ಬೊಗಳೆ ರಗಳೆ

header ads

ಏನೈತೆ, ಒಳಗಡೆ ಏನೇನೈತೆ???

(ಬೊಗಳೂರು Some-ಶೋಧನೆ ಬ್ಯುರೋದಿಂದ)
ಬೊಗಳೂರು, ಮಾ.11- "ಏನೈತೆ, ಒಳಗಡೆ ಏನೇನೈತೆ?" ಅಂತ ಹಾಡಿ ಕುಣಿಯೋ ಸಿನಿಮಾ ಪದವನ್ನೇ ಮಾದರಿಯಾಗಿಟ್ಟುಕೊಂಡು ತಯಾರಿಸಲಾಗಿರುವ ಉಟ್ಟ ಬಟ್ಟೆಯೊಳಗೆ ಏನೇನು ಇಟ್ಟುಕೊಳ್ಳಲಾಗಿದೆ ಅಂತ ಪತ್ತೆ ಹಚ್ಚುವ, ಆದರೆ ಏನೇನಿರುತ್ತೆ ಅಂತ ಪತ್ತೆ ಹಚ್ಚಲಾರದ ಯಂತ್ರವನ್ನು ಕಂಡು ಹುಡುಕಲಾಗಿದ್ದು, ಅದು "ವೀಕ್ಷಕ/ಪ್ರೇಕ್ಷಕ" ವರ್ಗದಲ್ಲಿ ಭಯಂಕರ ನಿರಾಸೆ ಮೂಡಿಸಿದೆ ಎಂಬುದು ಇಲ್ಲಿ ವರದಿಯಾಗಿದೆ.

ಇದಕ್ಕೆ ಪ್ರಧಾನ ಕಾರಣಗಳು ಎರಡು. ಇದು ಪಡ್ಡೆ ಹೈಕಳಿಗೆ ಯಾವುದೇ ರೀತಿಯಲ್ಲೂ ಪ್ರಯೋಜನಕ್ಕೆ ಬರುವುದಿಲ್ಲ ಅಂತ ಸಂಶೋಧಕರು ಸ್ಪಷ್ಟಪಡಿಸಿದ್ದು. ಇನ್ನೊಂದು ಎಂದರೆ, ಕನಿಷ್ಠ ಉಡುಗೆಯಲ್ಲೇ ಮೈಮುಚ್ಚಿಕೊಳ್ಳಲು ಹೆಣಗಾಡುವುದರಲ್ಲೇ ಸಂತೋಷ ಕಾಣುವ ಬಿಚ್ಚೋಲೆ ಗೌರಮ್ಮರ ಸಾಲಿಗೆ ಸೇರಿದ ನಟೀ ಮಣಿಯರ ತಪಾಸಣೆಗೆ ಇದು ಯಾವುದೇ ರೀತಿಯಲ್ಲೂ ಪ್ರಯೋಜನವಾಗದು ಎಂಬುದು!

ಯಾಕೆಂದರೆ ಈ ನಟೀಮಣಿಯರು ಯಾವತ್ತಿಗೂ ವಿದೇಶ ಪ್ರಯಾಣವೇ ಇರಲಿ, ಸ್ವದೇಶ ಯಾನವೇ ಇರಲಿ, ಅವರು ತಮ್ಮ ಬಟ್ಟೆ ಬರೆಗಳನ್ನು ಹೊತ್ತೊಯ್ಯಲು ಒಂದು ಪುಟ್ಟ ಬೆಂಕಿಪೊಟ್ಟಣವನ್ನು ಮಾತ್ರವೇ ಒಯ್ಯುತ್ತಾರೆ. ಇದನ್ನಂತೂ ತಪಾಸಿಸುವುದು ಬಹಳ ಸುಲಭ. ಮಾತ್ರವಲ್ಲದೆ, ಅವರ ತೊಟ್ಟ ಉಡುಗೆಯ ಪ್ರಮಾಣದಿಂದಾಗಿ ಈ ಕ್ಯಾಮರಾ ಚಾಲೂ ಮಾಡುವ ಅವಶ್ಯಕತೆಯೇ ಬಾರದು. ಈ ಕಾರಣಕ್ಕೆ, ಮುಂಬಯಿ ವಿಮಾನ ನಿಲ್ದಾಣಗಳಲ್ಲಿ ಇದನ್ನು ಅಳವಡಿಸಬೇಕಾಗಿಲ್ಲ ಅಂತ ಬೊಗಳೂರು ರಗಳೆ ಬ್ಯುರೋ ಶಿಫಾರಸು ಮಾಡುತ್ತಿದೆ.
ಬೊಗಳೋದುಗರಿಗೆ ಸಂತಸದ ಸುದ್ದಿ

ಬೆಳೆಯುತ್ತಿರುವ ಕನ್ನಡ ಬ್ಲಾಗ್ ಜಗತ್ತಿನಲ್ಲಿ ಕನ್ನಡ ಬ್ಲಾಗೋತ್ತಮರನ್ನು ಒಟ್ಟು ಸೇರಿಸುವ ಶ್ಲಾಘನೀಯ ಕಾರ್ಯಕ್ರಮವೊಂದರ ಆಹ್ವಾನ ಪತ್ರವಿದು. ಕಳಿಸಿದ್ದು ಸುಶ್ರುತ ದೊಡ್ಡೇರಿ.
ಅದನ್ನು ಅವರದೇ ಮಾತಿನಲ್ಲಿ ಕೇಳಿ:

ಎಲ್ಲರಿಗೂ ನಮಸ್ಕಾರ.

ನಿಮ್ಗೂ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: 16 ಮಾರ್ಚ್ 2008
ಟೈಮು: ಇಳಿಸಂಜೆ ನಾಲ್ಕು ಗಂಟೆ
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಸೂಚನೆ: ಇದು ನಡೀತಿರೋದು ಬೊಗಳೂರು ಅಲ್ಲ, ಬೆಂಗಳೂರಿನಲ್ಲಿ ಅಂತ ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ!!! ಯಾರಾದರೂ ಹಾದಿ ತಪ್ಪಿ ಬೊಗಳೂರಿಗೆ ಬಂದಲ್ಲಿ, ಅಲ್ಲಿ ಜನಜಂಗುಳಿ ಹೆಚ್ಚಾಗಿ ಜನರನ್ನು ನಿಯಂತ್ರಿಸಲು ಮತ್ತು ಬೊಗಳೂರೆಂಬ ಊರನ್ನು ಸೃಷ್ಟಿ ಮಾಡಲು ನಾವು ಸಾಕಷ್ಟು ಹೆಣಗಾಡಬೇಕಾದೀತು....:)

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಆನ್ವೇಷಿಗಳೇ, ಈ ಕಾರ್ಯಕ್ರಮ ಬೊಗಳೂರಲ್ಲೇ ಆಗಿದ್ದರೆ ನಮಗೂ ಅನುಕೂಲವಾಗುತ್ತಿತ್ತು ನೋಡಿ.. ಬಂದಿದ್ದೆವು, ಸಮಾರಂಭ ತುಂಬಾ ಚೆನ್ನಾಗಿತ್ತು ಎಂದು ಬೊಗಳೆ ಬಿಡಬಹುದಿತ್ತು ಅಲ್ವಾ?

    ಪ್ರತ್ಯುತ್ತರಅಳಿಸಿ
  2. ರವಿ ಕಾಣದ್ದನ್ನು ಕವಿ ಕಾಣುತ್ತಾನಂತೆ. ಕವಿ ಕಾಣದ್ದನ್ನು ಥ್ರೂ ವಿಜನ್ ಕೆಮರಾ ಕಂಡಿತೆ?

    ಪ್ರತ್ಯುತ್ತರಅಳಿಸಿ
  3. ಶ್ರೀತ್ರೀ ಅವರೆ,
    ನೀವು ಬೊಗಳೆ ಬಿಡುವುದೆಲ್ಲಾ ಓಕೆ... ಆದರೆ ಸಮಾರಂಭದಲ್ಲೇ ಬೊಗಳೆ ಬಿಟ್ಟರೆ ಮಾತ್ರ.... ನಾವಿಲ್ಲ.. :)

    ಪ್ರತ್ಯುತ್ತರಅಳಿಸಿ
  4. ಶ್ರೀನಿಧಿ ಅವರೆ,

    ನಮಗೆ 365 ದಿನವೂ ಕೆಲಸ ಇರುವುದರಿಂದಾಗಿ, ಇದಕ್ಕೆ ಬರಬೇಕೂಂತ ಕಚೇರಿಯಲ್ಲಿ ಭಯಂಕರ ಹಾಗೂ ಭಯಾನಕವಾಗಿ ಕಸರತ್ತು ಮಾಡುತ್ತಿದ್ದೇವೆ. ಚೆಂಡು ದೇವರ ಅಂಗಣದಲ್ಲಿದೆ.!!!

    ಪ್ರತ್ಯುತ್ತರಅಳಿಸಿ
  5. ಸುನಾಥರೆ,
    ಥ್ರೂ ವಿಶನ್ ಮೂಲಕ ಥರೋ ಆಗಿ ಎಲ್ಲವನ್ನೂ ನೋಡಲಾಗುವುದಿಲ್ಲ ಎಂಬುದೇ ಕವಿಗೆ ಕಾಣಿಸಲೂ ಸಮಸ್ಯೆಯಾಗಿರುವುದು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D