ಬೊಗಳೆ ರಗಳೆ

header ads

ಏಡ್ಸ್ ಪರೀಕ್ಷೆಯ Resultಗೆ ತಡೆಗೆ ಕಾರಣ ಪತ್ತೆ

(ಬೊಗಳೂರು ಏಡ್ಸ್ ಸಂಚೋದನಾ ಬ್ಯುರೋದಿಂದ)
ಬೊಗಳೂರು, ಜೂ.5- ಇದೀಗ ಎಲ್ಲೆಲ್ಲೂ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿ, ಶಾಲೆಗಳು ಮತ್ತು ಕಾಲ್ಏಜುಗಳು ಆರಂಭವಾಗುವ ಸಮಯವಾಗಿರುವುದರಿಂದಾಗಿ, ಕಾಲ್‌ಏಜಿಗೆ ಬಂದವರೆಲ್ಲರೂ (ತಲುಪಿದವರೆಲ್ಲರೂ) ಕಡ್ಡಾಯವಾಗಿ ಏಡ್ಸ್ ಪರೀಕ್ಷೆಗೂ ಹಾಜರಾಗಬೇಕೆಂಬ ಹೊಸ ನಿಯಮವನ್ನು ಬೊಗಳೂರು ಸರಕಾರ ಕಳೆದ ಶಿಕ್ಷಾ ವರ್ಷದಿಂದ ಜಾರಿಗೊಳಿಸಿದ್ದು, ಪ್ರಥಮ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ.

ಏಡ್ಸ್ ಪರೀಕ್ಷೆಯಲ್ಲಿ ಫಲಿತಾಂಶ ತಡೆ ಹಿಡಿದಿರುವುದು ಕಾಲ್ಏಜು ಮೆಟ್ಟಿಲೇರಿರುವ ವಿದ್ಯಾರ್ಥಿ-ವಿದ್ಯಾರ್ಥಿನಿ ಸಮುದಾಯದಲ್ಲಿ ತೀವ್ರ ಗೊಂದಲ, ಆತಂಕ, ಕುತೂಹಲಗಳಿಗೆ ಕಾರಣವಾಗಿದೆ. ನಾವು ಪಾಸಾಗುತ್ತೇವೆಯೋ ಇಲ್ಲವೋ ಎಂಬ ಆತಂಕವೇ ಹಲವರನ್ನು ಆತ್ಮಹತ್ಯೆಯ ಕುರಿತು ಚಿಂತೆ ಮಾಡುವಂತೆ ಪ್ರೇರೇಪಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಇಷ್ಟಕ್ಕೂ ಏಡ್ಸ್ ಪರೀಕ್ಷಾ ಫಲಿತಾಂಶ ತಡೆ ಹಿಡಿದದ್ದೇಕೆ ಎಂದು ಅನಾರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಗಳನ್ನು (ದೂರದಿಂದಲೇ) ಸಂಪರ್ಕಿಸಿ, ಸ್ಪಷ್ಟೀಕರಣ ಕೇಳಲಾಯಿತು.

ಅದಕ್ಕೆ ಅವರು ನೀಡಿದ ಉತ್ತರ: ಏಡ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರ ಸಂಖ್ಯೆಯು ಪರೀಕ್ಷೆಗೆ ಹಾಜರಾದವರ ಸಂಖ್ಯೆಯನ್ನೂ ಮೀರಿದೆ! ಮತ್ತು ಇದರ ಹಿಂದೆ ಸಾಕಷ್ಟು 'ಅಕ್ರಮ'ಗಳು ನಡೆದಿರುವ ಸಾಧ್ಯತೆ ಇದೆ!!!

ಪರೀಕ್ಷೆಯಲ್ಲಿ ಅಕ್ರಮವೋ, ಫಲಿತಾಂಶದಲ್ಲಿ ಅಕ್ರಮವೋ ಅಥವಾ ಪರೀಕ್ಷೆಗೆ ಹಾಜರಾದವರು ಮಾಡಿರುವ ಅಕ್ರಮಗಳೋ ಎಂದು ವಿವರಿಸಲು ಈ ಅಧಿಕ್ಕಾರಿ ಅಲ್ಲಿರಲೇ ಇಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಸಾಗರದಾಚೆಯಲ್ಲಿರೋರೆ,
    ಇದು ಬರಹ ಅಂತ ಒಪ್ಪಿದ್ದರಿಂದ, ಅದರಲ್ಲೂ ತುಂಬಾ ಚೆನ್ನಾಗಿದೆ ಅಂದಿದ್ದರಿಂದಂತೂ ಅಗಾಥ ಕ್ರಿಸ್ಟಿಗೆ ಹೇಳುವಷ್ಟು ಅಗಾಧವಾದ ಆಘಾತವಾಗಿದೆ.
    ಬರ್ತಾ ಇರಿ.

    ಪ್ರತ್ಯುತ್ತರಅಳಿಸಿ
  2. ಈ ಪರೀಕ್ಷೆಯ ಬಗ್ಗೆ ನಮಗೆ ತಿಳಿದಿರಲೇ ಇಲ್ಲ. ಯಾವಾಗ ಈ ಪರೀಕ್ಷೆಯನ್ನು ಮಾಡುವರು? ಇದಕ್ಕಾಗಿ ಯಾವ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯಬೇಕು? ಪರೀಕ್ಷೆಗೆ ಹಾಜರಾಗದೇ ಪಾಸಾಗುವ ವಿಧಾನ ಹೇಗೆ? ಪೂರ್ಣ ಮಾಹಿತಿಯನ್ನು ತಕ್ಷಣ ತಿಳಿಸುವಂತವರಾಗಿ

    ಕೊನೆಯ ಪಿಸು ಮಾತು : ನಮ್ಮ ತರಬೇತಿ ಕೇಂದ್ರದಲ್ಲಿ ಇದರ ಬಗ್ಗೆ ಒಂದು ಹೊಸ ಕೋರ್ಸನ್ನು ಪ್ರಾರಂಭಿಸುವ ಇರಾದೆ ಇದೆ :)

    ಪ್ರತ್ಯುತ್ತರಅಳಿಸಿ
  3. ಶ್ರೀನಿವಾಸರೆ,
    ಹಾಗೆಲ್ಲಾ ಖೊಟ್ಟಿ ವಿವರಗಳನ್ನು ಬಿಟ್ಟಿಯಾಗಿ ನೀಡುವುದು ಅಸಾಧ್ಯದ ಮಾತು. ನೀವೆಲ್ಲಾದ್ರೂ ಪಾಸಾದ್ರೆ ಅಂತ ಊರವರೆಲ್ಲಾ ಹೊಟ್ಟೆಕಿಚ್ಚು ಪಡ್ತಾರೆ. ನೀವು ಫೇಲ್ ಅಂತ ನಮಗೆ ದೂರದ ಮಾಹಿತಿಯೂ ಬಂದಿದೆ. ತರಬೇತಿ ಕೇಂದ್ರಕ್ಕೆ ನೀವು ಮುಂಬೈ ಸೆಂಟ್ರಲ್ ಅಕ್ಕ-ಪಕ್ಕ ವಿಚಾರಿಸುವಂತೆ ಕೋರಲಾಗಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D