ಬೊಗಳೆ ರಗಳೆ

header ads

ಬಿ.ಪಿ.ಒ., ಕೆ.ಪಿ.ಒ. ಬಳಿಕ... ವಿ.ಪಿ.ಒ!!!

(ಬೊಗಳೂರು ಸಂ-ಶೋಧನೆ ಬ್ಯುರೋದಿಂದ)
ಬೊಗಳೂರು, ಆ.7- ಬಿ.ಪಿ.ಒ., ಕೆ.ಪಿ.ಒ. ಬಳಿಕ ಮುಂದೆ ಯಾವ ಪಿ.ಒ. ಎಂದು ನೆಟ್‌ನೋಟಿಗರು ತಮ್ಮ ಬೊಗಳೆಯಲ್ಲಿ ಪ್ರಶ್ನಿಸಿದ್ದರಿಂದ ತೀವ್ರ ಪ್ರೇರಣೆ ಪಡೆದುಕೊಂಡಿರುವ ಬೊಗಳೆ ಬ್ಯುರೋ, ಈ ಕುರಿತು ಸಂಶೋಧನೆ ಮಾಡಬೇಕೆಂದು ಯೋಚಿಸಿತು.

ಆದರೆ, ಎಲ್ಲಾ ತಿಳಿದಾಗ, ಛೆ! ಇದಕ್ಕಾಗಿ ಇಷ್ಟೊಂದು ಯೋಚನೆ ಮಾಡಬೇಕಿತ್ತೇ? ಸಂಶೋಧನೆಯ ಅಗತ್ಯವಿತ್ತೇ ಎಂದು ಕೈಕೈ ಹಿಸುಕಿಕೊಳ್ಳುವಂತಾಗಿದ್ದು, ನಮ್ಮ ಬ್ಯುರೋಗೆ ಹೆಮ್ಮೆಯ ಸಂಗತಿ ಎಂಬುದನ್ನು ಸಂತಾಪಕರು ತಿಳಿಸಿದ್ದಾರೆ.

ಇತ್ತೀಚೆಗೆ ಕನ್ನಡ ಟಿವಿ ಧಾರಾವಾಹಿಗಳಲ್ಲಿ ಮುಗಿಯದಷ್ಟು "ಮೆಗಾ" ಆಗಿ ಪ್ರವಹಿಸುತ್ತಿರುವ ಕಥಾನಕಗಳೇ ಹೆಚ್ಚುತ್ತಿದ್ದು, ಅನೇಕತಾ ಕಪೂರರು ಅನೇಕಾನೇಕ ಕಥಾನಕಗಳನ್ನು ಓದುಗರಿಗೆ ನೀಡಲು ಇಚ್ಛಿಸುತ್ತಿದ್ದರೂ, ಅನೇಕತೆಯಲ್ಲಿ ಏಕತೆ ಎಂಬಂತೆ ಕಥಾ ಹಂದರವೆಲ್ಲವೂ ಸಾಮಾನ್ಯವಾಗಿ ಒಂದೇ ಹೂವಿನ ಸುತ್ತ ದುಂಬಿಯಂತೆ ಸುತ್ತುತ್ತಿರುತ್ತದೆ.

ಅವುಗಳಲ್ಲಿ, ಇಬ್ಬರು ಹೆಂಡಿರ ನಡುವೆ ಜೀವನ ಸಾಗಿಸುವುದು ಹೇಗೆ, ಮದುವೆಯಾದ ಮೇಲೂ ಲವ್ ಮಾಡುವುದು ಹೇಗೆ, ಮತ್ತೊಬ್ಬರ ಸಂಸಾರ ಒಡೆಯುವುದು ಹೇಗೆ, ಜಗಳ ಮಾಡುವುದು ಹೇಗೆ, ಅಳುವುದು ಹೇಗೆ, ಮತ್ತೊಬ್ಬರಿಗೆ "ತಕ್ಕ" ಪಾಠ ಕಲಿಸುವುದು ಹೇಗೆ, ಜೀವನನ್ನು ನರಕದಂತೆ ಅನುಭವಿಸುವುದು ಹೇಗೆ, ಮನಸ್ಸು ಕೆಡಿಸಿಕೊಂಡು ಕೂರುವುದು ಹೇಗೆ, ಇನ್ನೊಬ್ಬರ ಭಾವನೆಗಳೊಂದಿಗೆ ಆಟವಾಡುವುದು ಹೇಗೆ ಎಂಬಿತ್ಯಾದಿ ಅಮೂಲ್ಯ ಮಾಹಿತಿಪೂರ್ಣ ಸಂಗತಿಗಳು ತುಂಬಿಕೊಂಡಿರುವುದರಿಂದ ಇತ್ತೀಚೆಗೆ ಪ್ರೇಕ್ಷಕ ಮಹಾಪ್ರಭುಗಳು ದೂರ ಸರಿಯುತ್ತಿದ್ದಾರೆ.

ಹೀಗಾಗಿ ಇಂಥ ಟೀವಿ ಧಾರಾವಾಹಿಗಳಿಗೆ ವೀಕ್ಷಕರ ಕೊರತೆ ಕಂಡುಬರುತ್ತಿದ್ದು, ವ್ಯೂವರ್ಸ್ ಪ್ರೋಸೆಸ್ ಔಟ್‌ಸೋರ್ಸಿಂಗ್ (ವಿ.ಪಿ.ಒ.) ಗಾಗಿ ಈಗ ಮುಸಲ-ಧಾರಾವಾಹಿ ಕಂಪನಿಗಳು ಯೋಚಿಸುತ್ತಿವೆ ಎಂಬುದು ಹೊಳೆದದ್ದೇ ತಡ, ಬೊಗಳೆ ರಗಳೆ ಬ್ಯುರೋ ತನ್ನ ಸಂಶೋಧನೆಯನ್ನು ನಿಲ್ಲಿಸಿ, ತಕ್ಷಣವೇ ಲೈಫ್-ಬಾಯ್ ಸೋಪ್ ಹಾಕಿ ಕೈ ತೊಳೆದುಕೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಅಯ್ಯೋ ಬೊ.ಪಂ.ಅವರಿಗೆ ನನ್ನ ಪುನರಾಗಮನದ ನಮಸ್ಕಾರ... ಈಗ ಇಷ್ಟಕ್ಕೇ ಕಾಮೆಂಟು ಬಿಟ್ಟುಹೋಗ್ತೇನೆ. ಮತ್ತೆ ಹುಣ್ಣಿಮೆ ಅಮಾಸ್ಯೆಗೆ ಬರುತ್ತೇನೆ. ಯಾಕೆಂದ್ರೇ ದೆವ್ವ ಪಿಶಾಚಿಗಳಿಗೆ ಹುಣ್ಣಿಮೆ ಅಮಾವಾಸ್ಯೆಗಳಲ್ಲಿ ಚೆನ್ನಾಗಿ ಓಡಾಡ್ತವಂತೆ... ನನ್ನನ್ನ ಹುಡುಕಬೇಡಿ.... ನನ್ನ "ಕನ್ನಡ ಸಾರಥಿ" ಮನೆಯಲ್ಲೂ ನಾನು ಸಿಕ್ಕೋದಿಲ್ಲ.

    ಪ್ರತ್ಯುತ್ತರಅಳಿಸಿ
  2. ಪಂಡಿತರು ಅಂತ ಕ(ಕೆ)ರೆಯೋರು ಯಾರೂ ಇಲ್ಲದೆ ತುಂಬಾ ಬೋರಾಗಿತ್ತು.... ಆದರೆ ಮರಳಿ ಪ್ರತ್ಯಕ್ಷವಾಗಿರುವ ಕನ್ನಡ ಸಾರಥಿಯವರು ಈಗ ಇಂಗ್ಲೀಷು ಸಾರಥಿಯಾಗಿದ್ದೇಕೆ? ಎಂಬುದು ನಮ್ಮ ಇಲ್ಲದ ತಲೆಗೆ ಹೊಳೆಯದ ವಿಚಾರ..

    ಪ್ರತ್ಯುತ್ತರಅಳಿಸಿ
  3. ಪಿ.ಪಿ.ಓ (ಪಾಲಿಟಿಕಲ್ ಹೊರಗುತ್ತಿಗೆ) ಇದೆಯಲ್ಲ, ಮಾರಾಯ್ರೆ! ಇದು ನಮಗೆ ತುಂಬಾ ಲಾಭದಾಯಕ ಬಿಜಿನೆಸ್ಸು.
    ಯುರೋಪ, ಅಮೇರಿಕಾಗಳಲ್ಲಿ ನಡೆಯುವ ಚುನಾವಣೆಗಳಿಗೆ ನಮ್ಮ ಆಲೂ ಪರಸಾದ್ ಅಥವಾ ವೇದೆಗೌಡರಂತಹ ಘಟಾನುಘಟಿಗಳಿಗೆ ಹೊರಗುತ್ತಿಗೆ ಕೊಟ್ಟರೆ, ಅಲ್ಲಿಯ ರಾಜಕೀಯವು ಪಾತಾಳ ಕಾಣುವದು ಗ್ಯಾರಂಟಿ. ಆದರೆ
    ಬೊಗಳೆ ಪತ್ರಿಕೆಯಲ್ಲಿ ವೇದೆಗೌಡರಿಗೆ ಸಿಗುವ ಅಪಪ್ರಚಾರದಿಂದ ಅಸೂಯೆಗೊಂಡ ಒಬ್ಬ ಓಡುಗ ಮಹಾಶಯನು ಉಳಿದ ಜಾರಕಾರಣಿಗಳಿಗೂ ಅಷ್ಟೇ ಅವಮರ್ಯಾದೆ ಕೊಡಿ ಎಂದು ನಿಮ್ಮನ್ನು ಒತ್ತಾಯಿಸುವ ಪತ್ರ ಬರೆದದ್ದರಲ್ಲಿ ನನಗೇನೋ ಕರ್ಮಸಿಂಗರ ‘ಕೈ’ವಾಡ ಕಾಣ್ತಾ ಇದೆ, ಮಾರಾಯ್ರೆ.
    (ವೇದೆಗೌಡರ ಕುತಂತ್ರವನ್ನು ಅರಿಯುವದು ಅವರ ಡಬಲಾಂಗಿಗೆ ಮಾತ್ರ ಸಾಧ್ಯ ಅನ್ನೋದು ನಿಮಗೆ ಗೊತ್ತೊ? ವೇದೆಗೌಡರು ಒಂದು ಚುನಾವಣೆ ಭಾಷಣದಲ್ಲಿ “ನಾನು ಮುಂದಿನ ಜನ್ಮದಲ್ಲಿ ‘ತುರುಕ’ನಾಗಿ ಹುಟ್ಟುತ್ತೇನೆ” ಅಂತ ತಮ್ಮ ಯೋಜನೆಯನ್ನು ಘೋಷಿಸಿದಾಗ, ಅವರ ಡಬಲಾಂಗಿ “ನಿಮಗೆ ಮುಂದಿನ ಜನ್ಮದಲ್ಲಿ ನಾಲ್ಕು ಜನ ಡಬಲಾಂಗಿಯರು ಬೇಕಾಗಿದ್ದಾರೆಯೆ? ಇಂತಹ ಕುತಂತ್ರವನ್ನು ಬಿಡಿ” ಅಂತ ವೇದೆಗೌಡರ ಮಾನವನ್ನು ಬತ್ತಲೆ ಮಾಡಿದ್ದು ನಿಮಗೆ ಗೊತ್ತೊ?)

    ಪ್ರತ್ಯುತ್ತರಅಳಿಸಿ
  4. ಸುಧೀಂದ್ರರೆ,

    ನೀವು ಪಾತಾಳ ಲೋಕಕ್ಕೆ ದಾರಿ ತೋರಿಸಿ ನಮ್ಮ ಕಣ್ಣು ತೆರೆಸಿದ್ದೀರಿ.

    ಅದರಲಿ, ಕರ್ಮಸಿಂಗರಿಗೂ ಸೂಕ್ತ ಅವಮರ್ಯಾದೆ ನೀಡಲಾಗುತ್ತದೆ ಎಂದು ಶ್ವಾಸಬಿಟ್ಟು ಆಶ್ವಾಸನೆ ನೀಡುತ್ತದ್ದೇವೆ.

    ಆದರೆ ಡಬಲಾಂಗಿ ವಿಷಯ ಮಾತ್ರ.... ಛೆ ಛೆ ಎಂತ ಸನ್-ಮಾನ!!!!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D