ಭಾರತ ತಂಡವು ಕಪ್ ಗೆದ್ದ ತಕ್ಷಣ ಟ್ವೆಂಟಿ20 ಕ್ರಿಕೆಟ್ ಕೂಟವೇ ಮುಗಿಯಿತು, ನಮ್ಮ ಕ್ರಿಕೆಟಿಗರೆಲ್ಲರೂ ಕೋಟಿ ಕೋಟಿ ಬಾಚಿಕೊಂಡು ಶ್ರೀಮಂತರಾಗಿಬಿಟ್ಟರು ಅಂತ ತಿಳಿದುಕೊಳ್ಳುವವರಿಗೆ ಒಂದು ಎಚ್ಚರಿಕೆ.

ಯಾವುದೇ ವಿದೇಶೀ ಮಾಧ್ಯಮಗಳ ಕಣ್ಣಿಗೆ ಬೀಳದೆ ಸೊರಗಿದ ಆಟವೊಂದು ನಾಳಿನ ಸಂಚಿಕೆಯಲ್ಲಿ ವಿಶೇಷ ವರದಿ ರೂಪದಲ್ಲಿ ಪ್ರಕಟವಾಗಲಿದೆ.

ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಬೇಡಿ. ಕಾದಿರಿಸಿದರೆ ಅವುಗಳೆಲ್ಲಾ ಹಾಳಾದಾವು. ಅದಕ್ಕಾಗಿ ಫ್ರೆಷ್ ಪ್ರತಿಗಳನ್ನು ಕೊಳ್ಳದೆಯೇ ಓದುವ ವಿದ್ಯೆಯನ್ನು ಕರಗತ ಮಾಡಿಕೊಳ್ಳಿ.

ನಾಳಿನ ಬೊಗಳೆ ಸಂಚಿಕೆ ನೋಡಿ.

2 Comments

ಏನಾದ್ರೂ ಹೇಳ್ರಪಾ :-D

  1. ನೀವು ವಾಚಕರನ್ನು ಈ ಥರಾ suspenseನಲ್ಲಿ ಇಟ್ಟರೆ, ಸಿಕ್ಕಾಪಟ್ಟೆ tension ಆಗಿ, ವಾಚಕ ಮಹಾಶಯರ heart beatಏ ನಿಂತು ಹೋಗಬಹುದು. (ಕೆಲವರಿಗಾದರೂ heart ಅನ್ನೋದಿದೆ!)
    ನೀವೀಗ ಪತ್ತೇದಾರಿ ಧಾರಾವಾಹಿಯ ಪೀಠಿಕಾ ಪ್ರಕರಣ ಬರೆದಂತೆ ಕಾಣುತ್ತದೆ.ನಿಮಗೆ Heart ಇದ್ದರೆ, ಬೇಗನೆ ರಹಸ್ಯವನ್ನು ಬಯಲು ಮಾಡಿರಿ,ಪತ್ತೇದಾರ ಅಸತ್ಯಾನ್ವೇಷಿಗಳೆ!

    ReplyDelete
  2. ಸುಧೀಂದ್ರರೇ,

    ನಾವು ಬೊಗಳೆ ನೋಡಿ ಉಗುಳುವರನ್ನು Fenceನಲ್ಲಿ ಇರಿಸುವುದಿಲ್ಲ, ಖಂಡಿತವಾಗಿಯೂ ಒಂದಲ್ಲ ಒಂದು ದಿನ ಒದರಿಬಿಡುತ್ತೇವೆ ಎಂಬ ತುಂಬು ಭರವಸೆ ನಮ್ಮದು.

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post