ಜಗತ್ತಿನಾದ್ಯಂತ ಅಂತರಜಾಲ ಲೋಕದಲ್ಲಿ ನಕ್ಷತ್ರಗಳಂತೆ ಹೊಳೆಯುತ್ತಿರುವ (ಕೆಲವು ಮಿಂಚಿ ಮರೆಯಾಗಿವೆ) ಕನ್ನಡ ಬ್ಲಾಗುಗಳ ಒಡೆಯರು ಮತ್ತು ಅವರನ್ನು ಪ್ರೋತ್ಸಾಹಿಸುತ್ತಲೇ ಇರುವ ಬ್ಲಾಗೋದುಗರಿಗೆ ಏಪ್ರಿಲ್ 1ರ ಮೂರ್ಖರ ದಿನದಂದು ಪರಮಾಘಾತಕಾರಿ ವ-ರದ್ದಿಯೊಂದು ಕಾದಿದೆ. ನಿಮ್ಮ ಪ್ರತಿಗಳನ್ನು ಬ್ಲ್ಯಾಕಿನಲ್ಲಿ ದುಪ್ಪಟ್ಟು, ನೂರ್ಪಟ್ಟು ಹಣಕೊಟ್ಟು ಈಗಲೇ ಕಾಯ್ದಿರಿಸಿಕೊಳ್ಳಿ. ಪ್ರತಿಗಳು ಸಿಕ್ಕದವರು ಕೂಡ ನಿರಾಶರಾಗಬೇಕಿಲ್ಲ. ಅವರಿಗೆಲ್ಲ ಉಚಿತವಾಗಿ ನೀಡಲಾಗುತ್ತದೆ. ಯಾಕೆಂದರೆ ಇದು ಮತಾಂತರಕ್ಕೆ ಸಂಬಂಧಿಸಿದ ವಿಷಯ!

ಪ್ರತಿಗಳನ್ನು ನಿಮ್ಮ ಮನೆ ಬಾಗಿಲಿಗೇ ತಲುಪಿಸಲಾಗುತ್ತದೆ. ಅದು ತಲುಪದಿದ್ದರೆ (ತಲುಪುವುದಿಲ್ಲ ಅಂತ ಶೇ.100ರಷ್ಟು ಗ್ಯಾರಂಟಿ ಇದ್ದವರು) ನಮ್ಮ ಮನೆ ಬಾಗಿಲಿಗೆ ಬಂದರಾಯಿತು...

ಏಪ್ರಿಲ್ 1ರ ನಿರೀಕ್ಷೆಯಲ್ಲಿ...
- ಸೊಂಪಾದಕರು
ಮತ್ತು ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ಸರ್ವ ಪದ-ಧಿಕ್ಕಾರಿಗಳು ಮತ್ತು ಸದಸ್ಯರು

2 Comments

ಏನಾದ್ರೂ ಹೇಳ್ರಪಾ :-D

  1. ಬೊಗಳೆ ರಗಳೆ ಸೊಂಪಾದಕರೆ,
    ನೀವು ಸತ್ಯವನ್ನು ಹೇಳಿದರೆ ತಡೆದುಕೊಳ್ಳುವ ಶಕ್ತಿ ನಮಗಿಲ್ಲ.

    ReplyDelete
  2. ಸುನಾಥರೆ,
    ಹೇಳಿ ಮಾಡಿದರೆ ಪಾಪ ಇಲ್ಲವಾಗಿರುವುದರಿಂದ, ಮತ್ತು ನಮ್ಮ ನಿಯಮಾವಳಿಗಳ ಪ್ರಕಾರ ಆಡದೆಯೆ ಮಾಡದವನು ರೂಢಿಯೊಳಗುತ್ತಮನು, ಆಡಿ ಮಾಡುವವನು ಅಧಮನು!

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post