ಬೊಗಳೆ ರಗಳೆ

header ads

ಬೊಗಳೆ ಭಾಷಾಂತರವೂ ಭಾಷಾಅವಾಂತರವೂ...

(ಬೊಗಳೂರು ಸ್ವಂತ ತನಿಖಾ ಬ್ಯುರೋದಿಂದ)
ಬೊಗಳೂರು, ಮಾ.31- ಬೊಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಏಕೈಕ ಸಿಬ್ಬಂದಿಯಲ್ಲಿ ಒಬ್ಬರು, ಸೊಂಪಾದಕರ ಕಾಟ ತಡೆಯಲಾರದೆ ಬೇರೆ ಕೆಲಸಕ್ಕೆ ಟ್ರೈ ಮಾಡಿದ್ದು, ಅವರು ಅಲ್ಲಿ ಇಂಟರ್ವ್ಯೂಗೆ ಹೋದಾಗ ಭಾಷಾಂತರಕ್ಕೆಂದು ಕೊಟ್ಟ ಸುದ್ದಿಯನ್ನು "ಭಾಷಾವಾಂತರ" ಮಾಡಿದ್ದನ್ನು ನಮ್ಮ ಬ್ಯುರೋ ಪತ್ತೆ ಹಚ್ಚಿದೆ.

ಬೊಗಳೂರು ಬ್ಯುರೋಗೆ ಕೈಕೊಡುವ ಪ್ರಯತ್ನವನ್ನು ನಮ್ಮ ಬ್ಯುರೋ ಬಯಲಿಗೆಳೆದು, ಬೀದಿ ರಂಪ ಮಾಡಲು ನಿರ್ಧರಿಸಿರುವ ಪ್ರಯತ್ನವಾಗಿ, ನಮ್ಮ ಪರಾರಿಯಾಗಲು ಸಿದ್ಧವಾದ ಸಿಬ್ಬಂದಿಯ ಭಾಷಾವಾಂತರದ ಪ್ರತಿಯನ್ನು ಇಂಗ್ಲಿಷ್ ಮೂಲಪ್ರತಿಯೊಂದಿಗೆ ಇಲ್ಲಿ ನೀಡಲಾಗಿದೆ:

BJP plans stir against price rise, farmer suicides
ಬೆಲೆ ಅಕ್ಕಿ ವಿರುದ್ಧ ಕದಡಲು ಬಿಜೆಪಿ ಯೋಚನೆ, ರೈತ ಆತ್ಮಹತ್ಯೆ

New Delhi, Mar 27 (PTI) Aiming to exploit price rise and agrarian crisis to the hilt, BJP today announced a countrywide agitation to highlight the "failure" of the UPA Government to check farmer suicides and rising inflation.
ನವದೆಹಲಿ, ಮಾರ್ 27 (ಪಿಟಿ!) ಬೆಲೆಯುಳ್ಳ ಅಕ್ಕಿ ಮತ್ತು ಕೃಷಿಕರ ಕೊರತೆಯನ್ನು ಶೋಷಣೆ ಮಾಡುವ ಗುರಿಯೊಂದಿಗೆ, ರೈತ ಆತ್ಮಹತ್ಯೆಗಳನ್ನು ಮತ್ತು ಅಕ್ಕಿಯಾಗುತ್ತಿರುವ ಹಣದುಬ್ಬರವನ್ನು ಪರೀಕ್ಷೆ ಮಾಡಲು ಉಪ ಸರಕಾರದ ವೈಫಲ್ಯವನ್ನು ಎತ್ತರಲೈಟು ಹಾಕಲು ಗುರಿ ಇರಿಸಿ, ಬಿಜೆಪಿಯು ಇಂದು ಕಂಟ್ರಿ ಅಗಲದಲ್ಲಿ ಚಳವಳಿ ಮಾಡುವುದಾಗಿ ಘೋಷಣೆ ಮಾಡಿತು.

The main Opposition party will on April seven launch a week-long protest against the Congress-led government on the issue of price rise and a two-month long campaign in a bid to pick holes in the loan waiver package.
ಮುಖ್ಯವಾಗಿ ವಿರೋಧಿಸುವ ಪಕ್ಷವು ಏಪ್ರಿಲ್ 7ರಂದು ವಾರದಷ್ಟು ಉದ್ದವಿರುವ ಪ್ರತಿಭಟನೆಯನ್ನು ಕಾಂಗ್ರೆಸ್-ಸೀಸ ಸರಕಾರದ ವಿರುದ್ಧ ಆಕಾಶಕ್ಕೆ ಹಾರಿಬಿಡಲಿದೆ. ಇದು ಬೆಲೆ ಅಕ್ಕಿ ವಿವಾದ ಮತ್ತು ಎರಡು ತಿಂಗಳು ಉದ್ದದ ಚುನಾವಣಾ ಪ್ರಚಾರವನ್ನು ಸಾಲ ನೇಕಾರಿಕೆಯ ಪೊಟ್ಟಣದಲ್ಲಿರುವ ರಂಧ್ರಗಳನ್ನು ಕೈಬೆರಳಲ್ಲೆತ್ತಲು ಬಿಡ್ ಸಲ್ಲಿಸಲು ನಡೆಯಲಿದೆ.

"After the so-called pro-poor budget of the UPA government, prices of essential commodities are skyrocketing. The Government has totally failed to control and check price rise," senior BJP leader Anant Kumar said.
ಆಫ್ಟರ್ ದ ಎಂದು ಕರೆಯಲಾಗುವ ಉಪ ಸರಕಾರದ ಪ್ರಾ-ಪರ್ ಬಡ್‌ಜೆಟ್, ಅವಶ್ಯಕ ಕಮೋಡ್‌ಗಳನ್ನು ಆಕಾಶದಲ್ಲಿರುವ ರಾಕೆಟ್‌ಗೆ ಕಳುಹಿಸಿವೆ. ಸರಕಾರವು ಬೆಲೆ ಅಕ್ಕಿಯನ್ನು ಪರೀಕ್ಷೆ ಮಾಡಲು ಮತ್ತು ಕಂಟ್ರೋಲಿನಲ್ಲಿ ಫೈಲ್ (ನಪಾಸು) ಆಗಿದೆ ಎಂದು ದೊಡ್ಡ ಬಿಜೆಪಿ ಲೋಡರ್ ಅಂತ ಕೋ ಮಾರ್ ಹೇಳಿದರು.

The saffron party is planning to make price rise a major campaign issue alongwith distress in the agrarian sector and internal security situation for coming Assembly elections to corner the Congress.
ಕೇಸರಿ ಪಕ್ಷವು ಅಕ್ಕಿಯ ಬೆಲೆ ಏರಿಸಲು ಯೋಜನೆ ಮಾಡುತ್ತಿದೆ, ಇದನ್ನು ದೊಡ್ಡ ಚುನಾವಣಾ ಪ್ರಚಾರದ ವಿವಾದವನ್ನಾಗಿ ಅಗ್ರಗಣ್ಯ ಸೆಕ್ಟರಿನಲ್ಲಿ ಖಿನ್ನತೆಯೊಂದಿಗೆ ಮಾಡಲಾಗುತ್ತದೆ ಮತ್ತು ದೇಹದೊಳಗಿನ ಭದ್ರತಾ ಜವಾನರ ಪರಿಸ್ಥಿತಿಯನ್ನು ಅಸೆಂಬ್ಲಿಯಲ್ಲಿ ಮುಂದೆ ನಡೆಯುವ ಚುನಾವಣೆಗಳಲ್ಲಿ ಕಾಂಗ್ರೆಸನ್ನು ಮೂಲೆಯಲ್ಲಿ ಕೂರಿಸಲು ಬಳಸುತ್ತದೆ.

It is also firming up a strategy to counter the populist loan waiver package announced by the Government by spreading the message that the scheme does not include majority of the fೇarmers facing distress.
ಇದಲ್ಲದೆ, ಅದು ಯುದ್ಧತಂತ್ರದ ಕೌಂಟರೊಂದನ್ನು ಜನಮರುಳು ಸಾಲವನ್ನು ನೇಕಾರರ ಪೊಟ್ಟಣಕ್ಕೆ ಘೋಷಿಸಿರುವ ಸರಕಾರದ ಘೋಷಣೆಯನ್ನು ಸಾಂಕ್ರಾಮಿಕವಾಗಿ ಮಸಾಜು ಹರಡುವ ನಿಧಿಯೊಂದನ್ನು ತೆರೆಯಲಾಗುತ್ತದೆ ಮತ್ತು ಅದರಲ್ಲಿ ಖಿನ್ನತೆಯತ್ತ ತಮ್ಮ ಮುಖವನ್ನು ತಿರುಗಿಸಿರುವ ಬಹುಮತದ ಮಾಜಿಗಳು ಒಳಗೊಂಡಿರುವುದಿಲ್ಲ.

The party said it will organise kisan adalats (farmer courts) across the country for two months from April seven during which party leaders and workers will interact with the farming community.
ಪಾರ್ಟಿ ಹೇಳಿತು ಅದು ಸಂಘಟನೆ ಕಿಸ್ ಅದಾಲತುಗಳನ್ನು (ಹಿಂದಿನವರ ಗದ್ದೆಗಳು) ದೇಶದ ಅಡ್ಡಾದಿಡ್ಡಿ ಎರಡು ತಿಂಗಳುಗಳು ಏಪ್ರಿಲ್ ಏಳರಿಂದ ಯಾವ ಪಕ್ಷದ ನಾಯಕರು ಮತ್ತು ನೌಕರರು ಗದ್ದೆ ಕೆಲಸದ ಕೋಮುವಾದದೊಂದಿಗೆ ಇಂಟರ್ನೆಟ್‌ನಲ್ಲಿ ತೊಡಗಿರುವರು ಎಂದು.

"We will try to get their feedback on the loan waiver scheme, irrigation facilities, power problem, availability of fertiliser and pesticides," Kumar said. The agitation plan was finalised by a meeting of BJP General Secretaries here.
ಅವರ ಬೆನ್ನಿನಿಂದ ಪಶು ಆಹಾರಗಳನ್ನು ತೆಗೆದು ಸಾಲ ನೇಕಾರರ ನಿಧಿಗೆ ಹಾಕಿ, ನೀರಾವರಿ ಸನ್ಮಾನಗಳು, ಅಧಿಕಾರದ ಸಮಸ್ಯೆ, ಗೊಬ್ಬರ ಮತ್ತು ಕೀಟನಾಶಕದ ಲಭ್ಯತೆಯನ್ನು ಕುಮಾರ್ ಸೆಡ್ ಎಂಬವರಿಗೆ ನೀಡಲು ನಿರ್ಧರಿಸಲಾಗಿದೆ. ಅಜ್ಜಿಸ್ಟೇಶನ್ ಯೋಜನೆಯ ಫೈನಲನ್ನು ಬಿಜೆಪಿಯ ಸಾಮಾನ್ಯವಾಗಿ ಸ್ರವಿಸುವವರನ್ನು ಜೋಡಿಸಿ ಏರ್ಪಡಿಸಲಾಗುತ್ತದೆ.

Besides, the party will organise functions to commemorate the death anniversary of Mangal Pandey and to mark the 150th anniversary of the 1857 uprising. PTI
ಅಕ್ಕಪಕ್ಕದಲ್ಲಿ, ಪಾರ್ಟಿಯು ಮಂಗಲ ಪಾಂಡೆಯ ಡೆತ್‌ಗೆ ಕಾರಣರಾದವರ ವಾರ್ಷಿಕ ತಿಥಿಯನ್ನು ಕಾಮನ್ ಸೆನ್ಸ್‌ನಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಮತ್ತು 1857ರ ಮೇಲೇರುವ ಅಕ್ಕಿಯ 150ನೇ ವರ್ಷಾವಧಿ ಉತ್ಸವವನ್ನು ಗುರುತು ಮಾಡಲಾಗುತ್ತದೆ.

ಕೊನೆಗೆ ವಿಚಾರಿಸಿದಾಗ, ನಮಗೆ ಡಿಕ್-ಶ-ನರಿಯನ್ನು ಕೊಡಲೇ ಇಲ್ಲ ಎಂಬುದು ಈ ಭಾಷಾ-ಅವಾಂತರ ಅಭ್ಯರ್ಥಿ ಸ್ಪಷ್ಟನೆ ನೀಡಿರುವುದನ್ನೂ ಪತ್ತೆ ಹಚ್ಚಲಾಗಿದೆ.

ನಾಳೆ ಏಪ್ರಿಲ್ 1. ಸೊಂಪಾದಕರ ಜನ್ಮದಿನ ಅಂತ ಶುಭ ಹಾರೈಸಲು ಸಿದ್ಧವಾಗಿರುವವರನ್ನೆಲ್ಲಾ ಫೂಲ್‌ಗಳಾಗಿಸಲು ವಿಶೇಷ ವರದ್ದಿಯೊಂದನ್ನು ನೀಡಲಾಗುತ್ತದೆ/ನೀಡಲಾಗುವುದಿಲ್ಲ. ನಿಮ್ಮ ಪ್ರತಿಗಳನ್ನು ಕಾದಿರಿಸಿ, ಫೂಲ್‌ಗಳಾಗುವ ಅಮೂಲ್ಯ ಅವಕಾಶ ತಪ್ಪಿಸಿಕೊಳ್ಳಬೇಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

 1. ಇಷ್ಟು ಸೊಗಸಾಗಿ " ಭಾಷಾವಾಂತರ" ಮಾಡಿದ ಅಭ್ಯರ್ಥಿಗೆ ಕೆಲಸ ಕೊಟ್ರಾ??

  ಪ್ರತ್ಯುತ್ತರಅಳಿಸಿ
 2. ರೀ ಸಂತಾಪಕರೇ,
  ನಿಮ್ಮ ಬ್ಯೂರೋ ಎಂದಿನಂತೆ ತಪ್ಪು ತನಿಖೆ ಮಾಡಿದೆ. ಅಷ್ಟು ಸುಂದರವಾದ ಭಾಷಾಂತರ ಅದು ನಾವು ಸಂ- ದರ್ಶನಕ್ಕೆ ಹೋಗಿದ್ದಾಗ ಮಾಡಿದ್ದು. ಅದನ್ನು ನಿಮ್ಮ ಸೀ ಬಂಧಿಯ ಭಾಷಾಂತರ ಅಂತಿದ್ದೀರಿ... ಜೋಕೆ, ಇದು ಶುದ್ಧ ಕೃತಿ ಚೌರ್ಯ!

  ಪ್ರತ್ಯುತ್ತರಅಳಿಸಿ
 3. ಹಿಂದೊಮ್ಮೆ VIP frenchieಯ ಜಾಹೀರಾತು ನೋಡಿದ ನೆನಪಿರಬಹುದು. ಅದರಲ್ಲಿ ಒಂದು ಕಾರಿನ ಪಕ್ಕದಲ್ಲಿ ನಿಂತುಕೊಂಡ ಕೇವಲ ವಿಐಪಿ ಫ್ರೆಂಚೀ ಧರಿಸಿದ ಗಂಡು, ತನ್ನ ಪಕ್ಕ ನಿಂತಿರುವ ಸುಂದರಿಯನ್ನು ರಕ್ಷಿಸಲು, ಒಬ್ಬ (ಗೂಂಡಾ) ನಿಗೆ ಹೊಡೆಯುವ ಚಿತ್ರವಿರುತ್ತದೆ. ಆ ಚಿತ್ರದ ಶೀರ್ಷಿಕೆ ಇಂಗ್ಲೀಷಿನಲ್ಲಿ ಹೀಗಿದೆ "If you think this is stretching things too far, you should see the product". ಇದೇ ಜಾಹೀರಾತು ಕನ್ನಡದಲ್ಲಿ ಮೊದಲ ಬಾರಿಗೆ ಪ್ರಕಟವಾದಾಗ ಅದರ ಶೀರ್ಷಿಕೆ ಹೀಗಿತ್ತು -"ವಸ್ತುಗಳನ್ನು ಇಷ್ಟು ಮುಂದಕ್ಕೆ ಚಾಚಿದರೆ ಹೇಗೆ ಎಂದು ನೀವು ಯೋಚಿಸುತ್ತೀರಾದರೆ ನೀವು ಉತ್ಪನ್ನವನ್ನು ನೋಡಬೇಕು"

  -ಪಬ್.

  ಪ್ರತ್ಯುತ್ತರಅಳಿಸಿ
 4. ಶ್ರೀನಿಧಿಯವರೆ,
  ನಮ್ಮ ಬ್ಯುರೋದವರಿಗೊಂದು ಕೆಲಸ ಗ್ಯಾರಂಟಿ ತಾನೇ???

  ಪ್ರತ್ಯುತ್ತರಅಳಿಸಿ
 5. ಗಿರೀಶ್ ಭಟ್ರೇ,

  ಬನ್ನಿ ಸ್ವಾಗತ... ನೀವೂ ಚೆನ್ನಾಗಿದೆ ಅಂದಿರೋದ್ರಿಂದ, ನಿಮ್ಮಲ್ಲಿಗೂ ಕೆಲಸಕ್ಕೆ ಅಪ್ಲೈ ಮಾಡುತ್ತೇವೆ..

  ಪ್ರತ್ಯುತ್ತರಅಳಿಸಿ
 6. ನೀಲಗಿರಿಯವರೆ,
  ಭಾಷಾವಾಂತರ ಮಾಡಿದೋರು, ಇನ್ನೆಂದೂ ನಮ್ಮ ಬ್ಯುರೋ ಬಿಟ್ಟು ಬೇರೆ ಕಡೆ ಹೋಗೋದಿಲ್ಲ ಅಂತ ಶಪಥ ಮಾಡಿ ಕೂತಿದ್ದಾರೆ...!!!

  ಪ್ರತ್ಯುತ್ತರಅಳಿಸಿ
 7. ಶಾನಿ....

  ಇಂಥ ವಿಕೃತಿ ಚೌರ್ಯವನ್ನು ನೀವು ಏನೇನೋ ದರ್ಶನಕ್ಕೆ ಹೋದಾಗ ಮಾಡಿದ್ದು ಅಂತಹೇಳಿ ನಮ್ಮ ಬ್ಯುರೋದವರ ಇಲ್ಲದ ಮರ್ಯಾದೆ ತೆಗೆದುಹಾಕಲು ಪ್ರಯತ್ನಿಸ್ತಿದ್ದೀರಿ... ನಿಮಗೆ ಜೈಲಾಗಲಿ...

  ಪ್ರತ್ಯುತ್ತರಅಳಿಸಿ
 8. ಪಬ್ಬಿಗರೇ,
  ಈ ಕನ್ನಡದ 'ಹಿತನುಡಿ' ಕೇಳಿದ ಬಳಿಕ ಬಹುಶಃ ವಿಐಪಿ ಫ್ರೆಂಚೀಯ ಮಾರಾಟವಂತೂ ಯದ್ವಾ ತದ್ವಾ ನಡೆದಿರಬೇಕಲ್ಲಾ... ಸ್ಟಾಕ್ ಕ್ಲಿಯರೆನ್ಸ್ ಆಗಿ, ಸಾಕಷ್ಟು ಪ್ರಮಾಣದಲ್ಲಿ ಫ್ರೆಂಚೀಯನ್ನು ಉತ್ಪಾದಿಸಬೇಕಾಗಿತ್ತು ಅಂತ ನಮ್ಮ ಬ್ಯುರೋ ಊಹೆ ಮಾಡಿದೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D