ಈ ಅವಧಿಯಲ್ಲಿ ಓದುಗರು ಸುಧಾರಿಸಿಕೊಳ್ಳಲು ಸೂಕ್ತ ಅವಕಾಶ ದೊರೆತಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ವಿಜ್ಞಾನಿಗಳು ಹರ್ಷಚಿತ್ತರಾಗಿ ಸೂಚಿಸಿದ್ದಾರೆ.
ಈ ಮಧ್ಯೆ, ಬೊಗಳೆ ರಗಳೆ ಬ್ಯುರೋಗೆ ರಜೆಯ ವಿಷಯ ತಿಳಿಯುತ್ತಿದ್ದಂತೆಯೇ, ವಿಶ್ವದಲ್ಲಿ ಬೆರಳಿನಲ್ಲಿ ಎಣಿಸಲು ಅಸಾಧ್ಯವಾದಷ್ಟು ಮಂದಿಯಿದ್ದರೂ ಬೊಗಳೆ ರಗಳೆ ಬ್ಯುರೋಗೆ ಅದಕ್ಕಿಂತಲೂ ಹೆಚ್ಚು (ಅಂದರೆ ಬೆರಳೆಣಿಕೆಗಿಂತ ಹತ್ತಿಪ್ಪತ್ತು ಕಡಿಮೆ!!) ಓದುಗರ ಬಳಗವಿರುವುದರಿಂದ ಅವರೆಲ್ಲರೂ ಅಪಾರ ಹರ್ಷ ವ್ಯಕ್ತಪಡಿಸಿದ್ದಾರೆ.
-----------------------
ಮನವಿ
ನಿಮ್ಮ ಬ್ಲಾಗು ಅಥವಾ ಮಿತ್ರರ ಬ್ಲಾಗು ಈ ಕೆಳಗಿರುವ ಕನ್ನಡ ಬ್ಲಾಗೋತ್ತಮರು ಪಟ್ಟಿಯಲ್ಲಿ ಇದೆಯೇ? ಇಲ್ಲವಾದಲ್ಲಿ, ಅದನ್ನು ಲಿಂಕಿಸುವ ಸಮ್ಮತಿಯೊಂದಿಗೆ ದಯವಿಟ್ಟು ಅದರ ಯುಆರ್ಎಲ್ ಮತ್ತು ಶೀರ್ಷಿಕೆ ಸಹಿತ asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿಬಿಡಲು ಕೋರಿಕೆ.
ಅನ್ವೇಷಿಗಳೇ,ನಿನ್ನೆ ನಾನು ಮಾಡಿದ ತಮಾಷೆಗೆ ಸಿಟ್ಟು ಮಾಡಿಕೊಂಡು ತಲೆಮರೆಸಿಕೊಂಡು ಹೋಗುತ್ತಿಲ್ಲ ತಾನೇ? ಹೋಗುವುದು ಹೋಗುತ್ತಿದ್ದೀರಿ,haage ಯುಗಾದಿ ಹಬ್ಬ ಮುಗಿಸಿಕೊಂಡು ಬನ್ನಿ.
ReplyDeleteಹೊಸ ಸಂವತ್ಸರದ ಮುಂಗಡ ಶುಭಾಶಯಗಳು ನಿಮಗೆ!
ಓಹೋ! ಹಬ್ಬಕ್ಕೆ " ಹೋಲ್ ಸೇಲ್ ಆಗಿ ಚಕ್ಕರ್ ಆ??"
ReplyDeleteಅನ್ವೇಷಿಗಳೆ,
ReplyDeleteಶ್ವಾನಗಳ ವಿರುದ್ಧ ಬರೀಬೇಡಿ ಅಂತ ಬಡ್ಕೊಂಡೆ. ಕೇಳಿದ್ರಾ?ಇದೆಲ್ಲಾ ಬೇಕಿತ್ತಾ ನಿಮಗೆ? ಈಗ ಅನುಭವಿಸಿ. ನೀವು ಎಷ್ಟು ದಿನ ಭೂಗತರಾಗಿರುವುದು? ಶುನಕ ರಕ್ಷಣಾ ಸಮಿತಿಯ ಹಿಟ್ ಲಿಸ್ಟಿನಲ್ಲಿದ್ದೀರಾ? ಇಲ್ಲ ವಾನರ ರಕ್ಷಣಾ ಸಮಿತಿಯ ಹಿಟ್ ಲಿಸ್ಟಿನಲ್ಲಿದ್ದೀರಾ? ನಿಮ್ಮ ಮಂಡೆಗೆ ಎಷ್ಟು ಬೆಲೆ ಘೋಷಿಸಿದ್ದಾರೆ?
ರಗಳೆಗೆ ಒಂದಿನಿತು ಬಿಡುಗಡೆ ದೊರೆತದ್ದರಿಂದ ಸಕಲ ರಗಳಾತೀತರು ಅತೀವ ಸಂತೋಷ ತೋರ್ಪಡಿಸಿದ್ದು ಈ ಸಂಬಂಧ ಈ ದಿನವನ್ನು ಅಂತರಾಷ್ಟ್ರೀಯ `ಬೊಗಳೆ ರಗಳೆ ರಹಿತ ದಿನ'ವನ್ನಾಗಿ ಆಚರಿಸುವಂತೆ ಮನವಿ ಮಾಡಲಾಗಿದೆ.
ReplyDeleteಈ ಮಧ್ಯೆ ನಾಯಿ ಬೊಗಳಿದರೆ ದೇವಲೋಕ ಹಾಳಾದೀತೇ ಎಂಬ ಗಾದೆಯನ್ನು ಸ್ವಲ್ಪ ವಿಸ್ತರಿಸಿ, ನಾಯಿ ಕಚ್ಚಿದರೆ ಮಾನವಲೋಕ ಹಾಳಾದೀತೇ ಎಂದು ಶ್ವಾನ ಪ್ರಿಯರು ಪ್ರಚಾರ ನೀಡುತ್ತಿದ್ದು ವಿಧಾನ ಸೌಧದ ಆಜಿಬಾಜಿನಲ್ಲಿ ಕಂಡು ಬರುತ್ತಿದೆ.
ಅಂದಹಾಗೆ,ರಜೆ ಹಾಕಲು ನಿಮಗೆ ಶ್ವಾನ ದಂತ ಪ್ರಹಾರ ಕಾರಣವಾಗಿಲ್ಲವೆಂದು ನಂಬುತ್ತೇವೆ.
ನೀವು ವಿಜ್ಞಾನಿಗಳ ಬಗ್ಗೆ ಮಾತ್ರ ಹೇಳಿದ್ದೇರೆಯೇ ಹೊರತು ನಮ್ಮಂತಹ ಅಜ್ಞಾನಿಗಳನ್ನು ಮರೆತಿದ್ದೀರಿ ಎಂದು ತಿಳಿಸಲು ನಮಗೂ ಸಂತೋಷವಾಗುತ್ತಿದೆ. ಬೊಗಳೆ ರಹಿತ ದಿನವನ್ನು ಡ್ರೈ ಡೇ ಎಂದು ಆಚರಿಸುವುದಾಗಿ ನಮ್ಮ ಬ್ಯುರೋದ ಕಾರು ಮಿಕರರು ಹೇಳುತ್ತಿದ್ದಾರೆ. ನಿಮ್ಮ ರಜೆಯ ದಿನಗಳು ಹರ್ಷಯುಕ್ತವಾಗಿರಲಿ ಎಂದು ಹಾರಿಸುವೆ.
ReplyDeleteನಿನ್ನೆ ಪ್ರಸ್ತಾಪಿಸಿದ ಮಂಗಗಳ ಮದುವೆಯ ವಿಷಯಕ್ಕೂ ಇವತ್ತು ಬೊಗಳೆ ಪಂಡಿತರು ಕಾಣೆಯಾಗಿರುವುದಕ್ಕೂ ಏನಾದ್ರೂ ಲಿಂಕ್ ಇದೆಯಾ ಅಂತ ಒಂದು small little silly doubt ನನಗೆ..
ReplyDeleteಇತ್ತೀಚೆಗೆ ಅನ್ವೇಷಿಗಳು ಸಿಕ್ಕಾಪಟೆ ರಜೆ ಹಾಕುತ್ತಿರುವುದು ಕಂಡುಬಂದಿದೆ. ಅವರೇನಾದರೂ ಹೆಣ್ಣು ನೋಡುತ್ತಿದ್ದಾರಾ ಎಂದು ಅನುಮಾನ. ಹಾಗೇನಾದರೂ ಆಗಿ, ಮದುವೆ-ಗಿದುವೆ ಆಗಿ, ಬ್ಯೂರೋದಲ್ಲಿ ಸದಸ್ಯರ ಸಂಖ್ಯೆ ಜಾಸ್ತಿ ಆಗಿ....... ಬ್ಯೂರೋನೇ ಸ್ವತಃ ಸುದ್ದಿಗೆ ಬರುವ ಸಾಧ್ಯತೆ ಇರುವುದರಿಂದ ಓದುಗರು ಅತ್ತ ಕಡೆ ಒಂದು ಕಣ್ಣಿಟ್ಟಿರಲು ಸೂಚಿಸಲಾಗಿದೆ.
ReplyDeleteಕಾಣೆಯಾಗುವವರು ತಮ್ಮ ಬಗ್ಗೆ ತಾವೆ ಪ್ರಕಟಿಸಿಕುಳ್ಳುತಿರುವುದು ಇದೇ ಮೊದಲಿರಬೇಕು.
ReplyDeleteಇಂತಿ
ಭೂತ
elli maya adri bogaLeyavarE?
ReplyDeletenimma blogigillade biko anta ide...
neevu mayavadakke karaNavenu?
maraLi baruvady yaavag?
ugaDi mugisi bega banni...
illa aMdre "kANeyagiddare" anno prakaTaNe koDabekagutte....
ಓದುಗರಿಗೆ ಹರ್ಷ ಎಂದು ಸುಳ್ಳು ಸುಳ್ಳೇ ಯಾಕೆ ಬೊಗಳೆ ಬಿಡುತ್ತಿದ್ದೀರಾ?
ReplyDeleteಮತ್ತೇನಾದ್ರೂ ಇಂದಿರೆಯನ್ನು ಹುಡುಕಿಕೊಂಡು ಆ ಊರಿಗೆ ಹೋದಿರಾ? ಶುನಕ, ಮರ್ಕಟರ ಸಹವಾಸ ಕಷ್ಟ ತಂದಿತಾ? ಭಾರತದಲ್ಲಿ ಬೇಸಗೆ, "ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ" ಅಂತ "ಹನಿ" ಹುಡುಕಲು ಹೊರಟಿರಾ? ಏನು ಕಥೆ? ಬೇಗ ಬನ್ನೀಪ್ಪ, ಇಲ್ಲಿ ಬೊಗಳೆ ಬಿಡಲು ಮತ್ಯಾರೂ ಇಲ್ಲ, ಎಲ್ಲ ಹರಿಶ್ಚಂದ್ರನ ಮೊಮ್ಮಕ್ಕಳು- contrast ಬೇಕು.
ReplyDeleteಬೊಗಳೆ ಬ್ಯೂರೋ ಸದಸ್ಯರಿಗೂ ಓದುಗರಿಗೂ ಯುಗಾದಿಯ ಶುಭಾಶಯಗಳು.
ReplyDeleteಅಸತ್ಯಿಗಳೇ,
ReplyDeleteಆಹಾ ! ಬ್ಲಾಗ್ ಲೋಕದಲ್ಲಿ ಎನು ಶಾಂತಿ ಎನು ನೆಮ್ಮದಿ..
ನಂತರ ತಿಳಿಯಿತು ತಾವು ರಜೆಯಲ್ಲಿ ಇದೀರಾ ಅಂತಾ..
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೆಲ್ಲಾ ಯುಗಾದಿ ಹಬ್ಬದ ಶುಭಾಶಯಗಳು.
ಶ್ರೀತ್ರೀ ಅವರೆ,
ReplyDeleteನಿಮ್ಮ ತಮಾಷೆ ಮಾತಿನಿಂದಲೇ ತಲೆಮರೆಸಿಕೊಂಡಿದ್ದು ಎಂಬ ಸತ್ಯವು ನಮಗೆ ಇಷ್ಟವಾಗುವುದಿಲ್ಲವಾದುದರಿಂದ ಅದನ್ನು ಇಲ್ಲಿ ಹೇಳುವುದಿಲ್ಲ !!!
ಯುಗಾದಿ ಶುಭಾಶಯಗಳು ನಿಮಗೂ. ಆದರೆ ನಿಮ್ಮದು ಮುಂಗಡ, ನಮ್ಮದು ಕಡ !
ಅನಾನಿಮಸ್ಗಿರಿಯವರೆ,
ಇದು ಒಮ್ಮೆಗೇ ಬಂದ ಚಕ್ಕರ್.... ಚೇತರಿಸಿಕೊಳ್ಳಲು ಬಹಳ ಕಾಲ ಬೇಕು!!!!
ಭಾಗವತರೆ,
ನಾವು ಶ್ವಾನದ ವಿರುದ್ಧ ಬರೆಯುವ ಮೊದಲೇ ನೀವು ಎಚ್ಚರಿಸಿಲ್ಲವಾದುದರಿಂದ ಎಲ್ಲಾ ರಾದ್ಧಾಂತಕ್ಕೆ ನೀವೇ ಕಾರಣ ಎಂದು ನಿಮ್ಮ ತಲೆಯ ಮೇಲೊಂದು ಗೂಬೆ ಇರಿಸುತ್ತಿದ್ದೇವೆ. ಜತನವಾಗಿ ಕಾಪಾಡಿಕೊಳ್ಳಿ. ವಾನರ ರಕ್ಷಣಾ ಸಮಿತಿಯೇ ಹಿಟ್ಟನ್ನೆಲ್ಲಾ ನಮ್ಮ ಮೂತಿಗೆ ಒರೆಸಿ, ನಮ್ಮ ದಪ್ಪಮಂಡೆಗೆ ಸಿಕ್ಕಾಪಟ್ಟೆ ದರ ಏರಿಸಿಬಿಟ್ಟಿದ್ದಾರೆ ಕಣ್ರೀ....!!
ಸುಪ್ರೀತರೆ,
ನಾವು ವಾಪಸ್ ಬಂದ ಬಳಿಕವೂ ರಗಳಾತೀತರು ಚೆನ್ನಾಗಿಯೇ ಇರುವುದರಿಂದ ಅವರ ಅನಾರೋಗ್ಯಕ್ಕೆ ನಾವು ಕಾರಣರಲ್ಲ ಎಂದು ತಿಳಿದು ಅಸಂತೋಷವಾಯಿತು.
ನಮ್ಮ ನಾಪತ್ತೆಗೆ ದಂತ ಭಗ್ನವಾಗಿದ್ದಂತೂ ಕಾರಣವಾಗಿರಬಹುದೇ ಎಂಬುದನ್ನು ತನಿಖೆ ಮಾಡಲಾಗುತ್ತಿದೆ.
ಶ್ರೀನಿವಾಸರೆ,
ನಿಮ್ಮ ಡ್ರೈ ಡೇ ಆಚರಣೆ ಸಂದರ್ಭದಲ್ಲಿ ಸಿಕ್ಕಾಪಟ್ಟೆ ದ್ರವಗಳು ಉಪದ್ರವಗಳಾಗಿ ಹರಿದು ಎಲ್ಲರೂ ಕೂಡ ಪ್ರವಾಹದಲ್ಲಿ ನಿಜಕ್ಕೂ "ತೇಲಾಡು"ತ್ತಾ ಇದ್ದರು ಎಂಬುದನ್ನು ತನಿಖೆ ಮಾಡಲಾಗಿದೆ.
ಶ್ರೀಲತಾ ಅವರೆ,
ಮಂಗಗಳ ಮದುವೆಗೆ ನಾವಂತೂ ಪೌರೋಹಿತ್ಯ ಮಾಡಿರಲಿಲ್ಲ ಎಂಬುದನ್ನು ಖಚಿತಪಡಿಸುತ್ತಿದ್ದೇವೆ. ಯಾಕೆಂದರೆ ಈ ಮಂಗಗಳು ಈಗಾಗಲೇ ಡೈವರ್ಸ್‌ಗೆ ಅರ್ಜಿ ಸಲ್ಲಿಸಿವೆಯಂತೆ.
ಆದರೆ ಮಂಗ ಮಂಗ ಮಂಗ ಅಂತ ಹತ್ತು ಹಲವಾರು ಬಾರಿ ಕರೆದಿದ್ದೇ ಬೊಗಳೆ ಪಂಡಿತರ ಕಾಣೆಗೆ ಕಾರಣವಾಗಿರಬಹುದೇ ಎಂಬುದು ಇನ್ನೂ ಖಚಿತವಾಗಿಲ್ಲ.
ಸುಶ್ರುತರೇ,
ಜನಸಂಖ್ಯಾ ಸ್ಫೋಟದ ಕುರಿತಾಗಿನ ನಿಮ್ಮ ಕಾಳಜಿ ನಮಗೆ ಅರ್ಥವಾಗುತ್ತದೆ. ಹೆಣ್ಣು ನೋಡುತ್ತಿರುವ ಬಗ್ಗೆ ನೀವು ಇತ್ತ ಕಡೆಯೇ ಕಣ್ಣು ಇಡಲು... ಅದು ಕೂಡ ಒಂದು ಕಣ್ಣು ಇಡಲು ಸೂಚಿಸಿರುವುದು ಭಯ ಹುಟ್ಟಿಸಿದೆ.
ಫ್ಯಾಂಟಮರೇ,
ಭೂತವೇಕೆ ಹೇಳದೆ ಕೇಳದೆ ದಿಢೀರ್ ನಾಪತ್ತೆಯಾಗಿದ್ದು ಎಂಬ ಬಗೆಗಿನ ನಮ್ಮ ಸಂಶಯ ಈಗ ದೂರವಾಯಿತು.
ಮಹಾಂತೇಶರೆ,
ನಿಮ್ಮ ಎಚ್ಚರಿಕೆ ಕೇಳಿ ಹೆದರಿ ಹೆದರಿ ಓಡಿ ಬಂದರೂ ತಡವಾಗಿಯೇಬಿಟ್ಟಿತು. ಯುಗಾದಿಯ ಬೆಲ್ಲವೆಲ್ಲಾ ಮುಗಿದು ಬೇವು ಮಾತ್ರ ಉಳಿದುಕೊಂಡಿರುವಂತಿದೆಯಲ್ಲಾ !!! :)
ಪಬ್ಬಿಗರೆ,
ಸತ್ಯವಂತರಿಗಿದು ಕಾಲವಲ್ಲಾ ಅಂತ ದಾಸರೇ ಹಾಡಿರುವಾಗ ಸತ್ಯವಾದ ಬೊಗಳೆ ಬಿಟ್ಟರೆ ಮೆಚ್ಚನಾ ಪರಮಾತ್ಮನು ಎಂದಿರುವುದರಿಂದ ಹೀಗೇ ಮಾಡಬೇಕಾಯಿತು. ಆದರೂ... ಹರ್ಷ ಎಂಬವರು ಇನ್ನೂ ನಿಮ್ಮ ಬಳಿಗೆ ಬಂದಿರದಿದ್ದರೆ ನಾವು ಕಾರಣರಲ್ಲ ಅಂತಲೂ ಸ್ಪಷ್ಟಪಡಿಸುತ್ತಿದ್ದೇವೆ.
ಸುಪ್ತದೀಪ್ತಿಯವರೆ,
ಓಹ್... ಕೊನೆಗೂ ಸುಪ್ತವಾಗಿಯೇ ಬ್ಲಾಗಿಸಲು ಆರಂಭಿಸಿದ್ದೀರಿ. ಬನ್ನಿ ಬನ್ನಿ ಬೊಗಳೆ ಲೋಕಕ್ಕೆ ನಿಮಗೆ ಸ್ವಾಗತ.
ನಮ್ಮದು ಕೂಡ ಮರ್ಕಟ ಮನಸ್ಸೇ ಆಗಿರುವುದರಿಂದ ಮರ್ಕಟರಿಂದೇನೂ ತೊಂದರೆಯಾಗಲಾರದು ಎಂಬ ಪ್ರಬಲ ನಂಬಿಕೆ ನಮ್ಮದು. ಹನಿ ಹುಡುಕಲು ಹೋಗಿ ಪ್ರವಾಹದಲ್ಲಿ ಮುಳುಗಿದ ಕಾರಣ ಬರುವುದು ತಡವಾಯಿತು.
ಶಿವ್ ಅವರೆ,
ನೀವಾದರೂ ಬ್ಲಾಗ್ ಲೋಕದ ಕಷ್ಟ ಸುಖ ಅರಿತುಕೊಂಡಿದ್ದೀರಲ್ಲ ಎಂಬುದೇ ನಮ್ಮ ನಾಪತ್ತೆ ಸಂದರ್ಭದಲ್ಲಿ ನಮಗೆ ಇದ್ದ ಏಕೈಕ ನೆಮ್ಮದಿಯಾಗಿತ್ತು.
ಓದುಗರಿಗೆ ಮತ್ತು ಓದುಗರಲ್ಲದವರಿಗೆ ಚಾಂದ್ರಮಾನ ಕ್ಯಾಲೆಂಡರಿನ ಹೊಸ ಯುಗದ ಆದಿಯ ಶುಭ ಆಶಯಗಳು. ಬೆಲ್ಲ ತಿನ್ನಿ, ಬೇವು ಇತ್ತ ರವಾನಿಸಿ!!!
Post a Comment
ಏನಾದ್ರೂ ಹೇಳ್ರಪಾ :-D