ಬೊಗಳೆ ರಗಳೆ

header ads

Hell- mate ಕಡ್ಡಾಯ !

(ಬೊಗಳೂರು ರಗಳೆ ಬ್ಯುರೋದಿಂದ)
ಬೊಗಳೂರು, ಜೂ.17- ಬೊಗಳಿಗರ ಸಹಾಯಕ್ಕೆ ಧುತ್ತನೆ ಧಾವಿಸಿ ಬಂದಿರುವ ಕರ್-ನಾಟಕ ಸರಕಾರ ಕೂಡ ಬೊಗಳಿಗರ ತಲೆ-ಮಂಡೆ ರಕ್ಷಣೆಗಾಗಿ "hell- mate" ಕಡ್ಡಾಯಗೊಳಿಸುವ ಚಿಂತನೆಗೆ ಕೈಹಚ್ಚಿರುವುದು ಇಡೀ ಬೊಗಳೆ ಸಮುದಾಯದಲ್ಲಿ ಸಂಚಲನ ಮೂಡಿಸಿದೆ.

ದ್ವಿಚಕ್ರ ಸವಾರರಿಗೆ hell- mate ಕಡ್ಡಾಯಗೊಳಿಸುವ ಸರಕಾರದ ನಿರ್ಧಾರದ ಹಿಂದೆ ನ್ಯಾಯಾಲಯದ ಆದೇಶದ ನೆರಳಿದೆ. ಆದರೆ ನ್ಯಾಯಾಲಯದ ಆದೇಶಕ್ಕೆ ನಾವು ತಲೆ ಕೆಡಿಸಿಕೊಳ್ಳದಿದ್ದರೂ ಬೊಗಳಿಗರ- ಅದಕ್ಕಿಂತಲೂ ಮಿಗಿಲಾಗಿ hell- mate ತಯಾರಿಕಾ ಕಂಪನಿಗಳ ತಲೆ ಕಾಯ್ದುಕೊಳ್ಳುವುದು ಸರಕು-ಕಾರದ ಆದ್ಯ ಕರ್ತವ್ಯವಲ್ಲವೆ ಎಂದು ರಾಜ್ಯದ ಅಮುಖ್ಯ ಮಂತ್ರಿ ಮರಿಗೌಡರು ಕೇಳಿದ್ದಾರೆ.

ದ್ವಿಚಕ್ರ ಸವಾರರೆಲ್ಲರೂ ತಾವು ನರಕದಲ್ಲಿ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕಳೆಯುತ್ತಿದ್ದಾಗ ಜೊತೆಗಾರರಾಗಿದ್ದ ನರಕ-ಮೇಟ್ (class-mate, school-mate ಥರಾ)ಗಳನ್ನು ಜೊತೆಗೇ ಕರೆದೊಯ್ಯಬೇಕು. ಹೇಗಿದ್ದರೂ ಬೆಂಗಳೂರು ಉದ್ಯಾನ-ನಗರ ಎಂದಿದ್ದದ್ದು ಕಾಂಕ್ರೀಟ್-ನರಕ ಎಂದಾಗುತ್ತಿದೆ. ಇಂಥ ಸಣ್ಣಪುಟ್ಟ ಕಾರ್ಯಗಳಿಂದಲೇ ಬೆಂಗಳೂರಿನ ಸಮಗ್ರ ಬದಲಾವಣೆ ಸಾಧ್ಯ. ಹನಿ ಕೂಡಿದರೆ ಹಳ್ಳ ಎಂಬ ಇದುವರೆಗೆ ಯಾರಿಗೂ ಗೊತ್ತಿರದ ನಾಣ್ನುಡಿಯೊಂದನ್ನು ಅವರು ತಮ್ಮ ಬಾಯಿಂದ ಉದುರಿಸಿದರು.

++++++++++

ಧಮಕಿ: ಕಾರಸ್ಥಾನದಲ್ಲಿ ವಿಪರೀತ ಒತ್ತಡ ಬಿದ್ದ ಪರಿಣಾಮದಿಂದಾಗಿ ಮುದ್ರಣ ಯಂತ್ರ ಅಪ್ಪಚ್ಚಿಯಾದುದರಿಂದ ನಿನ್ನೆಯ ಸಂಚಿಕೆ ಪ್ರಕಟವಾಗಿರಲಿಲ್ಲ. ಎಂದಿನಂತೆ, ಚಂದಾದಾರರ ಹಣ ಮರಳಿಸಲಾಗುವುದಿಲ್ಲ. -ಸಂ

ಕಾಮೆಂಟ್‌‌ ಪೋಸ್ಟ್‌ ಮಾಡಿ

5 ಕಾಮೆಂಟ್‌ಗಳು

 1. ಹೇಲ್‍ಮೆಟ್ಟಿ ತಲೆಗೆ ಯಾಕೆ ಹಚ್ಕೋತೀರ? ಛೇ! ಛೇ! ನ್ಯಾಯಾಲಯದ ಆದೇಶ ನರಳಿರೋದ್ರಿಂದಲೇ ಮತ್ತೆ ಮತ್ತೆ ಕನ್ನಡಿಗರು ಹೇಲ್‍ಮೆಟ್ಟುತ್ತಿರುವುದು. ದುಂಡೂರಾಯರ ಕಾಲದಿಂದಲೂ ಇದು ನಡೆದುಬಂದದ್ದೇ. ಜನರ ಒಳಿತಿಗೆ ಸರ್‍ಕಾರ ಮಾಡ್ತಿರೋದು ಅಂತ ಬಾಯ್ಮಾತಿನಲ್ಲಿ ಹೇಳಿದ್ರೂ, ಸರಕಾರಿಗರ ಕರಾಮತ್ತು ನೋಡಿ ಕನ್ನಡಿಗರು ನರಳೋದೇನೂ ವಿಶೇಷವಲ್ಲ.

  ನಿನ್ನೆ ಸಂಚಿಕೆಗೆ ನನಗಾಗಲೇ ಬಂದಿದೆ. ಆದರೆ ಅದು ಮುದ್ರಿತ ಪ್ರತಿಯಲ್ಲ, ಕರಡು ಪ್ರತಿ. ಸದ್ಯದಲ್ಲೇ ಅದನ್ನು ನಕಲು ಮಾಡಿಸಿ, ಕೈಲಾಸಪಾಳ್ಯದಲ್ಲಿ ಬಿಡುಗಡೆಮಾಡುವೆ. ಬೇಕಿದ್ದವರೂ ಈಗಲೇ ನನ್ನನ್ನು ಸಂಪರ್ಕಿಸುವುದು.

  ಪ್ರತ್ಯುತ್ತರಅಳಿಸಿ
 2. ಸರಕಾರ ಇರೋದೇ ತಲೆ ಇರುವವರ (Read: ದುಡ್ಡಿರೋರ) ರಕ್ಷಣೆಗಾಗಿ ಅಲ್ವೇ ಮಾವಿನಯನಸರೆ.

  ಆದ್ರೆ ನೀವು ಕೈಲಾಸಪಾಳ್ಯದಲ್ಲಿ ಈ ರೀತಿ ದುಡ್ಡು ಮಾಡೋದು ಸರಿಯಲ್ಲ. ನಿಮ್ಮ ಮೇಲೆ ಇನ್ ಕಮ್ಮಿ ಟ್ಯಾಕ್ಸ್ ರೈಡ್ ಮಾಡಿಸಲಾಗುತ್ತದೆ ಎಂದು ಪ್ರೀತಿಯಿಂದ ಹೇಳುತ್ತಿದ್ದೇವೆ.

  ಪ್ರತ್ಯುತ್ತರಅಳಿಸಿ
 3. hell-mate ಹಾಕಿಕೊಂಡು ಓಡಿಸೋದು ಕಡ್ಡಾಯ ಯಾಕೆ ಮಾಡಬೇಕು?

  ತಲೆ ಇದ್ದವರು ಅದನ್ನು ರಕ್ಷಿಸಿಕೊಳ್ಳೋಕ್ಕೆ ಹೆಲ್-ಮೇಟ್ ಉಪಯೋಗಿಸುತ್ತಾರೆ. ಇನ್ನ ತಲೆನೇ ಇಲ್ಲ ಅಂದರೆ ಇಲ್ಲದಕ್ಕೆ ಹೇಗೆ ಹೆಲ್ಮೆಟ್ ತೊಡಿಸೋದು??

  ಹೆಲ್ಮೆಟ್ ಇದ್ದರೆ ಇನ್ನೊಂದು ಉಪಯೋಗನೂ ಇದೆ.ವಿವಾಹಿತರು ಅದನ್ನು ಹಾಕಿಕೊಂಡು ಲೇಟಾಗಿ ಮನೆಗೆ ಹೋದರೆ ಅಲ್ಲಿ ಬೀಸಲ್ಫಡುವ ಸೌಟು,ಲಟ್ಟಣಿಕೆ ಬೌನ್ಸರ್‍ಗಳಿಂದ ರಕ್ಷಣೆ ಸಿಗುತ್ತೆ ಅಂತಾ ನನ್ನ ಅನಿಸಿಕೆ. ಇದನ್ನೂ ಬೊಗಳೆಯ ಅನುಭವಸ್ತ ವಿವಾಹಿತರು ಹೇಳಬೇಕು.

  ಪ್ರತ್ಯುತ್ತರಅಳಿಸಿ
 4. ಶಿವ್ ಅವರೆ,

  ನೀವು ಲಟ್ಟಣಿಗೆ ರುಚಿ ನೋಡಿದ ಅನುಭವ ಕಥನ ಸಮಗ್ರವಾಗಿ ಹೇಳಬಾರದೆ?

  ಬೊಗಳೆಯಲ್ಲಿ ಅಂಥ ಅನುಭವಕ್ಕೆ ಪ್ರಯತ್ನಿಸಲಾಗುವುದು ಅಂತ ಸುದ್ದಿಯ ಮೂಲಗಳನ್ನು ಉಲ್ಲೇಖಿಸಿ ಬಿಸಿಬಿಸಿ ನ್ಯೂಸ್ ವರದಿ ಮಾಡಿದೆ.

  ಪ್ರತ್ಯುತ್ತರಅಳಿಸಿ
 5. ಅಸತ್ಯಿಗಳೇ,

  ನಾನಿನ್ನು ಲಟ್ಟಣಿಗೆಯ 'ರುಚಿ' ನೋಡಿಲ್ಲ..ಸದ್ಯಕ್ಕೆ ಲಟ್ಟಣಿಗೆನೂ ಇಲ್ಲ ಲಟ್ಟಣಿಗೆ ಎಸೆಯೋರೂ ಇಲ್ಲ :)

  ನಿಮ್ಮ ಅನುಭವಾಮೃತ ಕೇಳಲು ಉತ್ಸುಕನಾಗಿದ್ದೇನೆ :)

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D