ಬೊಗಳೆ ರಗಳೆ

header ads

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.



[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ]
ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ ಮುಂದೆ ಸಾಗಿದ ರೈಲಿನ ಕುರಿತಾದ ವರದ್ದಿಯೊಂದರಿಂದ ಎಚ್ಚೆತ್ತ ಬೊಗಳೆ ಏಕೈಕ ಸದಸ್ಯರ ಬ್ಯುರೋದ ಸಮಸ್ತ ಸಿಬ್ಬಂದಿ, ಚಕಿತರಾಗಿದ್ದಾರೆ.

ಇದಕ್ಕೆ ಕಾರಣ, ಬೊಗಳೆ ರಗಳೆ ಪತ್ರಿಕೆಯ ಸೊಂಪಾದಕರೇ ಯಾವತ್ತೂ ಹಳಿ ಇಲ್ಲದ ರೈಲು ಚಲಾವಣೆಯಲ್ಲಿ ನಿಸ್ಸೀಮರಾಗಿರುವಾಗ, ಅವರಿಗೆ ಸಿಗದ ಪ್ರಚಾರ, ಪ್ರಸಾರವು ಇದೀಗ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಸಿಗುತ್ತಿರುವ ಬಗ್ಗೆ ಬೊಗಳೆ ರಗಳೆ ಪತ್ರಿಕೆಯ ಸಂಪಾದಕರೂ, ಪ್ರೂಫ್ ರೀಡರೂ, ವರದ್ದಿಗಾರರೂ, ಬೆರಳಚ್ಚು ಸಿಬ್ಬಂದಿಯೂ ಮತ್ತು ಏಕೈಕ ಓದುಗರೂ ಕೂಡ ಆಗಿರುವ ಬೊ.ರ. ಸಿಬ್ಬಂದಿ ತಗಾದೆ ಎತ್ತಿದ್ದಾರೆ.

ಹಳಿ ಇಲ್ಲದೆ ರೈಲು ಬಿಡುವವರು ಇಡೀ ಲೋಕದಲ್ಲಿ ಸಾಕಷ್ಟು ಮಂದಿ ತುಂಬಿರುವಾಗ ಎಂಜಿನ್ ಇಲ್ಲದೆಯೇ ರೈಲು ಬಿಟ್ಟವರ ವಿಷಯ ದೊಡ್ಡದೇನಲ್ಲ ಎಂಬುದು ಅವರ ಅಂಬೋಣ. ಹೀಗಾಗಿ ರೈಲ್ವೇ ಸಿಬ್ಬಂದಿ ಮೇಲೆ ಕ್ರಮ ಕೈಗೊಂಡಿರುವುದು ಅರ್ಥಹೀನ ಎಂಬುದನ್ನು ಬೊ.ರ. ತನ್ನ ತನಿಖೆಯಿಂದ ಕಂಡುಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

ಏನಾದ್ರೂ ಹೇಳ್ರಪಾ :-D