ಎಲ್ಲೆಲ್ಲಿಂದಲೋ ಬಂದು
ಒಂದೆರಡು ಅಣಿಮುತ್ತುದುರಿಸಿ
ಅಪರಿಚಿತಾಗಿದ್ದುಕೊಂಡೇ
ಸನ್ಮಿತ್ರರಾಗಿಬಿಟ್ಟಿರುವ,
ಗೆಳೆತನದ ಸುಳಿಗಾಳಿಯಿಂದ
ಜೀವನದ ಬಿಸಿ ತಂಪಾಗಿಸುವ
ಒಲುಮ-ನಲುಮೆಗೆ ಹೇತುವಾದ
ಆತ್ಮೀಯರಿಗೆಲ್ಲರಿಗೂ
ಸ್ನೇಹ ದಿನದ ಶುಭಾಶಯಗಳು
++++++++

ಸೂಚನೆ:
ಬೊಗಳೆ ರಗಳೆ ಬ್ಯುರೋದ ಸಂಪಾದಕರು ಹಲವು ದಿನಗಳಿಂದ ಹಗಲು ರಾತ್ರಿ ಕಾರ್ಯಾಚರಿಸುತ್ತಾ, ಸಂಪೂರ್ಣ ಸಂಪಾದನೆಯಲ್ಲೇ ತೊಡಗಿದ ಕಾರಣದಿಂದಾಗಿ ಅನಿಯತಕಾಲಿಕ ಪತ್ರಿಯ ಪ್ರಕಟಣೆಯಲ್ಲಿ ವಿಳಂಬ, ಅಡಚಣೆ, ಅಡೆತಡೆಗಳು ಸಂಭವಿಸಿವೆ. ಹಾಗಾಗಿ ಬೇರೆ ಪತ್ರಿಕೆಗಳಲ್ಲಿ ಯಾರು ಕೂಡ "ಬೊಗಳೂರಿನಿಂದ ಸಂತಾಪಕರು ಪರಾರಿ ಅಥವಾ ನಾಪತ್ತೆ" ಎಂಬ ಸುದ್ದಿ ಪ್ರಕಟಿಸಬಾರದಾಗಿ ಕೋರಲಾಗಿದೆ. ತಲೆ ಮರೆಸಿಕೊಳ್ಳುತ್ತಿರುವುದಕ್ಕೆ ರಾಷ್ಟ್ರಪತಿ ಚುನಾವಣೆಯಾಗಲೀ, ಮುಂದೆ ಬರುವ ಉಪರಾಷ್ಟ್ರಪತಿ ಚುನಾವಣೆಯಾಗಲಿ ಕಾರಣ ಅಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.... - ಸಂತಾಪಕ.

4 Comments

ಏನಾದ್ರೂ ಹೇಳ್ರಪಾ :-D

 1. ನಿಮಗೂ ಶುಭಾಷಯಗಳು ಅನ್ವೇಷಿಗಳೇ!

  ReplyDelete
 2. ಗೆಳೆಯಾ,
  ಯಾವುದೆ ಕಾರಣಕ್ಕೂ ತಲೆ ತಪ್ಪಿಸಿಕೊಳ್ಳಬೇಡ. (ನಿನ್ನದು ಭಾಳಾ ಚುರುಕಾದ ತಲೆ!)
  ಸ್ನೇಹದ ಶುಭಾಶಯಗಳು.

  ReplyDelete
 3. ಸುಶ್ರುತರೆ,
  ನಿಮಗೆ ಧನ್ಯವಾದ ಮತ್ತು ನೀವು ನಮಗೆಲ್ಲ ಊಟ ಹಾಕಿಸುವ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಪಾತರಗಿತ್ತಿ ಬೊಗಳೆಯಲ್ಲಿ ಶ್ರೀನಿಧಿ ಅವರು ಬಹಿರಂಗಪಡಿಸಿದ್ದರಿಂದ ಮತ್ತಷ್ಟು ಸಂತೋಷವಾಗಿದೆ... :)

  ReplyDelete
 4. ಸುಧೀಂದ್ರರೆ,

  ನಮ್ಮ ಬುರುಡೆ ಮೇಲೆ ಕಣ್ಣಿಟ್ಟಿದ್ದೀರಿ... ಜಾಗ್ರತೆ... ತೆರೆದು ನೋಡಿದರೆ.... ಏನೂ ಇಲ್ಲ! ಆ ರೀತಿಯಲ್ಲಿ ಅದನ್ನು ಭದ್ರವಾಗಿ ಕಾಪಾಡಿಕೊಂಡಿದ್ದೇವೆ...!

  ನಿಮಗೂ ಸ್ನೇಹಪೂರ್ವಕ ಶುಭಾಶಯಗಳು.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post