(ಬೊಗಳೂರು ಕಂಟ್ರೋಲ್ ಬ್ಯುರೋದಿಂದ)
ಬೊಗಳೂರು, ಏ.28- ಮನುಷ್ಯರು ತಿನ್ನುವ ಆಹಾರ ತಯಾರಿಸಿ ಮಾರಾಟ ಮಾಡಲು ಹೋಗಿ ಕೈಸುಟ್ಟುಕೊಂಡಿರುವ ವ್ಯಾಕ್ ವ್ಯಾಕ್‌ಡೊನಾಲ್ಡ್ ಕಂಪನಿಯು ಹೊಸ ಸಾಹಸಕ್ಕೆ ಕೈ ಹಚ್ಚಿದೆ.

ಲೈಂಗಿಕ ಶಿಕ್ಷಣವನ್ನು ಪಠ್ಯದಲ್ಲಿ ಅಳವಡಿಸಬೇಕೇ ಬೇಡವೇ ಎಂಬ ಕುರಿತು hot ಚರ್ಚೆ ನಡೆಯತೊಡಗಿರುವಂತೆಯೇ ದಿಢೀರನೇ ಎಚ್ಚೆತ್ತುಕೊಂಡಿರುವ ವ್ಯಾಕ್ ವ್ಯಾಕ್ಡೊನಾಲ್ಡ್, ಬಾಲಕಿಯರಿಗೆ ಆಹಾರದಲ್ಲಿ ಕಾಂಡೋಮ್ ವಿತರಿಸತೊಡಗಿರುವುದು ಹಲವರ ಹುಬ್ಬೇರಿಸತೊಡಗಿದೆ.

ತಮ್ಮ ಕಂಪನಿ ಆಹಾರ ಪದಾರ್ಥಗಳ ವಿರುದ್ಧ ತೀವ್ರ ಆಕ್ಷೇಪಗಳು ಕೇಳಿ ಬರುತ್ತಿವೆ. ನಾವು ಡಾಗ್ ಬಿಸ್ಕಿಟುಗಳನ್ನು ಮಾತ್ರವೇ ಮಾರಾಟ ಮಾಡುತ್ತೇವೆ ಎಂಬ ಕುರಿತು ಊಹಾಪೋಹಗಳು ಎದ್ದಿವೆ. ಮಾತ್ರವಲ್ಲದೆ ನಾವು ತಯಾರಿಸಿಕೊಡುವ ಹಾಟ್ ಡಾಗ್ ಕೂಡ ಬಿಸಿ ಬಿಸಿ ನಾಯಿ ಎಂಬರ್ಥದಲ್ಲಿ ಅಕ್ಷರಶಃ ತರ್ಜುಮೆಯಾಗಿ ಪ್ರಚಾರ ಪಡೆದುಕೊಳ್ಳುತ್ತಿದೆ. ಇದು ಅಕ್ಷಮ್ಯ ಅಪರಾಧ ಎಂದು ವ್ಯಾಕ್‌ಡೊನಾಲ್ಡ್ ತಿಳಿಸಿದೆ.

ದಯವಿಟ್ಟು ನಮ್ಮನ್ನು ನಂಬಿ. ಪ್ಲೀಸ್....ಪ್ಲೀಸ್... ನಾವು ಮನುಷ್ಯರು ತಿನ್ನುವಂತಹ ಪದಾರ್ಥಗಳನ್ನು ಮಾತ್ರವೇ ವಿತರಿಸುತ್ತೇವೆ. ಬೇಕಿದ್ದರೆ ಇದನ್ನು ನೀವು ಪರೀಕ್ಷಿಸಬಹುದು. ಒಂದು ತುಂಡು ಹಾಟ್ ಡಾಗನ್ನು ನಾಯಿಗೆ ಹಾಕಿ ನೋಡಿ, ಅದು ಸಾಯದಿದ್ದರೆ ಮತ್ತೆ ಕೇಳಿ ಎಂದಿರುವ ವ್ಯಾಕ್‌ಡೊನಾಲ್ಡ್, ಅದೇ ತುಂಡನ್ನು ಮನುಷ್ಯರು ತಿಂದರೆ ಏನೂ ಆಗುವುದಿಲ್ಲ. ಹಾಗಾಗಿ ನಮ್ಮದು ಮನುಷ್ಯರು ಮಾತ್ರವೇ ತಿನ್ನಬಹುದಾದ ಪದಾರ್ಥವಾಗಿರುತ್ತದೆ ಎಂದು ಸ್ಪಷ್ಟೀಕರಣ ನೀಡಿದೆ.

ನಾವು ನೀಡಿದ ಆಹಾರ ಸೇವಿಸಿ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತದೆ ಎಂಬ ಭೀತಿ ಇದ್ದರೆ ಅದರ ನಿವಾರಣೆಗಾಗಿ ಇಂಥ ಕಾಂಡೋಮ್ ವಿತರಣಾ ಕಾರ್ಯಕ್ಕೆ ಕೈಹಚ್ಚಿದ್ದೇವೆ ಎಂದು ತಿಳಿಸಿರುವ ಅದು, ಇದನ್ನು ಸದ್ಯಕ್ಕೆ ಸಣ್ಣ ಮಕ್ಕಳಿಗೆ ಮಾತ್ರವೇ ವಿತರಿಸಲಾಗುತ್ತದೆ. ಆ ಮೇಲೆ ದೊಡ್ಡ ಮಕ್ಕಳಿಗೂ ವಿತರಿಸುವ ಯೋಜನೆ ಇದೆ ಎಂದು ತಿಳಿಸಿದೆ.

7 Comments

ಏನಾದ್ರೂ ಹೇಳ್ರಪಾ :-D

 1. ನಮ್ಮಲ್ಲಿ ಶಿಕ್ಷಣ ಕೊಡಬೇಕೇ ಬೇಡ್ವೇ ಅನ್ನೋ ಚರ್ಚೆ ಇನ್ನೂ ನಡಿತಿರುವಾಗ, ಅಲ್ಲಿ ಕಿವೀಸ್ ದೇಶದಲ್ಲಿ ಶಿಕ್ಷ್ಣಣವನ್ನು ಇನ್ನೂ ಒಂದು ಹಂತ ಮೇಲೆ(ಅಥವಾ ಕೆಳಗೆ) ತಗೊಂಡುಹೋಗಿ ವ್ಯಾಕ್ ಡೊನಾಲ್ಡ್ ನವರು
  ಚಿಕ್ಕ ಮಕ್ಕಳಿಗೆ ಈ ರೀತಿ ಜ್ಞಾನ ಹಂಚುವುದೇ !!

  ಭಾರತದಲ್ಲಿನ ವ್ಯಾಕ್ ಡೊನಾಲ್ಡಗಳ ಮುಂದಿನ ಪ್ಲಾನ್ ಎನಂತೆ ?

  ReplyDelete
 2. ಈ ಗೊಂದಲ ತಪ್ಪಿಸಲು ವ್ಯಾಕ್ ಡೊನಾಲ್ಡ ಹೊಸ ಅಪಾಯ ಹುಡುಕಿದ್ದಾರಂತೆ. ಬಾಲಕ/ಕಿಯರ ಪೊಟ್ಟಣದ ಮೇಲೆ A ಗುರುತನ್ನು ಹಾಗು ವಯಸ್ಕರ ಪೊಟ್ಟಣದ ಮೇಲೆ U ಗುರುತನ್ನು ಮುದ್ರಿಸುತ್ತಾರಂತೆ.

  ReplyDelete
 3. ಹಾಟ್ ಡಾಗ್ ಮತ್ತು ಕಾಂಡೋಮ್ ಅಂದ್ರೆ ಎರಡೂ ಒಂದೇನಾ? ಯಾಕೋ ಇಂದಿನ ವದರಿ ಓದ್ತಿದ್ರೆ ವ್ಯಾಕ್ ವ್ಯಾಕ್ ಎನ್ನುವಂತಾಗುತ್ತಿದೆ.

  ReplyDelete
 4. ಶಿವ್ ಅವರೆ,
  ಮುಂದಿನ ಪ್ಲಾನ್ ಬಗ್ಗೆ ಇಲ್ಲಿ ಹೇಳುವುದು ಸೂಕ್ತವಲ್ಲ ಎಂದು ನಮ್ಮಜ್ಜನ ಮುತ್ತಜ್ಜ ಹೇಳ್ತಾ ಇದ್ರು!

  ReplyDelete
 5. ಸುನಾಥರೆ,
  ನೀವು ಪತ್ತೆ ಹಚ್ಚಿದ ಅಸತ್ಯದಲ್ಲೂ ಒಂದಷ್ಟು ವ್ಯತ್ಯಾಸಗಳಾಗುತ್ತಿದ್ದು, A ಬದಲು U ಅಂತಲೂ, vice-versaವೂ ಆಗುತ್ತಿದೆಯಂತೆ.

  ReplyDelete
 6. ಶ್ರೀನಿವಾಸರೆ,
  ವ್ಯಾಕ್ ವ್ಯಾಕ್ ಮಾಡುವಾಗ ಒಂದಷ್ಟು ಮುಖ ಆಚೆ ತಿರುಗಿಸಿಬಿಡಿ!!!
  ಆದ್ರೆ ಹಾಟ್ ಡಾಗಿಗೆ ಕಾಂಡೋಂ .... ಅಂದಿದ್ದು ಏನೋ ಗೊಂದಲಕಾರಿಯಾಗಿದೆ...

  ReplyDelete
 7. ಇದರ ಬಗ್ಗೆ ತುಂಬಾ ಉತ್ಸಾಹ ಅನ್ಸುತ್ತೆ, ಎಲ್ಲರಿಗೂ ?
  -> ನವೀ
  http://www.kannadakannadi.blogspot.com/

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post