[ಬೊಗಳೂರು ಕ್ರೀಡಾ ಬ್ಯುರೋದಿಂದ]
ಬೊಗಳೂರು, ಏ.5- ಬೊಗಳೂರು ಅಂದರೆ ಭಾರತ ಅಂದರೆ ಬೊಗಳೂರಿನ ತಂಡವು ವಿಶ್ವಕಪ್ ಗೆದ್ದುಕೊಂಡ ಬಳಿಕ ಎಚ್ಚೆತ್ತುಕೊಂಡ ನಮ್ಮ ಏಕ ಸದಸ್ಯ ಬೀರುವಿನ ಸದಸ್ಯರೆಲ್ಲರೂ, ಪಾತಕಿಸ್ತಾನದ ನಾಯಕ, ಭಾರತದೆದುರು ಆಟವಾಡಿ ಶಹೀದ್ ಆಗಿರುವ ಅಫ್ರಿದಿ ಅವರ ಹೇಳಿಕೆಗಳ ಹಿಂದೆ ಬೀಳಲಾರಂಭಿಸಿದಾಗ, ರೋಚಕ, ರೋಮಾಂಚಕ ಮತ್ತು ಇನ್ನೂ ಏನೇನೋ ಆಗಬಲ್ಲ ರಸವತ್ತಾದ ಸುದ್ದಿಗಳು ಲಭಿಸಿವೆ.

ಅವುಗಳಲ್ಲೆಲ್ಲಾ 'ಭಾರತೀಯರು ವಿಶಾಲ ಹೃದಯಿಗಳಲ್ಲ' ಎಂಬ ಒಂದು ವಾಕ್ಯದ ಬೆನ್ನ ಹಿಂದೆ ಬಿದ್ದು ಬಿದ್ದು ಹೊರಟಾಗ ಅಫ್ರಿದಿ ಮಾತಿನ ಹಿಂದಿನ ನಿಜಾರ್ಥವೇನೆಂಬುದನ್ನು ನಮ್ಮ ವ-ರದ್ದಿಗಾರರು ಪತ್ತೆ ಹಚ್ಚಿದ್ದಾರೆ.

ಶಾಹಿದ್ ಅಫ್ರಿದಿಯ ಈ ಕಳವಳಕಾರಿ, ಆಘಾತ ತುಂಬಿದ, ವೇದನೆ ತುಂಬಿದ ಹೇಳಿಕೆಗಳಿಗೆಲ್ಲ ಕಾರಣವಾಗಿದ್ದೇ ಪೂನಂ ಪಾಂಡೆ ಎಂಬ ಮಹಿಳೆ. ಈ ಅಚ್ಚರಿಯ ಅಂಶವನ್ನು ಅಫ್ರಿದಿ ಸುದ್ದಿಗೋಷ್ಠಿ ಸಂದರ್ಭ ಪಕ್ಕದಲ್ಲೇ ಕಾದು ಕುಳಿತಿದ್ದ ಬೊಗಳೂರು ವರದ್ದಿಗಾರರನ್ನು ಸ್ವಲ್ಪ ಆಚೆಗೆ ಅಂದರೆ ಬಾಗಿಲ ಸಂದಿನಲ್ಲಿ ಕರೆದು ಸ್ವತಃ ಬಯಲುಪಡಿಸಿದ್ದರು.

ಈ ಬಗ್ಗೆ ಒಂದಿಷ್ಟು ವಿವರಿಸುವಿರಾ? ನಾವು ಬೊಗಳೆ ರಗಳೆ ಪತ್ರಿಕೆಯಲ್ಲಿ ಮಾತ್ರವೇ ಎಕ್ಸ್-ಜೂಸಿವ್ ಆಗಿ ಪ್ರಕಟಿಸುತ್ತೇವೆ ಎಂದು ಗುಸುಗುಸು ಪಿಸು ಮಾತಿನಲ್ಲಿ ಹೇಳಿದಾಗ ಅವರು ವಿವರಿಸಿದ್ದು ಹೀಗೆ:

"ಹೌದು ಸ್ವಾಮೀ, ನಿಮಗಾದರೆ, ವಿಶ್ವಕಪ್‌ಗಾಗಿ ಹುಟ್ಟುಡುಗೆಯ ವಿಶ್ವರೂಪ ದರ್ಶನ ಮಾಡಿಸುತ್ತೇವೆ ಎಂದು ಹೇಳುವವರಿದ್ದಾರೆ. ಅದನ್ನೇನೋ ನಾನೂ ಚಿತ್ರ ಡೌನ್‌ಲೋಡ್ ಮಾಡಿಕೊಂಡಿರುವ ಪೂನಂ ಪಾಂಡೆಯೇ ಹೇಳಿದ್ದು. ಹಾಗಾಗಿ ಅಷ್ಟೇನೂ ಪ್ರಚಾರದಲ್ಲಿಲ್ಲದವಳು ಆಕೆ. ಭಾರತೀಯ ನಟೀಮಣಿಯರಲ್ಲಿ ವಿಶಾಲ ಹೃದಯ ಹೊಂದಿರುವ ಒಬ್ಬರಾದರೂ, ಕನಿಷ್ಠ ಪಕ್ಷ ರಾಖೀ ಸಾವಂತ್ ಆದರೂ ನಮಗೊಂದು ಅಂತಹಾ ಆಫರ್ ಮಾಡಬಹುದಿತ್ತಲ್ಲ... ನಿಮ್ಮ ಭಾರತೀಯರಲ್ಲಿ ಹೆಚ್ಚಾಗಿ ಹೃದಯವಿರುವುದು ನಟೀಮಣಿಯರಲ್ಲಿ ಅಂತಾನೇ ಕೇಳಿದ್ದೆ... ಯಾಕೆಂದರೆ, ಅವರೇ ಅಲ್ಲವೇ ಎಲ್ಲವನ್ನೂ ತೆರೆದು ತೋರಿಸುತ್ತೇವೆ, ಹೃದಯವನ್ನು ವಿಶಾಲವಾಗಿ ತೋರಿಸುತ್ತೇವೆ ಎಂದೆಲ್ಲಾ ಘೋಷಿಸಿರುವುದು! ಈಗ ಭಾರತವೇ ವಿಶ್ವಕಪ್ ಗೆದ್ದಿದೆ. ನಮಗಿನ್ನೇನು ಉಳಿದಿದೆ ತೋರಿಸಲು? ಇನ್ನು ತೋರಿಸಿದರೂ ನಮಗೆ ಆಡಲು ಪ್ರೇರಣೆ ದೊರೆಯುವುದು ಯಾವಾಗ? ಮುಂದಿನ ವಿಶ್ವಕಪ್ ಸಂದರ್ಭದಲ್ಲಾದರೂ ಭಾರತೀಯ ನಟಿಯರು ಈ ಬಗ್ಗೆ ಎಚ್ಚರ ವಹಿಸಬೇಕು, ಹೃದಯವನ್ನು ವಿಶಾಲವಾಗಿಸಿಕೊಳ್ಳಬೇಕು!"

ಆಗ ಬೊಗಳೂರು ಬ್ಯುರೋಗೆ ಅರಿವಾಗಿದ್ದು, ಸೆಮಿಫೈನಲಿನಲ್ಲಿ ಸೋತ ಬಳಿಕವೂ ಬಾರದ ಈ ಮಾತು, ಭಾರತವು ವಿಶ್ವಕಪ್ ಗೆದ್ದಾದ ಬಳಿಕ ಇಷ್ಟು ತಡವಾಗಿ ಬಂದದ್ದೇಕೆ ಎಂಬುದರ ಹಿಂದಿನ ತಥ್ಯ. ಭಾರತ ವಿಶ್ವಕಪ್ ಗೆಲ್ಲಲು ಪೂನಂ ಪಾಂಡೆಯೇ ಕಾರಣ ಎಂಬುದು ಅಫ್ರಿದಿ ಬಲವಾದ ನಂಬಿಕೆಯಾಗಿದ್ದು, ತಮಗೂ ಅಂತಹಾ ಹೃದಯ ವೈಶಾಲ್ಯತೆ ತೋರುವವರು ಯಾರಾದರೂ ಇದ್ದಿದ್ದರೆ, ಖಂಡಿತಾ ಗೆದ್ದೇ ಗೆಲ್ಲುತ್ತಿದ್ದೆವು ಎಂಬುದು ಅವನ ಮಾತಿನ ಅರ್ಥವಾಗಿತ್ತಂತೆ. ಇದನ್ನೂ ಅವರೇ ಬೊಗಳೆ ರಗಳೆ ಬ್ಯುರೋ ನಡೆಸಿದ ಮುಚ್ಚಿದ ಬಾಗಿಲ ಸಂದರ್ಶನದಲ್ಲಿ ಹೇಳಿದ್ದರು!

8 Comments

ಏನಾದ್ರೂ ಹೇಳ್ರಪಾ :-D

 1. ಕರೆಕ್ಟ್!ಪೂನಮ್ ಪಾಂಡೆಯ ಹುಟ್ಟುಡುಗೆಯ ದರ್ಶನದ ಆಸೆಯಿಂದಲೇ, ಶ್ರೀಲಂಕಾದವರು ಭಾರತಕ್ಕೆ ವಿಜಯವನ್ನು ಬಿಟ್ಟುಕೊಟ್ಟರು. ಆದರೆ ಆದದ್ದೇನು?
  ಇದರ ಬಗ್ಗೆ CBIದವರು ಯಾಕೆ ತನಿಖೆ ಕೈಕೊಳ್ಳಬಾರದು?

  ReplyDelete
 2. ಅನ್ವೇಶಿಗಳೆ..
  ವಿಡ೦ಬನೆಯನ್ನು ಬರೆಯುವಷ್ಟೇ ಸು೦ದರವಾಗಿ, ಅದಕ್ಕೂ ಮಿಗಿಲಾಗಿ ಗ೦ಭೀರ ಬರಹಗಳನ್ನೂ ಬರೆಯುತ್ತೀರೆ೦ಬುದು ತಡವಾಗಿಯಾದರೂ ನಮಗೆ ವ-ರದ್ದಿಯಾಗಿದೆ..
  I caught you..:):)

  all d best..

  ReplyDelete
 3. I have gone through your post and found some information which is quite important for me.
  So, please keep it up with your these kind of posts.

  ReplyDelete
 4. ಸುನಾಥರೇ, ಸಿಬಿಐನವರು ತನಿಖೆಗಾಗಿ ಪ್ಯಾರಿಸ್ಸಿನಲ್ಲಿ ಪ್ರಣಯಕ್ಕಾಗಿ ತೆರಳಿದ್ದಾರಂತೆ... ಅವರೇ ಫೋನ್ ಮಾಡಿ, ಪ್ಯಾರಿಸ್ಸಿಗೆ ಹೋಗಿ ಪೂನಂ ಪಾಂಡೆಗೆ ಕಾಯ್ತಾ ಇದ್ದೇವೆ ಅಂತ ಹೇಳಿದ್ರು!

  ReplyDelete
 5. ಚುಕ್ಕಿ ಚಿತ್ತಾರಿಗಳೇ,
  ಇಲ್ಲಿ ಬರೆದದ್ದನ್ನು ವಿಡಂಬನೆ ಎಂದು ಟೀಕಿಸಿ, ಬೇರೆಯವರಿಗೆ ಅಪಮಾನ ಮಾಡಿದ್ದೀರಿ. ಆದ್ರೆ, ಗಂಭೀರ ಅಂತಲೂ ಹೇಳ್ತಾ ಇದ್ದೀರಾ... ಎಲ್ಲವೂ ಕನ್ಫ್ಯೂಷಿಯಸ್! ಹಿಡಿದಿದ್ದರೆ, ದಯವಿಟ್ಟು ಬಿಟ್ಬಿಡಿ... ಹೇಗಾದ್ರೂ ಬದುಕಿಕೊಳ್ತೀನಿ :)

  ReplyDelete
 6. ಅರೆ! ಎಸಿ ಕಂಪ್ರೆಸರ್ ಬಂತಾ? ಒಳ್ಳೇದು, ಇಲ್ಲಿ ಸಿಕ್ಕಾಪಟ್ಟೆ ಸೆಖೆ.. ಬನ್ನಿ ಬನ್ನಿ ನಿಮಗೆ ಸ್ವಾಗತ. ಆದ್ರೆ ನಿಮಗೆ ಖಂಡಿತಾ ಇದನ್ನು ಓದಲು ಬರಲ್ಲ ಅಂತ ಗೊತ್ತು. ನೀವು ಬಂದಿರೋದು ಪ್ರಚಾರಕ್ಕಾಗಿ! ಏನು ಕೀಪಿಟಪ್?ಬಿದ್ದು ಬಿದ್ದು ನಗ್ತಾ ಇದ್ದೀವಿ... ಮಾಹಿತಿಯುಕ್ತ ಬರಹಗಳಂತೆ! ಪಿಹೆಚ್ ಡಿ ಮಾಡ್ತೀರಾ???

  ReplyDelete
 7. Nice post, thanks for sharing this wonderful and useful information with us.
  Volkswagen Beetle Turbocharger

  ReplyDelete
 8. Mercedes Benz C320 Supercharger
  I have gone through your post and found some information which is quite important for me.
  So, please keep it up with your these kind of posts.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post