ಬ್ರಹ್ಮಾಂಡ ಸೃಷ್ಟಿಯ ರಹಸ್ಯವರಿಯುವ ನೆಪದಲ್ಲಿ ಬೊಗಳೆ ರಗಳೆ ಬ್ಯುರೋದ ವಿರುದ್ಧ ಸುರಂಗ ಕಾರ್ಯಾಚರಣೆ ನಡೆಸಿ, ರಹಸ್ಯ ಪತ್ತೆ ಹಚ್ಚುವ ಅಸಹ್ಯ ಕಾರ್ಯ ಆರಂಭವಾಗಿರುವುದರಿಂದ ಕೆರಳಿರುವ ಬೊಗಳೂರು ಮಂದಿ, ಪ್ರತಿಭಟನಾರ್ಥವಾಗಿ ಬ್ಯುರೋ ಬಾಗಿಲು ಮುಚ್ಚಿ ಒಂದು ವಾರ ಕಾಲ ಪರಾರಿಯಾಗಲು ಮತ್ತು ಇಲ್ಲದ ತಲೆ ಮರೆಸಿಕೊಳ್ಳಲು ನಿರ್ಧರಿಸಿದ್ದಾರೆ.

ಇನ್ನೊಂದು ವಾರ, ಬೊಗಳೆ ಬ್ಯುರೋದ ಕುಟುಕು ಕಾರ್ಯಾಚರಣೆಯಿಲ್ಲದೆ, ನೆಟ್ಲೋಕದ ಮಂದಿ ನಿಶ್ಚಿಂತೆಯಿಂದ ನಿದ್ದೆ ಮಾಡಬಹುದೆಂಬ ಸಲಹೆ ನೀಡುತ್ತಾ....
-ಅನ್ವೇಷಿ

6 Comments

ಏನಾದ್ರೂ ಹೇಳ್ರಪಾ :-D

 1. ಆ ಅಜ್ಞಾನಿಗಳೂ ನಿಮಗೇ ಶರಣಾಗಬೇಕು!
  ನಿಮ್ಮ ಸಹಾಯವಿಲ್ಲದೇ, ಯಾವ ರಹಸ್ಯಭೇದನೆ ಸಾಧ್ಯ?

  ReplyDelete
 2. ಇಲ್ಲದ ತಲೆಯನ್ನು ಮರೆಸಿಕೊಳ್ಳಲು ನೀವು ಪರಾರಿಯಾಗಬೇಕಾಗಿಲ್ಲ. ಒಂದು ಬುರ್ಖ ಹಾಕಿಕೊಂಡರೆ ಸಾಕು.

  ಅಂದ ಹಾಗೆ ನಾವು ಒಂದು someಶೋಧನೆ ಮಾಡಿದ್ದೇವೆ. ಅದರ ಪ್ರಕಾರ ಬೊಗಳೆ ರಗಳೆಯ ಏಕೈಕ ಮುಖ್ಯ ಪ್ರಧಾನ ವ್ಯವಸ್ಥಾಪಕ ಸೊಂಪಾದ ಕರು ಕನ್ನಡ ವೆಬ್‌ದುನಿಯಾ ತಾಣಕ್ಕೆ ಒದೆ ಹೆಚ್ಚಿಸಲು ಒಳ ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎಂಬುದಾಗಿದೆ.

  -ಪಬ್

  ReplyDelete
 3. ಸಿಮ್ಮಾ ಅವರೆ,

  ನೀವು ಬಚಾವ್ ಆಗಿದ್ದು ಕೇಳಿ ಸಂತೋಷವಾಯಿತು. ಆದರೆ ಇದೋ... ಮತ್ತೆ ಬಂದಿದೆ ಸಿಮ್ಮವನ್ನೇ ಬೇಟೆಯಾಡಲು ಈ ಬೊಗಳೆ... ಎಚ್ಚರಿಕೆ!!!

  ReplyDelete
 4. ಸುನಾಥರೆ,

  ನಿಮ್ಮ ಪರಮಅಪವಿತ್ರ ಶ್ಲಾಘನೆ ಮಾತುಗಳಿಂದ ತೀವ್ರ ಅಸಂತುಷ್ಟರಾಗಿದ್ದೇವೆ. ನಾವು ಮತ್ತೆ ಪ್ರತ್ಯಕ್ಷರಾಗಿದ್ದೇವೆ. ಯಾವ ವರ ಕೊಡ್ತೀರೋ ನೀವೇ ಕೊಡಿ!

  ReplyDelete
 5. ಪಬ್ಬಿಗರೇ,

  ಇತ್ತಿತ್ತಲಾಗಿ ಪೊಲೀಸರು ಬುರ್ಖಾ ಬದಲು ಬಟ್ಟೆಯನ್ನು ಮುಖಕ್ಕೆ ಸುತ್ತಿಸಿ, ಕೆಲವು 'ಉಗ್ರ' ಪ್ರಾಣಿಗಳು ಅತ್ತಿತ್ತ ಒಯ್ಯುತ್ತಿದ್ದಾರಲ್ಲ. ಅದುವೇ ಸೂಕ್ತ ಅನ್ನಿಸಿದೆ. ಅವರ ಇಲ್ಲದ ಮುಖವನ್ನು ಮುಚ್ಚಿಕೊಳ್ಳಲೂ ಇದೊಂದು ಸೂಕ್ತ ಉಪಾಯವೇ ಅಲ್ಲವೇ?

  ನಿಮ್ಮ ಸಂಚೋದನಾ ಚಾತುರ್ಯಕ್ಕೆ ತಲೆ ಇಲ್ಲದಿರುವುದರಿಂದ ಅದನ್ನು ತೂಗುವುದಿಲ್ಲ. ಕಣ್ಣು ಮಾತ್ರ ತೂಗುತ್ತೇವೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post