ಬೊಗಳೆ ರಗಳೆ

header ads

ಓರೆಯಾಗಿ ವಾಲಿದ ಭೂಮಿ: ಬೊಗಳೂರಿನಲ್ಲಿ ಆತ್ಮಹತ್ಯೆ ಹೆಚ್ಚಳ!

[ಬೊಗಳೂರು ಹೃದಯಭಗ್ನ ಬ್ಯುರೋದಿಂದ]
ಬೊಗಳೂರು, ಜೂ.24- ಬೊಗಳೂರಿನ ಒಂದು ಭಾಗದಲ್ಲೇ ಭೂಬ್ಸ್‌ಕಂಪನ ಆಗಿರುವುದರಿಂದಾಗಿ, ಇಡೀ ಜಗತ್ತೇ ಮತ್ತೊಂದಿಷ್ಟು ಡಿಗ್ರಿ ಓರೆಯಾಗಿ ವಾಲಿರುವ ಸಂಗತಿ ಬೆಳಕಿಗೆ ಬಂದ ತಕ್ಷಣವೇ, ಇಂದೇನು Barking News? ಅಂತ ಮೂಗಿನ ಮೇಲೆ ಬೆರಳಿಟ್ಟ ಬೊಗಳೆ ರಗಳೆ ಬ್ಯುರೋಗೆ ಕೊನೆಗೂ ಹಾರ್ಟು ಬ್ರೇಕಿಂಗ್ ಸುದ್ದಿ ಸಿಕ್ಕಿದೆ ಎಂದು ಪ್ರತಿಸ್ಪರ್ಧಿ ಪತ್ರಿಕೆಗಳಾದ ಟೈಮ್ಸ್ ಆಫ್ ಬೊಗಳೂರು ಮುಂತಾದವುಗಳಲ್ಲಿ ವರದ್ದಿಯಾಗಿದೆ.

ಈ ರೀತಿ ಭೂಮಿ ಓರೆಯಾಗುವುದಕ್ಕೆ ಕಾರಣವೆಂದರೆ ಬೊಗಳೂರಿನ ಜನಸಂಖ್ಯೆಯಲ್ಲಿ ದಿಢೀರ್ ಕುಸಿತ ಕಂಡುಬಂದಿರುವುದು. ಈ ಸುಳಿವು ಸಿಕ್ಕ ತಕ್ಷಣವೇ ಬೊಗಳೂರು ಏಕಸದಸ್ಯ ಬ್ಯುರೋದ ಸರ್ವ ಸದಸ್ಯರೂ ಕ್ಷಿಪ್ರ ಸಮೀಕ್ಷೆಯೊಂದನ್ನು ನಡೆಸಿ, ಯುವ ಜನಾಂಗದ ಅದರಲ್ಲೂ ಯುವಕರ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ ಎಂದು ತಿಳಿದುಕೊಳ್ಳಲಾಯಿತು.

ಹೀಗೆ ಸಮೀಕ್ಷೆ ಮಾಡಲು ತೆರಳಿದಾಗ ಶಾಲಾ-ಕಾಲೇಜುಗಳು ಮುಂತಾದೆಡೆ, ಪಾರ್ಕುಗಳಲ್ಲಿ, ಬೀಚುಗಳಲ್ಲಿ ಇತ್ಯಾದಿ ಕಡೆಗಳಲ್ಲಿ ಸಾಕಷ್ಟು ಹಗ್ಗಗಳು, ನೇಣುಗಳು, ಟಿಕ್-20ಗಳು, ಫಾಲಿಡಾಲುಗಳು, ಫೆರಡಾನ್‌ಗಳು ಮುಂತಾದ ಬಾಟಲಿಗಳು ಪತ್ತೆಯಾಗಿವೆ. ಹೀಗಾಗಿ ಇದು ಖಂಡಿತಾ ಆತ್ಮಹತ್ಯೆಗಳ ಪರಿಣಾಮ ಎಂಬುದನ್ನು ಕಂಡುಕೊಳ್ಳಲಾಯಿತು.

ಎಲ್ಲಾದಕ್ಕೂ ಒಂದು ಕಾರಣವಿದ್ದೇ ಇರುತ್ತದೆ ಎಂಬ ಲೋಕ ನಿಯಮವನ್ನು ಪರಿಗಣನೆಗೆ ತೆಗೆದುಕೊಂಡು ಮತ್ತು ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆಯೊಂದು ಇರುತ್ತದೆಂಬ ಓಲ್ಡ್‌ಟನ್ ನಿಯಮವನ್ನೂ ಪರಿಗಣನೆಗೆ ತೆಗೆದುಕೊಂಡು, ಅದನ್ನು ನಂಬಿ ತನಿಖೆ ಮುಂದುವರಿಸಿದಾಗ ಕಾಲಿಗೆ ಎಡತಾಕಿದ್ದು ಈ ಸುದ್ದಿ. ಮಾದಕ ನಟಿ ನಮಿತಾ ಇನ್ನು ಸೆಕ್ಸೀ ಪಾತ್ರಗಳಲ್ಲಿ ನಟಿಸೋದಿಲ್ಲವೆಂಬ ಸುದ್ದಿ ಈ ಯುವಜನಾಂಗದ ಹೃದಯಕ್ಕೆ ಕೊಳ್ಳಿ ಇಕ್ಕಿದ್ದು, ಕೆಲವರ ಹೃದಯವೇ ಒಡೆದು ಚೂರು ಚೂರಾಗಿದೆ. ಆ ಚೂರುಗಳನ್ನು ಗೂಗಲ್‌ನಲ್ಲಿ ಹುಡುಕಿದರೂ ಪತ್ತೆ ಹಚ್ಚಿ ಜೋಡಿಸಲಾಗುತ್ತಿಲ್ಲ ಎಂಬುದನ್ನು ಅನ್ವೇಷಿ ನೇತೃತ್ವದ ಬ್ಯುರೋ ತಪಾಸಣೆ ಮಾಡಿ ವಲ್ಲಿ ವರದ್ದಿ ತಂದು ಸುರಿದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಓಲ್ಡ್‌ಟನ್ ನಿಯಮ!! ವರದ್ದಿ!! ಹಾಹಾ!!

    ಪ್ರತ್ಯುತ್ತರಅಳಿಸಿ
  2. ಇಷ್ಟೆಲ್ಲ ತರುಣರ ಮಾರಣ ಹೋಮಕ್ಕೆ ಕಾರಣಳಾದ ನಮಿತಾಗೆ ‘ಬೂಬಶ್ರೀ’ ಎನ್ನುವ ಪದವಿಯನ್ನು ಅಥವಾ boob(y) trap ಎನ್ನುವ ಪದವಿಯನ್ನು ದಯಪಾಲಿಸಬೇಕು
    ಎನ್ನುವದು ಬದುಕಿ ಉಳಿದವರ ಆಗ್ರಹದ ಕೋರಿಕೆಯಾಗಿದೆ.

    ಪ್ರತ್ಯುತ್ತರಅಳಿಸಿ
  3. Idenri nim site page colour pink madiralri!
    Nivu aa Time pass of India paper avar jote serkond yenadru fitting madkondira HENG anta?

    Nim ee bannada layout ninda nim site ge innashtu VADEGALU beelali ant na SHAP kotgot

    Inti nim

    ಪ್ರತ್ಯುತ್ತರಅಳಿಸಿ
  4. ನಮಸ್ಕಾರ ಗುರೂ...

    ಪ್ರತೀ ಬರಹ ಓದಿದಾಗ್ಲೂ ಮನಸ್ಸಿಗೆ ತು೦ಬಾ ಸ೦ತೋಷ ಅನ್ಸತ್ತೆ. ನಿಮ್ಮ ಕ್ರಿಯೇಟಿವಿಟಿಗೆ ಸಾಟಿ ಇಲ್ಲ ಬಿಡಿ..

    ಪ್ರತ್ಯುತ್ತರಅಳಿಸಿ
  5. ಹೌದು, ಕಟು ಸತ್ಯ.

    ನಾನು ಕೂಡ ಸುದ್ದಿ ಮಾಧ್ಯಮಗಳಲ್ಲಿ "ನಮೀತ ಸೀರೆ ಉಡೋಲ್ಲ, ಇನ್ನು ಮುಂದೆ ಸೆಕ್ಸಿ ಪಾತ್ರ ಮಾಡೋಲ್ಲ" ಅಂತ ಓದಿ, ಕಣ್ಣುಗಳಲ್ಲಿ ದಾರಾಕಾರವಾಗಿ ೫ ಟಿ ಎಂ ಸಿ ನೀರು ಹರಿದು, ಹೃದಯವು ವಿಳ ವಿಲನೆ ಒದ್ದಾಡಿ ನಂತರ ಮಲ್ಯ ಆಸ್ಪತ್ರೆ ಗೆ ಸೇರಿ ಹುಶಾರಾದೆನು. (ಕ್ಯಾಲೆಂಡರ್ ಪ್ರಭಾವ. )

    ಪ್ರತ್ಯುತ್ತರಅಳಿಸಿ
  6. ಹೀಗೆ ಯುವಕ ಹೃದಯವನ್ನು ದಂಗುಬಡಿಸಿದ ಲಳನಾಮನಿಗೆ ನಮ್ಮೆಲ್ಲರ ದಿಕ್ಕಾರ!
    (ನಿಮ್ಮ ಸಹಾಯ ಇದೆ ಅಲ್ವಾ?)
    ತುಂಬಾ ಚನ್ನಾಗಿದೆ.


    visit my blog also..........

    ಪ್ರತ್ಯುತ್ತರಅಳಿಸಿ
  7. ಟೀನಾ ಅವರೆ, ಏನಿದು ಹಾಹಾಕಾರ, ಅದೂ ನಮ್ಮ ಬೊಗಳೂರಿನಲ್ಲಿ!

    ಸುನಾಥರೇ,
    ಬಾಬಿಟ್‌ಶ್ರೀ ಎಂಬ ಪ್ರಶಸ್ತಿಯ ಬಗೆಗೂ ತೀವ್ರ ಚರ್ಚೆ ನಡೆದಿದೆ. ಯಾವುದನ್ನು ಆರಿಸುತ್ತಾರೋ ಕಾದು ನೋಡಬೇಕಾಗಿದೆ!

    ಅನಾನಿಮಸರೇ
    ಟೈಂಪಾಸ್ ಇಂಡಿಯಾ ಜೊತೆ ನಾವೇನೂ ಮಾಡ್ಕಂಡಿಲ್ಲ, ಅವರೇ ನಮ್ಮೊಂದಿಗೆ ಏನೋ ಫಿಟ್ಟಿಂಗು ಮಾಡ್ಕಂಡವ್ರೆ. ನಿಮ್ಮ ಶಾಪ ತಟ್ಟಿ ತಟ್ಟಿ, ನಮ್ಮೂರಲ್ಲಿ ಸಿಕ್ಕಾಪಟ್ಟೆ ಮಳೆ ಸುರಿದು, ಪ್ರವಾಹ ಬರ್ತಾ ಇದೆ. ಬರ್ತಾ ಇರಿ, ಶಾಪ ಹಾಕ್ತಾನೇ ಇರಿ.

    ಚಕ್ರವರ್ತಿಗಳೇ,
    ನಿಮಗೂ ದೋsssssssಡ್ಡ ನಮಸ್ಕಾರ, ಕಟಿಪಿಟಿಗೆ ಸಾಟಿ ಇಲ್ಲ ಅಂದಿದ್ದಕ್ಕಾಗಿ, ಬರ್ತಾ ಇರಿ ಅಂತ ಹೇಳ್ತಾ ಇದ್ದೀವಿ. ಇಲ್ಲಾಂದ್ರೆ....

    ಚುಕ್ಕಿಗಳೇ ಚಿತ್ತಾರರೇ,
    ತುಂಬಾ ಓಲ್ಡ್ ಆಗಿರೋ ನಿಯಮವದು. ನಿಮಗೆ ಗೊತ್ತಿಲ್ಲ ಅಂತ ಜ್ಞಾಪಿಸಿದ್ದು ಅಷ್ಟೇ.

    ಬಾಲು ಅವರೇ,
    ಸತ್ಯ ಯಾವಾಗಲೂ ಕಟುವಾಗಿಯೇ ಇರುತ್ತೆ ಅನ್ನೋ ವಿಷಯವನ್ನು ನೆನಪಿಸ್ಕೊಂಡು, ದಯವಿಟ್ಟು ದುಃಖ ಮರೆತು ಬಿಡಿ. ನಿಮಗೆ ಈ ವೇದನೆ, ನೋವು, ನರಳಾಟ, ಕೂಗಾಟ ಎಲ್ಲ ರೀತಿಯ ಸಂಕಟ ಮರೆಯಲು ಆ ದೇವರು ಆಯುರಾರೋಗ್ಯ ಭಾಗ್ಯಗಳನ್ನೆಲ್ಲಾ ಕರುಣಿಸಲಿ, ಡಾಕ್ಟರ್ ಮಲ್ಯರಿಗೂ ವ್ಯಾಪಾರ ಹೆಚ್ಚಾಗಲಿ ಮತ್ತು ತಮಿಳುಕಾಡಿಗೆ ಮತ್ತಷ್ಟು ಟಿಎಂಸಿ ನೀರು ಹರಿದುಬರಲಿ ಎಂದು ಹಾರೈಸುವ - ಇಂತಿ ---

    ಮನದಾಳದಿಂದ ಬಂದವರೇ,
    ನಿಮ್ಮ ಧಿಕ್ಕಾರಕ್ಕೆ ನಮ್ಮದೂ ಒಂದಷ್ಟು ಖಾರ ಸೇರಿಸ್ತೀವಿ. ನಿಮ್ಮೂರ ಬೊಗಳೆಗೂ ಭೇಟಿ ಕೊಡ್ತಾ ಇದ್ದೀವಿ... ಎಚ್ಚರಿಕೆ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D