(ಬೊಗಳೆ ರಗಳೆ ಬ್ಯುರೋದ ಕ್ಯಾಮರಾದಲ್ಲಿ ಸೆರೆಹಿಡಿದ ಚಿತ್ರವಿದು. ಮಂಗನ ಕೈಯಲ್ಲಿದ್ದ ಮಾಣಿಕ್ಯವಲ್ಲ ಎಂದು ಸ್ಪಷ್ಟಪಡಿಸಲಾಗುತ್ತಿದೆ.)
ಓದುಗರ ಪ್ರೀತಿಯ ಒದೆತಗಳಿಂದಾಗಿ 2006 ಏಪ್ರಿಲ್ ತಿಂಗಳಲ್ಲಿ ಆರಂಭವಾದ ಈ ಬೊಗಳೆಯು ಆಗಸ್ಟ್ ಅಂತ್ಯದ ವೇಳೆಗೆ 10 ಸಾವಿರ ಒದೆತಗಳನ್ನು ತಾಳಿಕೊಂಡಿದ್ದು, ಇದೀಗ ಬೊಗಳೆ ರಗಳೆ ಬ್ಯುರೋದ ಅರಿವಿಗೆ ಬಾರದೆ ನಮ್ಮ (ಚಪಾತಿ) ಹಿಟ್ಟಿನ ಕೌಂಟರ್ 20K ದಾಟಿಬಿಟ್ಟಿದೆ. ಇದೇ ವೇಳೆ ಲೇಖನಗಳ ಸಂಖ್ಯೆಯೂ ದ್ವಿಶತಕ ದಾಟಿದೆ.
ಇದಕ್ಕೆ ನಿಜವಾಗಿಯೂ ಕನ್ನಡ ನೆಟ್ಟೋದುಗರ ಮತ್ತು ಅನಿವಾರ್ಯ ಕಾರಣಗಳಿಗಾಗಿ "ಕನ್ನಡನಾಡು ಬಿಟ್ಟೋಡುಗರು" ಆಗಿರುವವರ ಸವಿಮನಸಿನ ನೆಟ್ಟೊದೆತಗಳೇ ಕಾರಣ.
ಆದರೆ ಕ್ರಿಸ್ಮಸ್ ರಜೆಯಿಂದಾರಭ್ಯ ಹೊಸ ವರ್ಷ ಬಂದು ಸಂಕ್ರಾಂತಿ ಬಂದೇಬಿಟ್ಟಿದ್ದರೂ, ಇತ್ತೀಚೆಗೆ ಸರಿಯಾಗಿ ಕಚೇರಿಗೆ ಹಾಜರಾಗದೆ, ಮೈಗಳ್ಳನಂತಾಗಿಬಿಟ್ಟಿರುವ ನಮ್ಮ ಏಕಸದಸ್ಯ ಬ್ಯುರೋದ ಪ್ರಧಾನ ವರದಿಗಾರರ ಸಮೂಹದಲ್ಲೊಬ್ಬನಾಗಿ ತೂರಿಕೊಂಡಿರುವ ಅಸತ್ಯಾನ್ವೇಷಿಯು ಬೊಗಳೆ ಬಿಟ್ಟು ರಗಳೆ ಮಾಡುತ್ತಿದ್ದಾನೆ ಎಂದು ಓದುಗರು ದೂರಿರುವ ಹಿನ್ನೆಲೆಯಲ್ಲಿ ಅಸತ್ಯಾನ್ವೇಷಿಯನ್ನು ತರಾಟೆಗೆ ತೆಗೆದುಕೊಂಡ ಪರಿಣಾಮವಾಗಿ ಆತ ಬ್ಯುರೋಗೆ ಬೆದರಿಕೆ ಹಾಕಿದ್ದಾನೆ.
ಯಾರು ಉಗುಳಲಿ ಎಂದು
ನಾನು ಬೊಗಳುವುದಿಲ್ಲ
(ಸಂ-ಪಾದ-ಕರು ಸಂ-ಬಳ ಮಾತ್ರ ಕೊಡುವುದರಿಂದ)
ಬೊಗಳುವುದು ಅನಿವಾರ್ಯ ಕರ್ಮ ನನಗೆ !!
ಎಂದು ಆತ ಕವಿವರ್ಯರ ಕ್ಷಮೆ ಕೋರಿ ಸೂಚ್ಯವಾಗಿ ಬೆದರಿಕೆಯೊಡ್ಡಿರುವುದರಿಂದ ಅವನ ವೇತನವನ್ನು ಒಂದು ಪೈಸೆಗೆ ಏರಿಸಲಾಗಿದೆ ಎಂದು ತಿಳಿಸಲು ಬ್ಯುರೋ ವಿಷಾದಿಸುತ್ತದೆ.
ಇಲ್ಲಿ ಯಾರು ಬೇಕಾದರೂ ಹೇಗೆ ಬೇಕಾದರೂ (ಸಭ್ಯತೆಯ ಮಿತಿಯಲ್ಲಿ) ಉಗುಳಬಹುದು ಎಂಬ ಅಲಿಖಿತ ನಿಯಮ ಅಳವಡಿಸಲಾಗಿದ್ದರೂ, ಇದುವರೆಗಿನ ಉಗುಳುವಿಕೆ ಅಥವಾ ಬೊಗಳುವಿಕೆಯಲ್ಲಿ ಯಾವುದು ಇಷ್ಟವಾಗಲಿಲ್ಲ ಎಂಬುದನ್ನು ನೆಟ್ಟೋದುಗರು ನಮ್ಮ ಬ್ಯುರೋದಲ್ಲಿ ಅಳವಡಿಸಲಾಗಿರುವ ಪ್ರಥಮಚಿಕಿತ್ಸೆ ಪೆಟ್ಟಿಗೆ (comment box)ಯಲ್ಲಿ ಚೀಟಿ ಬರೆದು ಹಾಕಲು ಕೋರಲಾಗಿದೆ. -ಸಂ
9 ಕಾಮೆಂಟ್‌ಗಳು
ಅನ್ವೇಷಿಗಳೇ, ಇಂದುವಿನ ಊರಿನಿಂದ ಹೊರಟ ನೀವು ಮುಂದಿನ ಊರನ್ನೂ ಸೇರದೆ ಎಲ್ಲಿ ಕಳೆದು ಹೋಗಿದ್ದಿರಿ ?
ಪ್ರತ್ಯುತ್ತರಅಳಿಸಿನಿಮ್ಮನ್ನು ಅನ್ವೇಷಿಸಲು ಗೂ(೦)ಢಚಾರರನ್ನು ಕಳಿಸಬೇಕೆಂದಿದ್ದೆವು. ಹಬ್ಬದ ಕಾರಣ ಎಲ್ಲರೂ ರಜೆಯಲ್ಲಿದುದರಿಂದ ವಿಧಿಯಿಲ್ಲದೆ ಸುಮ್ಮನಾಗಿದ್ದೆವು.
ಸಂಕ್ರಾಂತಿಗೆ ೨೦,೦೦೦ ಶುಭಾಶಯಗಳು.
ಅಸತ್ಯಿಗಳೇ,
ಪ್ರತ್ಯುತ್ತರಅಳಿಸಿ೨೦ಕ ದ ಶುಭಾಶಯಗಳು !
ಹಿಂಗೆ ಬೀಳ್ತಾ ಇರಲಿ ಒದೆಗಳು..
ಹಂಗೆ ಆ ೧ ಪೈಸೆ ವೇತನ ಸಿಕ್ಕದ್ದಕ್ಕೆ ಅಭಿನಂದನೆಗಳು..
ಹೆಂಡದೂರಿನ ಪಬ್ಬಿನಲ್ಲಿ ಅದಕ್ಕೆ ಪಾರ್ಟಿ ಎರ್ಪಾಡಿಸಿಬೇಕು ಎಂದು ಆಗ್ರಹಿಸುತ್ತೇವೆ.
ಇಪ್ಪತ್ತು ಸಾವಿರ ಒದೆತಗಳನ್ನು ಸ್ವೀಕರಿಸಿದ್ದರೂ ಪಿಟ್ಟೆನ್ನದೇ ದಿಟ್ಟತನದಿಂದ ನಿಂತಿರುವ ಬ್ಯೂರೋದ ಧೀರ ಏಕಸದಸ್ಯನಿಗೆ ನಮೋ. ಸಂಕ್ರಾಂತಿಯ ಶುಭಾಷಯಗಳ ಜೊತೆಗೆ ಒಂದು ಕಂಗ್ರಾಟ್ಸಿನ ಒದೆತ. ಹಾಂ, ಪಾರ್ಟಿ ಕೊಡಬೇಕ್ರೀ...!
ಪ್ರತ್ಯುತ್ತರಅಳಿಸಿನೀವು ನಮಗೆ 20000 ಪೆಗ್‌ಗಳ ಪಾರ್ಟಿ ಕೊಡಬೇಕು.
ಪ್ರತ್ಯುತ್ತರಅಳಿಸಿಶ್ರೀನಿವಾಸ್ ಅವರೆ,
ಪ್ರತ್ಯುತ್ತರಅಳಿಸಿಉಡುಗೊರೆ ಭಾರಿ ಗಾತ್ರದ್ದಾಗಿರುವುದರಿಂದ ಕಳಿಸಲು ಕಷ್ಟವಾಗುತ್ತದೆಯಾದರೆ ಅದನ್ನು ಚೂರು ಚೂರು ಮಾಡಿ ದೊಡ್ಡ ದೊಡ್ಡ ಗೋಣಿ ಚೀಲಗಳಲ್ಲಿ ತುಂಬಿಸಿ ಕಳಿಸಿಬಿಡಿ.
ಎಕ್ಕುಟ್ಟೋಗಿರೋ ಓರೆಕೋರೆ ಕೂಟಕ್ಕೆ ವಿದಾಯ ಹಾಡಿದರೆ ಎಷ್ಟೊಂದು ಸಮಯ ಉಳಿಯುತ್ತದೆ ಗೊತ್ತೇ?
ಊರಲ್ಲಿ ಕಳೆ ಕೊಳೆ ತುಂಬಿಸಿ ಬಂದಿದ್ದೇವೆ. ಮುಂದಿನ ಸಲ ಹೋದಾಗ ಒಳ್ಳೆ ಬೆಳೆ ತೆಗೀಬಹುದು.!
ಶ್ರೀ ತ್ರಿ ಅವರೆ,
ಪ್ರತ್ಯುತ್ತರಅಳಿಸಿನಿಮ್ಮ ಗೂಂಡಾ-ಚರರು ಬಂದು ತಪರಾಕಿ ಹಾಕಿದ್ದೇ.... ಏಳಲು ಅಸಾಧ್ಯವಾಗಿ ನಮ್ಮ ಬ್ಯುರೋಗೆ ರಜೆ ಸಾರುವುದು ಅನಿವಾರ್ಯವಾಗಿತ್ತು.
ಸಂಕ್ರಾಂತಿ ಶುಭಾಶಯಗಳು.
ಶಿವ್ ಅವರೆ,
ಪ್ರತ್ಯುತ್ತರಅಳಿಸಿಪಬ್ಬಿನಲ್ಲೇ ಪಾರ್ಟಿ ಆಗಬೇಕೆಂಬ ನಿಮ್ಮ ಒತ್ತಾಸೆಗೆ ಅಭಿನಂದನೆಗಳು. ಅದಕ್ಕೆ ಈಗಲೇ ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ಪಾರ್ಟಿಗೆ ಬರುವಾಗಲೇ ಗುಂಡೇರಿಸಿಕೊಂಡು ಬಂದಲ್ಲಿ ನಾವು ಜವಾಬ್ದಾರರಲ್ಲ.
ಸುಶ್ರುತರೇ,
ಪ್ರತ್ಯುತ್ತರಅಳಿಸಿನಿಮಗೆ ಪಬ್ಬಿನಲ್ಲಿ ಪಾರ್ಟಿ ಕೊಡುವುದು ಇಷ್ಟವಿಲ್ಲ. ಹಾಗಾಗಿ ಸಂಕ್ರಾಂತಿಗೆ ತಂದ ಕಬ್ಬಿನಲ್ಲೇ ಒಂದೆರಡು ಕೊಟ್ಟು ಬಿಡುತ್ತೇವೆ.. ಆಗದೇ?
ಪಬ್ಬಿಗರೇ,
ಪ್ರತ್ಯುತ್ತರಅಳಿಸಿನಿಮ್ಮ ಪಬ್ಬಿಗೇ ಬಂದು ಪಾರ್ಟಿ ಕೊಡಲಿರುವುದರಿಂದ ಪೀಪಾಯಿಗಳನ್ನೆಲ್ಲಾ ನೀವೇ ರೆಡಿ ಮಾಡಿಡಿ. ಕುಡಿಯಲು ಅಸಾಧ್ಯವಾದರೂ ಕುಡಿಸಲು ಬರುತ್ತೇವೆ. ಹೇಗಿದ್ದರೂ someಕ್ರಾಂತಿಯ ಅಮಲು ಇನ್ನೂ ಇಳಿದಿಲ್ಲವಲ್ಲ!
ಏನಾದ್ರೂ ಹೇಳ್ರಪಾ :-D