(ಬೊಗಳೂರು ಮಾನ ಹರಾಜು ಬ್ಯುರೋದಿಂದ)
ಬೊಗಳೂರು, ಜು.16- ತನ್ನದೇ ತಾಯಿಯನ್ನು ಅಶ್ಲೀಲವಾಗಿ ಬಿಂಬಿಸಿ ಚಿತ್ರ ರಚಿಸಿದ ತನ್ನ ದೇಶಪ್ರೇಮಕ್ಕಾಗಿಯೇ "ಖ್ಯಾತಿ" ಗಳಿಸಿರುವ ಚಿತ್ರ ಕಲಾವಿದ ಎಮ್ಮೆಚ್ ಫುಸೇನ್‌ನ ಮಾನವನ್ನು ಹರಾಜು ಹಾಕಲು ಸಕಲ ಸಿದ್ಧತೆಗಳು ನಡೆಯುತ್ತಿರುವುದಾಗಿ ಬೊಗಳೆ ರಗಳೆ ಬ್ಯುರೋಗೆ ಮಾಹಿತಿ ದೊರಕಿದೆ.

ಚೆನ್ನೈನ ಹರಾಜು ಸಂಸ್ಥೆಯೊಂದು ಮಾತೆಯ ಚಿತ್ರವನ್ನು "ಆರ್ಟ್ ಫಾರ್ ಮಿಶನ್ ಕಾಶ್ಮೀರ್" ಎಂಬ ಹೆಸರಿನಲ್ಲಿ ಹರಾಜು ಹಾಕಲು ನಿರ್ಧರಿಸಿದೆ ಎಂದು ಇಲ್ಲಿ ವರದಿಯಾಗಿದ್ದು, ಹರಾಜಿನಿಂದ ಬಂದ ಹಣವನ್ನು ಕಾಶ್ಮೀರದಲ್ಲಿ ಇತ್ತೀಚೆಗೆ ಭರ್ಜರಿ ಉತ್ಪಾದನೆಯಲ್ಲಿ ತೊಡಗಿರುವ ಕಂಪನಿಯೊಂದಕ್ಕೆ ನೀಡಲು ನಿರ್ಧರಿಸಿದೆ ಎಂದು ಪತ್ತೆ ಹಚ್ಚಲಾಗಿದೆ.

ಆದರೆ ನೈಜ ಭಾರತೀಯರ ಪ್ರತಿರೋಧ ತೀವ್ರವಾಗತೊಡಗಿದೆ ಎಂಬುದು ತಿಳಿದ ತಕ್ಷಣವೇ ಈ ಸಂಸ್ಥೆಯು ಈ ಚಿತ್ರ ರಚಿಸಿದ ಕಲಾವಿದನ ಮಾನವನ್ನು ಹರಾಜು ಹಾಕಿ ದುಡ್ಡು ಮಾಡಲು ನಿರ್ಧರಿಸಿತು ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ತಮ್ಮ ತಾಯಿಯ ಮಾನ ಹರಾಜಿಗೆ ಹೊರಟವರ ಮಾನ ಹರಾಜು ಹಾಕಿ ಬಂದ ಹಣವನ್ನು ಕಾಶ್ಮೀರದಲ್ಲಿ ಭರ್ಜರಿ ಭಯದ ಉತ್ಪಾದನೆಯಲ್ಲಿ ತೊಡಗಿರುವ ಸಂಘಟನೆಗಳಿಗೆ ನೀಡಲು ಯೋಚಿಸಲಾಗಿತ್ತು. ಆದರೆ ಇಂತಹ ಚಿತ್ರ ರಚಿಸಿದ ಕಲಾವಿದನ ಮಾನಕ್ಕೆ ಮೂರು ಕಾಸು ಕೂಡ ಸಿಗದ ಕಾರಣದಿಂದಾದಿ ಅವರ ಭಯದ ಉತ್ಪಾದನಾ ಕಾರ್ಯವೇ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ ಎಂದು ಕಾಶ್ಮೀರ ಕೊಳ್ಳದಿಂದ ನಮ್ಮ ಬಾತ್ಮೀದಾರರು ಒದರಿ ಮಾಡಿದ್ದಾರೆ.

ಇದರಿಂದ ತೀವ್ರವಾಗಿ ರೋಸಿ ಹೋದ ಎಮ್ಮೆಚ್ ಫುಸೇನ್, ತನ್ನ ಹೆತ್ತ ತಾಯಿ, ಪತ್ನಿ, ಮಕ್ಕಳ ಚಿತ್ರ ರಚಿಸಲು ಸಿದ್ಧತೆ ನಡೆಸುತ್ತಿದ್ದಾರೆ ಮತ್ತು ಅದನ್ನು ಹರಾಜು ಹಾಕಿ ಹಣ ಮಾಡಲು ಯೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದೀಗ ತಮ್ಮ ಚಿತ್ರವನ್ನೂ ಚಿತ್ರಿಸಿ ಹರಾಜು ಹಾಕುವ ಭೀತಿಯಿಂದಾಗಿ ಬೊಗಳೆ ರಗಳೆ ಬ್ಯುರೋದ ಸಿಬ್ಬಂದಿ ಕೂಡ ಎಮ್ಮೆಚ್ ಫುಸೇನ್‌ರ ಕಣ್ಣಿಗೆ ಬೀಳದಂತಿರಲು ಇಲ್ಲದ ತಲೆಯೊಂದನ್ನು ಹೊರತು ಪಡಿಸಿ ದೇಹದ ಇತರೆಲ್ಲಾ ಭಾಗಗಳನ್ನು ಮರೆಸಿಕೊಳ್ಳಲು ಸಿದ್ಧತೆ ನಡೆಸಿದೆ.

6 Comments

ಏನಾದ್ರೂ ಹೇಳ್ರಪಾ :-D

 1. ’ಓದುಗರ ಬೊಗಳೆ’ ಅಂಕಣಕ್ಕೆ ಓದುಗನ ಲೇಖನ -

  ಫುಸೇನರು ಬಿಡಿಸುವ ಅವರ ಅಮ್ಮ, ಪತ್ನಿ, ಮಕ್ಕಳ ಚಿತ್ರ ಇಟ್ಟುಕೊಂಡು ನಾವೇನು ಕುಂಕುಮಾರ್ಚನೆ ಮಾಡಬೇಕಾ? ಅದರ ಬದಲು ಅವರ ಮಾಜಿ ಪ್ರೇಯಸಿ ದಾಧುರಿ ಮೀಕ್ಷಿತ್‌ರ ಚಂದದ ಚಿತ್ರ ಬಿಡಿಸಿದರೆ General Publicಗೆ ತುಂಬಾ ಉಪಕಾರವಾಗುವುದು ಎಂದು ನನ್ನ ಪ್ರಾಮಾಣಿಕ ಬೊಗಳಿಕೆ..err..ಅನಿಸಿಕೆ. ಮತ್ತು ಬೊಗಳೆರಗಳೆಯ ಪ್ರಜ್ಞಾವಂತ ಓದುಗನಾಗಿ ನಾನು ಈ ಮೂಲಕ ಅವರನ್ನು ಒತ್ತಾಯಿಸುತ್ತಿದ್ದೇನೆ (..ಚಿತ್ರ ಬಿಡಿಸಲಿಕ್ಕೆ).

  ReplyDelete
 2. "ಇಲ್ಲಿ ಸಲ್ಲದವರು ಅಲ್ಲಿ ಸಲ್ಲುವರಯ್ಯಾ! ಇಲ್ಲಿಯ ಮಾನಗೇಡಿಗಳು ಅಲ್ಲಿ ಸಮ್ಮಾನಿತರಯ್ಯಾ!" ಎನ್ನುವ ವಚನದಂತೆ, ದಾವೂ ಬ್ರಾಹಂ ಓಡಿದ ಕೊಳ್ಳಿಗೇ ಎಮ್ಮೆಚ್ ಫುಸೇನ್ ಸಹ ಓಡಿ ಹೋಗಿದ್ದಾನೆ. ಈತನ ಆತ್ಮಚರಿತ್ರೆಗೆ "ಕೊಳಕು ಮನಸ್ಸಿನ ಕೊಳಕು ಚಿತ್ರಗಳು" ಎನ್ನುವ ಹೆಸರು ಕೊಡಬಹುದೇ?

  ReplyDelete
 3. ಈ ಹುಚ್ಚ ಪುಸೇನಿಗೆ ಮಾನ ಇದ್ದರೆ ತಾನೇ ಹರಾಜು ಹಾಕಕ್ಕೆ? ಕೆಟ್ಟ ಹುಳು ಇವನು ಥೂ! ಇವನ ಬಾಯಿಗೆ ಮಣ್ಣಾಕ!

  ReplyDelete
 4. ಯಾತ್ರಿಕರೆ,
  ನಿಮ್ಮ ಯಾತ್ರೆಯ ಮಧ್ಯೆ "ಓದುಗರ ಬೊಗಳೆ" ಅಂಕಣ ಆರಂಭಿಸಿ ಅಣಿಮುತ್ತು ಉದುರಿಸಿದ್ದಕ್ಕೆ ನಾವು ಕೇವಲ ಧನ್ಯವಾದವನ್ನು ಮಾತ್ರವೇ ನೀಡುತ್ತೇವೆ. ಉಳಿದದ್ದೆಲ್ಲಾ ನಮ್ಮ ಜೇಬಿನೊಳಗೆ ಬೆಚ್ಚಗೆ ಕುಳಿತಿರುತ್ತದೆ...

  ದಾಧುರಿ ಮೀಕ್ಷಿತ್ ಬಗೆಗಿನ ನಿಮ್ಮ ಕಾಳಜಿ ನಮಗೆ ಅರ್ಥವಾಗುತ್ತದೆ. ಪ್ರಜ್ಞಾವಂತ ಓದುಗರ ಪ್ರಜ್ಞೆ ತಪ್ಪಿಸಬಾರದೆಂಬ ಕಾರಣಕ್ಕಾಗಿ ನಿಮ್ಮ ಒತ್ತಾಯವನ್ನು ಹಿಂತೆಗೆದುಕೊಳ್ಳಬೇಕೆಂದು ಈ ಮೂಲಕ ಕೋರುತ್ತೇವೆ...

  ReplyDelete
 5. ಸುಧೀಂದ್ರರೆ,
  ನೀವೀಗಾಗಲೇ ಕೊಳಕು ಮನಸ್ಸಿನವರಿಗೆ ಆತ್ಮಚರಿತ್ರೆ ಬರೆಯುವಂತೆ ಪ್ರೇರೇಪಣೆ ನೀಡಿದ್ದು ಒಳ್ಳೆಯದೇ. ಆದರೆ ಇಷ್ಟು ಒಳ್ಳೆಯ ಹೆಸರನ್ನು ಸೂಚಿಸುವುದು ಮಾತ್ರ ಸ್ವಲ್ಪ ಯೋಚಿಸಬೇಕಾದ ವಿಷ್ಯ. ಯಾಕೆಂದರೆ ಇಷ್ಟೊಳ್ಳೆಯ ಹೆಸರು ಎಮ್ಮೆಚ್ ಫುಸೇನಿಗೇ ಕೊಟ್ಟರೆ, ಆತನಿಗಿಂತಲೂ "ಉತ್ತಮ" ಕಲೆಯನ್ನು ಚಿತ್ರಿಸಬಲ್ಲವರಿಗೆ ಯಾವ ಹೆಸರು ಕೊಡುವುದು ಎಂಬ ಆಲೋಚನೆ ನಮ್ಮದು...

  ReplyDelete
 6. ಜಗ್ಗೇಶರೆ,
  ಹರಾಜು ಹಾಕುವುದಕ್ಕಾಗಿ ಮಾನ ಎಲ್ಲಾದರೂ ದೊರೆಯುತ್ತದೆಯೇ ಎಂಬುದರ ಬಗ್ಗೆ ತೀವ್ರ ಸಂಶೋಧನೆಗಳು ನಡೆಯುತ್ತಿವೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post