ಬೊಗಳೆ ರಗಳೆ

header ads

ಗಾರ್ದಭ ಸಮುದಾಯ ಅವಸಾನವಾಗುತ್ತಿರುವುದೇಕೆ?

(ಬೊಗಳೂರು ಗಾರ್ದಭ ಬ್ಯುರೋದಿಂದ)
ಬೊಗಳೂರು, ಅ.24- ಬೊಗಳೆ ರಗಳೆಯ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಇನ್ನು ಮುಂದೆ ನಮ್ಮ ಪತ್ರಿಕೆಗೆ ಲಭ್ಯವಾಗುವುದು ಬಹುತೇಕ ಶಂಕಾಸ್ಪದವಾಗಿದೆ ಎಂದು ವರದಿಗಳು ತಿಳಿಸಿವೆ.

ಇದಕ್ಕೆ ಪ್ರಧಾನ ಕಾರಣವೆಂದರೆ ತಮ್ಮ ಪ್ರತಿಸ್ಪರ್ಧಿ ಪತ್ರಿಕೆಯು ಇಲ್ಲಿ ಪ್ರಕಟಿಸಿರುವ ವರದಿ.

ಗಾರ್ದಭ ಸಮಾಜದವರು (ಬೊಗಳೂರು ಬ್ಯುರೋ ನಿರ್ವಹಿಸುತ್ತಿರುವವರು ಅಂತ ತಪ್ಪು ತಿಳಿದುಕೊಳ್ಳಬೇಕಾಗಿಲ್ಲ) ಇತ್ತಿತ್ತಲಾಗಿ ಬೆಲೆ ಕಳೆದುಕೊಳ್ಳುತ್ತಿದ್ದಾರೆ, ಹಾಗಾಗಿ ಈ ಜಾತ್ರೆಯೂ ಆಕರ್ಷಣೆ ಕಳೆದುಕೊಳ್ಳುತ್ತಿದೆ ಎಂದು ಪತ್ರಿಕೆ ವರದಿ ಮಾಡಿದ್ದು, ಅದರ ವರದಿಯನ್ನು ಸುಳ್ಳಾಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೊಂಪಾದ ಕರು ಸ್ಪಷ್ಟಪಡಿಸಿದ್ದಾರೆ.

ಮತ್ತು ಇದರ ಜತೆಗೇ ನಮ್ಮ ಕಟ್ಟಾ ಮತ್ತು ಬದ್ಧ ಪ್ರತಿಸ್ಪರ್ಧಿ ಪತ್ರಿಕೆಯೊಂದು ಸುದ್ದಿ ಪ್ರಕಟಿಸಿದೆ. ಅದೆಂದರೆ ಕತ್ತೆಗಳು ಗೂಟದ ಕಾರುಗಳಿಂದಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿವೆ ಎಂಬುದು. ಇದು ಕೂಡ ಹಲವಾರು ಶಂಕೆಗಳಿಗೆ ಕಾರಣವಾಗಿದ್ದು, ಗೂಟದ ಕಾರುಗಳು ಕೂಡ ಎಲ್ಲಿ ಇರುತ್ತವೆ ಎಂಬುದನ್ನು ಪತ್ತೆ ಹಚ್ಚುವ ಯತ್ನ ನಡೆಯುತ್ತಿದೆ.

ಒಟ್ಟಿನಲ್ಲಿ ಕತ್ತೆಗಳ ಜಾತ್ರೆಯು ನಿಜವಾದ ಕತ್ತೆಗಳಿಲ್ಲದೆ ಸೊರಗುತ್ತಿದೆ. ಇದನ್ನು ಅರಿತುಕೊಂಡ ಬ್ಯುರೋ ಸಿಬ್ಬಂದಿಗಳೆಲ್ಲರೂ ಒಂದು ಚಕ್ಕಡಿಗಾಡಿಯಲ್ಲಿ ರಾಜಸ್ಥಾನಕ್ಕೆ ತೆರಳಿದ್ದಾರೆ ಮತ್ತು ಇನ್ನೂ ತೆರಳುತ್ತಿದ್ದಾರೆ.

ಅಲ್ಲಿಗೆ ಹೋದ ಬೊಗಳೂರು ಸಿಬ್ಬಂದಿ ತಮ್ಮ ಎಂದಿನ ಚಾಕಚಕ್ಯತೆಯ ತನಿಖಾ ಗುಣವನ್ನು ಬಚ್ಚಿಟ್ಟುಕೊಳ್ಳಲಾಗದೆ, ತಮ್ಮ ಸಂಶೋಧನೆ ಆರಂಭಿಸಿದ್ದರು. ಆದರೆ ಇದರಿಂದ ತಿಳಿದುಬಂದ ಅಂಶ ಮಾತ್ರ, ಕಕ್ಕಾಬಿಕ್ಕಿಯಾಗುವಷ್ಟು ಘೋರವಾಗಿತ್ತು.

ಅದೆಂದರೆ, ಈ ಜಾತ್ರೆಗಳಲ್ಲಿ ಸಾಕಷ್ಟು ಜನ ರಂಜಿಸುತ್ತಿದ್ದ ಗಾರ್ದಭ ಮಹಾಶಯರು ಇತ್ತೀಚೆಗೆ ಕರು-ನಾಟಕ ಸಂಘಕ್ಕೆ ವಲಸೆ ಹೋಗಿದ್ದು, ಅಲ್ಲಿನ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜನರು ಹೇರುವ ಭಾರ ಹೊರುವ ಬದಲು, ಅವರಿಂದ ಓಟು ಪಡೆದು ಒಂದಷ್ಟು ಆಟ ಆಡಬಹುದಲ್ಲಾ ಎಂಬ ಕಾರಣಕ್ಕೆ ಅವುಗಳು ಮನರಂಜನೆಗಾಗಿ ಈ ರೀತಿಯಾಗಿ ವಲಸೆ ಹೋಗಿವೆ ಎಂಬುದನ್ನು ಪತ್ತೆ ಮಾಡಲಾಗಿದ್ದು, ಈ ಸುದ್ದಿ ಪತ್ತೆ ಹಚ್ಚಿದ್ದಕ್ಕಾಗಿ ಗಿನ್ನಿಸ್ ದಾಖಲೆಗಳ ಪುಸ್ತಕಕ್ಕೆ ಅರ್ಜಿ ಗುಜರಾಯಿಸಿ, ಇನ್‌ಫ್ಲುಯೆನ್ಸ್‌ಗಾಗಿ ಪರದಾಡಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ಸೊಂಪಾದ ಕರುವೆ,
    ಕತ್ತೆಗಳ ಬಗೆಗೆ ಹೆಚ್ಚಿನ ಮಾಹಿತಿ:
    ‘ಸುಕುಮಾರ ಕೃಪಾ’ದಲ್ಲಿಯ ಕಡತಗಳನ್ನೆಲ್ಲ ಲದ್ದಿಗೆ ಹಾಕಿದ್ದಾರೆನ್ನುವ ಸುದ್ದಿ ಬಂದ ಮೇಲೆ, ನಿಮ್ಮ ಈ ವದರಿಗಾರನು,ಆ ಲದ್ದಿ ಕಡತಗಳನ್ನು ಸಂಗ್ರಹಿಸಿ ಶೋಧಿಸುತ್ತಿರುವಾಗ, “ಅಮುಖ್ಯ ಮಂತ್ರಿಯ ದಿನಚರಿ” ಎನ್ನುವ ಹೊತ್ತಿಗೆ ಅವನ ಹಳದಿ ಕಣ್ಣುಗಳಿಗೆ ಕಾಣಿಸಿತು. ಅದರಲ್ಲಿ ದಿನಾಂಕ ಮಸುಕಾದ ಪುಟದಲ್ಲಿ ಈ ಕೆಳಗಿನ ಪದ್ಯ ಕಾಣಿಸಿದೆ:

    “ಛೇ! ರಾಜಕೀಯದಾ ಗಮ್ಮತ್ತು!
    ಕತ್ತೆಗು ಬಂದಿದೆ ಕಿಮ್ಮತ್ತು!
    ಕತ್ತೆಯ ಬಾಲ ಸಿಗಲಿಲ್ಲ,
    ಲತ್ತೆಯ ಮಾತ್ರ ಬಿಡಲಿಲ್ಲ!”

    ದಿನಚರಿಯ ಕೊನೆಯ ಪುಟದಲ್ಲಿ ಹೀಗಿದೆ:
    “ಇತಿ ರೇವಣ್ಣ ಖಂಡೆ, ದೇವೇ ಮಹಾತ್ಮೆ , ಸುಕುಮಾರ ಚರಿತ್ರಂ ಖತಮ್!”

    ಪ್ರತ್ಯುತ್ತರಅಳಿಸಿ
  2. ಹೊಸ ಚಿಗುರು
    ಹಳೆ ಬೇರು
    ಮೂಡಿರಲು ಮರ ಸೊಬಗು ...

    ಏಕಮಂದಿ ಸಿಬ್ಬಂದಿ ಇಲ್ಲಿಂದ ಅಲ್ಲಿಂದ ವರ್ಗವಾಗಿ ಹೋಗುತ್ತಿದ್ದಾರೆ ಅಂತ ಎಲ್ಲೋ ಯಾರಿಂದಲೋ ಕೇಳಿದ ಹಾಗಿತ್ತು - ಅದು ನಿಜವಾ?

    ಹಾಗಿದ್ರೆ ಇನ್ಮೇಲೆ ಬೊ-ರ ಸಂಚಿಕೆ ಬಿಡುಗಡೆ ಆಗೋಲ್ವಾ? ನಮ್ಮ ಮೇಲೆ ಕೋಪಾನಾ?

    ಎಲ್ಲೂ ಹೋಗಲ್ಲ
    ಇಲ್ಲೇ ಬರೆವೆನಲ್ಲ
    ಎಂದಿಗು ನೀವು
    ಬಾಗಿಲು ಮುಚ್ಚಿ ಹೋಗಬೇಡಿರಲ್ಲಾ!!!

    ಪ್ರತ್ಯುತ್ತರಅಳಿಸಿ
  3. I really liked ur post, thanks for sharing. Keep writing. I discovered a good site for bloggers check out this www.blogadda.com, you can submit your blog there, you can get more auidence.

    ಪ್ರತ್ಯುತ್ತರಅಳಿಸಿ
  4. ಸುಧೀಂದ್ರರೇ,

    ನಿಮ್ಮ ದಿನಚರಿಯ ಕಡತಗಳು ಸಿಕ್ಕಿದ್ದು ತಡವಾಗಿಬಿಟ್ಟಿತು. ಈಗಾಗಲೇ ಕತ್ತೆಗಳಿಗೆ ಮತ್ತೆ ಬೇಡಿಕೆ ಬಂದಿದ್ದು, ಹೊಸ ಸರಕಾರ ರಚನೆಗೆ ವೇದಿಕೆ ಸಿದ್ಧವಾಗುತ್ತಿದೆ.

    ಆದುದರಿಂದ ಖತಮ್ ಎಂಬುದು to be ಕಂಟಿ-nude ಅಂತ ಆದಬೇಕಿದೆ.

    ಪ್ರತ್ಯುತ್ತರಅಳಿಸಿ
  5. ಶ್ರೀನಿವಾಸರೇ,

    ಹಲವು ದಿನಗಳಿಂದ ತಲೆ ಮರೆಸಿಕೊಂಡು ಮತ್ತೆ ಮತ್ತೆ ತಲೆ ತೋರಿಸಿ ಹೋಗುತ್ತಿದ್ದೀರಿ... ಈಗ ಪತ್ತೆಯಾಗಿರುವ ನಿಮ್ಮ ಕಾರ್ಯ ತಂತ್ರವೇನು ಅಂತ ಹೇಳುವಂಥವರಾಗಿ.

    ಅದಿರಲಿ, ವರ್ಗಾವಣೆ ಬಗ್ಗೆ ನೀವು ಕೇಳಲೇಬೇಕಿಲ್ಲ. ಯಾಕಂದ್ರೆ ನಮ್ಮ ಬ್ಯುರೋದ ಸಮಸ್ತ ಸಿಬ್ಬಂದಿಗಳೂ ಈಗಾಗಲೇ ವಿಧಾನಸೌಧಕ್ಕೆ ವರ್ಗವಾಗುತ್ತಿದ್ದಾರೆ. ಹಾಗಾಗಿ ಈ ಬಾರಿ ಕತ್ತೆಗಳ ಜಾತ್ರೆ ಭರ್ಜರಿಯಾಗಲಿದೆ.

    ಪ್ರತ್ಯುತ್ತರಅಳಿಸಿ
  6. ಅರೆ, ಇದ್ಯಾರು ಕಿರಾಣಿ ಅಂಗಡಿಯೋರು,,,,?

    ಪ್ರತ್ಯುತ್ತರಅಳಿಸಿ
  7. Search in kannada by typing in kannada.

    http://www.yanthram.com/kn/

    Add kannada search to your blog with onestep.

    http://kannadayanthram.blogspot.com

    Add Kannda Search to your iGoogle page.

    http://www.google.com/ig/adde?hl=en&moduleurl=http://hosting.gmodules.com/ig/gadgets/file/112207795736904815567/kannada-yanthram.xml&source=imag

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D