(ಬೊಗಳೂರು ನೆರೆ ಪ್ರವಾಹ ಬ್ಯುರೋದಿಂದ)
ಬೊಗಳೂರು, ಜೂ.15- ಬೊಗಳೂರು ಇರುವ ರಾಜ್ಯವು ಹಿಂದೆಂದೂ ಕಂಡು ಕೇಳರಿಯದ ನೆರೆ ಪ್ರವಾಹದ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದೊಳಗೆ ಭಿನ್ನಮತ ಹೊಗೆಯಾಡಿ, ಹೊಗೆಯಾಡಿ, ಗಣಿಧಣಿಗಳು ಒಬ್ಬ ಮಹಿಳಾ ಮಂತ್ರಿಯನ್ನು ತೆಗೆದುಹಾಕಲು ಮಾಡಿದ ಪ್ರಯತ್ನವಿದೆಂದು ತಿಳಿದು ಎಲ್ಲವೂ ಶಮನವಾಗಿದೆ ಎಂದು ಅಂದುಕೊಳ್ಳುತ್ತಿರುವಾಗ, ಅದೇ ನೆರೆ ಪ್ರವಾಹದ ಕೊಚ್ಚೆಯಲ್ಲಿ ವಿರೋಧ ಪಕ್ಷ ಕಾಂ-ಗೆಸ್ ಕೂಡ ಸಿಲುಕಿಬಿಟ್ಟಿದೆ.
ನೆರೆ ಪರಿಹಾರಕ್ಕಾಗಿ ಜನರಿಂದ ಸಂಗ್ರಹಿಸಿ ಹಣವನ್ನು ಗುಳುಂ ಅಂತ ಸದ್ದು ಬಾರದಂತೆಯೇ ನುಂಗಿರುವ ಆರೋಪಗಳು ನೂರಿಪ್ಪತ್ತೈದು ವರ್ಷ ಇತಿಹಾಸವಿರುವ ಪಕ್ಷವನ್ನು ಅಲುಗಾಡಿಸುತ್ತಿದ್ದು, ಈ ಬಗ್ಗೆ Conಗೆಟ್ಟಿರುವ ಪಕ್ಷದ ಮುಖ್ಯಸ್ಥರು ಇದೀಗ ಈ ಬಗ್ಗೆ ತನಿಖೆಯಾಗಲಿ ಎಂದು ಬೊಗಳೂರು ಬ್ಯುರೋಗೆ ಫೋನ್ ಮಾಡಿ ಒತ್ತಾಯಿಸಿದ್ದಾರೆ.
ಕೇಡೀಶಿ ಮತ್ತು ಡೇಶೀಪಿ ನಡುವಣ ಕಲಹದಿಂದಾಗಿಯೇ ಈ ಹಣ ದುರುಪಯೋಗ ಆಗಿದೆ ಎಂಬ ಮಾತುಗಳು ಕೇಳಿಬಂದಿದ್ದರಿಂದ ಬೊಗಳೂರು ಏಕಸದಸ್ಯ ಬ್ಯುರೋದ ಸರ್ವ ಸದಸ್ಯರೂ ಕಿವಿ ನಿಮಿರಿಸಿ ಈ ಫೋನ್ ಕರೆಗೆ ಓಗೊಟ್ಟಿದ್ದರು.
ಡೇಶೀಪಿ ಅವರು ಫೋನ್ ಮಾಡುತ್ತಾ, ಹಣ ಸಂಗ್ರಹಿಸಿದ್ದು ನಿಜ, ನಾವು ಜನರಿಂದ ಸಂಗ್ರಹಿಸಿದಹಣವನ್ನು (ನಮ್ಮ) ಜನರಿಗೇ ಕೊಟ್ಟಿದ್ದೇವೆ. ಅದರಲ್ಲೇನು ತಪ್ಪಿದೆ ಎಂದು ಕೇಳಿದರಲ್ಲದೆ, ಹಣ ದುರುಪಯೋಗವಾಗಿದ್ದು ಬಯಲಾಗಿದ್ದು ಹೇಗೆ ಎಂದು ತನಿಖೆ ಮಾಡಿಸುವಂತೆ ಹೈಕಮಂಗ್ ಜೊತೆ ಆಗ್ರಹಿಸುವುದಾಗಿ ಹೇಳಿದರು.
ಅವರ ಫೋನ್ ಕರೆಯನ್ನು ಕಿವಿಯಾಚೆ ಹಿಡಿದು, ಡೇಕೀಶಿ ಕರೆಯನ್ನು ಕೈಗೆತ್ತಿಕೊಳ್ಳಲಾಯಿತು. ಅವರು ಹೇಳಿದ್ದು: ನಮ್ಮಲ್ಲಿ ಹಣ ಸಂಗ್ರಹ ಮುಂಚಿನಿಂದಲೇ ಆಗುತ್ತಿತ್ತು. ಆದರೆ, ಹಣ ಸಂಗ್ರಹವಾದ ನಂತರ ಈ ನೆರೆ ಬಂದದ್ದು ಎಲ್ಲಿಂದ ಮತ್ತು ಅದು ಹೇಗೆ ಎಂಬುದೇ ತನಿಖೆಯಾಗಬೇಕು!
7 ಕಾಮೆಂಟ್‌ಗಳು
hahahaha... correct...hana sangravada nantara nere bandiddu..
ಪ್ರತ್ಯುತ್ತರಅಳಿಸಿcon-ಗೆಸ್ ಗೆ ಇದೆಲ್ಲಾ ಮಾಮೂಲು. ಪೇಶದಾಂಡೆ ಮತ್ತು ಕೇಡಿ-ಇಶ್ಶಿಯವರ
ಪ್ರತ್ಯುತ್ತರಅಳಿಸಿ‘ನೆರೆ-ಹೊರೆ’ ಹೊಂದಾಣಿಕೆಯಾದರೆ ಎಲ್ಲ ಸರಿ ಹೋದೀತು!
ಜ್ಯೋತಿ ಶೀಗೆಪಾಲ್ ಅವರೆ,
ಪ್ರತ್ಯುತ್ತರಅಳಿಸಿನಾವು ಈಗ ಆ ಮಾತನ್ನು ಹಿಂದೆಗೆದುಕೊಳ್ಳುತ್ತಿದ್ದೇವೆ. ಯಾಕೆಂದರೆ ನೀವು ವರದ್ದಿ ನೋಡಿ ಗಹಗಹಿಸಿ ನಕ್ಕಿದ್ದಕ್ಕೆ!
ಸುನಾಥರೆ,
ಪ್ರತ್ಯುತ್ತರಅಳಿಸಿಹೌದು, ಎಲ್ಲರೂ ಇಶ್ಶೀ ಇಶ್ಶೀ ಅಂತ ಹೇಳಬೇಕಾಗಿಬಂದಿರುವುದಕ್ಕೆ ಅವರ ನೆರೆಯವರು ಹೊರೆಯಾಗಿರುವುದೇ!
ಸ್ವಾಮೀ, ಕಾಂಗ್ರೆಸ್ ತಿಂದ ಹಣದ ಬಗ್ಗೆ ಬರೆಯುತ್ತೀರಲ್ಲಾ?. ಪಾಪ ನಮ್ಮ ಯೆಡಿಯೂರಪ್ಪ ಈ ನೆರೆ ದುಡ್ಡಿನ ಲೆಕ್ಕ ಕೊಡದೆ ಎಷ್ಟು ಗುಳುಂ ಮಾಡಿದ್ದಾನೋ ದೇವರೇ ಬಲ್ಲ. ಬಿ.ಜೆ.ಪಿ.ಯವರು ಕರ್ನಾಟಕವನ್ನು ಲೂಟಿ ಮಾಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವಾ?. ರೌಡಿ ಬಳ್ಳಾರಿ ಬ್ರದರ್ಸ್, ಯೆಡಿಯೂರಪ್ಪ, ಅಶೋಕನಂಥ ಹುಟ್ಟು ಲಫಂಗರು ಕರ್ನಾಟಕವನ್ನೇ ಆಪೋಶನ ತೆಗೆದುಕೊಂಡು, ಮುಂದೆ ಬರುವ ಯಾವ ಸರಕಾರಕ್ಕೂ ಗುಳುಂ ಮಾಡಲು ಸಾಧ್ಯವೇ ಇಲ್ಲದಂತೆ ಮಾಡುವ ಪಣ ತೊಟ್ಟಿದ್ದಾರೆ. ಮೊದಲು ಕೋಟಿ ಸಂಗ್ರಹ ಮಾಡಿದ ಯೆಡಿಯೂರಪ್ಪ ಎಷ್ಟು ಹಣ ನುಂಗಿದ ಅಂತ ಕೇಳಿ, ಆಮೇಲೆ ಈ ಕಾಂಗ್ರೆಸ್, ಜೆ.ಡಿ.ಎಸ್. ಪಕ್ಷಗಳ ತನಿಖೆಯಾಗಲಿ.
ಪ್ರತ್ಯುತ್ತರಅಳಿಸಿದಯವಿಟ್ಟು...ಎಲ್ಲರೂ ಕೇಳಿ...ಸರಕಾರದ ಯಾವ ಕಾರ್ಯಕ್ರಮಕ್ಕೂ, ಎಂಥಹಾ ನಿಧಿ ಸಂಗ್ರಹಣೆಗೂ ಚಿಕ್ಕಾಸಿನ ಸಹಾಯ ನೀಡಬೇಡಿ. ಇದು ಸೀದಾ ಹೋಗುವುದು ಈ ಫಟಿಂಗರ ಜೇಬಿಗೆ. ಪಾಪ ದೇಶಪಾಂಡೆ, ಕೋಟಿ ನುಂಗಿದ ಯೆಡಿಯೂರಪ್ಪ ಗಹಗಹಿಸಿ ನಗುತ್ತಿದ್ದಾನೆ.
ಈ ಯೆಡಿಯೂರಪ್ಪ, ಸರಕಾರದ ಹಣವನ್ನು ತನ್ನ ಸ್ವಂತ ಬಳಕೆಗೆ ಬಳಸುತ್ತಿರುವುದು ಆಘಾತಕರ. ತಮಿಳುನಾಡಿನ ದೇವಳಕ್ಕೆ ಕೋಟಿ ದೇಣಿಗೆ ನೀಡಿದ ಹಣ ಯಾರಪ್ಪನದು?. ಇಂತಹ ಮುಠ್ಠಾಳ ಮುಖ್ಯಮಂತ್ರಿಯನ್ನು ಪಡೆದ ಕರ್ನಾಟಕ ಧನ್ಯ. ಮುಂದಿನ ಚುನಾವಣೆಯಲ್ಲಿ ಈ ಬಿ.ಜೆ.ಪಿ. ಮಂದಿ ನಿಮ್ಮ ಬಾಗಿಲಿಗೆ ಬಂದರೆ ಮೆಟ್ಟಲ್ಲಿ ಹೊಡೆಯಿರಿ.
e rajakiya iste kanri
ಪ್ರತ್ಯುತ್ತರಅಳಿಸಿಜೇಮ್ಸ್ ಬಾಂಡ್ ಅವರೇ, ಬೊಗಳೂರಿಗೆ ಸ್ವಾಗತ... ರಾಜಕೀಯ ಒಳ್ಳೇ ದೊಂಬರಾಟ... ಅದೀಗ ಅವಸಾನದ ಅಂಚಿನಲ್ಲಿರುವ ಗ್ರಾಮೀಣ ಆಟ...
ಪ್ರತ್ಯುತ್ತರಅಳಿಸಿಏನಾದ್ರೂ ಹೇಳ್ರಪಾ :-D