ಕ..ಕ..ಕ..ಕ...ಕೌನ್ ಬನೇಗಾ ಕ...ಕ...ಕ...ಕ...ಕಾಮಿಡಿಪತಿ ಪ್ರಶ್ನೆ ಪತ್ರಿಕೆಯ ಪ್ರಮುಖ ಪ್ರಶ್ನೆಗಳು ಈ ರೀತಿಯಾಗಿರುತ್ತವೆ.
ಮುಷ್ಕರ ಅಂದರೇನು?
ಎ) ವೇತನಸಹಿತ ರಜಾದಿನ
ಬಿ) ಉಸಿರಿನಷ್ಟೇ ನೈಸರ್ಗಿಕವಾದ ಒಂದು ಕ್ರಿಯೆ
ಸಿ) ಇದನ್ನು ಮಮತಾ ಬ್ಯಾನರ್ಜಿಯಂಥವರು ನಕಲಿ ಹೊಡೆದರೆ ಅದನ್ನೇ ನಾಚಿಕೆಗೇಡಿನ ಸಂಗತಿ ಎಂದು ಹೇಳಲಾಗುತ್ತದೆ.
ಡಿ) ನೀವು ಯಾವತ್ತೂ ಮಾಡುತ್ತಿರುವುದನ್ನು ಜನತೆ ಮಾಡುವಂತೆ ಪ್ರೇರೇಪಿಸುವುದು. (ಅಂದರೆ ಏನೂ ಇಲ್ಲ!)
ಯಾವ ಮಿತ್ರನಿಗೆ ಫೋನ್ ಕರೆ ಮಾಡಲು ಬಯಸುತ್ತೀರಿ?
ಮನಮೋಹನ್ ಸಿಂಗ್‌ಗೆ ಖಂಡಿತಾ ಬೇಡ ಎಂಬ ಉತ್ತರ.
2. ಜನತಾ ದಳ ಎಂಬ ವಿದಳನಾ ಪಕ್ಷಕ್ಕೆ ಕೇಳುವ ಪ್ರಶ್ನೆ.
ಪಕ್ಷ ಎಂದರೇನು?
ಎ) ಅವಕಾಶಕ್ಕಾಗಿ ಹಾತೊರೆಯುತ್ತಾ ಅದು ಸಿಕ್ಕಿದ ತಕ್ಷಣ ಒಡೆದು ಚೂರಾಗುವುದು.
ಬಿ) ಅಧಿಕಾರಕ್ಕಾಗಿ ಚೌಕಾಶಿಯ ಪ್ರಧಾನ ಅಸ್ತ್ರ
ಸಿ) ಪರಮಾಣುವಿಗಿಂತಲೂ ಕಿರಿದಾದ ಗಾತ್ರದಷ್ಟಕ್ಕೆ ಒಡೆಯಬಲ್ಲ ಒಂದು ವೈಜ್ಞಾನಿಕ ಅದ್ಭುತ
ಡಿ) ಚುನಾವಣೆಗಳು ಬಂದಾಗ ರಾಜಕಾರಣಿಗಳು ಅತ್ಯಂತ ಇಷ್ಟಪಡುವ ವಸ್ತು
ಯಾವ ಮಿತ್ರನಿಗೆ ಕರೆ ಮಾಡಲು ಬಯಸುತ್ತೀರಿ?
ರಾಜಕೀಯದಲ್ಲಿ ಯಾರು ಕೂಡ ಯಾವಾಗ ಬೇಕಾದರೂ ಮಿತ್ರರಾಗಬಹುದು, ಶತ್ರುಗಳೂ ಆಗಬಹುದು. ಹಾಗಿರುವುದರಿಂದ ಯಾರಿಗೆ ಬೇಕಾದರೂ ಕರೆ ಮಾಡುತ್ತೇವೆ!
3. ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಗೆ ಪ್ರಶ್ನೆ.
ತಮಿಳು ಅಂದರೇನು?
ಎ) ಚಿತ್ರೋದ್ಯಮಕ್ಕೆ ತೆರಿಗೆ ಉಳಿಸುವ ಒಂದು ಅಸ್ತ್ರ
ಬಿ) ಅಕ್ಷರಗಳು, ಉಚ್ಚಾರಣೆಗಳು ಕಡಿಮೆ ಇದ್ದರೂ ಶಾಸ್ತ್ರೀಯ ಭಾಷೆ ಸ್ಥಾನಕ್ಕೆ ಅರ್ಹವಾದ ಸಂಗತಿ
ಸಿ) ಆಂಗ್ಲ ಹೆಸರುಳ್ಳ ತಮ್ಮ ಕೌಟುಂಬಿಕ ಒಡೆತನದ ಚಾನೆಲ್‌ನಲ್ಲಿ ಕಡಿಮೆ ಬಳಸಲಾಗುವ ಭಾಷೆ
ಡಿ) ತಮಿಳುನಾಡಿನಾದ್ಯಂತ ಇದೇ ಚಾನೆಲನ್ನೇ ಬಲವಂತವಾಗಿ ನೋಡಬೇಕಾಗಿರುವುದರಿಂದ ತಮಿಳು ಬಗ್ಗೆ ಯೋಚಿಸಲು ಯಾರಿಗಾದರೂ ಸಮಯವೆಲ್ಲಿದೆ?
ಯಾರಿಗೆ ಫೋನ್ ಮಾಡಲು ಬಯಸುತ್ತೀರಿ?
ತಮಿಳು ಕುರಿತಾಗಿ ವಿಶೇಷಣ ಸೇರಿಸಿ ಮಾತನಾಡುವ ಯಾರಿಗಾದರೂ ಸೈ!
6 ಕಾಮೆಂಟ್‌ಗಳು
ಎಲ್ಲ ಪ್ರಶ್ನೆಗಳಿಗೂ ನನಗೆ ಉತ್ತರ ಗೊತ್ತು. ಆದರೆ ಪುಕ್ಕಟೆಯಾಗಿ ಚೆನ್ನೈನಲ್ಲಿರುವ ನನ್ನ ಸ್ನೇಹಿತರೊಂದಿಗೆ ಫೋನ್ ಮಾಡುವ ಸಂದರ್ಭವನ್ನು ತಪ್ಪಿಸಿಕೊಳ್ಳಲು ಇಷ್ಟವಿಲ್ಲ. ಹಾಗಾಗಿ ಫೋನ್ ಮಾಡುವೆ. ಎಲ್ಲಕ್ಕಿಂತ ಎಷ್ಟು ಹಣವನ್ನು ಬಹುಮಾನವಾಗಿ ಕೊಡುವಿರಿ ಎಂದು ತಿಳಿಸಿದರೆ ನಾನು ಈಗಲೇ ಉತ್ತರಿಸುವೆ. ತಿಳಿಸದಿದ್ದರೆ ಗೊತ್ತಲ್ಲ, ನಿಮ್ಮ ತಲೆ ...
ಪ್ರತ್ಯುತ್ತರಅಳಿಸಿಮಾವಿನರಸರೆ,
ಪ್ರತ್ಯುತ್ತರಅಳಿಸಿಉತ್ತರ ಗೊತ್ತಿದ್ದರೆ ನೀವೇ ಹೇಳಿಬಿಡಿ. ಯಾಕೆಂದರೆ ಇಲ್ಲಿ ಹಣದುಬ್ಬರ... ಅಲ್ಲಲ್ಲ ಹಣದ ಇಳಿತ ಜಾಸ್ತಿಯಾಗಿದೆ. ಬಹುಮಾನ ಎಷ್ಟಿದ್ದರೂ ನಿಮಗೆ ಅದರ 0.5 ಶೇ. ಪಾಲು ಕೊಡಲಾಗುತ್ತದೆ. ಉಳಿದದ್ದೆಲ್ಲಾ ಗುಳುಂಕರಿಸಲಾಗುತ್ತದೆ.
ಅನ್ವೇಷಿಗಳೇ,
ಪ್ರತ್ಯುತ್ತರಅಳಿಸಿಉತ್ತರ ಏನೋ ಗೊತ್ತು, ಆದರೆ ನೀವು ಬಹುಮಾನ ಕೊಡ್ತೀರೋ ಎಲ್ಲವೋ ಅನ್ನೋದೇ ಅನುಮಾನ ನನಗೆ! :)
ಅಸತ್ಯಿಗಳೇ,
ಪ್ರತ್ಯುತ್ತರಅಳಿಸಿಸೂಪರ್ ಪ್ರಶ್ನೆಗಳು!
ಇದರಲ್ಲಿ ಆಡಿಯನ್ಸ್ ಪೋಲ್ ಇಲ್ವೆ?
ಪಕ್ಷ ಅಂದರೇನು :ಹ್
ಶ್ರೀನಿಧಿ ಅವರೆ,
ಪ್ರತ್ಯುತ್ತರಅಳಿಸಿನೀವೆಲ್ಲಾದರೂ ಸರಿ ಉತ್ತರ ಹೇಳಿಬಿಡ್ತೀರೋ ಅಂತ ನಮಗೂ ಅನುಮಾನ ಇರುವುದರಿಂದ ಬಹುಮಾನದ ಗಂಟಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲು ಕೇಂದ್ರ ಸರಕಾರಕ್ಕೆ ಸೂಚಿಸಲಾಗಿದೆ.
ಶಿವ್ ಅವರೆ,
ಪ್ರತ್ಯುತ್ತರಅಳಿಸಿಆಡಿಯನ್ಸ್ ಪೋಲ್ ಇದೆ. ಆಡಿಯನ್ಸೇ ಎಲ್ಲರನ್ನೂ ಕೇಳುವ ಪ್ರಶ್ನೆ. ಸರಕಾರ ಎಂಬುದು ಇದೆಯೇ? ಇದ್ದರೆ ಯಾರಿಗಾಗಿ ಎಂಬುದೇ ಅವರು ಕೇಳುವ ಪ್ರಶ್ನೆ!
ಏನಾದ್ರೂ ಹೇಳ್ರಪಾ :-D