(ಬೊಗಳೆ ಜಾಹೀರಾತು ಬ್ಯುರೋದಿಂದ)
ಮೂಡುಬಿದಿರೆಯಲ್ಲಿ ನಡೆದ ಆಳ್ವಾಸ್ ನುಡಿಸಿರಿಯಲ್ಲಿ ಬೊಗಳೆ ಧುತ್ತನೆ ಕಾಣಿಸಿಕೊಂಡು ಬಡಿಸಿರಿ, ಗುಡಿಸಿರಿ ಅಂತೆಲ್ಲಾ ತಿಳಿದುಕೊಂಡು, ದಡಬಡಾಯಿಸಿ, ವರದಿಗಾಗಿ ಪರದಾಡಿದ ಕಥೆ. ಬೊಗಳೆಯಲ್ಲಿ ಮೂಡಿಬರಲಿದೆ.
ನುಡಿಸಿರಿಯನ್ನೇ ಕುಡಿಯಿರಿ ಮತ್ತು ಕುಡಿಸಿರಿ ಅಂತ ತಿಳಿದುಕೊಂಡು ನಮ್ಮ ಬ್ಯುರೋ ಒದ್ದಾಡಿ, ಯಾರು ಯಾರೋ ನುಡಿದದ್ದನ್ನೆಲ್ಲಾ ಹೆಕ್ಕಿಕೊಂಡು ಗುಡಿಸಿ ಒಟ್ಟು ಸೇರಿಸಿ ಹೇಗಾದರೂ ವರದಿ ಒಪ್ಪಿಸಿದ ಘಟನೆಯು ನಾಳಿನ ಸಂಚಿಕೆಯಲ್ಲಿ.
ಯಾರೂ ನೀಡದ ವರದಿಯೊಂದನ್ನು ಬಿಟ್ಟು, ಮಿಕ್ಕಿದ್ದೆಲ್ಲವನ್ನೂ ಪ್ರಕಟಿಸುವ ಸಾಧ್ಯತೆಗಳು ದಟ್ಟವಾಗಿವೆ. ನಿಮ್ಮ ಪ್ರತಿಗಳನ್ನು ಕಾದಿರಿಸಿಕೊಳ್ಳಬೇಡಿ, ಆದರೆ ನಮ್ಮ ಪ್ರತಿಗಳನ್ನ ಮಾತ್ರವೇ ಕಾದಿರಿಸಿ. ಕಾದು ನಿಂತು ನಿರಾಶರಾಗಿ.
ನಡೆಯದೆ ಇರುವ ಘಟನೆಗಳನ್ನು, ನುಡಿಯದೆ ಇದ್ದ ಭಾಷಣಗಳನ್ನು ಬರೆಯದೆ ಬಿಡದ ನಿಮ್ಮ ಪತ್ರಿಕೆಗಾಗಿ ಕಾತರಿಸಿ,
ReplyDeleteಕಾಲ ತುದಿಯ ಮೇಲೆ ತೂಗಾಡುತ್ತಿದ್ದೇನೆ.
"ನುಡಿಸಿರಿಯನ್ನೇ ಕುಡಿಯಿರಿ ಮತ್ತು ಕುಡಿಸಿರಿ..."?
ReplyDeleteಅದನ್ನು
"ಪೀಪಿಯನ್ನೇ ನುಡಿಸಿರಿ;
pee pee ಯನ್ನೇ ಕುಡಿಯಿರಿ" ಎಂದು ಅರ್ಥಮಾಡ್ಕೊಂಡ್ರಾ?
6 6!! (ಛೇ ಛೇ!)
ಸುಧೀಂದ್ರರೆ,
ReplyDeleteಕೆಳಗೆ ಇಳಿದ್ರಲ್ಲಾ... ಬನ್ನಿ ಬನ್ನಿ...
ಮೊರಾರ್ಜಿ ದೇಸಾಯಿ ಅವರ ಅಪರಾವತಾರದವರೆ,
ಏನು ಕುಡಿದಿರಿ ಅಂದ್ರಿ? ಕೇಳಿಸ್ತಾ ಇಲ್ಲ... ನೆಟ್ವರ್ಕ್ ಪ್ರಾಬ್ಲೆಂ ಇದೇಂತ ಕಾಣ್ಸುತ್ತೆ... :)
Post a Comment
ಏನಾದ್ರೂ ಹೇಳ್ರಪಾ :-D