ಬೊಗಳೆ ರಗಳೆ ತಂಡಕ್ಕೆ ಅತ್ಯುತ್ತಮ ಒದರಿಗಾರಿಕೆ ಎಂಬ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಇದಕ್ಕೆ ಕಾರಣ, ಅದು ಪ್ರಕಟಿಸಿರುವ "ಪಂದ್ಯವೇ ಡಿಕ್ಲೇರ್" ಎಂಬ ಅತ್ಯುತ್ತಮ ತನಿಖಾ ವರದಿ. ಈಗಾಗಲೇ ಬೊಗಳೆ ಬಿಟ್ಟದ್ದೆಲ್ಲಾ ನಿಜವಾಗತೊಡಗಿರುವುದರಿಂದ ತೀವ್ರವಾಗಿ ಕಳವಳಗೊಂಡಿರುವ ಬೊಗಳೆ ಬ್ಯುರೋ, ಎಲ್ಲಾ ಬಿಟ್ಟವ ದೇಶಕ್ಕೆ ದೊಡ್ಡವ ಎಂಬ ಮಾತಿಗೆ ಬದ್ಧವಾಗಿ, ಎಲ್ಲಾ ಬಿಟ್ಟು ಬಿಡಲು ತೀರ್ಮಾನಿಸುವ ಯೋಚನೆ ಮಾಡುತ್ತಿದೆ ಎಂದು ನಂಬಲನರ್ಹ ಮೂಲಗಳು ತಿಳಿಸಿವೆ.
ಇದು ಬೊಗಳೆಯ ಭವಿಷ್ಯವಾಣಿ ಬ್ಯುರೋಗೆ ಸಂದ ಅಗೌರವ ಎಂದು ಸೊಂಪಾದ ಕರು ತಿಳಿಸಿದೆ.
Anveshi
ಕನ್ನಡವೆಂದರೆ ಪಂಚ ಪ್ರಾಣ. ಈ ಬೊಗಳೆಯಲ್ಲಿರುವುದೆಲ್ಲವೂ ಅಸತ್ಯ ಮತ್ತು ಸತ್ಯಕ್ಕೆ ಹತ್ತಿರವಾದರೆ ಯಾರೂ ಜವಾಬ್ದಾರರಲ್ಲ ಎಂಬುದೇ ಧ್ಯೇಯ ವಾಕ್ಯ.
"ಸುಳ್ಳು ನಮ್ಮಲಿಲ್ಲವಯ್ಯಾ, ಸುಳ್ಳೇ ನಮ್ಮನೆ ದೇವರು", ಎಂದು ಘೋಷಿಸಿದ ನಿಮ್ಮ ಭವಿಷ್ಯವಾಣಿಗಳನ್ನೇ ಸತ್ಯ ಮಾಡಿಬಿಟ್ಟ ಅರಾಜಕಾರಣಿಗಳ ಕರಾಮತ್ತು ಮೆಚ್ಚುವಂಥಾದ್ದಲ್ಲವೇ, ಸೊಂಪಾದ ಕರುವೆ?
ReplyDeleteವದಿಯೋಗೌಡರು kodatara ante I prashastina?
ReplyDeletevadariddu chennagide
ReplyDeleteಸುಧೀಂದ್ರರೆ,
ReplyDeleteನೀವು ಅರಾಜಕಾರಣಿಗಳನ್ನು ಬೆಂಬಲಿಸುತ್ತಿರುವುದು ನೋಡಿ ನಮ್ಮ ಸೊಂಪಾಗಿ ಬೆಳೆದ ಕರು ತೀರಾ ಭಯಭೀತರಾಗಿದ್ದಾರೆ.
ಆದ ಕಾರಣ ಬೊಗಳೆಯ ಇಂದಿನ ವರದಿ ನೋಡಿ ಕೈಚಪ್ಪಾಳೆ ತಟ್ಟಿ ಕುಣಿಯದಂತೆ ನಿಮಗೆ ನಿರ್ದೇಶಿಸಲಾಗಿದೆ.
ಮಹಾಂತೇಶರೆ,
ReplyDeleteವದಿಯೋಗೌಡ್ರು ಪ್ರಶಸ್ತಿ ಕೊಡೋವರೆಗೂ ಕೈ ಮುಂದೆ ಮಾಡುತ್ತಾರೆ, ಆವಾಗ ನಾವೇ ಗಬಕ್ಕನೇ ಎಳೆದುಕೊಳ್ಳದಿದ್ದಲ್ಲಿ, ಬಿಜೆಪಿಗಾದ ಗತಿಯೇ ಆಗುವುದು ಖಂಡಿತ.
ದಿನೇಶ್ ಅವರೆ, ಸ್ವಾಗತ.
ReplyDeleteಒದರಿದ್ದು ಚೆನ್ನಾಗಿದೆ ಅಂತ ನೀವು ಮುಖಕ್ಕೆ ಮಸಿ ಬಳಿದಂತೆ ಹೇಳಿಬಿಟ್ಟಿದ್ದೀರಿ. ಅದಕ್ಕೆ ಧನ್ಯವಾದ ನೀಡದಿದ್ದರೆ ಹೇಗೆ!!!
ಅವಾರ್ಡ್ ಸಿಕ್ಕಿದ್ದು ಬೊಗಳೆ ಆಗಿರಲೂಬಹುದು ಅದು ಬೇರೆ ವಿಷಯ... ಅಂದ ಹಾಗೆ ಅವಾರ್ಡ್ ಸಿಕ್ಕಿತೆಂದು ಬೊಗಳೆ ಬಿಡುವುದನ್ನು ನಿಲ್ಲಿಸಿದರೆ ನೀವು ಮುಲ ತತ್ವವನ್ನು ಮರೆತಂತೆ..
ReplyDeleteಓ ಮನಸ-ವೀ ಮನಸಿನವರೆ,
ReplyDeleteಮತ್ತೆ ಮತ್ತೆ ಬೊಗಳೆ ಅಂತ ಹೇಳಿ ರೇಗಿಸುತ್ತಿರುವುದಕ್ಕೆ ಧನ್ಯವಾದ. ಅವಾರ್ಡ್ ಸಿಕ್ಕ ತಕ್ಷಣ ಬೊಗಳೆ ಬಿಡುವುದನ್ನು ನಿಲ್ಲಿಸಲು ನಾವೇನು ಟಿ-20 ಕಪ್ ಗೆದ್ದು ಕ್ರಿಕೆಟ್ ಮರೆತ ಭಾರತ ತಂಡದಂತೆ ಅಂತ ತಿಳಿದುಕೊಂಡಿರಾ????
Post a Comment
ಏನಾದ್ರೂ ಹೇಳ್ರಪಾ :-D