಂದೆ ನಮ್ಮ ಸಂಸ್ಥೆಯ ಕೈವಾಡವಾಗಲೀ ಮುಖವಾಡವಾಗಲೀ ಇಲ್ಲ ಎಂದು ಈ ಮೂಲಕ ಸಾರುತ್ತಿದ್ದೇವೆ.
  ಯಾರಾದರೂ ಅಸತ್ಯ ಅನ್ವೇಷಿ ಬೊಗಳೂರಿನಿಂದ ಕಾಣೆಯಾಗಿರುವುದಕ್ಕೆ ಆಗಿರುವ ಅದಮ್ಯ ಸಂತೋಷವನ್ನು ಪಟಾಕಿ ಹಾರಿಸುವ ಮೂಲಕವೋ, ಸಿಹಿ ಹಂಚುವ ಮುಖಾಂತರವೋ ತೋರ್ಪಡಿಸಿದಲ್ಲಿ ನಮ್ಮ ಮಾಜಿ ‘ಮಣ್ಣಿನ ಮಗ’ನಂತೆ ಬೊಗಳೂರಿನಲ್ಲಿ ಮತ್ತೆ ಹುಟ್ಟದಿರುವ ಶಪಥ ಮಾಡಿಯಾರು ಜೋಕೆ!

  supreeth

  ಪ್ರತ್ಯುತ್ತರಅಳಿಸಿ
 4. ಸುನಾಥರೆ,
  ಊರ ತುಂಬೆಲ್ಲಾ ಹೋಳಿಗೆ ಚೆನ್ನಾಗಿಯೇ ರೆಡಿ ಮಾಡಿದ್ದಾರೆ ಅಂತ ಗೊತ್ತಾಯ್ತು...

  ನಿಮಗೂ ಶುಭಾಶಯ.

  ಪ್ರತ್ಯುತ್ತರಅಳಿಸಿ
 5. ಶಾನಿಯವರೆ,
  ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿದೆ ಅಂತ ಎತ್ತಿ ತೋರಿಸುತ್ತಿದ್ದೇವೆ. ಕುಣಿಕುಣಿದು ಅನ್ನೋ ಪದದಲ್ಲಿ ಣಿ ಬದಲು ಡಿ ಆಗಬೇಕಿತ್ತು... ಆನಂತರ ಅವರೆಲ್ಲಾ ಡೆಸ್ಕ್ ಮೇಲೇ ಪವಡಿಸಿದ್ರಂತೆ...

  ಪ್ರತ್ಯುತ್ತರಅಳಿಸಿ
 6. ಅನಾನಸ್1 ಅವರೆ,
  ನಮಗೆ ನಾಮ-ಸ್ಕಾರ ಹಾಕಲು ಬಂದವರಿಗೂ ನಮಸ್ಕಾರ.

  ನಮ್ಮನ್ನು ಓಡಿಸಿ ಅಧಿಕಾರಕ್ಕೇರೋಕ್ಕೆ ನೀವೇನು ನೋಸಿಯಾ ಗಾಂಧಿಯೇ ಅಥವಾ ನಾವು ಸೀತಾರಾಮ ಕೇಸರಿಯೇ? ರಂಗೋಲಿ, ಚಾಪೆ, ಹಾಸಿಗೆ, ಬಾಗಿಲು, ಗವಾಕ್ಷಿ... ಎಲ್ಲಾ ಕಡೆ ತೂರಿಕೊಂಡು ಮತ್ತೆ ಬಂದಿದ್ದೇವೆ.

  ಪ್ರತ್ಯುತ್ತರಅಳಿಸಿ
 7. ಅನಾನಿಮಸ್ 2 ಸುಪ್ರೀತರೆ,

  ನೀವು ಸಂತೋಷ ಆಚರಿಸಿದ್ದು ಪಟಾಕಿ ತಿಂದು, ಸಿಹಿ ಹಾರಿಸಿ ಅಂತ ತಿಳಿದು ಬಹಳ ಸಂತೋಷವಾಯಿತು. ಪಟಾಕಿ ಒಡೆದಾಗ ನಿಮ್ಮ ಬ್ಯುರೋದವರ ಮುಖ ನೆನಪಿಸಿಕೊಂಡು ನಗು ಬರಲೇ ಇಲ್ಲ...

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D