(ಬೊಗಳೂರು ಉಡುಗೆ ಬ್ಯುರೋದಿಂದ)
ಬೊಗಳೂರು, ಡಿ.8- ಮಲೇಷ್ಯಾದಲ್ಲಿ ಭಾರತೀಯ ಚಿತ್ರಗಳ ಚಿತ್ರೀಕರಣವನ್ನು ನಿಷೇಧಿಸಲಾಗುತ್ತಿದೆ ಎಂಬ ಮಹತ್ವದ ತನಿಖಾ ವರದಿಯನ್ನು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬೊಗಳೆ ರಗಳೆ ಬ್ಯುರೋ ಕೈಗೊಂಡಿದೆ.

ಇದಕ್ಕೆ ಕಾರಣವೆಂದರೆ ಎಲ್ಲವನ್ನೂ ಬಯಲಾಗಿಸುವ ಅಥವಾ ಹುಟ್ಟಿನ ಉಡುಗೆಗಳಲ್ಲಿ ಅಡ್ಡಾಡಬಾರದು ಎಂದು ಅಲ್ಲಿನ ಸ್ಥಳೀಯಾಡಳಿತೆಯು ಆದೇಶ ಮಾಡಿರುವುದು.

ಇದೀಗ ಚಿತ್ರೀಕರಣ ನೆಪದಲ್ಲಾದರೂ ಮಲೇಷ್ಯಾಕ್ಕೆ ಹೋಗುವ ಅವಕಾಶ ತಪ್ಪಿ ಹೋಗುವುದರಿಂದ ಆಕ್ರೋಶಗೊಂಡಿರುವ (ವಸ್ತ್ರ)ಖಾಲಿ ವುಡ್ ನಟೀಮಣಿಯರು, ಜನ್ಮಉಡುಗೆ ನಮ್ಮ ಆಜನ್ಮ ಸಿದ್ಧ ಹಕ್ಕು ಎಂದು ಹೋರಾಟಕ್ಕಿಳಿಯಲು ತೀರ್ಮಾನಿಸಿದ್ದಾರೆ.

ಈ ಹೋರಾಟದ ಮೊದಲನೆ ಹಂತದ ಅಂಗವಾಗಿ, ಬಟ್ಟೆ ಹಾಕಿಕೊಳ್ಳುವ ಬಾಲಿವುಡ್ ತಾರೆಯರನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ. ಅವರು ಈ ರಾಯಭಾರದಲ್ಲಿ ವಿಫಲರಾದಲ್ಲಿ, ಮತ್ತೆ ತೊಟ್ಟ ಉಡುಗೆಯ ಮತ್ತೆ ಉಡದಿರು (ತೊಟ್ಟ ಬಾಣವ ಮತ್ತೆ ತೊಡದಿರು ಎಂದು ಕುಂತಿಯು ಕರ್ಣನಲ್ಲಿ ಕೇಳಿಕೊಂಡ ಮಾದರಿಯಲ್ಲಿ) ಎಂಬ ಘೋಷಣಾ ವಾಕ್ಯದೊಂದಿಗೆ ಭರ್ಜರಿ ಪ್ರತಿಭಟನೆ ಮಾಡಲು ಬಿಚ್ಚಮ್ಮ ಸಂಘದ ಸಭೆಯಲ್ಲಿ ನಿರ್ಧರಿಸಲಾಯಿತು.

ಈಗ ಸಿನಿಕ ನಾಯಕಿರ ಜತೆಗೆ ಕೋಪ ಮರೆತು ಒಂದಾಗಿ ಸೇರಿಕೊಂಡಿರುವ ಬಿಚ್ಚೋಲೆ ಐಟಂಗಳೂ ಕೂಡ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

4 Comments

ಏನಾದ್ರೂ ಹೇಳ್ರಪಾ :-D

 1. ಅಸತ್ಯಿಗಳೇ,

  ಒಳ್ಳೆಯವರಿಗೆ ಕಾಲ ಅಲ್ಲ ಅನ್ನೋ ಹಾಗೆ ಇದು ಬಿಚ್ಚೋರಿಗೆ ಕಾಲ ಅಲ್ಲ ಅಂದಾಗೆ ಆಯ್ತು. ಯಾರೀ ಅದು ಹಿಂಗೆ ಕಣ್ಣು ಹಾಕಿ, ಪಾಪ ನಮ್ಮ ಬಿಚ್ಚುಗಳಿಗೆಲ್ಲಾ ಆಶಾಭಂಗ ಮಾಡಿದ್ದು..

  ಅಲ್ಲಿ ನಡುವೆ ಪ್ರತಿಭಟನೆಯಲ್ಲಿ ಯಾರು ನೇತೃತ್ವವಹಿಸಿಕೋಬೇಕು ಅನ್ನೋ ವಿಚಾರದಲ್ಲಿ ರಾಖಿ ಸಾವಂತ್,ಮಲ್ಲಿಕಾ,ಬಿಪಾಷಾ ಮತ್ತೆ ಇನ್ನೂ ಅನೇಕ ಬಿಚ್ಚುಗಳಲ್ಲಿ ಬಟ್ಟೆ ಬಿಚ್ಚುವ ಸ್ವರ್ಧೆ ಇಟ್ಟಿದ್ದಾರಂತೆ

  ReplyDelete
 2. ಒಂದು ವಿಷಯ ಅರ್ಥ ಆಗಲಿಲ್ಲ. ಹುಟ್ಟುಡುಗೆಯಲ್ಲಿ ಅಡ್ಡಾಡಬಾರದೆಂಬ ನಿಯಮ ಭಾರತೀಯರಿಗೆ ಮಾತ್ರವೋ ಅಥವಾ ಅಲ್ಲಿರುವವರಿಗೂ ಅನ್ವಯವಾಗುವುದೋ?

  ನಮ್ಮವರಿಗೆ ಹೇಳಿದ್ರಾಯ್ತು. ಈ ಜಗತ್ತಿನಲ್ಲಿ ಇದೊಂದೇ ಊರಾ ಇರೋದು. ಇದಿಲ್ಲದಿದ್ದರೆ ಮತ್ತೊಂದು. ಹೇಗಿದ್ದರೂ ಸಬು ಅಲೀಂ ಮತ್ತು ಅವನ ಪ್ರಿಯೆ ನೋಮಿಕಾ ವಾಪಸ್ಸಾಗಿರುವುದರಿಂದ ಅಲ್ಲೆಲ್ಲಾ ಜಾಗ ಖಾಲಿ ಇದೆಯಂತೆ. ಫಲ್ಗ್ ದೇಶದಲ್ಲೂ ಒಳ್ಳೆಯ ಬೇಡಿಕೆ ಇದೆಯಂತೆ. ಅಲ್ಲಿಗೆ ಹೋದರಾಯ್ತು. ಅನ್ವೇಷಿಗಳೇ ಈ ವಿಷಯವನ್ನು ನೀವೇ ಅವರಿಗೆ ತಿಳಿಸಿಬಿಡಿ. ನಿಮಗೆ ಪುಣ್ಯ ಬರತ್ತೆ.

  ReplyDelete
 3. ಶಿವ್ ಅವರೆ,

  ಒಂದು ವಿಷಯ ಗೊತ್ತೇ? ಈ ಬಾಲಿವುಡ್ ಬಿಚ್ಚಮ್ಮಗಳು ಎಷ್ಟೇ ಬಿಚ್ಚಿ ಬಿಚ್ಚಿ ಎಸೆದು ರಾಶಿ ಹಾಕಿದರೂ ಅದು ಒಂದು ಬಕೆಟಿನಲ್ಲಿ ತುಂಬಲಾರದು. ಬಟ್ಟೆ ಇರೋದು ಅಷ್ಟೇ!

  ನಿಮ್ಮ (ಅಂದರೆ ನೀವು ಹೇಳಿದ!) ಬಟ್ಟೆ ಬಿಚ್ಚುವ ಸ್ಪರ್ಧೆಗೆ ಬಂದವರ ಗುರುತೇ ಸಿಗುತ್ತಿರಲಿಲ್ಲವೆಂದು ಕೇಳಿದ್ದೇವೆ. ಎಲ್ಲರೂ ಒಂದೇ ರೀತಿಯಾಗಿದ್ದರಂತೆ!

  ReplyDelete
 4. ಮಾವಿನಯನಸರೆ,

  ಅಲ್ಲಿ ಇರುವವರಿಗೆ ಬಟ್ಟೆ ಸಡಿಲಿಕೆ (ನಿಯಮದಲ್ಲಿ) ಇದೆಯಂತೆ.!

  ನೀವು ಎಲ್ಲಿಗೆಲ್ಲಾ ಹೋಗಬಹುದೆಂಬುದನ್ನು ಈಗಾಗಲೇ ಬಿಚ್ಚಿ ಬಿಚ್ಚಿ ಇರಿಸಿದ್ದೀರಿ. ಆದರೂ ನಮ್ಮ ಪರವಾಗಿ ಒಂದು ಮಾತು ಹೇಳುವುದು ಕರ್ತವ್ಯವಾದುದರಿಂದ ಹೇಳುತ್ತೇವೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post