ಬೊಗಳೆ ರಗಳೆ

header ads

ಡೈವೊರ್ಸ್‌ಗೆ ಹೊಸ ತಂತ್ರಜ್ಞಾನ 'ಡೈವೊರ್ಜೀನ್' ಪತ್ತೆ!

(ಬೊಗಳೂರು ತಂತ್ರಅಜ್ಞಾನ ಬ್ಯುರೋದಿಂದ)
ಬೊಗಳೂರು, ಸೆ. ೫- ದೇಶದೆಲ್ಲೆಡೆ ಪವಿತ್ರ ಬಾಂಧವ್ಯವಾಗಿ ಏರ್ಪಡಬೇಕಿದ್ದ ವಿವಾಹವು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಬಂಧನವಾಗಿ ಪರಿವರ್ತನೆಗೊಂಡು " ವಿವಾಹ....ಬಂ"ಧನ" ರೂಪೇಣ ಪಶು, ಪತ್ನಿ ಸುತಾಲಯಃ" ಎಂಬುದು ಜೋರಾಗಿಯೇ ಕೇಳಿಬರುತ್ತಿದೆ. ಇದಕ್ಕೆಲ್ಲಾ ಕಾರಣ ಬೊಗಳೆ ರಗಳೆ ಬ್ಯುರೋದ ಅಜ್ಞಾನಿಗಳು ಸಂಶೋಧಿಸಿದ ಡೈವೋರ್ಜೀನ್ ಎಂಬ ಹೊಸ ತಂತ್ರಾಂಶ ಎಂಬುದನ್ನು ನಮ್ಮ ಬದ್ಧ ಪ್ರತಿಸ್ಪರ್ಧಿ ಪತ್ರಿಕೆ ಇಲ್ಲಿ ಪ್ರಕಟಿಸಿದೆ.

ಗಂಡ ಹೆಂಡಿರ ಮಧ್ಯೆ ನಂಬಿಕೆ-ಅಪನಂಬಿಕೆ, ಕಟ್ಟಿಕೊಂಡ ಹೆಂಡತಿಗಿಂತಲೂ ದಾರಿಹೋಕರೇ ಚಂದ ಕಾಣುವುದು ಮತ್ತು ತಾಳಿ ಕಟ್ಟಿದ ಗಂಡನಿಗಿಂತಲೂ ಪಕ್ಕದ ಮನೆಯ ಮಹಿಳೆಯ ಗಂಡನೇ ಗ್ರೇಟ್ ಅನ್ನಿಸಿಕೊಳ್ಳುವುದು, ವಿವಾಹ ಬಂಧನ ಸಂದರ್ಭದಲ್ಲಿ ನೀಡಿದ ಧನ ಕಡಿಮೆಯಾಗಿದೆ ಅಂತ (ವಿಶೇಷವಾಗಿ ವಧುವಿನ ಅತ್ತೆಯಂದಿರಿಗೆ) ಪದೇ ಪದೇ ತೋರುವುದು ಮುಂತಾದ ರೋಗಲಕ್ಷಣಗಳಿಗೆ ಬೊಗಳೂರಿನ ತಂತ್ರಜ್ಞಾನ ಬ್ಯುರೋದಿಂದ ಸಂಶೋಧನೆ ಮಾಡಲ್ಪಟ್ಟ ಡೈವೋರ್ಜೀನ್ ಎಂಬ ವೈರಸ್ ಕಾರಣ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಈ ಡೈವೋರ್ಜೀನ್‌ನ ಪ್ರಭಾವ ಎಷ್ಟರ ಮಟ್ಟಿಗಿದೆಯೆಂದರೆ, ಇತ್ತಿತ್ತಲಾಗಿ, ಮದುವೆಯಾಗುವುದಕ್ಕೆ ಮುನ್ನವೇ ಡೈವೊರ್ಸ್ ನೀಡುವ ಪ್ರಕರಣಗಳೂ ಅಲ್ಲಲ್ಲಿ ಹೆಚ್ಚಾಗತೊಡಗಿವೆ. ಬಹುತೇಕವಾಗಿ ಇದು ಕಾಲೇಜು ಪರಿಸರಗಳಲ್ಲಿ ಹೆಚ್ಚೆಚ್ಚಾಗಿ ಮತ್ತು ಹುಚ್ಚುಚ್ಚಾಗಿ ಕಂಡುಬರುತ್ತಿರುವುದನ್ನು ಬೊಗಳೆ ರಗಳೆಯ ಅಪಾಪೋಲೀ ಬ್ಯುರೋದ ಸದಸ್ಯರು ಸ್ಟಿಂಗ್ ಕಾರ್ಯಾಚರಣೆಯ ಮೂಲಕ ಪತ್ತೆ ಹಚ್ಚಿದ್ದಾರೆ.

ಈ ವೈರಸ್ಸನ್ನು ನಗರಗಳಲ್ಲಾದರೆ ಬಹುತೇಕವಾಗಿ ಪಾರ್ಕು ಪ್ರದೇಶಗಳಲ್ಲಿ, ಗ್ರಾಮೀಣ ಭಾಗದಲ್ಲಾದರೆ ಬಸ್ ನಿಲ್ದಾಣ, ಬಾವಿಕಟ್ಟೆಗಳ ಬಳಿ ಬಿಡಲಾಗುತ್ತಿದೆ. ಹೀಗಾಗಿ ಪ್ರೇಮ ಅರಳುವ ಮುನ್ನವೇ ಬ್ರೇಕಪ್ ಆಗುವ ಸಾಧ್ಯತೆಗಳು ಅಂದರೆ ವಸ್ತುಶಃ ಪ್ರೇಮ ವಿಚ್ಛೇದನೆಗೊಳ್ಳುವ ಪ್ರಕರಣಗಳು ಅತಿಯಾಗುತ್ತಿವೆ.

ಈ ಹಿಂದೆ, ಬೊಗಳೆ ರಗಳೆ ಬ್ಯುರೋ ಸಂಶೋಧಿಸಿದ "Spoon-ಟೇನಿಯಸ್ ಡೈವರ್ಟೀನ್" ಎಂಬ ಡೈವರ್ಸ್ ಔಷಧ ಹಾಗೂ ಅರಿವಿಲ್ಲದೆ ಡೈವೊರ್ಸ್ ನೀಡಬಲ್ಲ ವಿಧಾನವು ಸರಿಯಾಗಿ ಕೆಲಸ ಮಾಡದ ಕಾರಣ ಈ ಹೊಸ ಸಂಶೋಧನೆಗೆ ಕೈಹಚ್ಚಲಾಗಿದೆ ಎಂದು ಏಕಸದಸ್ಯ ಬ್ಯುರೋದ ಸಮಸ್ಯ ಸಿಬ್ಬಂದಿಗಳು ವಿವರಿಸಿದ್ದಾರೆ.

ಆದರೆ, ಈ ಡೈವೊರ್ಜೀನ್‌ನ ಮೂಲ ಅಂಶವಾಗಿರುವ ಜೀನ್ ಅನ್ನೇ ನಾಶಪಡಿಸುವುದು ಮತ್ತು ಆ ಮೂಲಕ ಜನಸಂಖ್ಯಾ ಸ್ಫೋಟ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಡೈವರ್ಸ್ ಆಂದೋಲನಕ್ಕೆ ಕಡಿವಾಣ ಹಾಕುವ ಪ್ರಯತ್ನವೂ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬುದು ಡೈವೊರ್ಜೀನ್ ಸಂಶೋಧಕರಿಗೆ ನುಂಗಲಾರದ ತುತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

 1. ನೀವು ಯಾಕೆ ಒಂದು ೩-in-೧ package deal (ಪ್ರೇಮ-ಮದುವೆ-ಡೈವೋರ್ಸ್)ಕೊಡಬಾರದು?

  ಪ್ರತ್ಯುತ್ತರಅಳಿಸಿ
 2. These things are happening because of the westernisation of the bloody Indians...These buggers will have the sexual experience in the college days itself and after the marriage they will not have any sexual interest, leads to divorce. So this is the main reason for divorce.I will point out some reasons here:
  1. Sexual experience in College days.
  2. Working women
  3. T.V Medias, Films
  4. Fashion shows
  5. Information Technology (Call centre, BPO)
  6. Late night Bars (Dancing).
  7. Christian Schools (Preventing for Hindu dress code).

  So these are the main (so many are there) reasons for the divorce. So Civilisations, Culture of this bloody Indians (Only those who are representing western culture) are changing.

  "Change India...Save India...Kick these bastards Out from our country"

  ಪ್ರತ್ಯುತ್ತರಅಳಿಸಿ
 3. ಸುನಾಥರೆ,

  ನಿಮ್ಮ ತಲೆ ತೆಗೆಯುವ ಐಡಿಯಾ ಅಲ್ಲಲ್ಲ.... ನಮ್ಮ ಇಲ್ಲದ ತಲೆ ತೆಗೆಯುವ ಐಡಿಯಾ ಕೊಟ್ಟಿದ್ದಕ್ಕೆ ನಮೋ ನಮಃ. ಬಹುಶಃ ಇದು ಇಂದಿನ ಕಾಲಕ್ಕೆ ದೊಡ್ಡ ಹಿಟ್ ಆಗಬಹುದು.

  ಪ್ರತ್ಯುತ್ತರಅಳಿಸಿ
 4. ತೇಜಸ್ವಿನಿ ಅವರೆ,
  ನಮ್ಮ ಸಂಶೋಧನೆಯ ಅವಸ್ಥೆ ನೋಡಿ ನಗು ಉದುರಿದೆ. ಇಲಿಗೆ ಆಟ, ಬೆಕ್ಕಿಗೆ ಪ್ರಾಣ ಸಂಕಟ!

  ಪ್ರತ್ಯುತ್ತರಅಳಿಸಿ
 5. ವಿವೇಕಾನಂದ್ ಅವರೆ,

  ನಿಮ್ಮ ವಾದ ಭಾಗಶಃ ಒಪ್ಪುವಂಥದ್ದೇ. ಆದರೆ ಒಂದು ಗಮನಿಸಬೇಕು, ನಾವು ಹೇಗೆ ಪಾಶ್ಚಾತ್ಯ ವಿಕೃತಿಯನ್ನು ಅಪ್ಪಿಕೊಳ್ಳುತ್ತೇವೆಯೋ, ಅದೇ ರೀತಿ ಪಾಶ್ಚಾತ್ಯರು ಭಾರತೀಯ ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ.

  ನಷ್ಟ ನಮಗೇ. ಭಾರತದಲ್ಲಿ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿವೆ.

  ಆದ್ರೆ, ನೀವು ಈ ಬಾಸ್ಟರ್ಡ್‌ಗಳನ್ನು ಕಿಕ್ ಮಾಡಬೇಕೆಂದು ಹೇಳಿರುವುದು ಫುಟ್ಬಾಲ್‌ನಲ್ಲಿ ಚಿನ್ನದ ಪದಕ ತರಿಸುವ ಯೋಜನೆಯೇ? :)

  ಪ್ರತ್ಯುತ್ತರಅಳಿಸಿ
 6. ಲಕ್ಷ್ಮಿ ಅವರೆ,

  ನೀವೇನೋ ನಮ್ಮ ಬ್ಯುರೋದ ಸಂ-ಚೋದನೆಗೆ ಹೊಸ ಹೆಸರಿಟ್ಟಿರಿ. ಆದರೆ ಅದು ದೇಶಾದ್ಯಂತ ಬೊಗಳೆ ಬ್ಯುರೋಗೆ 'ಬಯ್ಯೋ-ಗ್ರಾಫಿ' ಆಗದಿದ್ದರೆ ಸಾಕು.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D