ಕೊಪ್ಪಳ ಉಸ್ತುವಾರಿ ಸಚಿವರ ಕ್ಷೇತ್ರಕ್ಕೆ "ಮುಖ್ಯಮಂತ್ರಿ ಬಂದರೆ ಮುಕ್ಕಾಲು ಕೋಟಿ ರೂ. ಖರ್ಚು" ಎಂಬ ಶೀರ್ಷಿಕೆಯಡಿ ವಿಜಯಕರ್ನಾಟಕದಲ್ಲಿ ಪ್ರಕಟವಾದ ವರದಿಗೆ ಯದ್ವಾತದ್ವಾ ಉತ್ತರಿಸಿರುವ, ಜರ್ಮನಿಯ ಸಂದುಹೋದ ಸರ್ವಾಧಿಕಾರಿ ಹಿಟ್ಲರ್‌ನ ಸ್ಥಾನ ತುಂಬಲು ಅರ್ಜಿ ಗುಜರಾಯಿಸಿರುವ ಸಚಿವರು, ಈ ರೀತಿಯ ಸುಳ್ಳು ಸುದ್ದಿ ಪ್ರಕಟಿಸಿ ಪತ್ರಿಕೆ ತಮ್ಮ ಘನತೆಗೆ, ಶ್ರೀಮಂತಿಕೆಗೆ ಚ್ಯುತಿ ತಂದಿದೆ ಎಂದು ಘಂಟಾಘೋಷವಾಗಿ ಸಾರಿದ್ದಾರೆ.
ಮುಖ್ಯಮಂತ್ರಿ ಬಂದರೆ ಕೇವಲ ಮುಕ್ಕಾಲು ಕೋಟಿ ರೂ. ಖರ್ಚಾಗಿದೆ ಅಂತ ಪತ್ರಿಕೆಯವರು ಸುಳ್ಳು ಬರೆದಿದ್ದಾರೆ. ತಮ್ಮ ಇದ್ದಬದ್ದ ಮಾನ ಕಾಪಾಡಲಾದರೂ ಹತ್ತಿಪ್ಪತ್ತು ಕೋಟಿ ಖರ್ಚಾಗಿದೆ ಅಂತ ನಿಜ ವಿಷಯ ಬರೆಯಬಹುದಿತ್ತಲ್ಲ, ಕೇವಲ ಮುಕ್ಕಾಲು ಕೋಟಿ ಖರ್ಚು ಮಾಡಿದ್ದೆಂದು ಮುಖ್ಯಮಂತ್ರಿಗೆ ತಿಳಿದರೆ ತನ್ನ ಮಾನ ಏನಾಗಬೇಡ ಎಂದು ಅವರು ಪ್ರಶ್ನಿಸಿದ್ದಾರೆ.
ವರದಿಗಾರನಿಗೆ ಅ ಆ ಇ ಈಯನ್ನು ಸ್ಲೇಟಿನಲ್ಲಿ ಬರೆದು ಹೇಳಿಕೊಡುವುದಾಗಿ ಪ್ರತಿಜ್ಞೆ ಮಾಡಿರುವ ಸುಸ್ತುವಾರಿ ಮಂತ್ರಿ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಈ ಪತ್ರಿಕೆಯನ್ನು ನಂ.1 ಮಾಡಲು ಎಷ್ಟು ಕಷ್ಟ ಪಟ್ಟಿದ್ದೇನೆ, ಈ ಪತ್ರಿಕೆ ನಡೆಸಲು ಕೋಟ್ಯಂತರ ರೂ. ಖರ್ಚಾಗುತ್ತದೆ. ಹಾಗಿರುವಾಗ ಇಂಥ ಪತ್ರಿಕೆಯನ್ನು ನಡೆಸುತ್ತಿರುವ "ನನಗೆ" ಈ ಕನಿಷ್ಠ ಖರ್ಚಿನ ವರದಿ ಅಪಮಾನವಲ್ಲವೆ ಎಂದವರು ಕೇಳಿದ್ದಾರೆ.
ಅಭಿವೃದ್ಧಿ: ತನ್ನ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಆಗಿಲ್ಲ ಅಂತಲೂ ಪತ್ರಿಕೆ ಸುಖಾಸುಮ್ಮನೆ ಸುಳ್ಳಾಸುಳ್ಳು ಬರೆದಿದೆ. ಅಸತ್ಯಾನ್ವೇಷಿಗಳೆ, ನೀವೇ ಬಂದು ನೋಡಿ, ನಮ್ಮ ಕ್ಷೇತ್ರ ಶಂಕುಸ್ಥಾಪನೆಯಲ್ಲಿ ವಿಶ್ವದಾಖಲೆ ಮಾಡಲು ಹೊರಟಿದೆ. ಈ ಕ್ಷೇತ್ರದಲ್ಲಿ ಎಷ್ಟೊಂದು ಶಂಕುಗಳಿವೆಯೆಂದರೆ ವಸತಿರಹಿತರು ಕೂಡ ಈ ಶಂಕುಗಳನ್ನೇ ಆಧುನಿಕ ಶೌಚಾಲಯವಾಗಿಸಿಕೊಂಡು ದೇಹಬಾಧೆ ತೀರಿಸಿಕೊಳ್ಳುತ್ತಾರೆ. ಇಲ್ಲಿರುವ ಸಾವಿರಾರು ಅಡಿಗಲ್ಲುಗಳೇ ತಮ್ಮ ಸಾಧನೆ, ಅಭಿವೃದ್ಧಿ ಕಾರ್ಯಕ್ಕೆ ಸಾಕ್ಷಿ ಎಂದು ಸಚಿವರು ಒದರಿದ್ದಾರೆ.
ಇಲ್ಲಿ ಹುಟ್ಟಿದಾರಭ್ಯ ಪಾಳುಬಿದ್ದಿರುವ ಇಷ್ಟೊಂದು ಅಡಿಗಲ್ಲುಗಳಿವೆಯಲ್ಲ ಎಂದು ತೋರಿಸಿದ ಸಚಿವರು, ಅಭಿವೃದ್ಧಿ ಮಾಡುವ ಕಾರ್ಯವೇನಿದ್ದರೂ ಪತ್ರಿಕೆಗಳಿಗೆ ಬಿಟ್ಟ ವಿಷಯ. ತನ್ನ ಕೆಲಸ ಅಡಿಗಲ್ಲು ಹಾಕಿ ಭಾಷಣ ಮಾಡುವುದು ಮಾತ್ರ. ಇದಕ್ಕೇ ಸಾಕಷ್ಟು ಸಮಯ ತಗುಲುತ್ತದೆ. ಹೀಗಿರುವಾಗ ಪತ್ರಿಕೆಯವರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದಿದ್ದರೆ ಮುಂದಿನ ಬಾರಿ ಮತಭಿಕ್ಷೆಗಾಗಿ ಮತದಾರರಿಗೆ ಮುಖತೋರಿಸುವುದಾದರೂ ಹೇಗೆ ಎಂದವರು ಪ್ರಶ್ನಿಸಿದ್ದಾರೆ.
- Home
- NEWS
- _POLITICS
- __ಜಾರಕಾರಣ
- __ರಾಜಕೀಯ
- __ಪಾತಕಿಸ್ತಾನ
- _ELECTION
- __ಚುನಾವಣೆ
- __ಚುಚ್ಚುವ ಆಣೆ
- __ಎಲೆಕ್ಷನ್
- __ಓಟು
- _SPORTS
- BARKING NEWS
- YOUTH
- _ಭಗ್ನ ಹೃದಯ
- _ವಿಚ್ಛೇದನೆ
- _ಬಾಲ್ಯ ವಿವಾದ
- _ನಿರುದ್ಯೋಗ
- _ಬಾಲ-ಕರುಗಳ ಸಂಘ
- SCIENCE
- _ತಾಪಮಾನ
- _ಸಂಚೋದನೆ
- _ಕತ್ತರಿ ಪ್ರಯೋಗ
- _ಪ್ರಾಣಿ ನಿರ್ದಯ ಸಂಘ
- _ಒದೆಗಳು
- EDITORIAL
- EDUCATION
- _ಶೈ-ಕ್ಷಣಿಕ
- _ಬ್ಲಾಗಿನ
- _ಏಪ್ರಿಲ್ 1
- BUSINESS
- _ಕುದುರೆ ವ್ಯಾಪಾರ
- _ಆರ್ಥಿಕ ಸ್ಥಿತಿ
- _ವ್ಯವಹಾರ
- _ಜಾಹೀರಾತು
- __ನ್ಯಾನೋ
- HEALTH
- _ಕುಡುಕರ ಸಂಘ
- _ಅನಾರೋಗ್ಯ
- _ಜನಸಂಖ್ಯಾ ನಿಯಂತ್ರಣ
- INTERVIEWS
- _Someದರ್ಶನ
- _ಸಂದರ್ಶನ
4 ಕಾಮೆಂಟ್‌ಗಳು
ಸುಳ್ಳು ಸುದ್ದಿ ಪ್ರಕಟಿಸಿ ಮಾನ ಮಂತ್ರಿಗಳ ಮಾನ (ಇದೆಯೆಂದು ಭಾವಿಸುವೆ) ಕಾಪಾಡಿದ ಕನ್ನಡಿಗರ ಎಮ್ಮೆಗೆ ಎಷ್ಟು ಕಾಣಿಕೆ ಸಿಕ್ಕಿತೆಂಬುದು ತಿಳಿಯಲಿಲ್ಲ. ಪಕ್ಕಕ್ಕೆ ಬರುವೆ ನನಗೊಬ್ಬನಿಗೇ ತಿಳಿಸಿ. ನಾನು ಪಾಲು ಕೇಳುವುದಿಲ್ಲ.
ಪ್ರತ್ಯುತ್ತರಅಳಿಸಿಚಾಟು ಡಬ್ಬವನ್ನೂ ಸೇರಿಸಿರುವುದು ಬಹಳ ಸಂತೋಷದ ವಿಷಯ. ಮಿಕ್ಕೆಲ್ಲ ಅಂತರ್ಜಾಲ ಪತ್ರಿಕೆಗಳಿಗೆ ಪತ್ರಿಕೆಯು ಸಡ್ಡು ಹೊಡೆಯುತ್ತಿದೆ ಎಂಬುದು ಗಾಳಿಯ ಕೇಳಿಬಂದ ಮಾತು.
ಮಾವಿನರಸರೇ,
ಪ್ರತ್ಯುತ್ತರಅಳಿಸಿನಿಮ್ಮ ಮಾವಿನ ರಸಾಯನದಂತಹ ನುಡಿಗೆ ಧನ್ಯವಾದಗಳು. ಏನೇ ಆದರೂ ನಿಮ್ಮ ಡಿಸ್ಪ್ಲೇ ಹೆಸರಂತೂ ನನ್ನ ನಾಲಿಗೆಯಲ್ಲಿ ಸರಿಯಾಗಿ ನಿಲ್ಲುವುದೇ ಇಲ್ಲ. ಅದಕ್ಕಾಗಿ ಮಾವಿನ ರಸವೇ ಸೂಕ್ತ ಎಂದು ಭಾವಿಸುತ್ತೇನೆ.
ಚಾಟು ಡಬ್ಬವನ್ನು ನಿಮ್ಮಿಂದಲೇ ಕದ್ದದ್ದು ಅಂತ ನಿಮಗೆ ಗೊತ್ತಾಗದಿದ್ದರೆ ಸಾಕು ಮಾರಾಯ್ರೇ...
ಎಷ್ಟು ಕಾಣಿಕೆ ಸಿಕ್ಕಿದೆ ಅಂತ ಕೇಳಿದ್ರೀ ತಾನೆ? ಹೇಳಿಬಿಡುತ್ತೇನೆ. ಇತ್ತ ಆಲಿಸಿ "#$@!^&*$#@" ಕೇಳಿಸಿತಲ್ವ....?
houdu nanu kannadigalu :) nanna blog nanna bhavanegalannu heluthade. nanu ondu dodda sankastha dalli iddene addarinda nanna blogs hange ide. kannada fonts kanisuthede.
ಪ್ರತ್ಯುತ್ತರಅಳಿಸಿreply madidakke Dhanyavada
ಬೊಗಳೆ ಓದಲು ಆಸಕ್ತಿ ತೋರಿದ್ದಕ್ಕೆ ಧನ್ಯವಾದ ಒಗಟು ಅವರೆ,
ಪ್ರತ್ಯುತ್ತರಅಳಿಸಿನಿಮ್ಮೆಲ್ಲಾ ಸಂಕಷ್ಟಗಳು ಬೊಗಳೆ ವಾಚನ (ಪುರಾಣವಾಚನ, ಸಹಸ್ರನಾಮಾರ್ಚನೆ ಇತ್ಯಾದಿಯಂತೆ)ದಿಂದ ಪರಿಹಾರವಾಗುತ್ತವೆ ಎಂದು ಅಸತ್ಯಾನ್ವೇಷಿ ಮುನಿಗಳು ಭರವಸೆ ನೀಡಿದ್ದಾರೆ.
ಏನಾದ್ರೂ ಹೇಳ್ರಪಾ :-D