Subscribe Us

ಜಾಹೀರಾತು
header ads

ಮಕ್ಕಳಿಗೆ ಕಬ್ಬಿಣಸತ್ವದ ಜಂಕ್‌ಫುಡ್: ವ್ಯಾಕ್‌ವ್ಯಾಕ್‌ಡೊನಾಲ್ಡ್ಸ್

(ಬೊಗಳೂರು ನಿರಾಹಾರ ಬ್ಯುರೋದಿಂದ)
ಬೊಗಳೂರು, ಫೆ.3- ಕರ್ನಾಟಕದಲ್ಲಿ ಮೊಟ್ಟೆ-ಹಾಲು ಲಾಬಿಗಳ ಕಾದಾಟ ಹೆಚ್ಚಾಗುತ್ತಿರುವಂತೆಯೇ ಈ ಹೊಸ "ಉದ್ಯಮಾವಕಾಶ"ಕ್ಕೆ ಜಾಗತೀಕರಣದ touch ನೀಡಲು ಪ್ರಮುಖ ಜಂಕ್‌ಫುಡ್ ವಿತರಣಾ ಸಂಸ್ಥೆಯಾದ ವ್ಯಾಕ್‌ಡೊನಾಲ್ಡ್ಸ್ ಕಣಕ್ಕಿಳಿದಿದೆ.

ಈಗಾಗಲೇ ತಿನ್ನಲುಯೋಗ್ಯವಾದುದನ್ನು ಬಿಟ್ಟು ಎಲ್ಲವನ್ನೂ ಮಾರುಕಟ್ಟೆಗೆ ಸುಂದರವಾದ ಕೆಂಪು ಕೆಂಪಗಿನ ಪ್ಯಾಕೆಟ್‌ಗಳಲ್ಲಿ ಮಾರುಕಟ್ಟೆಗೆ ಹರಿಯಬಿಡುತ್ತಿರುವ ವ್ಯಾಕ್ ವ್ಯಾಕ್ ಸಂಸ್ಥೆಯು ಮಕ್ಕಳ ಜಗತ್ತಿನಲ್ಲಿ ಜನಪ್ರಿಯ un-ಆಹಾರವಾಗಿ ಮೇಳೈಸುತ್ತಿದೆ. ಹಾಗಾಗಿ ಮಕ್ಕಳು ಕೂಡ ತಮಗೇ ಓಟು ನೀಡುತ್ತಾರೆ ಎಂದು ಈ ಸಂಸ್ಥೆ ಬಲವಾದ ವಿಶ್ವಾಸ ಹೊಂದಿದೆ.

silly-ಕಾನ್ ಸಿಟಿ ಬೆಂಗಳೂರು ಕೇಂದ್ರವಾಗಿರುವ ಕರ್ನಾಟಕದಲ್ಲಿ ಹೇಗೂ ಜಾಗತೀಕರಣ ಪ್ರಭಾವ ಹೆಚ್ಚಾಗುತ್ತಿದ್ದು, ಮಕ್ಕಳು ತಮ್ಮ ಜಂಕ್ ಫುಡ್ ಅನ್ನೇ ಇಷ್ಟಪಡುವುದರಿಂದ, ಅವುಗಳಿಗೆ ಜಂಕ್ ಆಹಾರವನ್ನೇ ತಿನ್ನಿಸಬೇಕು ಎಂಬುದಾಗಿ ಪ್ರಖ್ಯಾತ ಜಂಕ್ ಆಹಾರ ತಯಾರಿಕಾ ಸಂಸ್ಥೆ ವಾದಿಸಲು ಆರಂಭಿಸಿದೆ.

ಮಕ್ಕಳು ಮುಂದೆ ಬೆಳೆದು ದೊಡ್ಡವರಾಗಿ ಇತ್ತೀಚಿನ ಕನ್ನಡ ಸಿನಿಮಾಗಳು ನೀಡುತ್ತಿರುವ ಸಂದೇಶದಂತೆ ಮಚ್ಚು-ಲಾಂಗುಗಳ ಬಳಕೆಗೆ ಅನುವಾಗಬೇಕು. ಹಾಗಾಗಿ ಅವರು ಬ್ಲೇಡ್‌ನಿಂದ ಈ ತರಬೇತಿಯನ್ನು ಆರಂಭಿಸಲಿ. ಈ ಜಂಕ್ ಫುಡ್‌ನಲ್ಲಿ ಬ್ಲೇಡ್ ಇತ್ಯಾದಿಗಳನ್ನು ಸೇರಿಸಿ ನೀಡುವುದರಿಂದ ಮಕ್ಕಳ ದೇಹ ಗಟ್ಟಿಯಾಗುತ್ತದೆ, ಅವರಿಗೆ ಉಪಯುಕ್ತವಾದ ಕಬ್ಬಿಣದ ಪೋಷಕಾಂಶವು ಸುಲಭವಾಗಿ ಲಭಿಸಿ ಬುದ್ಧಿಶಕ್ತಿ ಹೆಚ್ಚುತ್ತದೆ ಎಂದು ಅದು ವಾದಿಸುತ್ತಿದೆ ಎಂದು ಹೇಳಲಾಗಿದೆ.

Post a Comment

10 Comments

 1. ಹೆಂಗಿದ್ದರೂ ಇಂದಿನ ಮಕ್ಕಳು ಬೆಳೆದು ಮುಂದೆ ಹೋಗಿ ಅಲ್ಲಿ ದೂರದ ನಾಡಿನಲ್ಲಿ ಬರ್ಗರ್-ಫ್ರೈ ಮೇಲೆ ಬದುಕುತ್ತಾರೆ ಅಂತಾ ಡೊನಾಲ್ಡ್ ನವರಿಗೆ ಗೊತ್ತು..

  ಅದ್ಅಕ್ಕೆ ಈಗಲಿಂದಲೇ ಅಭ್ಯಾಸ ಮಾಡಿಸುವ ದೂರಾಲೋಚನೆ ಇರಬಹುದೇ?

  ReplyDelete
 2. ಈ ಕಂಜ್ ಫುಡ್‍ನಲ್ಲಿ ತುಕ್ಕು ಹಿಡಿದಿರುವ ಕಬ್ಬಿಣವನ್ನು ಸೇರಿಸಿದರೆ, ತಿನ್ನುವ ಮಕ್ಕಳೂ ಕಬ್ಬಿಣದಂತೆ ಗಟ್ಟಿಯಾಗುವರೆಂದು ನಮ್ಮ ಅಜ್ಞಾನ್ ಬೀರುನವರು ಶೋಧಿಸಿದ್ದಾರೆ. ಅದಲ್ಲದೇ ಲದ್ದಿ ಶಕ್ತಿಯೂ ಲಭಿಸುವುದಂತೆ. ಈ ಹೆಚ್ಚಿನ ಮಾಹಿತಿಯನ್ನು ನಿಮ್ಮ ವರದಿಯೊಂದಿಗೆ ಪ್ರಕಟಿಸಬಹುದು. ಅದಕ್ಕೆ ನಾವೇನೂ ಸಂಭಾವನೆ ಕೇಳೋಲ್ಲ.

  ReplyDelete
 3. anveshigaLE, makkaLige koDuva aahaarada bagge neevinnu tale kedisikollabEkilla . nimma bogaLe varadi Odi kaMgaalaada makkaLu shaalege baruvudannE nillisiddaavaMte.

  ReplyDelete
 4. ಹಾಗಿದ್ರೆ....ಇನ್ಮೇಲೆ " ಮಣ್ಣಿನ ಮಗ" ಅಂತ ನಮ್ಮ ರಾಜಕಾರಣಿಗಳು ಹೇಳ್ಕೊಳ್ಳಹಾಗೆ ಇಲ್ಲ?? ನಾನು " ಕಬ್ಬಿಣದ ಮಗ/ಳು" ಅಂತ change ಮಾಡಬೇಕಾಗುತ್ತೆ ಅಲ್ವಾ?!!

  ReplyDelete
 5. ಶಿವ್ ಅವರೆ,
  ಬರ್ಗರ್ ತಿಂದೇ ಭರ್ಜರಿಯಾಗಿ ಬದುಕುವಂತೆ ಮಾಡಲು ವ್ಯಾಕ್ ವ್ಯಾಕ್ ಎನ್ನುವ un-ಆಹಾರವನ್ನೇ ತಿನ್ನಿಸಬೇಕೆಂಬ ಡೋನಾಲ್ಡ್ ಡಕ್ ನ ದುರಾಲೋಚನೆ ಮೆಚ್ಚಬೇಕಾದ್ದೇ.

  ReplyDelete
 6. ಶ್ರೀನಿವಾಸರೆ,
  ಕಾಂಜಿಪೀಂಜಿ ಫುಡ್ ಗೆ ಲದ್ದಿ ಸೇರಿಸಿದರೆ ತುಕ್ಕು ಸೇರಿಸಿದರೆ ಉಕ್ಕಿನಂತೆ ಬಲಿಷ್ಠ ಯುವ ಜನಾಂಗ ಸೃಷ್ಟಿಯಾಗುವುದರಲ್ಲಿ ಸಂದೇಹವೇ ಇಲ್ಲ.

  ReplyDelete
 7. ಶ್ರೀತ್ರೀ ಅವರೆ,
  ಅಂದ್ರೆ, ನಮ್ಮ ಈ ಹಿಂದಿನ ವರದಿಯ ಕೊನೆಯ ಅಂಶವನ್ನೇ ಮಕ್ಕಳು ನೆಚ್ಚಿಕೊಂಡು ಶಾಲೆಗೆ ಬರೋದನ್ನು ನಿಲ್ಲಿಸಿ ನೀರಾವನ್ನೇ ಒಪ್ಪಿಕೊಂಡಿದ್ದಾರೆ ಎನ್ನುವುದು ನಿಮ್ಮ ಮಾತಿನರ್ಥವೇ? ನೀರು ಕುಡಿಯಲು ಶಾಲೆಗೇ ಏಕೆ ಹೋಗಬೇಕು, ಮನೆ ಪಕ್ಕದ ಗದ್ದೆ ಬದಿಗೋ, ತೋಟಕ್ಕೋ ಹೋದರಾಯಿತು ಎಂಬ ಮಕ್ಕಳ ನಿರ್ಧಾರ ಸ್ವಾಗತಾರ್ಹ.

  ReplyDelete
 8. ಅನಾನಿಮಸ್ಗಿರಿಯವರೆ,

  ರಾಜಕಾರಣಿಗಳು ಏನು ಬೇಕಾದರೂ ಹೇಳಿಕೊಳ್ಳಲಿ. ಆದ್ರೆ ನೀವೇಕೆ ಕಬ್ಬಿಣದ ಮಗ/ಳು ಆಗಬೇಕು? :)

  ReplyDelete
 9. ಅಯ್ಯೋ...ನಾನು ಹೇಳಿದ್ದು..." ನಾನು ಕಬ್ಬಿಣದ ಮಗಳು" ಅಂತಲ್ಲಾ.... ನಮ್ಮ ರಾಜಕಾರಣಿಗಳು ಇನ್ಮೇಲೆ....ಅವರುಗಳ ಸ್ಟೇಟ್ ಮೆಂಟ್ ಬದಲಾಯಿಸಬೇಕಾಗುತ್ತೆ ಅಂತ..

  ReplyDelete
 10. ಆಯ್ತು ಅನಾನಿಮಸ್ಗಿರಿಯವರೆ,
  ಹಾಗಿದ್ದರೆ ನೀವು ಸತ್ಯ ಹೇಳೋದಿಲ್ಲವಾ? :)

  ReplyDelete

ಏನಾದ್ರೂ ಹೇಳ್ರಪಾ :-D