(ಬೊಗಳೂರು ನಾಟಕ ಮಂಡಳಿ ಬ್ಯುರೋದಿಂದ)
ಬೊಗಳೂರು, ಅ.12- ರಾಜ್ಯ ನಾಟಕರಂಗದಲ್ಲಿ ಇದೀಗ ನಡೆಯುತ್ತಿರುವ ನಾಟಕೀಯ ದೃಶ್ಯಾವಳಿಗಳನ್ನು ಆನಿಮೇಶನ್ ಸೀರೀಸ್‌ನಲ್ಲಿ ಪ್ರಕಟಿಸಲು ಕೇಂದ್ರೀಯ ನಾಟಕ ಕಂಪನಿ ನಿರ್ಧರಿಸಿದೆ.ರಾಜ್ಯದಲ್ಲಿ ಕುದುರೆಗಳು ಸಾಕಷ್ಟಿವೆ. ಅವುಗಳ ಭರ್ಜರಿ ಮಾರಾಟವಾಗಬೇಕಿದೆ. ಕೆಲವು ಕತ್ತೆಗಳು ಕೂಡ ಕುದುರೆ ರೂಪದಲ್ಲಿ ಕಾರ್ಯಾಚರಿಸುತ್ತಿರುತ್ತವೆ. ಆದರೂ ಈ ಎಲ್ಲಾ ಕುದುರೆಗಳ ವ್ಯಾಪಾರಕ್ಕೆ ಅನುಕೂಲವಾಗುವಂತೆ ಈ ಆನಿಮೇಶನ್ ಸೀರೀಸ್ ಪ್ರಕಟಿಸಲಾಗುತ್ತದೆ ಎಂದು ಕಾಂಗ್ರೆಸ್ ಕೃಪಾಪೋಷಿತ ಕೇಂದ್ರೀಯ ನಾಟಕ ಕಂಪನಿ ಯುಪಿಎ ತಿಳಿಸಿದೆ.
ಈ ಕುದುರೆ ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರುನಾಟಕದ ನಾಟಕ ಕಂಪನಿಗಳ ನಾಟಕಗಳನ್ನು Suspended Animation ಸರಣಿಯಲ್ಲಿ ಪ್ರಕಟಿಸಲಾಗುವುದು ಎಂದು ಏನೂ ಬಲ್ಲದ ಮೂಲಗಳು ಬೊಗಳೆ ರಗಳೆಗೆ ತಿಳಿಸಿವೆ.
ಅಸತ್ಯಾನ್ವೇಷಿಯವರೆ,
ReplyDeleteಈ animation ದೃಶ್ಯಾವಳಿಯ ನಿರ್ದೇಶಕರು ದಾರು?, ಸ್ಕ್ರಿಪ್ಟ್ ರೈಟರ್ ದಾರು? ಹಾಗು ಕುದುರೆಗಳಂತೆ ಸೋಗು ಹಾಕುತ್ತಿರುವ ಕತ್ತೆಗಳು ದಾರು? ವಿವರಿಸುವಿರಾ?
ಸುಧೀಂದ್ರರೇ,
ReplyDeleteನಿಮ್ಮ ಪ್ರಶ್ನಾವಳಿಗೆ ಉತ್ತರ ಹೇಳದಿದ್ದರೆ ತಲೆ ಸಾವಿರ ಹೋಳಾದೀತು ಅಂತ ಬೇತಾಳರು ಎಚ್ಚರಿಸಿದ ಪರಿಣಾಮವಾಗಿ ಹೇಳಲೇಬೇಕಾಗುತ್ತದೆ.
ನಿರ್ದೇಶಕರು nausia ಗಾಂಧಿ, ಸ್ಕ್ರಿಪ್ಟ್‌ರೈಟರು ಮಲ್ಲಿಕೆಗೆ ಅರ್ಜಿ ಹಾಕುವ ಕರ್ರಗೆ ಸಾಹೇಬರು, ಹಾಗೂ ಕತ್ತೆಗಳ ಹೆಸರು ಹೇಳಲು ನಾಚಿಕೆಯಾಗುತ್ತದೆ. ನೀವೇ gress ಮಾಡಿ ಕಾಂ-ಗ್ರಾಟ್ಸ್ ಹೇಳಬಹುದು!
Post a Comment
ಏನಾದ್ರೂ ಹೇಳ್ರಪಾ :-D