ಬೊಗಳೆ ರಗಳೆ

header ads

Sexpress ಹೆದ್ದಾರಿ ಲೋಕಾರ್ಪಣೆ

(ಬೊಗಳೂರು ಜಾಮ್ ಶೋಧನಾ ಬ್ಯುರೋದಿಂದ)
ಬೊಗಳೂರು, ಫೆ.22- ಇತ್ತೀಚೆಗೆ ವಿಶ್ವಾದ್ಯಂತ ರಸವತ್ತಾದ ಜಾಮ್ ತಯಾರಿಕೆಗಳು ಹೆಚ್ಚಾಗುತ್ತಿದ್ದು, ಹೊಸ ಸೇರ್ಪಡೆ ಇಲ್ಲಿದೆ. ಇದು ಹೊಸ ಮಾದರಿಯ ಟ್ರಾಫಿಕ್ ಎಂಬ ಬ್ರಾಂಡಿನ ಜಾಮ್ ಆಗಿದ್ದು, ಇದರ ಹಿಂದೆ ಏನು ಅಡಗಿದೆ ಎಂಬುದನ್ನು ಪತ್ತೆ ಹಚ್ಚಲು ಬೊಗಳೆ ರಗಳೆ ಬ್ಯುರೋ ಹರೋಹರ ಸಾಹಸ ಮಾಡಿತು.

ಇತ್ತೀಚೆಗಷ್ಟೇ ಬೊಗಳೆಯಲ್ಲಿ ಮಹಾನಗರಗಳಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣಗಳನ್ನು ಪತ್ತೆ ಹಚ್ಚಿ ಅರಿಭಯಂಕರ ತನಿಖಾ ವರದಿಯೊಂದನ್ನು ಪ್ರಕಟಿಸಲಾಗಿತ್ತು. ಇದಕ್ಕೂ ಹಿಂದೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಉದ್ಯಮ ಸ್ಥಾಪಿಸುವ ಕುರಿತಾದ ವಿಷಯಗಳನ್ನೂ ಬಯಲಿಗೆಳೆಯಲಾಗಿತ್ತು. ಬೊಗಳೆ ಬ್ಯುರೋ ಬರೇ ಬೊಗಳೆಯನ್ನೇ ಬಿಡುತ್ತಿದೆ ಎಂದು ಸಾಬೀತುಪಡಿಸಲು ತಾವು ಈ ಜಾಮ್ ಮಾಡಿರುವುದಾಗಿ ಕಾರಿನೊಳಗಿದ್ದ ಜೋಡಿ ಬಾಯಿಬಿಟ್ಟಿದೆ.

ಇನ್ನೊಂದು ಕಾರಣವನ್ನೂ ಈ ಜೋಡಿ ಬೊಗಳಿದೆ. ಅದು ಫಾಸ್ಟ್ ಲೇನ್ ಹೆದ್ದಾರಿಯಾಗಿದ್ದುದರಿಂದ ಇದರಲ್ಲಿ ಸಾಕಷ್ಟು ವಾಹನಗಳು ಭರ್ರನೇ ಧಾವಿಸುತ್ತವೆ. ಇದರಿಂದ ಅಪಘಾತಗಳಾಗುವ ಸಾಧ್ಯತೆ ಹೆಚ್ಚು ಈ ಟ್ರಾಫಿಕ್ ಜಾಮನ್ನು ಹೆದ್ದಾರಿ ಮಧ್ಯೆ ಹಚ್ಚಿದರೆ ಈ ಅಪಘಾತ ನಿಯಂತ್ರಣವಾಗುತ್ತದೆ ಎಂಬುದೂ ತಮ್ಮ ಉದ್ದೇಶಗಳಲ್ಲೊಂದಾಗಿತ್ತು ಎಂದವರು ಹೇಳಿದ್ದಾರೆ.

ಇದರಿಂದ ಆನಂದತುಂದಿಲರಾಗಿರುವ ಹೆದ್ದಾರಿ ಇಲಾಖೆಯವರು, ಈ ಹೆದ್ದಾರಿಗೆ Sexpress Lane ಎಂದು ನಾಮಕರಣ ಮಾಡಿ ಅದನ್ನು ಲೋಕಾರ್ಪಣೆ ಮಾಡಿದ್ದಾರೆ ಎಂದು ನಮ್ಮ someಶೋಧ'ಕರು'ಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಇದೇನೇನೋ ಬರೆದಿದ್ದೀರಿ. ನನಗೆ ಸ್ವಲ್ಪವೂ ಅರ್ಥವಾಗ್ತಿಲ್ಲ. ಲಂಕೇಶರ ಪತ್ರಿಕೆ ಇದ್ದ ಹಾಗಿದೆ

    ಪ್ರತ್ಯುತ್ತರಅಳಿಸಿ
  2. ಸಂಶೋಧ'ಕರು'ಗಳಿಗೆ ನಮ್ಮ ಊರಿನ ತಂಟೆಗೆ ಬರಬೇಡಿರೆಂದು ಹೇಳಿ ಅನ್ವೇಷಿಗಳೇ.." ಕಾವೇರಿಗಾಗಿ ಹೈವೇ ಜಾಂ ಮಾಡಿರುವ ನಮ್ಮ ಮೈಸೂರು...ಮಂಡ್ಯ...ಮದ್ದೂರು ರೈತರುಗಳಿಗೆ...ನೀವು ಹೇಳಿದ " ಜಾಂ" ಹಚ್ಚಿದರೆ ಮುಗೀತು ಕಥೆ!!

    ಪ್ರತ್ಯುತ್ತರಅಳಿಸಿ
  3. ಶ್ರೀನಿವಾಸರೆ,
    ನೀವು ನೀಲುವಿನ ಬಗ್ಗೆ ಹೇಳ್ತಾ ಇದ್ದೀರಾ?

    ಪ್ರತ್ಯುತ್ತರಅಳಿಸಿ
  4. ಅನಾನಿಮಸ್ಗಿರಿಯವರೆ,
    ನಿಮ್ಮ ಮಂಡ್ಯ ಮೈಸೂರು ರೈತರು ಮದ್ದೂರು ವಡೆ ಜತೆಗೆ ಜಾಮ್ ಕೂಡ ಕೊಟ್ಟರೆ ಕಥೆ ಇನ್ನೂ (ನಮ್ ಧಾರಾವಾಹಿಗಳಂತೆ) ಉದ್ದವಾಗುತ್ತದೆ. ;)

    ಪ್ರತ್ಯುತ್ತರಅಳಿಸಿ
  5. ಸಮಾಧಿ ಸ್ಥಿತಿ ತಲುಪಲು ಇಂತಹ ಹೆದ್ದಾರಿಗಳ ಅವಶ್ಯಕತೆ ಇದೆ ಅನ್ನೋದು ಒಶೋ ಅಭಿಮಾನಗಳ ಅಂಬೋಣ..

    ಪ್ರತ್ಯುತ್ತರಅಳಿಸಿ
  6. ಹೌದು ಶಿವ್ ಅವರೆ,
    ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬೇರೆಯವರ ಸಮಾಧಿಯಾಗುವುದನ್ನು ತಪ್ಪಿಸುವ ಪ್ರಯತ್ನಗಳಲ್ಲಿ ಇದೂ ಒಂದು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D