Subscribe Us

ಜಾಹೀರಾತು
header ads

ಪ್ರತಿಭಾ ಪಲಾಯನಕ್ಕೆ ಸರಕಾರ ಬದ್ಧ: ಸಚಿವ

(ಬೊಗಳೂರು ಸಂದರ್ಶನ ಬ್ಯುರೋ)
ಬೊಗಳೂರು, ಮೇ 27- ಜಾತಿ ಆಧಾರಿತ ಸೀಟು ಮೀಸಲಾತಿ ಜಾರಿಗೆ ತರುವ ಮೂಲಕ ಭಾರತದಿಂದ "ಪ್ರತಿಭಾ ಪಲಾಯನ" ಕಾರ್ಯಾಚರಣೆಗೆ ಸರಕಾರ ಬದ್ಧವಾಗಿದೆ ಎಂದು ಕೇಂದ್ರದ Uncontrolled Price Agenda (UPA) ಸರಕಾರವಿಂದು ಖಚಿತವಾಗಿ ನುಡಿದಿದೆ.

ಪ್ರತಿವರ್ಷವೂ ಯಾವುದೇ ಶೈಕ್ಷಣಿಕ ಪರೀಕ್ಷಾ ಫಲಿತಾಂಶಗಳಲ್ಲಿ ಮುಂದುವರಿದವರೇ ಮುಂದೆ ಹೋಗುತ್ತಿದ್ದಾರೆ. ಈ ಕಾರಣಕ್ಕೆ ಹಿಂದುಳಿದವರು ಉನ್ನತ ಹುದ್ದೆಗಳಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ಈ ಲೋಕದಲ್ಲಿ ಬದುಕುವ ಹಕ್ಕೇ ಇಲ್ಲವೇ ಎಂದು ಪ್ರಧಾನಿ ಪದವಿ ಮೇಲೆ ಕಣ್ಣಿಡುತ್ತಾ ಬಂದಿರುವ ಶಿಕ್ಷಣ ಮತ್ತು ಮಾನವ "ಸಂಪದ್ಭರಿತ" ಸಚಿವ ದುರ್ಜನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಚಂದ್ರಲೋಕ ಯಾನಕ್ಕೆ ಭಾರತೀಯರನ್ನು ಕಳುಹಿಸುವ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅಮೆರಿಕ ಅಧ್ಯಕ್ಷ ಬುಷ್ ಮಧ್ಯೆ ನಡೆದ ಮಾತುಕತೆ ವಿವರಗಳು ಇತ್ತೀಚೆಗೆ ಇಲ್ಲಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದರು.

ಚಂದ್ರಲೋಕಕ್ಕೆ ಕಳುಹಿಸುವವರ ಪಟ್ಟಿಯಲ್ಲಿ ಮಾರ್ಪಾಟು ಮಾಡಲಾಗಿದೆ. ಅದರ ಪ್ರಕಾರ,
ಶೇ.20- SC,
ಶೇ.20- ST,
ಶೇ.15- OBC,
ಶೇ.15-ಅಲ್ಪಸಂಖ್ಯಾತರು,
ಶೇ.10-ಕಾಂಗ್ರೆಸಿಗರು/ಮಕ್ಕಳು,
ಶೇ.5 ಎಡಪಂಥೀಯರು,
ಶೇ.5 ಕಾಶ್ಮೀರೀ ವಲಸಿಗ ಉಗ್ರರು
ಸೇರಿರುತ್ತಾರೆ.
ರಾಜಕಾರಣಿಗಳಿಗೂ ಜಾಗ ಕಲ್ಪಿಸಲಾಗುವುದು. ಸ್ಥಳಾವಕಾಶ ಉಳಿದರೆ ಒಬ್ಬ ಖಗೋಳ ವಿಜ್ಞಾನಿ, ಸಾಧ್ಯವಾಗದಿದ್ದರೆ ಕನಿಷ್ಠ ನವಜಾತ ಶಿಶುವಿಗಾಗುವಷ್ಟು ಜಾಗ ದೊರೆತರೆ ವಿಜ್ಞಾನಿಯ ಮಗುವನ್ನಾದರೂ ಚಂದ್ರಲೋಕಕ್ಕೆ ಕಳುಹಿಸಲಾಗುವುದು ಎಂದವರು ಹೇಳಿದ್ದಾರೆ.

ಪ್ರತಿಭೆ ಇದ್ದವರು ಎಲ್ಲಿ ಬೇಕಾದರೂ ಬದುಕುತ್ತಾರೆ, ಅವರೆಲ್ಲಾ ವಿದೇಶಕ್ಕೆ ಹೋಗಲಿ, ಅಲ್ಲಿ ಮತ್ತಷ್ಟು ಶ್ರೀಮಂತರಾಗಲಿ. ಇದರಿಂದ ಭಾರತದ ಜನಸಂಖ್ಯೆ ಕಡಿಮೆಯಾಗುತ್ತದೆ ಎಂದು ರಾಜೀವ್ ಗೋಸ್ವಾಮಿಯನ್ನು ನೆನೆದುಕೊಂಡು ನುಡಿದ ಅವರು, ಪಾಪ... ಪ್ರತಿಭೆ ಇಲ್ಲದವರೂ ತಿನ್ನುವುದು ಬೇಡವೆ, ನಾವೂ ತಿಂದು ಅವರಿಗೂ ನೀರು ಕುಡಿಸುತ್ತೇವೆ ಎಂದು ತಮ್ಮ ಕೈಯಲ್ಲಿದ್ದ ಬಡಿಗೆಯನ್ನು ನೆಲಕ್ಕೆ ಕುಟ್ಟಿ ಕುಟ್ಟಿ ನುಡಿದರು.

Post a Comment

12 Comments

 1. ಈ ಪಟ್ಟಿ ಸರಿ ಇಲ್ಲ. ಇದರಲ್ಲಿ ಮಹಿಳೆಯರನ್ನು ಕಡೆಗಣಿಸಲಾಗಿದೆ. ವಿಜ್ಞಾನಿಯ ಮಗುವಿನ ಬದಲು, ಅವನ ಹೆಂಡತಿಯನ್ನೇ ಯಾಕೆ ಕಳಿಸಬಾರದು?

  ReplyDelete
 2. This comment has been removed by a blog administrator.

  ReplyDelete
 3. ಇದು ತುಂಬಾ ಮೋಸ. ತಮಿಳರಿಗೆ, ಸಿಖ್ಖರಿಗೆ, ಬಂಗಾಲಿಗಳಿಗೆ, ಮರಾಠಿಗರಿಗೆ, ಮಲಯಾಳಿಗಳಿಗೆ ಇತ್ಯಾದಿ ಹಲವಾರು ಪ್ರಾಂತ್ಯಗಳನ್ನು ಪ್ರತಿನಿಧಿಸುವವರುಗಳಿಗೆ ಅನ್ಯಾಯವಾಗಿದೆ, ನಿರ್ಲಕ್ಷಿಸಿದ್ದಾರೆ. ಡೌನ್ ಡೌನ್ ಸಿಂಗಣ್ಣ, ಡೌನ್ ಡೌನ್ ಮಂಗಣ್ಣ. ಅನೇಕತೆಯಲ್ಲಿ ಏಕತೆ ಎಂಬ ಏಕತಾನ ನುಡಿಗೆ ಅವಮಾನವಾಗಿದೆ.

  ಸದ್ಯ ನಾನಂತೂ ಏರೋಪ್ಲೇನ್, ರಾಕೆಟ್ ಹತ್ತೋ ಪಟ್ಟಿಯಲ್ಲಿ
  ಇಲ್ಲ. ಇಲ್ಲೇ ಇದ್ದು ರೈಲ್ ಬಿಟ್ಟುಕೊಂಡು ಹಾಯಾಗಿರ್ತೀನಿ.

  ReplyDelete
 4. Sritri ಅವರೆ,
  ನಿಮ್ಮ ಮಹಿಳಾ ಪರ ಹೋರಾಟಕ್ಕೆ ಜಯವಾಗಲಿ.

  ದೇಶಾದ್ಯಂತ ನಡೆಯುತ್ತಿರುವ ಮೀಸಲಾತಿ ಪರ ವಿರೋಧ ಪ್ರತಿಭಟನೆಗಳ ಜತೆಗೆ ಮಹಿಳಾ ಪರ-ವಿರೋಧ, ಹಿಂದುಳಿದವರ ಪರ-ವಿರೋಧ, ದಲಿತರ ಪರ-ವಿರೋಧ, ರಾಜಕಾರಣಿಗಳ ಪರ-ವಿರೋಧ ಇತ್ಯಾದಿತ್ಯಾದಿ ಪರ ವಿರೋಧ ಪ್ರತಿಭಟನೆಗಳು ಸೇರಿಕೊಂಡರೆ ದೇಶದ ಪ್ರತಿ ಕಣ ಕಣದಲ್ಲೂ ಪ್ರತಿಭಟನೆ ರಕ್ತ ಹರಿಯುವಂತಾಗುತ್ತದೆ ಮತ್ತು ಕೇಂದ್ರ ಸರಕಾರದ ಉದ್ದೇಶ ಸಫಲವಾದಂತಾಗುತ್ತದೆ.

  ಮತ್ತೆ ನೀವೇ ಅಮ್ಮನ ವೈಭವೀಕರಣ ಅಂತ ಹೇಳಿದ್ದನ್ನು ರಾಜಕಾರಣಿಗಳು ಗಮನಕ್ಕೆ ತೆಗೆದುಕೊಂಡಿರಬಹುದೇನೋ....!

  ReplyDelete
 5. ಮಾವಿನಯನಸ ಅವರೆ,
  ನಿಮ್ಮ ರೈಲು ಚೆನ್ನಾಗಿ ಓಡುತ್ತಿದೆ. ಪಟ್ಟಿಯೂ ಉದ್ದವಾಗಿದೆ. ಅಂದ್ರೆ.... ಮೀಸಲಾತಿ ಪಟ್ಟಿ ಅಂತ. ರೈಲು ಪಟ್ಟಿ ಅಲ್ಲ!

  ಮತ್ತೆ ಮೊನ್ನೆ ಯಾರೋ ಏರೋಪ್ಲೇನ್ ಹತ್ತಿಸಲು ತಯಾರಿ ನಡೆಸಿದ್ದರಂತ ಕೇಳಿದ್ದೆ...! ಹೌದೇ?

  ReplyDelete
 6. ಈ ವಿಷಯ ನಮ್ಮಿಬ್ಬರಲ್ಲಿ ಮಾತ್ರ ಇರಬೇಕಿತ್ತು. ನೀವು ಆ ಪೋಲಿ(ಸ್) ಹುಚ್ಚಪ್ಪನಿಗೆ ಕಾಸು ಕೊಟ್ಟು ನನ್ನನ್ನು ಏರೋಪ್ಲೇನ್ ಹತ್ತಿಸೋಕ್ಕೆ ಪ್ರಯತ್ನಿಸಿದ್ದು ಅಂತ ನನಗೂ ಗೊತ್ತು. ಅದಿರ್ಲಿ, ಇಲ್ಲಿ ಅಮ್ಮಂದಿರು ಅಪ್ಪಂದಿರುಗಳು ಬರ್ತಿರ್ತಾರೆ. ಈ ವಿಷಯ ಅವರಿಗೂ ತಿಳಿದರೆ ನನ್ನ ಮಾನ ಏನಾಗಬೇಕು ಹೇಳಿ.

  ಹೀಗೆ ಪಬ್ಲಿಕ್ಕಾಗಬೇಡವೂ ಅಸತ್ಯ
  ನಿನಗೆ ಡೊಗ್ಗು ಹೊಡೆಯುವೆ ದಿನನಿತ್ಯ
  ಮರ್ಯಾದೆ ಇಹುದಯ್ಯ ನಾ ಮಕ್ಕಳೊಂದಿಗ
  ಇನ್ಮೇಲೆ ಕದಿಯೋಲ್ಲ ನಾ ನಿನ್ನ ನಗ

  ReplyDelete
 7. ಮಾವಿನಯನಸ ಅವರೆ,
  ನಗ? ಬೇಡ..!!!

  ನೀವು ನಗ(ಲು ಹೋದರೆ ನಿಮ್ಮ ಕೈಗೆ) ಬೇಡಿ...!!!

  ReplyDelete
 8. ನಿಮ್ಮ ಚಂದ್ರಲೋಕದ ಪಟ್ಟಿ ಚೆನ್ನಾಗಿದೆ. ಎಲ್ಲಾ ವರ್ಗದವರಿಗೂ ಪ್ರಾತಿನಿಧ್ಯ ನೀಡಲಾಗಿದೆ ಎಂದು ದುರ್ಜನ್ ಸಿಂಗ್ ಹೇಳಿಕೊಂಡಿದ್ದನ್ನು ಮಾತ್ರ ನೀವು ಸೇರಿಸಿಲ್ಲ! ಶ್ರೀತ್ರೀ ಅವರ ಬೇಡಿಕೆಯಂತೆ ಮುಂದಿನ ಬಾರಿ 'ಸೂರ್ಯಲೋಕ'ಕ್ಕೆ ಕಳಿಸುವ ಪಟ್ಟಿಯಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡುವ ಬಗ್ಗೆ ಈಗಿನಿಂದಲೇ ನಿಮ್ಮ ಪತ್ರಿಕೆ ಜನಪರ ಹೋರಾಟ ನಡೆಸಲಿ.

  ReplyDelete
 9. ಇದುವರೆಗೆ ಚಂದ್ರಲೋಕದಲ್ಲಿ ಎಲ್ಲ 'ಸತ್ಯ'ಮಯವಾಗಿದೆ. ಇದೀಗ ಭಾರತದಿಂದ ಇವರೆಲ್ಲ ಚಂದ್ರಲೋಕಯಾತ್ರೆಗೈದರೆ ಅಲ್ಲಿ ಅಸತ್ಯ ತಾಂಡವವಾಡುವ ಉಜ್ವಲ (ಹುಣ್ಣಿಮೆ ಬೆಳಕಿಗಿಂತಲೂ ಪ್ರಕಾಶಮಾನ) ಸಾಧ್ಯತೆಗಳಿವೆ. ಅದನ್ನು ಅನ್ವೇಶಿಸಲು ಅಸತ್ಯಾನ್ವೇಶಿ ಬೊಗಳೆ ಪಂಡಿತರನ್ನು ಚಂದ್ರಲೋಕಕ್ಕೆ ಕಳಿಸದಿದ್ದರೆ ಹೇಗೆ? ಹಾಗಾಗಿ ಖಗೋಳಶಾಸ್ತ್ರಜ್ಞ ಅಥವಾ ಅವನ ಮಗು ಅಥವಾ ಹೆಂಡತಿ - ಇವರಿಗಿಂತ ಅಸತ್ಯಾನ್ವೇಶಿಯನ್ನು ಗೋಣಿಯಲ್ಲಿ ಕಟ್ಟಿ ರಾಕೆಟ್‌ನ ಡಿಕ್ಕಿಯಲ್ಲಿಟ್ಟು ಪಾರ್ಸೆಲ್ ಮಾಡುವುದು ಒಳ್ಳೆಯದೆಂದು ಮನಮೋಹನ್ ಸಿಂಗ್‌ರ ಕೋಲ್ಡ್ ಮೈಲ್ ಐಡಿ ಗೆ ಬರೆದು ಐಡಿಯಾ ಕೊಟ್ಟಿದ್ದೇನೆ.

  ReplyDelete
 10. hallo ellaru meesalati bagge nanu bredidde. VK yalli prakatavagide

  ReplyDelete
 11. ಖಂಡಿತಾ ವಿಶ್ವನಾಥ್ ಅವರೆ,
  ನಮ್ಮ ಇಂಥಹ ಘನ ರಾಜಕಾರಣಿಗಳೆಲ್ಲರನ್ನೂ ಸೂರ್ಯಲೋಕಕ್ಕೆ ಕಳುಹಿಸುವ ನಿಟ್ಟಿನಲ್ಲಿ, ಈ ಯಾನದ ಸೀಟುಗಳಲ್ಲಿ ಶೇ 100 ಕೂಡ ರಾಜಕಾರಣಿಗಳೇ ಮೀಸಲು ಎಂಬ ಧ್ಯೇಯದೊಂದಿಗೆ ನಮ್ಮ ಪತ್ರಿಕೆ ಕೆಂಡದಂತಹ ಹೋರಾಟ ನಡೆಸಲಿದೆ.

  ReplyDelete
 12. ಜೋಷಿ ಅವರೆ,
  ಬೊಗಳೆ ಪಂಡಿತನನ್ನು ರಾಕೆಟ್ ನ ಹಿಂಬದಿ ಡಿಕ್ಕಿಯಲ್ಲಿಟ್ಟಿದ್ದೂ ಆಯ್ತು, ಅಲ್ಲಿಂದ ಸೂಸಿದ ಹೊಗೆಯ ವೇಗಕ್ಕೆ ಬೊಗಳೆ ಪಂಡಿತ ರಾಕೆಟ್ ಮೇಲೇರಿದಷ್ಟೇ ರಭಸವಾಗಿ ಕೆಳಕ್ಕೆ ತಳ್ಳಲ್ಪಟ್ಟ ಕಾರಣ, ಈಗ ಪಾತಾಳ ಲೋಕದಲ್ಲಿ ಅಸತ್ಯಾನ್ವೇಷಣೆ ಮಾಡುತ್ತಿರುವ ಸುದ್ದಿ ಬಂದಿದ್ದೂ ಆಯ್ತು.

  ನೀವು ಮ್ಯಾನ್ ಮೋಹನ್ ಸಿಂಗರ ಕೋಲ್ಡ್ ಮೈಲ್ ಐಡಿಗೆ ಯಾ ಸೇರಿಸಿದ್ದೇ ಈ ಎಡವಟ್ಟಿಗೆ ಕಾರಣವಂತೆ.

  ReplyDelete

ಏನಾದ್ರೂ ಹೇಳ್ರಪಾ :-D