ಬೊಗಳೆ ರಗಳೆ

header ads

ಬೊಗಳೆ: ಸರ್ಕಾರದ ಹೊಸ ನೀತಿ - Drink, don't drive

[ಬೊಗಳೂರು ಬೆಲೆ ಏರಿಕೆ ರಂಜನಾ ಬ್ಯುರೋದಿಂದ]
ಬೊಗಳೂರು, ಜ.18- ಬಡ ಪ್ರಜೆಗಳು ಚೀಲ ತುಂಬಾ ಹಣದ ನೋಟುಗಳನ್ನು ತೆಗೆದುಕೊಂಡು ಹೋಗಿ ಅಂಗಿಯ ಜೇಬು ತುಂಬಾ ಆಹಾರ ವಸ್ತುಗಳು ದೊರೆಯುವಂತೆ ಮಾಡಿರುವ Unprecedented Price Agenda ಸರಕಾರದ ಆಳ್ವಿಕೆಯಡಿ, ಜನತೆ ಸಂತೃಪ್ತರಾಗಿದ್ದಾರೆ.

ಇದಕ್ಕೆ ಕಾರಣವೇನು ಎಂದು ಪತ್ತೆ ಹಚ್ಚಲು ಬೊಗಳೂರು ಬ್ಯುರೋ ಸಿಬ್ಬಂದಿ ಹೊರಟಾಗ ಹಲವಾರು ದೊಡ್ಡ ದೊಡ್ಡ ಪರ್ವತಗಳು ಎದುರಾದವು ಮತ್ತು ಸಾಕಷ್ಟು ರಾಕೆಟ್‌ಗಳು ಕೂಡ ಆಗಸಕ್ಕೆ ನೆಗೆನೆಗೆದು ಬೀಳುತ್ತಿದ್ದವು.

ಅವುಗಳನ್ನು ವಿಚಾರಿಸಲಾಗಿ, ಅವೆಲ್ಲವೂ ಏರಿದ ಬೆಲೆಗಳ ಪರ್ವತವಾಗಿದ್ದು, ರಾಕೆಟ್‌ನಂತೆ ಆಗಸಕ್ಕೆ ಚಿಮ್ಮುತ್ತಿರುವುದೆಲ್ಲವೂ ಪೆಟ್ರೋಲ್, ಟೊಮೆಟೋ, ಈರುಳ್ಳಿ, ಅಕ್ಕಿ, ಬೇಳೆ, ಗೋಧಿ ಮುಂತಾದ ಬಡ ಜನರ ಅಗತ್ಯ ವಸ್ತುಗಳು ಎಂಬುದು ಪತ್ತೆಯಾಯಿತು.

ಹೀಗಾಗಿ, ಬಡವರ ನಿರ್ಮೂಲನೆಯೇ ತಮ್ಮ ಗುರಿ ಎಂದು ಯುಪಿಎ ಸರಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದು ಸರಿಯಾಗಿದೆ. ಆ ಪ್ರಣಾಳಿಕೆಯ ಭರವಸೆ ಈಡುರುತ್ತಿದೆ ಎಂಬ ಸಂತಸವೂ ಜನರನ್ನು ಆವರಿಸಿಕೊಂಡಿದೆ. ಇನ್ನು ಮುಂದೆ ಈ ದೇಶದಲ್ಲಿ ಬಡವರೇ ಇರುವುದಿಲ್ಲ; ಎಲ್ಲರೂ ಈರುಳ್ಳಿ ಕೊಳ್ಳುವವರೇ ಆಗಿರುತ್ತಾರೆ!

ಅದಕ್ಕೂ ಮಿಗಿಲಾಗಿ ಸಂತೋಷ ತಂದಿರುವ ಒಂದು ಅಂಶ ನಿಧಾನವಾಗಿ ಬಯಲಿಗೆ ಬಂತು. ಅದೆಂದರೆ, CON-guess ಸರ್ಕಾರವು ಹೊಸ ನೀತಿಯೊಂದನ್ನು ಜಾರಿಗೊಳಿಸಿದೆ. ಅದೆಂದರೆ, Don't drink and drive ಎಂಬ ನೀತಿಗೆ ತಿದ್ದುಪಡಿ ತಂದು, ಅದನ್ನು Drink and don't drive ಎಂದು ಬದಲಾಯಿಸಿರುವುದು.

ಈ ನೀತಿಯ ಜಾರಿಗೆ ಕಾರಣವೂ ಇಲ್ಲದಿಲ್ಲ. ಪೆಟ್ರೋಲ್ ಬೆಲೆಗಿಂತಲೂ ಮದ್ಯವೇ ಇಂದು ಚೀಪಾಗಿ ದೊರೆಯುತ್ತಿದೆ. ಒಂದು ಲೀಟರ್ ಪೆಟ್ರೋಲ್ ಬೆಲೆ 64 ರೂಪಾಯಿ ಇದ್ದರೆ, ಬಿಯರು, ಹೆಂಡ ಮುಂತಾದವುಗಳು ಈ ಹಣದಲ್ಲಿ ಪೀಪಾಯಿಗಟ್ಟಲೆ ದೊರೆಯುತ್ತವೆ! ಹೀಗಾಗಿ ಚೀಪಾಗಿರುವುದನ್ನು ಡ್ರಿಂಕ್ ಮಾಡಿ, ಆದರೆ ಕಾಸ್ಟ್ಲೀ ಆಗಿರುವುದನ್ನು ಡ್ರೈವ್ ಮಾಡಬೇಡಿ ಎಂಬ ಸಂದೇಶವನ್ನು ಒತ್ತಾಯಪೂರ್ವಕವಾಗಿ ಅದು ಜಾರಿಗೊಳಿಸುತ್ತಿದೆ!

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಟೊಮೆಟೋ, ಈರುಳ್ಳಿ, ಅಕ್ಕಿ, ಬೇಳೆ, ಗೋಧಿ ಇನ್ನಿತರ ಆಹಾರ ವಸ್ತುಗಳು ತು೦ಬಾ ದುಬಾರಿ ಆಗಿರುವುದರಿ೦ದ ನಮ್ಮನೆಯಲ್ಲಿ ಅಡಿಗೆ ಮಾಡುವುದನ್ನೆ ನಿಲ್ಲಿಸಬೇಕೆ೦ದು ಕೊ೦ಡಿದ್ದೇನೆ..ಮತ್ತು ಊಟ ಮಾಡುವುದನ್ನೂ...!!..:(:(:(:(:(:(:(:(:(

    ಸ೦ಕ್ರಾ೦ತಿಯ ಶುಭಹಾರೈಕೆಗಳು.. [ಎಳ್ಳುಬೆಲ್ಲ ಇಲ್ಲ...ರೇಟ್ ಜಾಸ್ತಿ...!!]

    ಪ್ರತ್ಯುತ್ತರಅಳಿಸಿ
  2. ಯುಪಿಎ ಸರಕಾರದಿಂದ ಜನತೆ ಸಂತಪ್ತರಾಗಿದ್ದಾರೆಂಬುದನ್ನೇ ಸತ್ಯವೆಂದು ನಂಬಿದ್ದ ನಮಗೆ ಜನತೆ ’ಸಂತೃಪ್ತ’ ರಾಗಿದ್ದಾರೆ ಎಂಬ ಸತ್ಯವನ್ನು ಹೇಳಿ ಕಣ್ಣು ತೆರೆಸಿದ್ದಕ್ಕೆ ನಿಮಗೆ ಒಂದು ಕಿಲೋ ಈರುಳ್ಳಿಯನ್ನು ಬಹು’ಮಾನ’ ವಾಗಿ ಕೊಡುತ್ತಿದ್ದೇವೆ !

    ಪ್ರತ್ಯುತ್ತರಅಳಿಸಿ
  3. ಚೀಪ್ ಆಗಿರುವ ಹೆಂಡ-ವಿಸ್ಕಿ ಗಾಡಿಗೆ ಹಾಕಿ ಓಡಿಸಿದರೆ ಹೇಗೆ ಅಂತಾ ಅನ್ವೇಷಿಗಳು ತನಿಖೆ ಮಾಡಬೇಕು.

    ಪ್ರತ್ಯುತ್ತರಅಳಿಸಿ
  4. The Idiot Congress govt. in central and Karnataka govts. are killing the people by hiking the prices. Yeddy and Manmohan Singh both are useless idiots. They should be retire from politics since they are not capable to lead the govt. Congress is against this country, they hates HINDUs and love only Muslims and Christians. Who are voting to congress are Anti-Nationals.

    ಪ್ರತ್ಯುತ್ತರಅಳಿಸಿ
  5. "ಚೀಪಾಗಿರುವುದನ್ನು ಡ್ರಿಂಕ್ ಮಾಡಿ, ಆದರೆ ಕಾಸ್ಟ್ಲೀ ಆಗಿರುವುದನ್ನು ಡ್ರೈವ್ ಮಾಡಬೇಡಿ" --- Very nice...

    ಪ್ರತ್ಯುತ್ತರಅಳಿಸಿ
  6. ಎಲ್ಲರಿಗೂ ತಡವಾಗಿ, ನಾಪತ್ತೆಯಾಗಿ ಉತ್ತರಿಸಿದ್ದಕ್ಕೆ, ಮತ್ತು ತತ್ತರಿಸಿದ್ದಕ್ಕೆ ವಿಷಾದಗಳು...

    ಚುಕ್ಕಿಯಿಂದ ಚಿತ್ತಾರ ಬಿಡಿಸುವವರೇ,
    ನೀವು ಅಡುಗೆ ಮಾಡುವುದನ್ನು ಮತ್ತು ಊಟ ಮಾಡುವುದನ್ನು ನಿಲ್ಲಿಸಿದ್ದೀರಿ. ನಾವು...? ನಾವೇ ನಿಂತು ಬಿಟ್ಟಿದ್ದೇವೆ! ಎಲ್ಲವೂ ಸ್ಥಗಿತ!

    ಸುಬ್ರಹ್ಮಣ್ಯರೇ,
    ನೀವು ಹಾಕುವ ಈರುಳ್ಳಿ ನಾಮ ಇದೀಗ ಬೆಲೆ ಕಳೆದುಕೊಂಡಿದೆ... ನಾವು ತಲೆ ಮರೆಸಿಕೊಂಡ ಕಾರಣದಿಂದಲೋ ಏನೋ...

    ಪಾತರಗಿತ್ತಿಯವರೇ,
    ಗಾಡಿಗೆ ಚೀಪ್ ಆಗಿರೋ ಹೆಂಡ ವಿಸ್ಕಿ ಹಾಕಿದ ಪರಿಣಾಮವನ್ನು ನಾವು ತನಿಖೆ ನಡೆಸಿದ ಪರಿಣಾಮವೇ ಇಷ್ಟು ತಡವಾಗಿ, ಒಂದೆರಡು ತಿಂಗಳ ನಂತರ ನಮ್ಮ ಕಚೇರಿ ಬಾಗಿಲು ತೆರೆಯಬೇಕಾಗಿಬಂತು.

    ಅನಾನಿಮಸರೇ,
    ನಿಮ್ಮ ಭಾವನೆಗಳನ್ನು ಎಷ್ಟೇ ಹಂಚಿಕೊಂಡರೂ ರಾಷ್ಟ್ರ-ವಿರೋಧಿಗಳಿಗೆ ಅದು ಕೇಳಿಸಲಾರದು. ಇದಮಿತ್ಥಂ ಅನ್ನೋದೇ ನಮ್ಮ ಇಂದಿನ ಸ್ಥಿತಿ.

    ಮತ್ತೊಬ್ಬ ಅನಾನಿಮಸರೇ,
    ನೀವೂ ಪತ್ರಕರ್ತರೇ? ನಮ್ಮನ್ನು ನಿಮ್ಮ ಬ್ಯುರೋಗೆ ಎಷ್ಟೇ ಎಳೆದುಕೊಂಡರೂ ನಾವು ಬರಲೊಲ್ಲೆವು.

    ಶ್ರೀನಿವಾಸರೇ,
    ನೀವು ವೆರಿ ನೈಸಾಗಿದೆ ಎಂದ್ರಿ. ನೈಸಾಗಿದೆ ಅಂತ ವೇದೇಗೌಡ್ರೇನಾದ್ರೂ ಕೇಳಿದ್ರೆ, ಪ್ರತಿಭಟನೆಗೆ ಕುಳಿತುಕೊಳ್ಳಲೂ ಬಹುದು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D