(ಬೊಗಳೂರು ಬೊಗಳೆ ಬ್ಯುರೋದಿಂದ)

ಬೊಗಳೂರು, ಆ.1- ಬ್ಲಾಗು ಬ್ಲಾಗೆನುತಾ ಹೆಜ್ಜೆ ಹೆಜ್ಜೆಗೂ ಅದರ ಅಮಲೇರಿಸಿಕೊಂಡ ಬ್ಲಾಗಿಗಳ ಕಾಲ ಬುಡಕ್ಕೇ ನೀರು ಬಂದಿದೆ.ಒಂದೆಡೆ ಬ್ಲಾಗಿಸುತ್ತಾ, ಬೊಗಳುತ್ತಾ, ಬೊಗಳಿಸುತ್ತಾ ಸಂತೋಷದಲ್ಲಿ ನೆಟ್ ವಿಹಾರ ಮಾಡುತ್ತಿದ್ದ ಭಾರತೀಯ ಬ್ಲಾಗಿಗರ ಬಾಲ ಕತ್ತರಿಸಲು ಭಾರತದಲ್ಲಿ ತೀವ್ರ ಪ್ರಯತ್ನಗಳು ನಡೆಯುತ್ತಿರುವಂತೆಯೇ ಕೆಲವೊಂದು ಆಘಾತಕಾರಿ ಸುದ್ದಿಗಳು ಉಗುಳಲಾರದ ತುತ್ತಾಗಿ ಪರಿಣಮಿಸಿವೆ.

ಬ್ಲಾಗಿಂಗ್ ಮಾಡಿದ್ದನ್ನೇ ಮಹಾಪರಾಧ ಎಂಬಂತೆ ಪರಿಗಣಿಸಿದ ಹಲವು ಕಂಪನಿಗಳು ತಮ್ಮ ತಮ್ಮ ಬ್ಲಾಗ್-ಪೀಡಿತ ಉದ್ಯೋಗಿಗಳನ್ನು 'ನೀವು ಶಾಶ್ವತವಾಗಿ ಬ್ಲಾಗಿನಲ್ಲೇ ವಿಹರಿಸುತ್ತಿರಿ' ಎಂದು ಗೇಟ್ ಪಾಸ್ ನೀಡಿ ಕಳುಹಿಸಿದ ವರದಿಗಳು ಬಿಸಿಬಿಸಿಯಾಗಿ ನಮ್ಮ ಮತ್ತೊಬ್ಬ ಪ್ರತಿಸ್ಪರ್ಧಿ ನೆಟ್ ತಾಣ ಬಿಬಿಸಿ (ಇದು ಬೊಗಳೂರು ಬೊಗಳೆ ಕಾರ್ಪೊರೇಶನ್ ಅಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ) ಪ್ರಕಟಿಸಿರುವುದರಿಂದ ಬೆಚ್ಚಿ ಬಿದ್ದಿರುವ ಬೊಗಳೂರು ಬ್ಯುರೋ, ಕೈ ಕೈ ಹಿಸುಕಿಕೊಳ್ಳುತ್ತಿದೆ.


ಅಮೂಲ್ಯವಾದ ಬೊಗಳೆ ಬಿಟ್ಟದ್ದಕ್ಕೆ ಅಷ್ಟು ದೊಡ್ಡ ಬೆಲೆ ತೆರಬೇಕಾಗಿ ಬಂತೆಂದರೆ ಬೊಗಳುವುದಕ್ಕೆ ಇಷ್ಟೊಂದು ಬೆಲೆ ಇದೆ ಎಂದಾಯಿತು.

ಅದೂ ಅಲ್ಲದೆ, ಸದಾ ಮದ್ಯದ ಅಮಲಿನಲ್ಲಿ ತೇಲಾಡುತ್ತಾ ಸುತ್ತಮುತ್ತಲಿನ ಮನೆಯವರಿಗೆ ರಾತ್ರಿ ನಿದ್ದೆಯಿಲ್ಲದಂತೆ ಮಾಡಿ, ಅಕ್ಕಪಕ್ಕದ ಸಹೋದ್ಯೋಗಿಗಳಿಗೆ ಹಗಲು ಕಿರುಕುಳ ನೀಡುತ್ತಿದ್ದವರು ಬ್ಲಾಗ್ ವ್ಯಸನಕ್ಕೆ ತುತ್ತಾಗಿ 'ಇದ್ದಾರೋ, ಇಲ್ಲವೋ' ಎಂದು ಪಕ್ಕದ ಮನೆಯವರು ಮತ್ತು ಪಕ್ಕದಲ್ಲೇ ಕುಳಿತುಕೊಂಡ ಸಹೋದ್ಯೋಗಿಗಳು ನೋಡುವಷ್ಟರ ಮಟ್ಟಿಗೆ ಬದಲಾಗಿಬಿಟ್ಟಿದ್ದರು. ಇದು ಬ್ಲಾಗಿನ ಕೊಡುಗೆ ಅಲ್ಲವೆ?

ಇದೀಗ ಈ ಬ್ಲಾಗ್ ಎಂಬ ಮಾದಕ ದ್ರವ್ಯಕ್ಕೆ ನಿಷೇಧ ಹೇರಿದ್ದಲ್ಲದೆ, ಅದನ್ನು ನೀವು ತ್ಯಜಿಸದಿದ್ದರೆ ನಾವು ನಿಮ್ಮನ್ನು ತ್ಯಜಿಸುತ್ತೇವೆ ಎಂದು ಕಂಪನಿಗಳು ಹೇಳಿರುವುದು ಆಘಾತಕ್ಕೆ ಕಾರಣವಾಗಿದೆ.

ಕೊನೆಯ ಪ್ಯಾರಾ: ಬ್ಲಾಗಿಸಿದ್ದಕ್ಕಾಗಿ ಕೆಲಸದಿಂದ ಉಚ್ಚಾಟನೆಗೊಂಡ ಬ್ರಿಟಿಷ್ ಸೆಕ್ರೆಟರಿ ಕ್ಯಾಥರೀನ್ ಎಂಬಾಕೆ ಅಜ್ಞಾತ ಹೆಸರಲ್ಲಿ ಬೊಗಳೆ-ರಗಳೆ ಮಾಡುತ್ತಿದ್ದಳು ಎಂಬುದು ಅಸತ್ಯಾನ್ವೇಷಿ ಬ್ಯುರೋಕ್ಕೆ ಮತ್ತಷ್ಟು ಕಳವಳ ಹೆಚ್ಚಿಸಿದ ಸಂಗತಿಯಾಗಿದೆ. ಯಾಕೆ ಅಂತಾನೇ ಗೊತ್ತಾಗ್ತಿಲ್ಲಾ##$%

10 Comments

ಏನಾದ್ರೂ ಹೇಳ್ರಪಾ :-D

 1. ಇಷ್ಟೆಲ್ಲಾ ಹಗರಣ ನಡೆದಿದೆ ಅಂತ ನನಗೆ ಗೊತ್ತೇ ಇರ್ಲಿಲ್ಲ. ಅನ್ವೇಷಿ ಇದ್ದಿದ್ರಿಂದ ಸತ್ಯ ಬಯಲಾಗ್ತಿದೆ. ಇಲ್ದೇ ಇದ್ರೆ, ಏಡುಕೊಂಡಲವಾಡಾ ವೆಂಕಟರಮಣಾ ಗೋವಿಂದಾ ಗೋಓಓವಿಂದಾ.

  ಬ್ಲಾಗಿಗ ನೌಕರರ ಬಗ್ಗೆ ಖಾಸಗೀ ಕಂಪನಿಯವರು ಮಾತ್ರ ಕಟುವಾಗಿದ್ದಾರೋ ಅಥವಾ ಮಿಕ್ಕ ಒಡೆಯರೂ ಕಟುವಾಗಿದ್ದಾರೋ ಎಂಬುದನ್ನು ತಿಳಿದುಕೊಳ್ಳಬೇಕಿತ್ತು. ಹಾಗಿದ್ದರೆ ನಾನು ಪಿಕೆಗೆ ಮತ್ತೆ ಹೋಗುವೆ. ನಮ್ಮವರಿಗೆ ನಾನು ಬ್ಲಾಗಿಸುವುದು ಗೊತ್ತಾಗದಿರಲಿ.

  ಓ ಹೊಸ ಚಿತ್ರ ಬಂದಿದೆ - ಅಸತ್ಯ ನಯಾ ಗಾಡಿ, ನಯಾ ಘರ್, ನಯಾ ಪೋಟೋ ನಯಾ ... ಅತ್ಬಿಟ್ಟ

  ಅಂದ ಹಾಗೆ ಆ ಕ್ಯಾತೆ ಅಮ್ಮ ಯಾರೂಂತ ಗೊತ್ತಾಯ್ತಾ. ಒಮ್ಮೆ ನನ್ನ ಬ್ಲಾಗಿಗೂ ಬಂದು ಬೊಗಳಿದ್ರು.

  ReplyDelete
 2. ಶ್ರೀನಿವಾಸರೆ,
  ನನ್ನದೂ ಒಂದು ಗೋವಿಂದಾ.... ಸೇರಿಸಿಕೊಂಡು ಒಟ್ಟಿಗೇ ಕೊಟ್ಟುಬಿಡಿ ಏಳು ಕೊಂಡಲ ವಾಡನಿಗೆ!!!!

  ನಮ್ಮಲ್ಲಿ ಈಗಲೂ ಪೀಕೆಯೇ ಗತಿಯಾಗಿದೆ. ಎಲ್ಲಾ ಓಕೆ, ಪೀಕೆಯೇ ಯಾಕೆ ಅಂತ ಗೊತ್ತಾಗಿಲ್ಲ....

  ನಿಮ್ಮ ಬ್ಲಾಗಿಗೆ ಬಂದು ಬೊಗಳಿದ ಕ್ಯಾತೆಯಮ್ಮನ ವಿಳಾಸ ಕೊಡಿ. ಆಕೆಯ ಕೈಯಲ್ಲಿ ಕತ್ರೀನೂ ಇತ್ತಂತೆ...!!!!

  ಆಮೇಲೆ, ಹೇಗಿದೆ ನಮ್ಮ ನಯಾ ಫೋಟೋ?

  ReplyDelete
 3. ಬ್ಲಾಗಿನಲ್ಲಿ ಬೊಗಳಬೇಡ
  ಬ್ಲಾಗಿನಲ್ಲಿ ಬೊಗಳಿಸಬೇಡ
  ಬೊಗಳಿ ಸಿಕ್ಕಾಗಿಕೊಳ್ಳಬೇಡ
  ಭೊಗಳವುದಿದ್ದರೆ ಪಿಕೆಗೆ ಹೋಗಿ ಬೊಗಳು
  ಇದೇ ಬ್ಲಾಗಂತರ್‍ಅಂಗ ಶುದ್ದಿ
  ಇದೇ ಬ್ಲಾಗದ ಬಹಿರಂಗ ಶುದ್ದಿ
  ಇದೇ ನಮ್ಮ ಬ್ಲಾಗದೇವನೊಲಿಸುವ ಪರಿ
  (ಬಸವಣ್ಣವರ ಕ್ಷಮೆ ಕೋರಿ.....)
  ಎನ್ನುದನ್ನು ಮನವರಿಕೆ ಮಾಡಿದ್ದಕ್ಕಾಗಿ ವಂದನೆಗಳು.


  access ಇರೋದು ಬ್ಲಾಗಗೆ ನನ್ನ ಆಫಿಸನಲ್ಲಿ....
  ಅದಕ್ಕೂ ಬಂತಾ ಕುತ್ತು ಅನಸುತ್ತೆ........

  ReplyDelete
 4. ಮಹಾನಣ್ಣ ಅವರ ಬೊಗಳೆ ವಚನಗಳು ಸುಂದರವಾಗಿವೆ.

  ಬಹಿರಂಗವಾಗಿ ಜೋರಾಗೇ ಶುದ್ಧಿ ಮಾಡಿಕೊಳ್ಳಬೇಕಿದೆಯಂತ ಯಾರೋ ಹೇಳಿದ್ಹಾಗಾಯ್ತು.

  ReplyDelete
 5. ಪಿಚ್ಚರ್ ಬೋ ಪಸಂದಾಗೈತೆ. ಅದ್ಯಾಕೆ ಕಂಬಿ ಎಣಿಸ್ತಿದ್ದೀ? ಕ್ಯಾತೆಯಮ್ಮ ನನ್ನ ಬ್ಲಾಗಿನಲ್ಲಿ ಬೊಗಳ್ತಿದ್ರು. ಅವರ ಮನೆ ಎಲ್ಲಿ ಗೊತ್ತಿಲ್ಲ. ನೀವೇ ಹುಡುಕ್ಬೇಕು.

  ಅಚ್ಛಾ ದಿಖತಾ ಹೈ ಬಂದರ್
  ಮಾ ಕೇ ಲಿಯೇ ಬಹುತ್ ಸುಂದರ್
  ಸಮಝೋ ಸುಂದರ್ ದಿಖ್ ರಹಾ ಹೈ ಚೆಹರಾ
  ದೇಖನೇವಾಲೋಂಕೋ ಬನಾಯೇಗಾ ಬಕರಾ

  ReplyDelete
 6. ವಾಹ್, ವಾಹ್... ಬೋಲಿಯೇ...

  ಪರಂತೂ ದೇಖ್‌ನೇ ವಾಲೋಂ ಕೋ ಬನಾಯೇಗಾ ಬಕರಾ... ಕ್ಯೋಂ ಮಾಲುಮ್?

  ಇಸ್ಕೇ ಹಾತ್ ಮೇ ಹೈ ಏಕ್ ಸುಂದರ್ FOOL!
  ಉಸ್ಕೋ phool ಮತ್ ಸಮಝ್ನಾ...

  ReplyDelete
 7. ವಿಭಾಗೀಕರಿಸಿದ ಪ್ರತಿಕ್ರಿಯೆಗಳು
  ಅ)
  "ನಾನು punಜರ ಕೋತಿ
  ಇನ್ನು ನನಗಾರು ಗತಿ
  ಕೇಳಬಯಸುವಿರೇನು ನನ್ನ ಕಥೆಯ..."

  ಆ)"ಬ್ಲಾಗಿಗೆ ಗ್ಲಾಬಿ (ಗುಲಾಬಿ) ಸ್ಲಿಪ್" (pinkslip) ಈ ವಾರ್ತೆಗೆ ಸೂಕ್ತವಾದ ಶೀರ್ಷಿಕೆ.

  ಇ) ಅಜ್ಞಾತ ಖಾತೆ (account) ತೆಗೆದು ಕ್ಯಾತೆ ಮಾಡಿದ ಕ್ಯಾಥರಿನ್‍ಳ ಉಚ್ಚಾಟನೆ ಆದ ಮಾತ್ರಕ್ಕೇ ವಿಶ್ವಾದ್ಯಂತದ ಬ್ಲಾಗಿಗರು ಗಾಬರಿಯಾಗಬೇಕಿಲ್ಲ.

  ReplyDelete
 8. Alla kaN laa, idella butbut bilaagal en maadu antare?
  A aa e ee tid beeku ashteya.

  ReplyDelete
 9. Punಡಿತ ಜೋಷಿಯವರೆ,

  ಬೊಗಳಿಗರಿಗೆ ನಿಮ್ಮ ಅಭಯ ಕೇಳಿ ಸಂತೋಷವಾಗಿದೆ.

  ಇತ್ತೀಚೆಗೆ ನೀವು ಮುರ್ಡೇಶ್ವರದ ಈಶ್ವರ ಪ್ರತಿಮೆಯ ಕೈ ತುಂಡಾಗಿರೋ ಬಗ್ಗೆ, ಮುರ್ಡೇಶ್ವರ ಕೋಪಗೊಂಡು ಮರ್ಡರೇಶ್ವರ ಆಗದಿದ್ದರೆ ಸಾಕು ಅಂತ ಹೇಳಿದ್ದೀರೀಂತ ಓದಿದೆ.

  ನಕ್ಕೂ ನಕ್ಕೂ ಸುಸ್ತು. ಚಾ-ತರಿಸಿಕೊಳ್ಳಲಾಗುತ್ತಿದೆ.

  ReplyDelete
 10. ಸಿಂಧು,

  ಇನ್ನು ಬಿಲಾಗಿಗರಿಗೆ ಅಥವಾ ಗುಲಾಬಿಗರಿಗೆ (!) ಏನು ಗತಿ ಕಾದಿದೆಯೋ ಗೊತ್ತಿಲ್ಲ.

  ಅಪಾ ನಿಮ್ (aponym)ಬ್ಲಾಗು ಅಪ್‌ಡೇಟ್ ಆಗಿಲ್ವಾ?

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post