ಬೊಗಳೆ ರಗಳೆ

header ads

ಮಾಹಿತಿ ಹತ್ತಿಕ್ಕು ಕಾಯಿದೆ ಶೀಘ್ರ ಜಾರಿ

(ಬೊಗಳೆ ರಗಳೆ ಅಪಪ್ರಚಾರ ಬ್ಯುರೋದಿಂದ)
ಬೊಗಳೂರು, ಜು.8- ಮಾಹಿತಿಗಳೆಲ್ಲಾ ಸೋರಿ ಹೋಗುತ್ತಿರುವುದರಿಂದ ಗಂಭೀರ ಕಳವಳ ವ್ಯಕ್ತಪಡಿಸಿರುವ ಕರುನಾಟಕ ಸರಕಾರವು, ಮಾಹಿತಿ ಹತ್ತಿಕ್ಕು ಕಾಯಿದೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ.
 
ಲೋಕಾಯುಕ್ತರ ಅಧಿಕಾರಕ್ಕೆ ಸಂಬಂಧಿಸಿ ಅವರಿಗೆ ಹೆಚ್ಚಿನ ಹಲ್ಲು ಸೆಟ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದ ಬೆನ್ನಿಗೆ ಲೋಕಾಯುಕ್ತರ ಮುಂದುವರಿಕೆಯೂ ಇಲ್ಲ, ಅಧಿಕಾರ ವ್ಯಾಪ್ತಿ ಹೆಚ್ಚಿಸುವುದೂ ಇಲ್ಲ ಎಂಬ ತದ್ವಿರುದ್ಧ ಹೇಳಿಕೆಗಳು ದಿನ ಬಿಟ್ಟು ದಿನ ಪ್ರಕಟವಾದ ಹಿನ್ನೆಲೆಯಲ್ಲಿ ಮತ್ತು ಪ್ರಾಮಾಣಿಕ ಅಧಿಕಾರಿ ಎಂದು ಜನರಿಂದ ಕೆಟ್ಟದಾಗಿ ಹೊಗಳಿಸಿಕೊಂಡಿರುವ ಪೊಲೀಸ್ ಅಧಿಕಾರಿ ಪಂಕಜ್ ಕುಮಾರ್ ಠಾಕೂರ್ ಅವರ ಎತ್ತಂಗಡಿ ವಿಷಯವೂ ಬಯಲಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಗೇಗೌಡರು ಈ ಕ್ರಮ ಕೈಗೊಂಡಿದ್ದಾರೆ.
 
ಠಾಕೂರ್ ವರ್ಗಾವಣೆಯಲ್ಲಿ ತನ್ನ ಮತ್ತು ತಮ್ಮ ಪಕ್ಷದವರ ಕೈವಾಡವಿರುವ ಕುರಿತ ಮಾಹಿತಿ ಹೀಗೆ ಸೋರಿ ಹೋಗಿದ್ದು ಹೇಗೆಂಬುದು ತಿಳಿಯದೆ ಕಂಗಾಲಾಗಿರುವ ಮುಖ್ಯಮಂತ್ರಿ, ಇದೀಗ ತಮ್ಮ ಹುಲ್ಲು ಹೊತ್ತ ಮಹಿಳೆಯ ಬೆನ್ನುಬಿದ್ದು (ಸ್ವಲ್ಪ ಜೋರಾಗಿಯೇ ಬಿದ್ದು) ಬೆನ್ನಿಗೆ ಚುಚ್ಚುತ್ತಿರುವ ಕಮಲದ ದಳಗಳಿಂದ ಬಚಾವಾಗಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ.
 
ಅಲ್ಲದೆ ಈ ಕ್ರಮದ ಹಿಂದೆ ಸಾರ್ವಜನಿಕ ಹಿತಾಸಕ್ತಿಯೂ ಅಡಗಿದೆ. ಸಾರ್ವಜನಿಕರು ಮಾಡುವ ಯಾವುದೇ ಅನ್ಯಾಯ ಅಕ್ರಮಗಳ ಕುರಿತಾದ ಮಾಹಿತಿಗಳನ್ನು ಅವರೇ ಸ್ವತಃ ಸುಲಭವಾಗಿ, ಸರಳವಾಗಿ ಹತ್ತಿಕ್ಕಿಕೊಳ್ಳಬಹುದು.
 
ಇದರಿಂದ ಯಾರಿಗೂ ಏನೂ ತಿಳಿಯದು. ಎಲ್ಲರಿಗೂ ಸ್ವಾತಂತ್ರ್ಯ ನೀಡಿದಂತಾಗುತ್ತದೆ. ಬ್ರಿಟಿಷರು ನಮಗಿನ್ನೂ ಪೂರ್ಣ ಸ್ವಾತಂತ್ರ್ಯ ಕೊಟ್ಟಿರಲಿಲ್ಲ. ಈಗ ನಾವು ಕೊಡುತ್ತಿದ್ದೇವೆ. ಭಯಮುಕ್ತ ಸಮಾಜ ನಮ್ಮ ಗುರಿ ಎಂದವರು ಸ್ಪಷ್ಟಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

 1. Anveshi,
  nimma maahithi bagge yaake aa kaayide prayogisabaaradu?

  ಪ್ರತ್ಯುತ್ತರಅಳಿಸಿ
 2. ಸಂತ ಶಿಶುನಾಳ ಶರೀಫರು ಗೋರಿಯಲ್ಲೆ ಒಮ್ಮೆ ಆಚೀಚೆ ಕದಲಿ ಗುನುಗುನಿಸಿದರಂತೆ:

  "ಸೋರುತಿಹುದು ಮನೆಯ ಮಾಹಿತಿ...ವಿಜ್ಞಾನದಿಂದ..."

  (ವಿಜ್ಞಾನದ ಬೆಳವಣಿಗೆಯು ಮಾಹಿತಿ ಲಭ್ಯತೆಗೆ ಎಷ್ಟು ಸಹಾಯಕವಾಗಿದೆಯೋ, ಸೈಡ್ ಎಫೆಕ್ಟಾಗಿ 'ಮಹಿತಿ ಸೋರುವಿಕೆ'ಗೂ ವಿಜ್ಞಾನದ ಸಹಾಯವಾಗಿದೆ ಎಂಬುದು ಶಿಶುನಾಳ ಷರೀಫರ ಅಭಿಪ್ರಾಯವಿರಬಹುದು)

  ಪ್ರತ್ಯುತ್ತರಅಳಿಸಿ
 3. ಆಫ್ರಿಕಾದಿಂದ ಬಂದ ಶೀಲಾ,

  ಯಾಪ್ಪಾ.... ಬೇಡಪ್ಪಾ.... ಗುಟ್ಟು ರಟ್ಟಾಗಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

  ಪ್ರತ್ಯುತ್ತರಅಳಿಸಿ
 4. ಜೋಷಿ ಅವರೆ,

  ವಿಜ್ಞಾನದಿಂದ ಮಾಹಿತಿ ಸೋರಿದೆ
  ಯಾರ ಅಲ್ಪಜ್ಞಾ-ನಕ್ಕೆ ಸೇರಿದೆ?
  ಬಲ್ಲವರಾರು?

  ಪ್ರತ್ಯುತ್ತರಅಳಿಸಿ
 5. ವಾ-ವಾಹ್!!
  ತುಂಬ ಚೆನ್ನಾಗಿ ಬರೀತೀರಿ!

  ಪ್ರತ್ಯುತ್ತರಅಳಿಸಿ
 6. ಸಿಂಧು
  ಚೆನ್ನಾಗಿದೆ ಅಂದ್ರೆ.... ವಾ...ವಾಹ್...ವಾಕರಿಕೆ ಬರುವಷ್ಟು ಅಂತಾನಾ....?

  ಃಃಃಃಃಃಃಃ
  ನಿಮಗೆ ಇಲ್ಲಿಗೆ ಸ್ವಾಗತ, ಬರ್ತಾ ಇರಿ.

  ಪ್ರತ್ಯುತ್ತರಅಳಿಸಿ
 7. "ನಿಮಗೆ ಇಲ್ಲಿಗೆ ಸ್ವಾಗತ, ಬರ್ತಾ ಇರಿ." ಎಂಬ ಹೇಳಿಕೆಯ ಹಿಂದಿನ ಅಪಾಯ ಗೊತ್ತಿರುವಂತಿಲ್ಲ ಅನ್ವೇಷಿಗೆ.

  ಹೇಗೂ 'ಇರಿ'ಯಲು ಪರ್ಮಿಷನ್ ಕೊಟ್ಟಿದ್ದಾರೆ ಎಂದು ಚಾಕು, ಚೂರಿ, ಲಾಂಗು, ಮಚ್ಚು, ಖಡ್ಗ, ತಲವಾರು ಇತ್ಯಾದಿ ಹಿಡಿದುಕೊಂಡು ಬಂದರೆ?? ಅನ್ವೇಷಿ ಮಾತ್ರವಲ್ಲದೆ 'ಇಲ್ಲಿಗೆ' ಬರುವ ಇತರರೂ ಎಚ್ಚರದಿಂದಿರಬೇಕಾದೀತು! (ಈಗಲಾದರೆ ನಿದ್ದೆಗಣ್ಣಿನಲ್ಲಿ ಬಂದು ಅನ್ವೇಷಿ ಏನು ಬೊಗಳುತ್ತಿದ್ದಾನೆ ಎಂದು ನೋಡಿ ಹೋದರೂ ಸಾಕಾಗುತ್ತೆ :-) )

  ಪ್ರತ್ಯುತ್ತರಅಳಿಸಿ
 8. ಅಯ್ಯಯ್ಯಪ್ಪಾ....
  ಸಿಂಧು ಅವರೆ, ವಿಚಿತ್ರಾನ್ನಿಗಳು ಹೇಳಿದ್ದು ಕೇಳಿದ್ರೆ ಭಯವಾಗುತ್ತೆ....
  ಬರ್ತಾ ಬರ್ತಾ ಇರಿಯಬೇಡಿ.
  ಬರೀತಾ ಬರೀತಾ ಕೀಬೋರ್ಡ್ ಕುಟ್ಟಿದರೆ ಸಾಕು.

  ಪ್ರತ್ಯುತ್ತರಅಳಿಸಿ
 9. ಮಾಹಿತಿ ಸೋರಿಕೆಗೆ ಕಾಯಿದೆ ಜಾರಿಯಿಂದ ಎನಾದೀತು?
  ಅದರ ಬದಲು ಸೋರುತ್ತಿರುವ ಕಡೆ ಮೇಣವನ್ನೋ ಅಥವಾ ಸೋಪನ್ನೋ ಹಚ್ಚಬೇಕು ಎಂದು ನನ್ನ ಅಂಬೋಣ..

  ಪ್ರತ್ಯುತ್ತರಅಳಿಸಿ
 10. Hallo I absolutely adore your site. You have beautiful graphics I have ever seen.
  »

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D