ಇಂದು ದೇಶಾದ್ಯಂತ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ನಡೆದಿದ್ದು, ರಾಜಕಾರಣಿಗಳು ಹಾರಿಸಿ ಹಾಗೆಯೇ ಬಿಟ್ಟು ಹೋದ ಧ್ವಜವನ್ನು ಇಳಿಸಿ ಜೋಪಾನವಾಗಿ ಕಾಯ್ದುಕೊಳ್ಳಬೇಕಾದ ನಿಮಿತ್ತ ನಮ್ಮ ಬ್ಯುರೋಗೆ ರಜೆ ಸಾರಲಾಗಿತ್ತು.
ಆದರೆ ಇಂದಿನ ಕಾರ್ಯಕ್ರಮದ ಸಮಗ್ರ ವರದಿಯೊಂದು ನಾಳಿನ ಸಂಚಿಕೆಯಲ್ಲಿ ಮೂಡಿ ಬರಲಿದೆ.
ನಿಮ್ಮ ಪ್ರತಿಗಳನ್ನು ಹೆಚ್ಚು ಹಣ (ಲಂಚ) ಕೊಟ್ಟು ಈಗಲೇ ಕಾದಿರಿಸಿ...
ಬೇರೆಲ್ಲೂ ಪ್ರಕಟವಾಗದ ವರದಿ ನಿಮ್ಮನ್ನು ತುದಿಗಾಲಲ್ಲಿ ಅಲ್ಲಲ್ಲ ಕುಕ್ಕುರುಗಾಲಲ್ಲಿ ನಿಲ್ಲಿಸಿ ಬೀಳುವಂತೆ ಮಾಡುತ್ತದೆ...
ನಿರೀಕ್ಷಿಸಿ!!!!
ಬೊ-ರ ಏಕಮೇವಾದ್ವಿತೀಯ ತಂಡಕ್ಕೆ ನಮ್ಮ ಕಡೆಯಿಂದ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಎಷ್ಟೇ ಶುಭಾಶಯ ಹೇಳಿದ್ರೂ ನಾವು ಒಂದಲ್ಲ ಒಂದು ರೀತಿಯಲ್ಲಿ, ಒಂದಲ್ಲ ಒಂದು ಕಡೆ ಅತಂತ್ರರೇ! ಸ್ವತಂತ್ರರಾಗುವುದು ಕುಕ್ಕರಗಾಲಿನಲ್ಲಿ ಕುಳಿತಾಗ ಮಾತ್ರ.
ReplyDeleteಜೈ ಹಿಂದ್ ಭಾರತ ಮಾತಾ ಕೀ ಜೈ
ಸಮಸ್ತರಿಗೂ ಸನ್ಮಂಗಳವಾಗಲಿ ಎಂಬುದು ಬೊಗಳೆ ರಗಳೆ ಬ್ಯುರೋದ ಹಾರೈಕೆ. ಮಾವಿನಯನಸರಿಗೂ ಸ್ವಾತಂತ್ರ್ಯ ದೊರೆಯಲಿ.... :)
ReplyDeleteಮತ್ತು ಬಡಪ್ರಜೆಗಳಿಗೂ ತಮ್ಮ ಕೆಲಸವನ್ನು ಯಾವುದೇ ಲಂಚ-ರುಷುವತ್ತಿಗಳಿಲ್ಲದೆ ಕೆಲಸ ಮಾಡಿಸಿಕೊಳ್ಳುವ ಪೂರ್ಣ ಸ್ವಾತಂತ್ರ್ಯ ಲಭಿಸಲಿ ಎಂದೂ ಹಾರೈಸುತ್ತದೆ.
ಮಾವಿನ ರಾಸಾಯನರಿಗೆ ಪ್ರತಿ ಬ್ಲಾಗಿಗೂ ಕಾಮೆಂಟಿಸುವ ಸ್ವಾತಂತ್ರ್ಯವಿರುವುದು ನಿಜಕ್ಕೂ ಬ್ಲಾಗಿಗರಿಗೆ ಸಂತೋಷದ ವಿಷಯ.
ReplyDelete-ಪಬ್
ಪ್ರತಿ ಬ್ಲಾಗಿಗೂ ಕಾಮೆಂಟಿಸುವ ಸ್ವಾತಂತ್ರ್ಯ ಅನಾನಸ್ ವ್ಯಕ್ತಿಗಳಿಗೂ ಇದೆ ಪಬ್ಬಿಗರೆ.... ಕೆಲವೆಡೆ ಮಾತ್ರ ಅವರಿಗೆ ಗೇಟ್ ಹಾಕ್ತಾರಷ್ಟೆ... :)
ReplyDeleteಎಲ್ಲಿ ಗೇಟ್ ಹಾಕಿದ್ದಾರೆ ಗೊತ್ತಾಗಲಿಲ್ವೆ ...
ReplyDelete-ಪಬ್
ಅದೇ ಪಬ್ಬಿಗರೆ,
ReplyDeleteಕೆಲವು ಕಡೆ This blog does not accept anonymous comments ಅಂತ ಮೆಸೇಜ್ ಬರತ್ತೆ ಮತ್ತು ಕೆಲವೆಡೆ Anonymous comment blocked ಅಂತ ಬರತ್ತಲ್ವಾ....
Post a Comment
ಏನಾದ್ರೂ ಹೇಳ್ರಪಾ :-D