ಬೊಗಳೆ ರಗಳೆ

header ads

ಅಮೆರಿಕದಲ್ಲಿ "ಪ್ರಥಮ ಶ್ವಾನ"ಕ್ಕಾಗಿ ಶೋಧ

(ಬೊಗಳೂರು ಶ್ವಾನಾನ್ವೇಷಣಾ ಬ್ಯುರೋದಿಂದ)
ಬೊಗಳೂರು, ಜ.9- ಮುಬಾರಕ್ ಒಬಾಮ ಅಮೆರಿಕದ ಬಿಳಿ ಭವನಕ್ಕೆ ಕಪ್ಪು ಅಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಅವರ ಪ್ರಾಣಿ ಸಂಗ್ರಹ ಲಾಯದ ಮಂತ್ರಿ ಮಂಡಲವನ್ನು ಪುನಾರಚನೆ ಮಾಡುವ ಸುದ್ದಿ ಕೇಳಿದ ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ಅಧ್ಯಕ್ಷರೂ ಸೇರಿದಂತೆ ಸಮಸ್ತ ಸಿಬ್ಬಂದಿಗಳು ತಲೆಮರೆಸಿಕೊಂಡಿರುವುದಾಗಿ ನಮ್ಮ ವಿರೋಧಿ ಪತ್ರಿಕೆಗಳವರು ವರದ್ದಿ ಮಾಡಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದವರಿಗೆಲ್ಲರಿಗೂ ಎಲ್ಲಕ್ಕಿಂತ ಮುಖ್ಯವಾಗುವುದು ತಮ್ಮ ಮನೆಯ ಪ್ರಧಾನ ನಾಯಿ ಯಾರಾಗಬೇಕೆಂಬುದು. ಆದರೆ ಅದು ದೊಡ್ಡಣ್ಣ ಎಂದು ಕರೆಸಿಕೊಳ್ಳುವ ದೇಶವಾಗಿರುವುದರಿಂದ ಅದನ್ನು ನಾಯಿ ಅಂತ ಕರೆಯದೆ ಶ್ವಾನ ಅಂತ ಕರೆದರೆ ಉತ್ತಮ ಎಂದು ಮುಬಾರಕ್ ಒಬಾಮ ಗುಪ್ತ ಸಂದೇಶವೊಂದರಲ್ಲಿ ಆಣತಿ ನೀಡಿದ್ದಾರೆ.

ನಾಯಿ ಎಂದ ತಕ್ಷಣ ಅವರಿಗೆ ನೆನಪಾಗಿದ್ದು ಮಾತ್ರ ಬೊಗಳೆ ರಗಳೆ ಬ್ಯುರೋದ ಸಂಪಾದಕರು ಎಂಬುದು ಎಲ್ಲರಿಗೂ ಅಚ್ಚರಿ ತರುವ ವಿಷಯವಾಗಿದೆ ಎಂಬುದು ಕೂಡ ಅಷ್ಟೇ ಅಸತ್ಯ. ಬೊಗಳೂರಿನ ಮಂಗಕ್ಕೂ ನಾಯಿಗೂ ಎತ್ತಣ ಸಂಬಂಧವಯ್ಯ ಎಂದು ಓದುಗರೆಲ್ಲರೂ ಹುಬ್ಬೇರಿಸುತ್ತಿರಲಾಗಿ, ಮಂಗಗಳನ್ನು ಮತಾಂತರಗೊಳಿಸಿ ನಾಯಿಗಳಾಗಿ ಪರಿವರ್ತಿಸುವ ಜಾಲವೊಂದು ತೀವ್ರವಾಗಿ ಸಕ್ರಿಯವಾಗಿದೆ ಎಂಬುದು ಕೇಳಿದ್ದೇ ತಡ, ಬೊಗಳೂರು ಮಂದಿ ಪರಾರಿ!

ಇಡೀ ಭಾರತವನ್ನೇ ಜಗತ್ತಿಗಿಂತಲೂ ಹೆಚ್ಚು ಕಾಡುತ್ತಿರುವ ಜಾಗತಿಕ ಹಣಕಾಸು ಬಿಕ್ಕಟ್ಟಿಗಿಂತಲೂ ಒಬಾಮರಿಗೆ ನಾಯಿಯ ಆಯ್ಕೆಯೇ ಬಲುದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿದ್ದು, ನಾಯಿ ಮರಿಗಳ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ ಬೀದಿಯಲ್ಲಿರೋ ನಾಯಿಗಳನ್ನೇ ಬಳಸಿಕೊಳ್ಳಬಹುದು.

ಮಂಗವನ್ನೇ ನಾಯಿಯಾಗಿಸಿ ಮತಾಂತರಗೊಳಿಸಬೇಕೇ ಅಥವಾ ನಾಯಿಗಳನ್ನೇ ಅದು ನಾಯಿಯಲ್ಲ, ಮಂಗ ಎಂದೇ ತಿಳಿದುಕೊಂಡು ಹಾಗೇ ಉಳಿಸಿಕೊಳ್ಳಬೇಕೇ, ಅಥವಾ ಮಂಗ-ನಾಯಿಗಳೆರಡರ ಮಿಶ್ರ ತಳಿಯನ್ನೇ "ದೇಶದ ಪ್ರಥಮ ಶ್ವಾನಪ್ರಜೆ"ಯಾಗಿ ನೇಮಿಸಿಕೊಳ್ಳಬೇಕೇ ಎಂಬಿತ್ಯಾದಿಯೆಲ್ಲಾ ಚರ್ಚೆಯಿನ್ನೂ ನಡೆಯುತ್ತಿದ್ದು, ಈ ಚರ್ಚೆಗೆ ಮಂಗಗಳ ಹಾಡಲು ತೀರ್ಮಾನಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಲಕ್ಷ್ಮಿ,
    ಅರೆ ನೀವಾಗ್ಲೇ ಶುಭ ಕೋರಿ ಆಯ್ತಾ?... ಛೆ... ನಾವಿನ್ನೂ ಯೋಚ್ನೆ ಮಾಡ್ತಾ ಇದ್ದೀವಷ್ಟೇ...

    ಪ್ರತ್ಯುತ್ತರಅಳಿಸಿ
  2. ಓಹ್ ಸುನಾಥರೆ,
    ನೀವಂತೂ ಎಳ್ಳು-ನೀರು ಬಿಟ್ಟು ಕೈತೊಳೆದುಕೊಂಡೂ ಆಯ್ತಾ?.. ಇನ್ನಂತೂ ನಾವಲ್ಲಿಗೆ ಹೋಗಲೇಬೇಕಾಗಿರೋದು ಅನಿವಾರ್ಯ.

    ಯಾರು ಹೇಳಲಿ ಎಂದು ನಾವು ಹೋಗುವುದಿಲ್ಲ, ಹೋಗುವುದು ಅನಿವಾರ್ಯ ಕರ್ಮ ನಮಗೆ.... ಅಂತ ಅಂದ್ಕೋತೀವಿ. ಇನ್ನೇನು ಮಾಡೋದು...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D