(ಬೊಗಳೂರು ದಿವಾಳಿ ಬ್ಯುರೋದಿಂದ)
ಈ ಬಾರಿ ಜಾಗತಿಕ ಹಣಕಾಸು ಬಿಕ್ಕಟ್ಟು ಬಡ ಭಿಕ್ಷುಕರ ಕಿಸೆಗೂ ಕತ್ತರಿ ಹಾಕಿರುವುದರಿಂದ, ಅವರ ಮೊಬೈಲ್ ಬಿಲ್ ಕಟ್ಟಲು, ಅವರ ಟಿವಿ ಕೇಬಲ್ ಬಿಲ್ ಕೊಡಲು, ಮತ್ತು ಪಟಾಕಿ ಬಾಂಬ್ ಕೊಳ್ಳುವ ಶಕ್ತಿಯನ್ನು ತಗ್ಗಿಸಿವುದರ ಪರಿಣಾಮವಾಗಿ ಬೊಗಳೂರಿನ ಸಮಸ್ತ ಜನತೆ ಈ ಬಾರಿ ವಿಶಿಷ್ಟವಾಗಿ ದೀಪಾವಳಿ ಅಲ್ಲಲ್ಲ... ದಿವಾಳಿ ಆಚರಿಸಿದರು ಎಂದು ನಮ್ಮ ಬಾತ್ಮೀದಾರರು ಅಡಗಿ ಕುಳಿತು ವ-ರದ್ದಿ ತಂದುಕೊಟ್ಟಿದ್ದಾರೆ.

ಈ ಬಗ್ಗೆ ವಿಚಾರಿಸಲಾಗಿ, ಬೊಗಳೂರು ಬ್ಯುರೋ ಅನುಸರಿಸಿದ ಕ್ರಮದಂತೆಯೇ ಎಲ್ಲರೂ ದಿವಾಳಿ ಆ(ಚರಿಸಿ)ಗಿರುವುದಾಗಿ ತಿಳಿದುಬಂದಿದೆ.

ಹೇಗಂದ್ರೆ, ಚೀಲಾ ತುಂಬಾ ನೋಟಿನ ಕಂತೆ ತುಂಬಿಕೊಂಡು ಪಟಾಕಿ ಅಂಗಡಿಗೆ ಹೋಗಿ ಜೇಬು ತುಂಬಾ ಪಟಾಕಿ ತಂದು ಸುಟ್ಟು ಹಾಕುವ ಮೂಲಕ!

4 Comments

ಏನಾದ್ರೂ ಹೇಳ್ರಪಾ :-D

 1. ನೀವೇ ಪುಣ್ಯವಂತರು, ಗುರು.ಜೇಬು ತುಂಬಾ ಪಟಾಕಿ ತಂದಿರಿ.
  ನಾನು 'ಪಟ್ ಪಟ್' ಅಂತ ಬಾಯಿಯಿಂದ sound ಕೊಡುತ್ತ, ಮನೇ ಸುತ್ತಲೂ ರೌಂಡ್ ಹೊಡೆದೆ.

  ReplyDelete
 2. ಹಣದುಬ್ಬರದ ಪಟಾಕಿ ಎಲ್ಲೆಡೆ ಸಿಡಿಯುತಿರಲು, ಹಣಕೊಟ್ಟು ಕೊಂಡುತಂದ ಪಟಾಕಿ ಹೊಡೆದವರೇ ನಿಜವಾದ ಸಿರಿವಂತರು. ಏನಂತೀರಾ????

  ReplyDelete
 3. ಸುನಾಥರೆ,
  ಮನೆ ಸುತ್ತಲೂ ರೌಂಡ್ ಹೊಡೆದದ್ದನ್ನು ನಾವು ದೂರದಿಂದಲೇ ಗಮನಿಸಿ ವಿಶ್ಲೇಷಿಸಿದಾಗ ಯಾಕೆ ಎಂಬುದು ನಮ್ಮ ಅರಿವಿಗೆ ಮಾತ್ರವೇ ಬಂದಿದೆ. ನೀವು ಓಡುತ್ತಿದ್ದುದು ಬೆಲೆ ಏರಿಕೆಯ ರಾಕೆಟ್‌ನಿಂದ ತಪ್ಪಿಸಿಕೊಳ್ಳಲು!

  ReplyDelete
 4. ಹರೀಶರೇ,

  ಸ್ವಾಗತವು ನಿಮಗೆ.

  ಹೀಗೆಲ್ಲಾ ಹೇಳಿ ಇನ್ಕಂ ಟ್ಯಾಕ್ಸ್ ವಿಭಾಗದವರನ್ನು ಛೂಬಿಡಲು ಸಿದ್ಧತೆ ಮಾಡ್ತಾ ಇರೋ ಹಾಗಿದೆಯಲ್ಲಾ....

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post