ಬೊಗಳೆ ರಗಳೆ

header ads

ಅಲ್ಲಲ್ಲಿ ಡೆಲಿವರಿ ಕೇಂದ್ರಗಳ ಸ್ಥಾಪನೆಗೆ ಸಿದ್ಧತೆ

(ಬೊಗಳೂರು ಸಂಶಯ-ಶೋಧನೆ ಬ್ಯುರೋದಿಂದ)
ಬೊಗಳೂರು, ಮಾ.14- ಉತ್ತರ ಅಮೆರಿಕದಲ್ಲಿ ತತ್ತರಿಸುತ್ತಿರುವವರಿಗೊಂದು ಬೆಚ್ಚಿ ಬೀಳಿಸುವ ಸುದ್ದಿ ಇಲ್ಲಿ ಬಿತ್ತರವಾಗಿದೆ. ಪ್ರಖ್ಯಾತ ತಂತ್ರಜ್ಞಾನ ಸಂಸ್ಥೆ ಕಾಗ್ನಿಜೆಂಟ್, ಜಾಗತಿಕವಾಗಿ ಡೆಲಿವರಿ ಮಾಡುವ ಕೇಂದ್ರವೊಂದನ್ನು ಉದ್ಘಾಟಿಸಿದೆ ಎಂದು ನಮ್ಮ ರದ್ದಿಗಾರರು ತಪ್ಪಿಲ್ಲದೆ ವರದಿ ಮಾಡಿದ್ದಾರೆ.

ದೇಶ ವಿದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ.ತಂತ್ರಜ್ಞಾನದ ಫಲವಾಗಿ ಐಟಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳೂ ಹೆಚ್ಚುತ್ತಿವೆ. ಹೀಗಾಗಿ ಪ್ರತಿಭಾನ್ವಿತ ಸಾಫ್ಟ್ ಆಗಿರುವ ಮಕ್ಕಳ ಬೇಡಿಕೆಯೂ ಹೆಚ್ಚುತ್ತಿದೆ. ಅವುಗಳಿಗೆ ಸೂಟ್ ಆಗಬಲ್ಲ ಅಗತ್ಯಗಳನ್ನೆಲ್ಲಾ ಪೂರೈಸಲೆಂದೇ ಈ ಡೆಲಿವರಿ ಮಾಡಿಸುವ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ನಮ್ಮ ರದ್ದಿ ಮೂಲಗಳಿಗೆ ಬೇರೆ ಸುದ್ದಿ ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ಇದೇ ಸಂಸ್ಥೆಯು ಎರಡನೇ (Platform 2.0) ಪ್ಲಾಟ್‌ಫಾರ್ಮ್‌ನಲ್ಲಿ ಪ್ರಾದೇಶಿಕ ಡೆಲಿವರಿಗಾಗಿ ವ್ಯವಸ್ಥೆ ಮಾಡಿರುವುದು ಇಲ್ಲಿ ಉಲ್ಲೇಖಾರ್ಹ. ಇನ್ನೂ ಕೆಲವೆಡೆ ಹಲವು ಡೆಲಿವರಿ ಕೇಂದ್ರಗಳನ್ನು ನಡೆಸುವ ಯೋಜನೆ ಇದೆ ಎಂದು ಕಾಗ್ನಿಜೆಂಟ್ ಮುಖ್ಯಸ್ಥರು ಬೊಗಳೆ ರಗಳೆಗೆ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಗರ್ಭಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ

    -ಪಬ್

    ಪ್ರತ್ಯುತ್ತರಅಳಿಸಿ
  2. ಅದರಲ್ಲೂ ಸ್ಥಳೀಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಆಗ್ರಹಿಸಿ ‘ಹುಗ್ರ’ವಾದ ಓರಾಟವನ್ನು ‘ಕನ್ನಡ ರಕ್ಷಿಸಿ’ ವೇದಿಕೆ ಹಮ್ಮಿಕೊಳ್ಳುತ್ತಿದೆ ಎಂದು ನಮಗೆ ತಿಳಿದು ಬಂದಿದೆ.
    ಈ ಮಧ್ಯೆ ಎಲ್ಲಾ ದಾನಗಳಿಗಿಂತಲೂ ಶ್ರೇಷ್ಟದಾನ ಗರ್ಭದಾನ ಎಂಬ ಮೊಟ್ಟೊ ಇಟ್ಟುಕೊಂಡ ಎನ್.ಜಿ.ಒ ಒಂದು ಬಾಯ್ತೆರೆಯಲು ಸಿದ್ಧವಾಗಿರುವುದು ನಮಗಷ್ಟೇ ತಿಳಿದುಬಂದಿದೆ.

    ಪ್ರತ್ಯುತ್ತರಅಳಿಸಿ
  3. ಇಲ್ಲಿಯವರೆಗೆ ಗರ್ಭಾದಾನವಷ್ಟೆ outsource ಆಗುತ್ತಿತ್ತು.
    ಈಗ delivery ಸಹ outsourcing ಆಗಲಿದೆಯಾ?

    ಪ್ರತ್ಯುತ್ತರಅಳಿಸಿ
  4. ಪಬ್ಬಿಗರೇ,

    ತುಂಬಾ ದಿನದ ಬಳಿಕ ಬಂದು ಪಬ್ಬದ್ಗೀತೆಯ ಮುತ್ತು ಉದುರಿಸಿದ್ದೀರಿ.

    ಜನಸಂಖ್ಯೆ ಹೆಚ್ಚಳಕ್ಕೆ ಇದೇ ಕಾರಣ...

    ಪ್ರತ್ಯುತ್ತರಅಳಿಸಿ
  5. ಸುಪ್ರೀತರೆ,
    ಸ್ಥಳೀಯರಿಗೇ ಆದ್ಯತೆ ನೀಡಿದರೆ, ಔಟ್ ಸೋರ್ಸಿಂಗ್ ಮಾಡುವ ಕಂಪನಿಗಳ ಗತಿ? ಅವುಗಳಿಗೆಲ್ಲಾ ಜಾಗತಿಕ ಗುಣಮಟ್ಟದ 'ಉತ್ಪನ್ನ'ಗಳು ಬೇಕಲ್ಲವೇ?

    ಪ್ರತ್ಯುತ್ತರಅಳಿಸಿ
  6. ಸುನಾಥರೆ,
    ಕೆಲವೊಮ್ಮೆ Network not reachabe, Not delivered ಎಂಬ ಸಂದೇಶವೂ ಬರಬಹುದು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D