ಬೊಗಳೆ ರಗಳೆ

header ads

ಬೊಗಳೆ ಹುಟ್ಟು ಹಬ್ಬಕ್ಕೆ ಕಡಿವಾಣ: ಮೋದಿ

[ಬೊಗಳೂರು ಹುಹ ಬ್ಯುರೋದಿಂದ]
ಬೊಗಳೂರು, ಸೆ.15- ಬೊಗಳೂರು ಬ್ಯುರೋದ ಏಕೈಕ ಓದುಗರೂ ಆಗಿರುವ ಸಂಸ್ಥಾಪಕ ಅಸತ್ಯದ ಅನ್ವೇಷಿ ಹುಟ್ಟು ಹಬ್ಬವನ್ನು ಇಡೀ ಭಾರತದಲ್ಲಿ ಹಿಂದೀ ದಿವಸವಾಗಿ ಆಚರಿಸುತ್ತಾ ಮತ್ತು ಪ್ರತಿಭಟನೆಯನ್ನೂ ಮಾಡುತ್ತಿರುವುದರಿಂದ ಎಚ್ಚೆತ್ತ ಕೇಂದ್ರ ಸರಕಾರವು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎಂದು ಮೂಲಗಳು ವರದ್ದಿ ತಂದು ಸುರಿದಿವೆ.

ತಾಜಾ ಸುದ್ದಿಯ ಪ್ರಕಾರ, ಏಕ ಸದಸ್ಯ ಬೊಗಳೂರು ಬ್ಯುರೋದ ಸಮಸ್ತ ಸದಸ್ಯರ ಹುಟ್ಟುಹಬ್ಬವನ್ನು ಎಲ್ಲರೂ ಪರಿಪರಿಯಾಗಿ ಆಚರಿಸುತ್ತಿರುವುದರಿಂದ, ನಮ್ಮ ಜನ-ಅಪ್ರಿಯತೆಯನ್ನು ಮನಗಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಈ ಕುರಿತು ನೇರವಾಗಿ ಹೇಳಿಕೆ ನೀಡಿದ್ದಾರೆ.

ಇದೆಂದರೆ, ಹುಟ್ಟು ಹಬ್ಬವನ್ನು ಯಾರು ಕೂಡ ಭರ್ಜರಿಯಾಗಿ ಆಚರಿಸಿಕೊಳ್ಳಬಾರದು ಎಂದು, ಜನಪ್ರಿಯತೆಯಲ್ಲಿ ಕೆಳಗಿನಿಂದ ನಮ್ಮಿಂದ ಸಾವಿರದ ಒಂಬೈನೂರನೇ ಸ್ಥಾನದಷ್ಟು ದೂರದಲ್ಲಿರುವ ಪ್ರತಿಸ್ಫರ್ಧಿ ಪತ್ರಿಕೆ ಇಲ್ಲಿ ವರದಿ ಮಾಡಿದೆ.

ಇದೇ ವೇಳೆ, ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದವರಿಗೆ, ಶುಭಾಶಯಕ್ಕಾಗಿಯೇ ನಮ್ಮ ಬ್ಯುರೋದವರನ್ನು ನಿದ್ದೆಯಿಂದ ಬಡಿದೆಬ್ಬಿಸಲು ಪ್ರಯತ್ನಿಸಿದವರಿಗೆ ಪ್ರತಿ-ಶುಭಾಶಯಗಳನ್ನೂ ಈ ಮೂಲಕ ಕೋರಲಾಗಿದೆ. ದಯವಿಟ್ಟು ನರೇಂದ್ರ ಮೋದಿ ಅವರಿಗೆ ವಿಷಯ ತಿಳಿಸಬಾರದಾಗಿ ಮತ್ತೊಂದು ವಿನಂತಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ನಿಮ್ಮ ಹುಟ್ಟುಹಬ್ಬವನ್ನೂ ನಾವೇ ನೆನಪಿಸಬೇಕಾಯ್ತಲ. ಇನ್ಮುಂದೆ ಇಂತಹ ತಪ್ಪು ಮಾಡೋಲ್ಲ. ನೀವು ಅಸತ್ಯ ಹುಡುಕ್ಕೋತ ನಿದ್ದೆ ಮಾಡ್ಲೊಂಡಿರಿ! .

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಮಾತನ್ನು ಶಿರಸಾ ಪಾಲಿಸಿದ್ದೇವೆ... ಆದರೆ ಕಣ್ಣುಸಾ ತೆರೆಯಲೇಬೇಕಾಯ್ತು...

   ಅಳಿಸಿ
 2. ಪ್ರತ್ಯುತ್ತರಗಳು
  1. ಸುನಾಥರೇ... ತುಂಬಾ ತುಂಬಾ ಧನ್ಯವಾದ. ನಿಮಗೂ ಸೇಮ್ ಟೂ ಯೂ ಹೇಳೋಹಾಗಿಲ್ಲವಲ್ಲಾ? :D

   ಅಳಿಸಿ
 3. ಅಸತ್ಯದವರ ಜನ್ಮ ದಿನ ಏಪ್ರಿಲ್ ೧ ಅಂತ ಸಂಚೋಧನೆಯಿಂದ ತಿಳಿದುಬಂದರೂ ನಾವೂ ಕೂಡಾ ಅಸತ್ಯವನ್ನೇ ಸತ್ಯವೆಂದು ನಂಬುತ್ತೇವಾದ್ದರಿಂದ ತಡವಾಗಿಯಾದರೂ ಶುಭ ಕೊರೆಯುತ್ತಿದ್ದೇವೆ ..!

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನೀವು ಕೊರೆದೂ ಕೊರೆದೂ ನಮಗೇನೂ ಕೇಳಿಸ್ತಾನೇ ಇರಲಿಲ್ಲ.... ಹೇಗೋ ಎಚ್ಚರವಾಗಿಬಿಡ್ತು...

   ಅಳಿಸಿ

ಏನಾದ್ರೂ ಹೇಳ್ರಪಾ :-D